ಟೆಹ್ರಾನ್‌ ನಗರ ತೊರೆಯಲು ಭಾರತೀಯರಿಗೆ ತುರ್ತು ಸೂಚನೆ

ಹತ್ತು ಸಾವಿರಕ್ಕೂ ಅಧಿಕ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಸವಾಲು ನವದೆಹಲಿ: ಭಾರತೀಯರೆಲ್ಲರೂ ಕೂಡಲೇ ಟೆಹ್ರಾನ್‌ ನಗರದಿಂದ ಹೊರಬೇಕೆಂದು ಭಾರತ ಸರ್ಕಾರ ಟೆಹ್ರಾನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮಂಗಳವಾರ ತುರ್ತು ಸೂಚನೆ ನೀಡಿದೆ. ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಮರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಟೆಹ್ರಾನ್‌ ನಗರದಿಂದ ದೂರ ಹೋಗುವಂತೆ ಭಾರತೀಯರಿಗೆ ಸೂಚಿಸಿದೆ. ಇಸ್ರೇಲ್‌ ಸತತವಾಗಿ ಟೆಹ್ರಾನ್‌ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಅಲ್ಲಿ ಇರುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಜೊತೆಗೆ ಅಮೆರಿಕ ಕೂಡ ಟೆಹ್ರಾನ್‌ ಬಿಟ್ಟು ಹೋಗುವಂತೆ […]

ಟೆಹ್ರಾನ್‌ ನಗರ ತೊರೆಯಲು ಭಾರತೀಯರಿಗೆ ತುರ್ತು ಸೂಚನೆ Read More »

ರಾಜ್ಯದ ಸರಕಾರಿ, ಅನುದಾನಿತ ಶಾಲೆಗಳಲ್ಲಿ ತಿಂಗಳ ಒಂದು ಶನಿವಾರ ಬ್ಯಾಗ್‍ ರಹಿತ ‘ಸಂಭ್ರಮ ಶನಿವಾರ’ ಆಚರಣೆ

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿ ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್‍ ರಹಿತ ‘ಸಂಭ್ರಮ ಶನಿವಾರ’ ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಮಕ್ಕಳನ್ನು ಚಟುವಟಿಕೆಗಳಲ್ಲಿ ಬಹುಮುಖ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆ ಬೆಳೆಸಲು, ವಿವಿಧ ಥೀಮ್ ಗಳನ್ನು ಆಧರಿಸಿ ವಿದ್ಯಾರ್ಥಿಗಳಿಗೆ 10 ಸ್ವಯಂವಿವರಣಾತ್ಮಕ ಮಾಡ್ಯೂಲ್ ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಈಗಾಗಲೇ ನೀಡಿದೆ.2025-26 ನೇ ಸಾಲಿನಲ್ಲಿ ಪ್ರತಿ ತಿಂಗಳು 3 ನೇ ಶನಿವಾರ ಶಾಲಾ

ರಾಜ್ಯದ ಸರಕಾರಿ, ಅನುದಾನಿತ ಶಾಲೆಗಳಲ್ಲಿ ತಿಂಗಳ ಒಂದು ಶನಿವಾರ ಬ್ಯಾಗ್‍ ರಹಿತ ‘ಸಂಭ್ರಮ ಶನಿವಾರ’ ಆಚರಣೆ Read More »

ಇಸ್ರೇಲ್‌-ಇರಾನ್‌ ರಣರಂಗಕ್ಕೆ ಅಮೆರಿಕ ನೇರ ಎಂಟ್ರಿ?

ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಇರಾನ್‌ನಲ್ಲಿ ಹೆಚ್ಚಾದ ಭೀತಿ ತೈಲ, ಗ್ಯಾಸ್‌ ಬೆಲೆ ಏರಿಕೆ ಆತಂಕ ಟೆಹ್ರಾನ್‌ : ಇರಾನ್​​ನ ರಾಜಧಾನಿ ಟೆಹ್ರಾನ್ ಬಿಟ್ಟುಹೋಗುವಂತೆ ಅಲ್ಲಿನ ಜನರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎಚ್ಚರಿಕೆ ನೀಡಿರುವುದು ಇಸ್ರೇಲ್‌-ಇರಾನ್‌ ಸಮರದಲ್ಲಿ ಅಮೆರಿಕವೂ ಭಾಗಿಯಾಗುತ್ತಾ ಎಂಬ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಒಂದು ವೇಳೆ ಅಮೆರಿಕ ನೇರವಾಗಿ ರಣರಂಗಕ್ಕೆ ಇಳಿದರೆ ಘನಘೋರ ಸಮರ ನಡೆಯುವ ಭಿತಿ ಉಂಟಾಗಿದೆ. ಹೀಗಾದರೆ ಇದರ ಪರಿಣಾಮ ಬರೀ ಇರಾನ್‌ ಮಾತ್ರವಲ್ಲ ಇಡೀ ಜಗತ್ತಿಗೆ ತಟ್ಟಲಿದೆ. ಟ್ರಂಪ್‌ ಹೇಳಿಕೆಯಿಂದಾಗಿ

ಇಸ್ರೇಲ್‌-ಇರಾನ್‌ ರಣರಂಗಕ್ಕೆ ಅಮೆರಿಕ ನೇರ ಎಂಟ್ರಿ? Read More »

ವಿದ್ಯುತ್‍ ಶಾಕ್‍ ಹೊಡೆದು ಮಹಿಳೆ ಮೃತ್ಯು

ಕಡಬ: ಮಹಿಳೆಯೊಬ್ಬರು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಸೋಮವಾರ ಸಂಜೆ ಕಡಬ ತಾಲೂಕಿನ ಎಡಮಂಗಲ ಸಮೀಪದ ಚಾರ್ವಾಕ ಎಂಬಲ್ಲಿ ನಡೆದಿದೆ. ದೋಳಾಡಿ ನಿವಾಸಿ ಪುರಂದರ ಎಂಬವರ ಪತ್ನಿ ರೇಖಾ(35) ಮೃತಪಟ್ಟವರು. ನೀರಿನ ಪಂಪ್‌ ಸ್ವಿಚ್‌ ಹಾಕುವ ವೇಳೆ ವಿದ್ಯುತ್ ಶಾಕ್ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯುತ್‍ ಶಾಕ್‍ ಹೊಡೆದು ಮಹಿಳೆ ಮೃತ್ಯು Read More »

ಬಂಟ್ವಾಳ : ಹೊಂಡಕ್ಕೆ ಬಿದ್ದು ಯುವಕ ಸಾವು

ಬಂಟ್ವಾಳ : ನಾಪತ್ತೆಯಾಗಿದ್ದ ಯುವಕನ ಮೃತದೇಹ ರಸ್ತೆ ಬದಿಯ ಕೃಷಿ ಹೊಂಡದಲ್ಲಿ ಸೋಮವಾರ ಪತ್ತೆಯಾಗಿದೆ. ಮೃತ ಯುವಕನನ್ನು ಅಮ್ಮುಂಜೆ ಗ್ರಾಮದ ಬೆಂಜನಪದವು ಕಂಬಳ ಮನೆಯ ನಿವಾಸಿ ಜನಾರ್ದನ ಪೂಜಾರಿ ಅವರ ಪುತ್ರ ಸಾಗರ್ (28) ಎಂದು ಗುರುತಿಸಲಾಗಿದೆ. ಕಾಲುಜಾರಿ ಹೊಂಡಕ್ಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ಸಂಶಯಿಸಲಾಗಿದೆ. ಪೈಟಿಂಗ್ ಕೆಲಸ ಮಾಡಿಕೊಂಡಿದ್ದ ಸಾಗರ್ ತಾಯಿಯ ಜೊತೆ ಬಿ.ಸಿ.ರೋಡಿಗೆ ಔಷಧಿ ತರಲೆಂದು ಅಟೋರಿಕ್ಷಾದಲ್ಲಿ ತೆರಳಿದ್ದರು. ವಾಪಾಸು ಬರುವಾಗ ಬೆಂಜನಪದವು ಮೂರು ಮಾರ್ಗ ಎಂಬಲ್ಲಿ ಸಾಗರ್ ಇಳಿದಿದ್ದು, ಬಳಿಕ ಮನೆಗೆ

ಬಂಟ್ವಾಳ : ಹೊಂಡಕ್ಕೆ ಬಿದ್ದು ಯುವಕ ಸಾವು Read More »

