ಪ್ರೀತಿಗೆ ಮನೆಯವರ ವಿರೋಧ: ಪ್ರೇಮಿಗಳು ಆತ್ಮಹತ್ಯೆ

ಬೆಳಗಾವಿ: ತಮ್ಮ ಮದುವೆಗೆ ಮನೆಯಲ್ಲಿ ಒಪ್ಪಿಗೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪ್ರೇಮಿಗಳಿಬ್ಬರು ಅಟೋದಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ ಘಟನೆ ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ರಾಘವೇಂದ್ರ ಜಾದವ(28), ರಂಜಿತಾ ಚೋಬರಿ(26) ಎಂದು ತಿಳಿದು ಬಂದಿದೆ. ಇವರಿಬ್ಬರೂ ಹಲವು ವರ್ಷಗಳಿಂದ ಪ್ರೇಮಿಸುತ್ತಿದ್ದರು. ‌ಇವರಿಬ್ಬರ ಮದುವೆಗೆ ಮನೆಯವರ ಒಪ್ಪಿಗೆ ಇರಲಿಲ್ಲ. ರಂಜಿತಾಗೆ ಕೆಲ ದಿನಗಳ ಹಿಂದಷ್ಟೇ ವಿವಾಹ ನಿಶ್ಚಯವಾಗಿತ್ತು. ಇದರಿಂದ ನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿರ್ಜನ ಪ್ರದೇಶದಲ್ಲಿ ಅಟೋ‌ಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. […]

ಪ್ರೀತಿಗೆ ಮನೆಯವರ ವಿರೋಧ: ಪ್ರೇಮಿಗಳು ಆತ್ಮಹತ್ಯೆ Read More »

ಸರ್ಕಾರಿ ಶಿಕ್ಷಣ ಸಂಸ್ಥೆ ಉಳಿಸಲು ಹತ್ತು ಲಕ್ಷಕ್ಕೂ ಅಧಿಕ ಜನರಿಂದ ಸಹಿ

ಮಡಿಕೇರಿ: ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಎಂಬ ಧ್ಯೇಯದಡಿ ಉಳಿಸಲು ಮತ್ತು ಬಲಪಡಿಸಲು ಕೈಗೊಂಡ 50 ಲಕ್ಷ ಸಹಿ ಸಂಗ್ರಹ ಅಭಿಯಾನದಲ್ಲಿ ಈಗಾಗಲೇ 10 ಲಕ್ಷಗಳಷ್ಟು ‌ಸಹಿ ಸಂಗ್ರಹ ಮಾಡಲಾಗಿದೆ ಎಂದು AIDSO ಜಿಲ್ಲಾ ಸಹ ಸಂಚಾಲಕಿ ‌ಸ್ವಾತಿ ಅವರು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರ 6,200 ಸರ್ಕಾರಿ ಶಾಲೆಗಳನ್ನು ಹಬ್ ಆ್ಯಂಡ್ ಸ್ಪೋಕ್ ಮಾದರಿಯಡಿ ಸಂಯೋಜನೆಯ ಹೆಸರಲ್ಲಿ ಮುಚ್ಚುವ ಜನ ವಿರೋಧಿ ನಡೆ ಪ್ರದರ್ಶಿಸಿದೆ. ಸರ್ಕಾರದ ಈ ನಿಲುವಿನ ವಿರುದ್ಧ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು

ಸರ್ಕಾರಿ ಶಿಕ್ಷಣ ಸಂಸ್ಥೆ ಉಳಿಸಲು ಹತ್ತು ಲಕ್ಷಕ್ಕೂ ಅಧಿಕ ಜನರಿಂದ ಸಹಿ Read More »

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಮಹಾಸಭೆ

ಕಡಬ: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಕಡಬ ಹೊಸಮಠದಲ್ಲಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ಮಾತೃ ಸಮಿತಿ ಅಧ್ಯಕ್ಷ ಸುರೇಶ್ ಗೌಡ ಬೈಲು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಘದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನ ಹಾಗೂ ಈ ವರ್ಷ ನಡೆದ ಕಾರ್ಯಕ್ರಮಗಳ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಲಾಯಿತು. ಸಂಘದ ವತಿಯಿಂದ ವಿವಿಧ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ನಾಡಪ್ರಭು ಕೆಂಪೇಗೌಡರ

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಮಹಾಸಭೆ Read More »

ಅಗ್ನಿ-5 ಬಂಕರ್ ಬರ್ಸ್ಟರ್ ಕ್ಷಿಪಣಿಯತ್ತ ಭಾರತದ ರಕ್ಷಣಾ ವಲಯದ ಚಿತ್ತ?

