ಜೂ. 21 : ಕೆಮ್ಮಿಂಜೆಯಲ್ಲಿ ಎಸ್‌ ಪಿವೈಎಸ್‌ ಎಸ್‌ ಆಶ್ರಯದಲ್ಲಿ ಯೋಗ ದಿನಾಚರಣೆ – ಯೋಗ ಸಂಭ್ರಮ

ಪುತ್ತೂರು: 1980 ರಿಂದ ಉಚಿತ ಶಿಕ್ಷಣ ನೀಡುತ್ತಿರುವ ಪುತ್ತೂರು ತಾಲೂಕಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ನೇತ್ರಾವತಿ ವಲಯ, ಮಂಗಳೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್‌, ಆಯುಷ್‌ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಯೋಗದೊಂದಿಗೆ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಜೂ. 21ರಂದು ಬೆಳಗ್ಗೆ ಗಂಟೆ 5.00ರಿಂದ 7.00ರವರೆಗೆ ನಡೆಯಲಿದೆ. ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಧ್ಯೇಯೋದ್ಧೇಶದೊಂದಿಗೆ ಯೋಗ ದಿನಾಚರಣೆ […]

ಜೂ. 21 : ಕೆಮ್ಮಿಂಜೆಯಲ್ಲಿ ಎಸ್‌ ಪಿವೈಎಸ್‌ ಎಸ್‌ ಆಶ್ರಯದಲ್ಲಿ ಯೋಗ ದಿನಾಚರಣೆ – ಯೋಗ ಸಂಭ್ರಮ Read More »

ಪುತ್ತೂರು ಕೋ ಆಪರೇಟಿವ್‍ ಟೌನ್‍ ಬ್ಯಾಂಕ್‍ ನಿಂದ ಶಶಿಕುಮಾರ್ ರೈ ಬಾಲ್ಯೊಟ್ಟುರಿಗೆ ಸನ್ಮಾನ

ಪುತ್ತೂರು: ದ ಕ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕರು ಮತ್ತು ದ ಕ ಜಿಲ್ಲಾ ಸಹಕಾರಿ ಯೂನಿಯನ್ನಿನ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ರವರನ್ನು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‍ ಆಡಳಿತ ಮಂಡಳಿ ಹಾಗೂ ಸಿಬ್ಬಂಧಿಗಳ ವತಿಯಿಂದ ಸನ್ಮಾನಿಸಲಾಯಿತು.  ಬ್ಯಾಂಕಿನ ಅಧ್ಯಕ್ಷ  ಎನ್.  ಕಿಶೋರ  ಕೊಳತ್ತಾಯ ಅಧ್ಯಕ್ಷತೆ ವಹಿಸಿ, ಬ್ಯಾಂಕಿನ ಸರ್ವಾಂಗಿಣ ಪ್ರಗತಿಯ ವಿವರ ನೀಡಿ ಸನ್ಮಾನದ ಮಾತುಗಳನ್ನಾಡಿದರು. ಸಹಕಾರಿ ಸಂಘಗಳ  ಉಪ ನಿಬಂಧಕ ರಮೇಶ ಎಚ್. ಎನ್. ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಸಹಕಾರಿ

ಪುತ್ತೂರು ಕೋ ಆಪರೇಟಿವ್‍ ಟೌನ್‍ ಬ್ಯಾಂಕ್‍ ನಿಂದ ಶಶಿಕುಮಾರ್ ರೈ ಬಾಲ್ಯೊಟ್ಟುರಿಗೆ ಸನ್ಮಾನ Read More »

ಕೊಂಬಾರು ನಿವಾಸಿ, ನಿವೃತ್ತ ಸೈನಿಕ ಹೃದಯಾಘಾತದಿಂದ ನಿಧನ

ಕಡಬ: ವರ್ಷದ ಹಿಂದೆ ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು ಊರಿನಲ್ಲಿ ನೆಲೆಸಿದ್ದ ಸೈನಿಕರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಬುಧವಾರ ಸಂಜೆ ನಡೆದಿದೆ. ಮೂಲತ: ಕೊಂಬಾರು ಗ್ರಾಮದಲ್ಲಿ ವಾಸವಿದ್ದ ಪ್ರಸ್ತುತ ಕಳಾರ ಸಮೀಪದ ಅಲಾರ್ಮೆಯಲ್ಲಿ ವಾಸವಾಗಿದ್ದ ರಂಗಸ್ವಾಮಿ ಎಂಬವರ ಪುತ್ರ ನಿವೃತ್ತ ಸೈನಿಕ ಪ್ರಭಾಕರನ್ ಹೃದಯಾಘಾತಕ್ಕೆ ಒಳಗಾದವರು. ಇಂದು ತನ್ನ ಕಾರಿನಲ್ಲಿ ಬರುತ್ತಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಕೂಡಲೇ ಕಡಬ ಸಮುದಾಯ ಆಸ್ಪತ್ರೆಗೆ ಆಗಮಿಸಿದ್ದು ಈ ವೇಳೆ ಆಸ್ಪತ್ರೆಯೊಳಗೆ ಕುಸಿದು ಬಿದ್ದಿದ್ದು ಕೂಡಲೇ ಆಸ್ಪತ್ರೆ ಸಿಬ್ಬಂದಿಗಳು

