ನದಿಯೊಂದರ ಸೇತುವೆ ಮೇಲಿನಿಂದ ತೆರಳುತ್ತಿದ್ದ ಬೈಕ್‍ | ಬೈಕ್‍ ಸಮೇತ ಕೊಚ್ಚಿ ಹೋದ ಸವಾರರು

ಸವಣಾಲು: ಹಿತ್ತಿಲವೇಲ ಕೂಡುಜಾಲು ಸಮೀಪದ ನದಿಯಲ್ಲಿ ಬೈಕ್ ಸಮೇತ ಯುವಕರಿಬ್ಬರು ಕೊಚ್ಚಿ ಹೋಗಿರುವ ಘಟನೆ ಭಾನುವಾರ ನಡೆದಿದ್ದು, ಬೈಕ್‍ ಸವಾರರು ಪವಾಡಸದೃಶವಾಗಿ ಪಾರಾಗಿದ್ದಾರೆ. ಸವಣಾಲು ಹಿತ್ತಿಲಪೇಲ ಪ್ರದೇಶದ ಕೆಳಗಿನ ವೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್‍ ಮತ್ತು ಸಹಸವಾರ ಸುಳ್ಳೋಡಿ ನಿವಾಸಿ ಸಂಜೀವ ಪೂಜಾರಿ ಎಂಬವರು ಕೆಲಸಕ್ಕೆಂದು ಬೈಕ್‍ ನಲ್ಲಿ ಹೊರಟು ನದಿಯನ್ನು ಬೈಕ್ ಸಮೇತ ದಾಟುವ ಸಾಹಸ ಮಾಡಿದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅದೃಷ್ಟವಶಾತ್ ಬೈಕ್ ನದಿಯ ಬದಿಯಲ್ಲಿ ಸಿಲುಕಿದ್ದು, ಯುವಕರಿಬ್ಬರು […]

ನದಿಯೊಂದರ ಸೇತುವೆ ಮೇಲಿನಿಂದ ತೆರಳುತ್ತಿದ್ದ ಬೈಕ್‍ | ಬೈಕ್‍ ಸಮೇತ ಕೊಚ್ಚಿ ಹೋದ ಸವಾರರು Read More »

ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಾರು : ಅಪಾಯದಿಂದ ಪಾರು

ಮುಂಡಾಜೆ:  ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಮುಂಡಾಜೆ ಸಮೀಪದ ಸೀಟ್‍ ಬಳಿ ನಡೆದಿದೆ. ಕಾರಿನಲ್ಲಿ ಕಕ್ಕಿಂಜೆಯ ಚಿಬಿದ್ರೆ ಗ್ರಾಮ ಮುದ್ದಿನಡ್ಕ ನಿವಾಸಿ ಹರೀಶ್ ಗೌಡ, ಪತ್ನಿ ಹಾಗೂ ಇಬ್ಬರು ಮಕ್ಕಳು ಕಕ್ಕಿಂಜೆ ಯಿಂದ ಬೆಳ್ತಂಗಡಿ ಬರುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಹರೀಶ್ ಗೌಡ, ಪತ್ನಿ ಹಾಗೂ ಇಬ್ಬರು ಮಕ್ಕಳು ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಾರು : ಅಪಾಯದಿಂದ ಪಾರು Read More »

ವೀರಮಂಗಲ ಪಿಎಂಶ್ರೀ ಶಾಲೆಗೆ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ |  ಸುಂದರ ಭಾರತ ಪುಸ್ತಕ ಟ್ರಸ್ಟ್  ನೀಡುತ್ತಿರುವ ನೋಟ್ ಬುಕ್ ವಿತರಣೆ

ಸುಳ್ಯ : ತಾ.ಪಂ ಸಭಾಭವನದಲ್ಲಿ ನಡೆದ  ಸುಂದರ ಭಾರತ ಟ್ರಸ್ಟ್ ಕೊಡಮಾಡಿದ ನೋಟ್ ಪುಸ್ತಕವನ್ನು ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ವೀರಮಂಗಲ ಪಿಎಂಶ್ರೀ ಶಾಲೆಗೆ ವಿತರಿಸಿ ಶುಭ ಹಾರೈಸಿದರು. ಸುಳ್ಯ  ಕ್ಷೇತ್ರದ ಮಾನ್ಯ ಶಾಸಕರಾದ ಕು. ಭಾಗೀರಥಿ ಮುರಳ್ಯ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ,ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸುಳ್ಯ ನಗರಸಭಾಧ್ಯಕ್ಷರಾದ ಶಶಿಕಲಾ ಸುಂದರ ಭಾರತ ಟ್ರಸ್ಟ್ ಮುಖ್ಯಸ್ಥ ಪ್ರತಾಪ್ ಪರಾಶರ ಉಪಸ್ಥಿತರಿದ್ದರು.

