ಪುತ್ತೂರು ಸಂಚಾರ ಠಾಣೆಯ ಹೆಡ್‍ ಕಾನ್‍ ಸ್ಟೇಬಲ್‍ ಶಿವಪ್ರಸಾದ್ ಹೃದಯಾಘಾತದಿಂದ ನಿಧನ

ಪುತ್ತೂರು: ಸಂಚಾರ ಪೊಲೀಸ್ ಠಾಣೆ ಹೆಡ್‌ ಕಾನ್‍ ಸ್ಟೇಬಲ್ ಗೂನಡ್ಕ ನಿವಾಸಿ ಶಿವ ಪ್ರಸಾದ್ (51) ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು. ಅವರು ಕಡಬ, ಮಂಗಳೂರು ಹಾಗೂ ಇನ್ನಿತರ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮುಂದಿನ ವರ್ಷದಲ್ಲಿ ಟ್ರಾಫಿಕ್ ವಿಭಾಗದಲ್ಲಿ ಎ ಎಸ್ ಐ ಭಡ್ತಿ ಹೊಂದಲಿದ್ದರು ಎಂದು ತಿಳಿದುಬಂದಿದೆ. ಮೃತರು ಪತ್ನಿ ಸುಲೋಚನಾ, ಪುತ್ರಿಯರಾದ ರಮ್ಯಾ, ಅರ್ಚನಾ, ಪುತ್ರ ತೇಜಸ್ ಬಂಧು ಮಿತ್ರರನ್ನು ಅಗಲಿದ್ದಾರೆ.

ಪುತ್ತೂರು ಸಂಚಾರ ಠಾಣೆಯ ಹೆಡ್‍ ಕಾನ್‍ ಸ್ಟೇಬಲ್‍ ಶಿವಪ್ರಸಾದ್ ಹೃದಯಾಘಾತದಿಂದ ನಿಧನ Read More »

ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಜೈಲಿನಿಂದ ಬಿಡುಗಡೆ | ಸವಣೂರು ಗ್ರಾಮದ ಕೆಡೆಂಜೋಡಿತ್ತಾಯಿ ದೈವದ ನುಡಿ ನಿಜವಾಯಿತು

ಗಂಗಾವತಿ: ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು. ದೈವ ನುಡಿದ ನುಡಿ ನಿಜವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಸತ್ಯದ ದೈವಸ್ಥಾನ ಆರೇಲ್ತಾಡಿ ಉಲ್ಲಾಕ್ಕು, ಕೆಡೆಂಜೋಡಿತ್ತಾಯಿ ದೈವಸ್ಥಾನದಲ್ಲಿ ಮೇ 13 ರಂದು ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ದೈವದ ಬಳಿ ಜನಾರ್ದನ ರೆಡ್ಡಿ ಆಪ್ತರು ಬಿಡುಗಡೆಯ ಬಗ್ಗೆ ಕೇಳಿದಾ ಇಂದಿನಿಂದ 1 ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ದೈವ ಪಾತ್ರಿ ನುಡಿದಿದ್ದರು. ದೈವ ನುಡಿದಂತೆ

ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಜೈಲಿನಿಂದ ಬಿಡುಗಡೆ | ಸವಣೂರು ಗ್ರಾಮದ ಕೆಡೆಂಜೋಡಿತ್ತಾಯಿ ದೈವದ ನುಡಿ ನಿಜವಾಯಿತು Read More »

ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿದೆ ಕರ್ನಾಟಕದ 19 ಮಂದಿಯ ತಂಡ

ಅಧ್ಯಯನ ಪ್ರವಾಸ ಕೈಗೊಂಡ ನಿಯೋಗ ಯುದ್ಧದ ನಡುವೆ ಬಾಕಿ ಬೆಂಗಳೂರು : ಇಸ್ರೇಲ್‌ ಮತ್ತು ಇರಾನ್‌ನ ನಡುವಿನ ಯುದ್ಧ ತೀವ್ರಗೊಂಡಿರುವಂತೆಯೇ ಕರ್ನಾಟಕದ 19 ಮಂದಿಯ ನಿಯೋಗವೊಂದು ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿರುವ ಸುದ್ದಿಯೊಂದು ಬಂದಿದೆ. ಪಶ್ಚಿಮ ಏಷ್ಯಾದಲ್ಲಿ ಪರಮಾಣು ಯುದ್ಧದ ಭೀತಿ ತಲೆದೋರಿರುವಾಗಲೇ ಈ ನಿಯೋಗದ 19 ಮಂದಿ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಆತಂಕದ ಸ್ಥಿತಿಯಲ್ಲಿ ಇದ್ದಾರೆ ಎನ್ನಲಾಗಿದೆ. ಕರ್ನಾಟಕದ 19 ಜನರನ್ನೊಳಗೊಂಡ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್​​ ನಿಯೋಗ ಅಧ್ಯಯನ ಸಲುವಾಗಿ ಇಸ್ರೇಲ್‌ಗೆ ಹೋಗಿತ್ತು. ಇಸ್ರೇಲ್​ನಲ್ಲೇ ಉಳಿದಿರುವ ಬಗ್ಗೆ

ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿದೆ ಕರ್ನಾಟಕದ 19 ಮಂದಿಯ ತಂಡ Read More »

ಬೀರಮಲೆ ಬೆಟ್ಟ ಪ್ರಜ್ಞಾ ಆಶ್ರಮದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಕೇಂದ್ರ ಸಮಿತಿ ಸಭೆ ಪುತ್ತೂರಿನ ಬೀರಮಲೆ ಬೆಟ್ಟದ ಪ್ರಜ್ಞಾ ಆಶ್ರಮದಲ್ಲಿ ಶನಿವಾರ ಜರಗಿತು. ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ್ ಆಳ್ವ ಪಡುಮಲೆ, ಪ್ರತಿಷ್ಠಾನದ ಖಜಾಂಜಿ ಕೃಷ್ಣಶರ್ಮ ಅನಾರು, ಪಡುಮಲೆಯಲ್ಲಿ ಆ.17ರಂದು ಜರಗಲಿರುವ ಜಿಲ್ಲಾಮಟ್ಟದ ಕಾರ್ಯಾಗಾರ, ಕಯ್ಯೂರು ನಾರಾಯಣ ಭಟ್ ಶ್ರೀ ಎಡನೀರು ಮಠಾಧೀಶರ ಚಾತುರ್ಮಾಸ್ಯ ಕಾರ್ಯಕ್ರಮ,  ಸಹಕಾರಿ ಸಂಘದ ಚುನಾವಣೆ,

ಬೀರಮಲೆ ಬೆಟ್ಟ ಪ್ರಜ್ಞಾ ಆಶ್ರಮದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ Read More »

ಗುಡ್ಡ ಕುಸಿತ : ಶೃಂಗೇರಿ-ಮಂಗಳೂರು ಸಂಚಾರ ಸ್ಥಗಿತ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗಾಳಿ, ಮಳೆ ಅಬ್ಬರ ಮುಂದುವರಿದಿದ್ದು, ಧಾರಾಕಾರ ಗಾಳಿ, ಮಳೆಗೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ಬಳಿ ನಡೆದಿದೆ. ಗುಡ್ಡ ಕುಸಿದಿರುವ ಪರಿಣಾಮ ಶೃಂಗೇರಿ-ಮಂಗಳೂರು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪೊಲೀಸ್, ಪಂಚಾಯತ್‌ ಅಧಿಕಾರಿಗಳು ಹಾಗೂ ಸ್ಥಳೀಯರು ಸುರಿಯುತ್ತಿರುವ ಮಳೆ ಮಧ್ಯೆಯೇ ರಸ್ತೆಗೆ ಉರುಳಿರುವ ಮಣ್ಣಿನ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಮಣ್ಣು ಕುಸಿಯದಂತೆ ರಸ್ತೆ ಬದಿಗೆ ಕಟ್ಟಿದ್ದ ಕಬ್ಬಿಣದ ತಡೆಗೋಡೆ ಕೂಡ

ಗುಡ್ಡ ಕುಸಿತ : ಶೃಂಗೇರಿ-ಮಂಗಳೂರು ಸಂಚಾರ ಸ್ಥಗಿತ Read More »