ಕೊಂಬಾರು ನಿವಾಸಿ, ನಿವೃತ್ತ ಸೈನಿಕ ಹೃದಯಾಘಾತದಿಂದ ನಿಧನ Read More »

ಇರಾನ್‌ನಿಂದ ಸುರಕ್ಷಿತವಾಗಿ ದಿಲ್ಲಿ ತಲುಪಿದ 110 ವಿದ್ಯಾರ್ಥಿಗಳು

ಭಾರತೀಯರನ್ನು ಕರೆತರಲು ಆಪರೇಷನ್‌ ಸಿಂಧು ಕಾರ್ಯಾಚರಣೆ ನವದೆಹಲಿ: ಯುದ್ಧಪೀಡಿತ ಇರಾನ್‌ನಲ್ಲಿ ಸಿಲುಕಿಕೊಂಡಿದ್ದ 110 ಭಾರತೀಯ ವಿದ್ಯಾರ್ಥಿಗಳನ್ನು ಇಂದು ಭಾರತಕ್ಕೆ ಕರೆತರಲಾಗಿದೆ. ಇರಾನ್‌ನಿಂದ ಸ್ಥಳಾಂತರಿಸಲಾದ ಮೊದಲ ಗುಂಪಿನ ವಿದ್ಯಾರ್ಥಿಗಳು ತಡರಾತ್ರಿ ದೆಹಲಿಗೆ ವಿಮಾನ ಹತ್ತಿದ್ದು, ಇಂದು ಮುಂಜಾನೆ ಬಂದಿಳಿದಿದ್ದಾರೆ. ವಿಮಾನ ಮೂರು ಗಂಟೆಗಳ ಕಾಲ ವಿಳಂಬವಾಗಿ ಹೊರಟಿತ್ತು. ಈ ವಿದ್ಯಾರ್ಥಿಗಳನ್ನು ಮೊದಲ ಹಂತದಲ್ಲಿ ಇರಾನ್‌ನಿಂದ ಅರ್ಮೇನಿಯಾ ಮತ್ತು ದೋಹಾಗೆ ಸ್ಥಳಾಂತರಿಸಲಾಗಿತ್ತು. ಇಂದು ಅವರ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅವರಲ್ಲಿ ಹೆಚ್ಚಿನವರು (90)

ಇರಾನ್‌ನಿಂದ ಸುರಕ್ಷಿತವಾಗಿ ದಿಲ್ಲಿ ತಲುಪಿದ 110 ವಿದ್ಯಾರ್ಥಿಗಳು Read More »

ಜಮೀನಿನ ನಕ್ಷೆ ಮಾಡಿಕೊಡಲು ಲಂಚ ಸ್ವೀಕರಿಸಿದ ಸರ್ವೆಯರ್‌, ದಲ್ಲಾಳಿ ಲೋಕಾಯುಕ್ತ ಬಲೆಗೆ

ಎರಡು ತುಂಡು ಜಮೀನುಗಳ ನಕ್ಷೆ, ಪ್ರಾಪರ್ಟಿ ಕಾರ್ಡ್‌ಗೆ 41,500 ರೂ.ಲಂಚ ಪಡೆದಿದ್ದ ಸರ್ವೆಯರ್‌ ಮಂಗಳೂರು: ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಕೊಡಲು ಲಂಚ ಸ್ವೀಕರಿಸಿದ ಭೂಮಾಪನ ಇಲಾಖೆಯ ಸರ್ವೆಯರ್‌ ಮತ್ತು ಈತನಿಗೆ ಸಹಕರಿಸಿದ ದಲ್ಲಾಳಿಯನ್ನು ಲೋಕಾಯುಕ್ತ ಪೊಲೀಸರು ಲಂಚದ ಹಣ ಪಡೆಯುತ್ತಿರುವಾಗಲೇ ಬಲೆಬೀಸಿ ಬಂಧಿಸಿದ್ದಾರೆ. ವ್ಯಕ್ತಿಯೊಬ್ಬರು ತನ್ನ ಹಾಗೂ ತನ್ನ ತಾಯಿಯ ಹೆಸರಿನಲ್ಲಿರುವ ಕಂಕನಾಡಿ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸಲು ಕಳೆದ ಫೆಬ್ರವರಿಯಲ್ಲಿ