ವೀರಮಂಗಲ ಪಿಎಂಶ್ರೀ ಶಾಲೆಗೆ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ |  ಸುಂದರ ಭಾರತ ಪುಸ್ತಕ ಟ್ರಸ್ಟ್  ನೀಡುತ್ತಿರುವ ನೋಟ್ ಬುಕ್ ವಿತರಣೆ Read More »

ಇರಾನ್‌ನಲ್ಲಿ ಆಪತ್ತಿನಲ್ಲಿದ್ದಾರೆ ಹತ್ತು ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು

ಯುದ್ಧ ಉಲ್ಬಣಿಸುವ ಮೊದಲು ಪಾರು ಮಾಡಲು ಮೊರೆ ಟೆಹ್ರಾನ್‌ : ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧ ತೀವ್ರಗೊಳ್ಳುತ್ತಿರುವಂತೆಯೇ ಇರಾನ್‌ನಲ್ಲಿರುವ ಹತ್ತು ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳ ಮೇಲೆ ಆತಂಕದ ಕಾರ್ಮೋಡ ಕವಿದಿದೆ. ಯುದ್ಧದ ಪರಿಣಾಮವಾಗಿ ಇರಾನ್‌ ತನ್ನ ವಾಯುಮಾರ್ಗವನ್ನು ಪೂರ್ತಿಯಾಗಿ ಮುಚ್ಚಿದೆ. ಅಲ್ಲಿಂದ ಯಾವುದೇ ವಿಮಾನ ಟೇಕಾಫ್‌ ಆಗುವಂತಿಲ್ಲ ಹಾಗೂ ಇಳಿಯುವಂತಿಲ್ಲ. ಆದರೆ ಭಾರತದ ವಿನಂತಿಯ ಮೇರೆಗೆ ಭೂಮಾರ್ಗವಾಗಿ ಅಂತಾರಾಷ್ಟ್ರೀಯ ಗಡಿ ದಾಟಿ ಹೋಗಲು ಭಾರತೀಯರಿಗೆ ಇರಾನ್‌ ಅನುಮತಿ ನೀಡಿದೆ. ಅಜರ್‌ಬೈಜಾನ್‌, ಅಫಘಾನಿಸ್ಥಾನ್‌ ಅಥವಾ ತುರ್ಕಮೆನಿಸ್ಥಾನ್‌

ಇರಾನ್‌ನಲ್ಲಿ ಆಪತ್ತಿನಲ್ಲಿದ್ದಾರೆ ಹತ್ತು ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು Read More »

ಮಹಿಳೆಗೆ ಕಿರುಕುಳ : ಪ್ರಸಿದ್ಧ ದೇವಸ್ಥಾನದ ಅರ್ಚಕನ ಬಂಧನ

ಪೂಜೆಯ ನೆಪದಲ್ಲಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಅರ್ಚಕರು ಬೆಂಗಳೂರು: ಪೂಜೆ ಮಾಡಿಸುವ ನೆಪದಲ್ಲಿ ಬೆಂಗಳೂರಿನ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೇರಳದ ದೇವಸ್ಥಾನದ ಅರ್ಚಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಮುಖ್ಯ ಅರ್ಚಕ ತಲೆಮರೆಸಿಕೊಂಡಿದ್ದಾನೆ. ವಾಟ್ಸಪ್‌ನಲ್ಲಿ ಮಹಿಳೆಯ ನಗ್ನ ವಿಡಿಯೋ ರೆಕಾರ್ಡ್‌ ಮಾಡಿಕೊಂಡು ಕೇರಳ ತೃಶ್ಶೂರ್‌ನ ಪ್ರಸಿದ್ಧ ದೇವಾಲಯದ ಅರ್ಚಕರಿಬ್ಬರು ಮಹಿಳೆಯನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದ್ದಾರೆ. ತೃಶ್ಶೂರ್‌ನ ಪ್ರಸಿದ್ಧ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ ಅರುಣ್ ಬಂಧಿತ ಆರೋಪಿ. ಮುಖ್ಯ