ನವದೆಹಲಿ: ಭಾರತವು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಸಶಕ್ತಗೊಳಿಸುವ ಗುರಿಯನ್ನು ಹೊಂದಿದ್ದು, ಬಂಕರ್ ಬರ್ಸ್ಟರ್ ಕ್ಷಿಪಣಿ ಯೋಜನೆಯನ್ನು ತೀವ್ರಗೊಳಿಸಿದೆ. ಅಮೆರಿಕಾದ ಬಂಕರ್ ಬರ್ಸ್ಟರ್ ಬಾಂಬಿಗಿಂತಲೂ ಹೆಚ್ಚು ಬಲಿಷ್ಟವಾದ ಅಸ್ತ್ರವನ್ನು ಭಾರತ ಅಭಿವೃದ್ಧಿ ಮಾಡುತ್ತಿದೆ. ಈ ಹೊಸ ಅಗ್ನಿ -5 ಕ್ಷಿಪಣಿಯು ವಾಯುಸೇನೆಯ ಹೊಸ ಆವೃತ್ತಿಯಾಗಿದ್ದು ಇದು ಶತ್ರು ರಾಷ್ಟ್ರಗಳ ರಹಸ್ಯ ಪರಮಾಣು ಬಂಕರ್‌ಗಳನ್ನು ಕೆಲವೇ ನಿಮಿಷಗಳಲ್ಲಿ ನಾಶಪಡಿಸುವ ‌ಸಾಮರ್ಥ್ಯ ಹೊಂದಿದೆ. ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಈ ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈಗಾಗಲೇ ಬಾಲಕೋಟ್

ಅಗ್ನಿ-5 ಬಂಕರ್ ಬರ್ಸ್ಟರ್ ಕ್ಷಿಪಣಿಯತ್ತ ಭಾರತದ ರಕ್ಷಣಾ ವಲಯದ ಚಿತ್ತ? Read More »

ಜುಲೈ 4 : “ಜಂಗಲ್ ಮಂಗಲ್” ಸಿನಿಮಾ ರಾಜ್ಯಾದ್ಯಂತ ತೆರೆಗೆ

ಪುತ್ತೂರು: ಸುನಿ ಸಿನಿಮಾಸ್‍ (ಸಿಂಪಲ್ ಸುನಿ) ಅರ್ಪಿಸುವ ಸಹ್ಯಾದ್ರಿ ಸ್ಟುಡಿಯೋಸ್ ನಿರ್ಮಾಣದ ‘ಜಂಗಲ್ ಮಂಗಲ್’ ಕನ್ನಡ ಸಿನಿಮಾ ಜುಲೈ 4 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಸಿನಿಮಾ ನಿರ್ದೇಶಕ ರಕ್ಷಿತ್ ಕುಮಾರ್ ತಿಳಿಸಿದ್ದಾರೆ. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಪೂರ್ಣ ಚಿತ್ರೀಕರಣ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮಡಪ್ಪಾಡಿಯಲ್ಲಿ 30 ದಿನಗಳ ಕಾಲ ನಡೆದಿದ್ದು, ಸುತ್ತ ದಟ್ಟ ಕಾಡಿನಿಂದ ಸುತ್ತುವರೆದು, ಕಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಸಣ್ಣ ಊರೊಂದರಲ್ಲಿ ನಡೆಯುವ ಮಜವಾದ ಘಟನೆಯನ್ನು ಒಳಗೊಂಡಿರುವ ಚಿತ್ರ

ಜುಲೈ 4 : “ಜಂಗಲ್ ಮಂಗಲ್” ಸಿನಿಮಾ ರಾಜ್ಯಾದ್ಯಂತ ತೆರೆಗೆ Read More »