ಜಮೀನಿನ ನಕ್ಷೆ ಮಾಡಿಕೊಡಲು ಲಂಚ ಸ್ವೀಕರಿಸಿದ ಸರ್ವೆಯರ್‌, ದಲ್ಲಾಳಿ ಲೋಕಾಯುಕ್ತ ಬಲೆಗೆ Read More »

ಉಪ್ಪಿನಂಗಡಿ : ಕುಮಾರಧಾರಾ ನದಿ ದಡದಲ್ಲಿ ಕಂಡುಬಂದ ಭಾರಿ ಗಾತ್ರದ ಮೊಸಳೆ

ಸ್ಥಳೀಯ ಜನರಲ್ಲಿ ಆತಂಕ ಉಪ್ಪಿನಂಗಡಿ: ನೆಕ್ಕಿಲಾಡಿ ಸಮೀಪ ಕುಮಾರಧಾರಾ ನದಿ ದಡದಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಕಂಡು ಬಂದು ಈ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ. ನಿನ್ನೆ ಸಂಜೆ ಮೊಸಳೆ ಕಾಣಿಸಿಕೊಂಡಿದ್ದು, ಇದನ್ನು ಸಮೀಪದಿಂದ ನೋಡಲು ಹೋದವರನ್ನು ಮೊಸಳೆ ಬಾಯಿ ಅಗಲಿಸಿ ಆಕ್ರಮಣಕಾರಿಯಾಗಿ ವರ್ತಿಸಿ ಹೆದರಿಸಿದೆ. ೩೪ ನೆಕ್ಕಿಲಾಡಿಯ ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರ ನದಿಗಿಳಿಯುವ ದಾರಿಯಲ್ಲಿ ನದಿ ದಡದಲ್ಲಿ ಮೊಸಳೆ ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು. ನದಿ ದಡದಲ್ಲಿ ಏನೋ ಮಲಗಿದೆ ಎಂದು

ಉಪ್ಪಿನಂಗಡಿ : ಕುಮಾರಧಾರಾ ನದಿ ದಡದಲ್ಲಿ ಕಂಡುಬಂದ ಭಾರಿ ಗಾತ್ರದ ಮೊಸಳೆ Read More »

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೋರ್ಟ್‌ ನೋಟಿಸ್‌

ಸದನದಲ್ಲಿ ಆರ್‌ಎಸ್‌ಎಸ್‌, ಬಜರಂಗ ದಳ ಟೀಕಿಸಿದ್ದ ಪ್ರಕರಣ ಬೆಂಗಳೂರು: ಅತಿಹೆಚ್ಚು ಅಪರಾಧ ಕೃತ್ಯಗಳಾಗುತ್ತಿರುವುದೇ ಆರ್‌ಎಸ್‌ಎಸ್​ ಮತ್ತು ಬಜರಂಗದಳದಿಂದ ಎಂದು ಸದನದಲ್ಲಿ ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೋರ್ಟ್‌ ನೋಟಿಸ್‌ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಸಿದ್ದರಾಮಯ್ಯನವರಿಗೆ ನೋಟಿಸ್ ಜಾರಿ ಮಾಡಿ ಜೂನ್ 26ರೊಳಗೆ ನೋಟಿಸ್‌ಗೆ ಉತ್ತರಿಸಬೇಕು ಎಂದು ಹೇಳಿದೆ. ಅತಿಹೆಚ್ಚು ಅಪರಾಧ ಕೃತ್ಯಗಳಾಗುತ್ತಿರುವುದೇ ಆರ್‌ಎಸ್‌ಎಸ್‌ ಮತ್ತು ಬಜರಂಗದಳದಿಂದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸದನದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೋರ್ಟ್‌ ನೋಟಿಸ್‌ Read More »

ದೆಹಲಿ ಸ್ವಾತಂತ್ರ್ಯ ದಿನಾಚರಣೆ  ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಮೈ ಭಾರತ್ ನ ಯುವ ರಾಯಭಾರಿಯಾಗಿ ಶ್ರೀಕಾಂತ್ ಪೂಜಾರಿ‌ ಬಿರಾವು ನೇಮಕ