ಮಹಿಳೆಗೆ ಕಿರುಕುಳ : ಪ್ರಸಿದ್ಧ ದೇವಸ್ಥಾನದ ಅರ್ಚಕನ ಬಂಧನ Read More »

ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಅಸ್ವಸ್ಥ : ಆಸ್ಪತ್ರೆಗೆ ದಾಖಲು

ಹೊಟ್ಟೆನೋವಿಗೆ ಗ್ಯಾಸ್ಟ್ರೋ ವಿಭಾಗದಲ್ಲಿ ಚಿಕಿತ್ಸೆ ನವದೆಹಲಿ : ಕಾಂಗ್ರೆಸ್​​ನ ಅಧಿನಾಯಕಿ ಸೋನಿಯಾ ಗಾಂಧಿಯವರ ಆರೋಗ್ಯ ತೀವರ ಹಡಗೆಟ್ಟಿದ್ದು, ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಅವರನ್ನು ಗ್ಯಾಸ್ಟ್ರೋ ವಿಭಾಗಕ್ಕೆ ದಾಖಲಿಸಲಾಗಿದ್ದು, ಅವರ ಮೇಲೆ ನಿಗಾ ಇರಿಸಲಾಗಿದೆ. ಜೂನ್ 7ರಂದು ಸೋನಿಯಾ ಗಾಂಧಿ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಶಿಮ್ಲಾಕ್ಕೆ ಕರೆದೊಯ್ಯಲಾಗಿತ್ತು. ಕೆಲವು ಸಮಯದಿಂದ ಸೋನಿಯಾ ಗಾಂಧಿಯವರ ಅನಾರೋಗ್ಯದ ವರದಿಗಳು ಹೊರಬರುತ್ತಿವೆ. ಆದಾಗ್ಯೂ ಈ ನಿಟ್ಟಿನಲ್ಲಿ ಯಾವುದೇ ನಿರ್ದಿಷ್ಟ ಮಾಹಿತಿ ಹೊರಬಂದಿಲ್ಲ. ಹಿಮಾಚಲ

ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಅಸ್ವಸ್ಥ : ಆಸ್ಪತ್ರೆಗೆ ದಾಖಲು Read More »

ಚಿಕ್ಕಪುತ್ತೂರು ನಿವಾಸಿ ರೇಷ್ಮಾ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಚಿಕ್ಕಪುತ್ತೂರು ನಿವಾಸಿ ಚಿಂತನ್ ಎಂಬವರ ಪತ್ನಿ 7 ತಿಂಗಳ ಗರ್ಭಿಣಿ ರೇಷ್ಮಾ ಭಾನುವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ಚಿಂತನ್, ಅವರ ಪತ್ನಿ ಹಾಗು ಪುತ್ರಿ ವಾಸ್ತವ್ಯ ಹೊಂದಿದ್ದರು. 4 ವರ್ಷಗಳ ಹಿಂದೆಯಷ್ಟೆ ಚಿಂತನ್ ಅವರ ವಿವಾಹ ಸುರತ್ಕಲ್ ನ. ರೇಷ್ಮಾ ಅವರ ಜೊತೆ ನಡೆದಿತ್ತು. ಭಾನುವಾರ ರಾತ್ರಿ ರೇಷ್ಮಾ ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಪುತ್ತೂರು ಪೊಲೀಸರು

ಚಿಕ್ಕಪುತ್ತೂರು ನಿವಾಸಿ ರೇಷ್ಮಾ ನೇಣು ಬಿಗಿದು ಆತ್ಮಹತ್ಯೆ Read More »