ಬೀಡಿಯ ತುಂಡು ನುಂಗಿ 10 ತಿಂಗಳ ಮಗು ಸಾವು

ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡು ನುಂಗಿದ್ದ ಹಸುಳೆ ಮಂಗಳೂರು: ಬೀಡಿಯ ತುಂಡು ನುಂಗಿ 10 ತಿಂಗಳು ಪ್ರಾಯದ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಮಂಗಳೂರು ಸಮೀಪ ಅಡ್ಯಾರ್‌ನಲ್ಲಿ ಸಂಭವಿಸಿದೆ. ಅಡ್ಯಾರ್‌ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ 10 ತಿಂಗಳ ಅನೀಶ್‌ ಕುಮಾರ್‌ ಸಾವನ್ನಪ್ಪಿರುವ ನತದೃಷ್ಟ ಮಗು. ಕಳೆದ ಶನಿವಾರ ಮಧ್ಯಾಹ್ನ 1.30ರ ವೇಳೆಗೆ ಮನೆಯಲ್ಲಿ ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ಮಗು ನುಂಗಿದೆ. ಅಸ್ವಸ್ಥಗೊಂಡ ಮಗುವನ್ನು ಸಂಜೆ ವೇಳೆಗೆ ವೆನ್ಲಾಕ್‌ ಆಸ್ಪತ್ರೆಗೆ ಕರೆತಂದಿದ್ದರು. ಆದರೆ

ಬೀಡಿಯ ತುಂಡು ನುಂಗಿ 10 ತಿಂಗಳ ಮಗು ಸಾವು Read More »

ಯುದ್ಧದ ಸುದ್ದಿ ಓದುತ್ತಿರುವಾಗಲೇ ಟಿವಿ ವಾಹಿನಿ ಕಚೇರಿ ಮೇಲೆ ಎರಗಿದ ಇಸ್ರೇಲ್‌ ಕ್ಷಿಪಣಿ

ಲೈವ್‌ನಿಂದ ಎದ್ದು ಓಡಿಹೋಗಿ ಬಚಾವಾದ ನಿರೂಪಕಿ ಟೆಹ್ರಾನ್‌: ತನ್ನ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿದ್ದಕ್ಕೆ ಸಿಟ್ಟಾಗಿರುವ ಇಸ್ರೇಲ್‌ ಟೆಹ್ರಾನ್‌ನಲ್ಲಿರುವ ಇರಾನಿನ ಸರ್ಕಾರಿ ಟಿವಿ ವಾಹಿನಿ ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಇರಾನ್‌ ಬ್ರಾಡ್‌ಕಾಸ್ಟಿಂಗ್‌ (ಐಆರ್‌ಐಬಿ) ಕಚೇರಿಯ ಮೇಲೆಯೇ ಬಾಂಬ್‌ ದಾಳಿ ನಡೆಸಿದೆ. ಐಆರ್‌ಐಬಿ ನಿರೂಪಕಿಯೊಬ್ಬರು ಇಸ್ರೇಲ್‌ ದಾಳಿ ಕುರಿತಂತೆ ಸುದ್ದಿ ಓದುತ್ತಿದ್ದರು. ಈ ಸಂದರ್ಭದಲ್ಲೇ ಇಸ್ರೇಲ್‌ ಐಆರ್‌ಐಬಿ ಕಟ್ಟಡದ ಮೇಲೆಯೇ ಇಸ್ರೇಲ್‌ ವಾಯುಸೇನೆ ಬಾಂಬ್‌ ದಾಳಿ ನಡೆಸಿದೆ. ನಿರೂಪಕಿ ಎದ್ದು ಓಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ನಿನ್ನೆಯಿಂದೀಚೆಗೆ ಭಾರಿ

ಯುದ್ಧದ ಸುದ್ದಿ ಓದುತ್ತಿರುವಾಗಲೇ ಟಿವಿ ವಾಹಿನಿ ಕಚೇರಿ ಮೇಲೆ ಎರಗಿದ ಇಸ್ರೇಲ್‌ ಕ್ಷಿಪಣಿ Read More »

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET, JEE ಫೌಂಡೇಶನ್‍ ತರಗತಿಗಳಿಗೆ ದಾಖಲಾತಿ ಆರಂಭ