ಪುತ್ತೂರು: ಈ ಬಾರಿ ದೆಹಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವ ಕಾರ್ಯಕ್ರಮ ದಲ್ಲಿ ಮೈ ಭಾರತ್ ನವದೆಹಲಿಯ ಮೈ ಭಾರತ್ ನ ಯುವ ರಾಯಭಾರಿಯಾಗಿ ಪಾಲ್ಗೊಳ್ಳಲು ದಕ್ಷಿಣ  ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶ್ರೀಕಾಂತ್ ಪೂಜಾರಿ ಬಿರಾವು ಕರ್ನಾಟಕದಿಂದ ಆಯ್ಕೆಯಾಗಿ ಪ್ರತಿನಿದಿಸಲಿದ್ದಾರೆ. ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ , ಮೈ ಭಾರತ್ (ನೆಹರು ಯುವ ಕೇಂದ್ರ) ನವದೆಹಲಿ  ಇದರ ವತಿಯಿಂದ ದೇಶದ ಪ್ರತಿ ರಾಜ್ಯದಿಂದ 15 ವರ್ಷ ದಿಂದ 28 ವರ್ಷ ವಯೋಮಿತಿ ವರೆಗಿನ  ಯುವಜನರನ್ನು ನೇಮಕ

ದೆಹಲಿ ಸ್ವಾತಂತ್ರ್ಯ ದಿನಾಚರಣೆ  ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಮೈ ಭಾರತ್ ನ ಯುವ ರಾಯಭಾರಿಯಾಗಿ ಶ್ರೀಕಾಂತ್ ಪೂಜಾರಿ‌ ಬಿರಾವು ನೇಮಕ Read More »

ಕಾನೂನು ಸುವ್ಯವಸ್ಥೆ, ಸಹೋದರತ್ವ ಕಾಪಾಡಿಕೊಂಡರೆ ಮಂಗಳೂರು ಬೆಳೆಯುವ ಮಟ್ಟವನ್ನು ಊಹಿಸಲೂ ಸಾಧ್ಯವಿಲ್ಲ : ದಿನೇಶ್‍ ಗುಂಡೂರಾವ್‍ | ಪುತ್ತೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿ ಉದ್ಘಾಟನೆ

ಪುತ್ತೂರು: ರಾಜಸ್ವ ಸಂಗ್ರಹದಲ್ಲಿ ರಾಜ್ಯಕ್ಕೆ ಬೆಂಗಳೂರು ಬಿಟ್ಟರೆ ಮಂಗಳೂರು ಎರಡನೇ ಸ್ಥಾನದಲ್ಲಿದೆ. ಬಂಡವಾಳ ಹಾಕಿದಷ್ಟೂ ಹೆಚ್ಚು ಆದಾಯ ತರುವ ಜಿಲ್ಲೆ ಇದು. ಕಾನೂನು ಸುವ್ಯವಸ್ಥೆ, ಸಹೋದರತ್ವ ಕಾಪಾಡಿಕೊಂಡರೆ ಮಂಗಳೂರು ಬೆಳೆಯುವ ಮಟ್ಟವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು. ಬುಧವಾರ ಪುತ್ತೂರಿನ ದರ್ಬೆ ಸಮೀಪ ವಾಣಿಜ್ಯ ತೆರಿಗೆಗಳ ಇಲಾಖೆಯ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-265, ಲೆಕ್ಕಪರಿಶೋಧನೆ ಕಚೇರಿ

ಕಾನೂನು ಸುವ್ಯವಸ್ಥೆ, ಸಹೋದರತ್ವ ಕಾಪಾಡಿಕೊಂಡರೆ ಮಂಗಳೂರು ಬೆಳೆಯುವ ಮಟ್ಟವನ್ನು ಊಹಿಸಲೂ ಸಾಧ್ಯವಿಲ್ಲ : ದಿನೇಶ್‍ ಗುಂಡೂರಾವ್‍ | ಪುತ್ತೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿ ಉದ್ಘಾಟನೆ Read More »

ಕಾರು-ಬೈಕ್‍ ಡಿಕ್ಕಿ : ಬೈಕ್‍ ಸವಾರನಿಗೆ ಗಂಭೀರ ಗಾಯ

ಪುತ್ತೂರು: ಬೈಕ್‍ ಹಾಗೂ ಕಾರು ಡಿಕ್ಕಿಯಾದ ಘಟನೆ ನೆಹರುನಗರದಲ್ಲಿ ಇಂದು ಸಂಜೆ ನಡೆದಿದೆ. ಘಟನೆ ಪರಿಣಾಮ ಬೈಕ್ ಸವಾರ ಮುರ ನಿವಾಸಿ ತನ್ನೀರ್ ಗಂಭೀರ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾರು-ಬೈಕ್‍ ಡಿಕ್ಕಿ : ಬೈಕ್‍ ಸವಾರನಿಗೆ ಗಂಭೀರ ಗಾಯ Read More »

error: Content is protected !!
Scroll to Top