ಸುರತ್ಕಲ್‌ : ಮೇಲ್ಸೇತುವೆಯಿಂದ ಸರ್ವಿಸ್‌ ರಸ್ತೆಗೆ ಬಿದ್ದ ಕಾರು

ಸುರತ್ಕಲ್‌: ಸುರತ್ಕಲ್‌ ಎನ್‌ಐಟಿಕೆ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆಯಿಂದ ಕೆಳಗಿನ ರಸ್ತೆಗೆ ಬಿದ್ದ ಘಟನೆ ಭಾನುವಾರ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಕಾರನ್ನು ಕುಂದಾಪುರ ನಿವಾಸಿ ಪ್ರತ್ಯಕ್ಷ ಎಂಬವರು ಚಲಾಯಿಸುತ್ತಿದ್ದರು. ಅಪಘಾತದಿಂದ ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷ ಅವರು ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿ ಕುಂದಾಪುರಕ್ಕೆ ಹಿಂದಿರುಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಬಳಿ ಏಕಾಏಕಿ ಬ್ರೇಕ್‌ ಹಾಕಿದ್ದಾರೆ. ಇದರಿಂದ ನಿಯಂತ್ರಣ ಕಳೆದುಕೊಂಡ ಕಾರು ಮೇಲ್ಸೇತುವೆಯಿಂದ

ಸುರತ್ಕಲ್‌ : ಮೇಲ್ಸೇತುವೆಯಿಂದ ಸರ್ವಿಸ್‌ ರಸ್ತೆಗೆ ಬಿದ್ದ ಕಾರು Read More »

ವಿದ್ಯಾರ್ಥಿಗಳ ಹಾಸ್ಟೆಲ್‌ ಕಟ್ಟಡದಲ್ಲಿ ಬೆಂಕಿ ಅವಘಡ

ಮಂಗಳೂರು ವಿವಿಯ ಎನ್‌ಆರ್‌ಐ ವಿದ್ಯಾರ್ಥಿಗಳಿದ್ದ ಹಾಸ್ಟೆಲ್‌ ಮಂಗಳೂರು: ದೇರಳಕಟ್ಟೆಯಲ್ಲಿ ಎನ್‌ಆರ್‌ಐ ವಿದ್ಯಾರ್ಥಿಗಳಿದ್ದ ಹಾಸ್ಟೆಲ್ ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ವೆಂಕಟ್ ರೆಸಿಡೆನ್ಸಿಯ ಜನರೇಟರ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೇಲಿನ ಎರಡು ಮಹಡಿಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಲಿಯುವ ಎನ್‌ಆರ್‌ಐ ವಿದ್ಯಾರ್ಥಿಗಳಿದ್ದು, ಎಲ್ಲರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. ಕಟ್ಟಡದ ಟಾಪ್ ಫ್ಲೋರ್‌ನಲ್ಲಿ ಸಭಾಂಗಣವಿದ್ದು, ಅಲ್ಲಿ ಯಾವುದೇ ಕಾರ್ಯಕ್ರಮಗಳಿರಲಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯವನ್ನು

ವಿದ್ಯಾರ್ಥಿಗಳ ಹಾಸ್ಟೆಲ್‌ ಕಟ್ಟಡದಲ್ಲಿ ಬೆಂಕಿ ಅವಘಡ Read More »

ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಮೃತ್ಯು, 18ಕ್ಕೂ ಹೆಚ್ಚು ಮಂದಿಗೆ ಗಾಯ

ನೆಲ್ಯಾಡಿ: ಖಾಸಗಿ ಬಸ್‍ ಹಿಟಾಚಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, 18 ಕ್ಕೂ ಹಚ್ಚು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಲಾವತಡ್ಕದಲ್ಲಿ ಇಂದು  ಮುಂಜಾನೆ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಕಾರ್ಕಳ ಪಡುಮನೆ ನಿವಾಸಿ ಶಂಕರನಾರಾಯಣ ಭಟ್ (41) ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರ್ಕಳದಿಂದ ಧರ್ಮಸ್ಥಳ ಮೂಲಕ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ಸು, ಲಾವತಡ್ಕ ಬಳಿ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಹಿಟಾಚಿ ಯಂತ್ರವನ್ನು ಸಾಗಿಸುತ್ತಿದ್ದ ಲಾರಿಗೆ

ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಮೃತ್ಯು, 18ಕ್ಕೂ ಹೆಚ್ಚು ಮಂದಿಗೆ ಗಾಯ Read More »

error: Content is protected !!
Scroll to Top