ಪುತ್ತೂರು: ಏಳ್ಮುಡಿಯಲ್ಲಿರುವ ಪ್ರಭು ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET, JEE ಫೌಂಡೇಶನ್‍ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕೋರ್ಸ್ ನ ಸದುಪಯೋಗ ಪಡೆದುಕೊಳ್ಳಬಹುದು. ನುರಿತ ಉತ್ತಮ ಅಧ್ಯಾಪಕರಿಂದ ತರಗತಿ ನಡೆಸಲಾಗುವುದು. ಸಂಸ್ಥೆಯಲ್ಲಿ CA, PLACEMENT TRAINING, EDUCATION GUIDELINES, PUC TUITIONS, LEARNING ORATORY, SKILLS (SPEECH), SPOKEN ENGLISH & ANCHORING ಕೋಚಿಂಗ್‍ ಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಹೆಚ್ಚಿನ ಮಾಹಿತಿಗಾಗಿ ‘ಪ್ರೇರಣಾ’, ಮೊದಲ ಮಹಡಿ,

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ NEET, CET, JEE ಫೌಂಡೇಶನ್‍ ತರಗತಿಗಳಿಗೆ ದಾಖಲಾತಿ ಆರಂಭ Read More »

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಟ್ಯೂಷನ್ ತರಗತಿಗೆ ದಾಖಲಾತಿ ಆರಂಭ

ಪುತ್ತೂರು: ಏಳ್ಮುಡಿಯಲ್ಲಿರುವ ಪ್ರಭು ಬಿಲ್ಡಿಂಗ್‍ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಟ್ಯೂಷನ್‍ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ. ಎಲ್‍ಕೆಜಿ ಯಿಂದ 10ನೇ ತರಗತಿ ತನಕ ಟ್ಯೂಷನ್‍ ತರಗತಿಯ ಎಲ್ಲಾ ಪಠ್ಯಗಳಿಗೆ ಟ್ಯೂಷನ್‍ ಲಭ್ಯವಿದ್ದು, ಪ್ರತಿಯೊಂದು ಮಕ್ಕಳ ಕುರಿತು ವೈಯಕ್ತಿಕ ಗಮನ, ಕೌಶಲ್ಯ ಹೆಚ್ಚಿಸುವುದು ಹಾಗೂ ಪರೀಕ್ಷೆಗೆ ತಯಾರಿ ನಡೆಸುವುದು ಸಂಸ್ಥೆಯ ಧ್ಯೇಯವಾಗಿದೆ. ವಿಶಾಲವಾದ ತರಗತಿ ಕೊಠಡಿ, ನುರಿತ ಶಿಕ್ಷಕರಿಂದ ಉತ್ತಮ ಬೋಧನೆ ವ್ಯವಸ್ಥೆಯನ್ನೊಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ‘ಪ್ರೇರಣಾ’, ಮೊದಲ ಮಹಡಿ, ಪ್ರಭು ಬಿಲ್ಡಿಂಗ್‍, ಕೆನರಾ ಬ್ಯಾಂಕ್‍ ಬಳಿ,

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಟ್ಯೂಷನ್ ತರಗತಿಗೆ ದಾಖಲಾತಿ ಆರಂಭ Read More »

ಕನ್ಯಾನ ಗ್ರಾಮದ ಮುಂಡೂರಿನಲ್ಲಿ ಕಂಪಿಸಿದ ಭೂಮಿ | ಆತಂಕಗೊಂಡ ಸಾರ್ವಜನಿಕರು

‍ ವಿಟ್ಲ: ಕನ್ಯಾನ ಗ್ರಾಮದ ಮಂಡ್ಕೂರು ಎಂಬಲ್ಲಿ ಜನರಿಗೆ ಒಂದು ಕ್ಷಣಕ್ಕೆ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ಇದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಂಪಿಸಿದ ಅನುಭವ ಕೇವಲ ಒಂದೆರಡು ಸೆಕೆಂಡ್‍  ಮಾತ್ರ ಉಂಟಾಗಿದೆ. ಘಟನೆ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಯಬಿಟ್ಟಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಕನ್ಯಾನ ಗ್ರಾಮದ ಮುಂಡೂರಿನಲ್ಲಿ ಕಂಪಿಸಿದ ಭೂಮಿ | ಆತಂಕಗೊಂಡ ಸಾರ್ವಜನಿಕರು Read More »

error: Content is protected !!
Scroll to Top