ಮಂಗಳೂರು : ಕುಸಿದು ಬಿದ್ದ ಆಸ್ಪತ್ರೆಯ ಗೋಡೆ

ಒಂದೇ ಕುಟುಂಬದ ಆರು ಮಂದಿ ಅದೃಷ್ಟವಶಾತ್‌ ಪಾರು ಮಂಗಳೂರು : ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿನ್ನೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕರಾವಳಿ ಭಾಗದಲ್ಲಿ ವರುಣಾರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮಂಗಳೂರಿನಲ್ಲಿ ಭಾರಿ ಮಳೆಗೆ ಜಲ ಸ್ಫೋಟಗೊಂಡು ಖಾಸಗಿ ಆಸ್ಪತ್ರೆಯ ಗೋಡೆ ಕುಸಿದು ಬಿದ್ದಿದ್ದು, ಭಾರಿ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕುಟುಂಬವೊಂದು ಅದೃಷ್ಟವಶಾತ್‌ ಪಾರಾಗಿದೆ. ಕಂಕನಾಡಿ ಬಳಿಯ ಸುವರ್ಣ ಲೇನ್‌ನಲ್ಲಿ ಭಾರಿ ಅವಘಡ ಸಂಭವಿಸಿದೆ. ಧಾರಾಕಾರ ಮಳೆಗೆ ಖಾಸಗಿ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ.

ಮಂಗಳೂರು : ಕುಸಿದು ಬಿದ್ದ ಆಸ್ಪತ್ರೆಯ ಗೋಡೆ Read More »

ಶಿವಮೊಗ್ಗ ಭಾರೀ ಮಳೆಯಿಂದ ಭೂಕುಸಿತ | ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ನಿಷೇಧ | ವಾಹನ ಸಂಚಾರದಲ್ಲಿ ಬದಲಿ ವ್ಯವಸ್ಥೆ

ಶಿವಮೊಗ್ಗ : ಭಾರೀ ಮಳೆಯಿಂದ ಭೂ ಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿದೆ. ಮುಂಗಾರು ಮಳೆ ಹಿನ್ನೆಲೆ ಜೂನ್ 15ರಿಂದ ಸೆಪ್ಟೆಂಬರ್ 30ರವರೆಗೆ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಶಿವಮೊಗ್ಗ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ. ನಾಳೆಯಿಂದ ಬರೋಬ್ಬರಿ ಮೂರುವರೆ ತಿಂಗಳುಗಳ ಕಾಲ ಆಗುಂಬೆ ಘಾಟಿನಲ್ಲಿ ಭಾರೀ ವಾಹನ ಓಡಾಡುವುದಿಲ್ಲ. ಆಗುಂಬೆ ಘಾಟಿ 169ಎ ಹೆದ್ದಾರಿ ರಸ್ತೆಯಲ್ಲಿ

ಶಿವಮೊಗ್ಗ ಭಾರೀ ಮಳೆಯಿಂದ ಭೂಕುಸಿತ | ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರಕ್ಕೆ ನಿಷೇಧ | ವಾಹನ ಸಂಚಾರದಲ್ಲಿ ಬದಲಿ ವ್ಯವಸ್ಥೆ Read More »

ಗುಡ್ಡ ಕುಸಿತದಿಂದ ಹಾನಿ : 5.70 ಲಕ್ಷ ರೂ. ಪರಿಹಾರ ವಿತರಣೆ

ಪುತ್ತೂರು: ಈ ಬಾರಿಯ ಮಳೆಯ ಆರಂಭದಲ್ಲಿ ಮಳೆಯ ತೀವ್ರತೆಯಿಂದ 82 ಮನೆಗಳು ಭಾಗಶಃ ಹಾನಿಗೊಳ ಗಾಗಿದ್ದು, ಈ ಮನೆಗಳಿಗೆ ತಲಾ ರೂ.6500ನಂತೆ ಒಟ್ಟು ರೂ.533000 ಪ್ರಾಕೃತಿಕವಿಕೋಪ ಹಿನ್ನಲೆಯಲ್ಲಿ ಪರಿಹಾರವನ್ನು ಪುತ್ತೂರು ತಹಶೀಲ್ದಾರ್ ನಾಗರಾಜ್ ಅವರು ವಿತರಣೆ ಮಾಡಿದ್ದಾರೆ. ಪುತ್ತೂರು ತಾಲೂಕಿನ ವಿವಿಧ ಕಡೆಗಳಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿತ್ತು. ತಾಲೂಕಿನಲ್ಲಿ 3 ದನದ ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದ್ದು, ಇದಕ್ಕೆ ಸಂಬಂಧಿಸಿ ತಲಾ 3000 ವಿತರಣೆ ಮಾಡಲಾಗಿದೆ. ತಾಲೂಕಿನಲ್ಲಿ 22 ಬೆಳೆಹಾನಿ ಪ್ರಕರಣಗಳ ವರದಿಯಾಗಿದ್ದು, ಶೇ33ಕ್ಕಿಂತ ಹೆಚ್ಚು ಬೆಳೆಹಾನಿಯಾದ

ಗುಡ್ಡ ಕುಸಿತದಿಂದ ಹಾನಿ : 5.70 ಲಕ್ಷ ರೂ. ಪರಿಹಾರ ವಿತರಣೆ Read More »

ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ಪತನ : ಆರು ಮಂದಿ ಸಾವು

ಡೆಹ್ರಾಡೂನ್: : ಅಹಮದಾಬಾದ್ ವಿಮಾನ ದುರಂತ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದ್ದು, ಉತ್ತರಾಖಂಡದ ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಗೌರಿಕುಂಡ್ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿ ಹೆಲಿಕಾಪ್ಟರ್​​ನಲ್ಲಿದ್ದ ಪೈಲಟರ್​ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಅಪಘಾತ ಸಂಭವಿಸಿದೆ. ಘಟನೆಯ ನಂತರ ಎನ್​​ಡಿಆರ್​ಎಫ್​ ತಂಡಗಳು ಸ್ಥಳಕ್ಕೆ ತಲುಪಿವೆ. ಹೆಲಿಕಾಪ್ಟರ್‌ನ ಅವಶೇಷಗಳು ಸ್ಥಳದಲ್ಲಿ ಚದುರಿಹೋಗಿವೆ. ಹುಲ್ಲು ಕತ್ತರಿಸುತ್ತಿದ್ದ ಮಹಿಳೆಯರು ಹೊಗೆಯನ್ನು ನೋಡಿದ ನಂತರ ಘಟನೆಯ ಬಗ್ಗೆ ಕೂಡಲೇ ಮಾಹಿತಿ ನೀಡಿದ್ದಾರೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್

ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ಪತನ : ಆರು ಮಂದಿ ಸಾವು Read More »

ತೀವ್ರಗೊಂಡ ಇಸ್ರೇಲ್‌-ಇರಾನ್‌ ಸಮರ : ಇರಾನ್‌ನಲ್ಲಿ ಮತ್ತೆ 60 ಸಾವು

ಇರಾನ್‌ ಗ್ಯಾಸ್‌ ಸ್ಥಾವರಕ್ಕೆ ಕ್ಷಿಪಣಿ ದಾಳಿ; ಇಸ್ರೇಲ್‌ನ ಐರನ್‌ ಡೋಮ್‌ ಭೇದಿಸಿದ ಇರಾನ್‌ ಟೆಲ್‌ ಅವೀವ್‌: ರಾತ್ರಿಯಿಡೀ ಇಸ್ರೇಲ್‌ ಮತ್ತು ಇರಾನ್‌ ನಡುವೆ ಭೀಕರ ಸಮರ ನಡೆದಿದ್ದು, ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಇರಾನ್‌ನಲ್ಲಿ ಮತ್ತೆ 60ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಎರಡೂ ದೇಶಗಳು ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದ್ದು, ಮಧ್ಯಪ್ರಾಚ್ಯದಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ. ಇರಾನ್‌ನ ಜೀವನಾಡಿ ಎಂದೇ ಹೇಳಲಾಗುವ ಬೃಹತ್‌ ಗ್ಯಾಸ್‌ ಸ್ಥಾವರಕ್ಕೆ ಶನಿವಾರ ರಾತ್ರಿ ಇಸ್ರೇಲ್‌ನ ಕ್ಷಿಪಣಿಗಳು ಬಂದೆರಗಿದ್ದು, ಆಪಾರ ಹಾನಿ ಸಂಭವಿಸಿದೆ. ಆಪರೇಷನ್‌ ರೈಸಿಂಗ್‌

ತೀವ್ರಗೊಂಡ ಇಸ್ರೇಲ್‌-ಇರಾನ್‌ ಸಮರ : ಇರಾನ್‌ನಲ್ಲಿ ಮತ್ತೆ 60 ಸಾವು Read More »

error: Content is protected !!
Scroll to Top