ಬೆಂಗಳೂರು ಕಾಲ್ತುಳಿತ ಪ್ರಕರಣ : ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ಆದೇಶ ರದ್ದು

ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ತೀರ್ಪಿನಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಬೆಂಗಳೂರು 1: ಐಪಿಎಲ್ ಆರ್‌ಸಿಬಿ ವಿಜಯೋತ್ಸವ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 11 ಜನರ ಸಾವಿಗೆ ಕಾರಣವಾಗಿದ್ದ ಕಾಲ್ತುಳಿತ ಘಟನೆಗೆ ಹೊಣೆಯಾಗಿಸಿ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರನ್ನು ಅಮಾನತು ಮಾಡಿದ ನಿರ್ಧಾರವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಮಂಗಳವಾರ ರದ್ದುಪಡಿಸಿ ಆದೇಶಿಸಿದೆ. ನ್ಯಾಯಮೂರ್ತಿ ಬಿ.ಕೆ ಶ್ರೀವಾತ್ಸವ ಮತ್ತು ಸಂತೋಷ್ ಮೆಹ್ರಾ ಅವರಿದ್ದ ಪೀಠ ಈ ಆದೇಶ ನೀಡಿದೆ. ಅವರಿಗೆ ಹಿಂದಿನ ಎಲ್ಲ ಭತ್ಯೆ, ಸೌಲಭ್ಯ ಒದಗಿಸಲು

ಬೆಂಗಳೂರು ಕಾಲ್ತುಳಿತ ಪ್ರಕರಣ : ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅಮಾನತು ಆದೇಶ ರದ್ದು Read More »

ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ: ಆರೋಪಿಗಳು ಪೊಲೀಸರ ವಶಕ್ಕೆ

ಶಿವಮೊಗ್ಗ: ಮನೆಯ ಮುಂದೆ ಕಸ ಹಾಕದಂತೆ‌ ಸೂಚಿಸಿದ ‌ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ ಸಾಗರದ ಗೌತಮಪುರ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಹುಚ್ಚಮ್ಮ (67) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಪ್ರೇಮ, ಆಕೆಯ ಪತಿ ಮಂಜುನಾಥ್, ಪುತ್ರ  ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಜೂ. 24 ರಂದು ಹುಚ್ಚಮ್ಮ ಅವರು ತಮ್ಮ ಮನೆಯ ಮುಂದೆ ಕಸ ಎಸೆಯದಂತೆ ನೆರೆಮನೆಯ ಪ್ರೇಮ ಅವರಿಗೆ ಹೇಳಿದ್ದಾರೆ. ಇದರಿಂದ ಸಿಟ್ಟಾದ ಪ್ರೇಮ ಅವರು ಹುಚ್ಚಮ್ಮ ಅವರನ್ನು ಮನೆಯಿಂದ

ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ: ಆರೋಪಿಗಳು ಪೊಲೀಸರ ವಶಕ್ಕೆ Read More »

ಸುರಕ್ಷತಾ ದೃಷ್ಟಿಯಿಂದ ಪ್ರವಾಸಿಗರಿಗೆ ಎತ್ತಿನ ಭುಜ ಚಾರಣಕ್ಕೆ ನಿರ್ಬಂಧ

ಚಿಕ್ಕಮಗಳೂರು: ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಮಂಜು ಕವಿಯುತ್ತಿರುವ ಕಾರಣದಿಂದ ಎತ್ತಿನ ಭುಜ ಪ್ರವಾಸಿ ತಾಣಕ್ಕೆ ಜನರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅರಣ್ಯ ಇಲಾಖೆ, ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. ದೇಶ ವಿದೇಶಗಳ ಪ್ರವಾಸಿಗರು ಎತ್ತಿನ ಭುಜಕ್ಕೆ ಚಾರಣಕ್ಕೆ ಬರುತ್ತಾರೆ. ಮಳೆಗಾಲದಲ್ಲಿ ಪ್ರವಾಸಿಗರಿಗೆ ಅನಾಹುತ ಎದುರಾದರೆ ಅವರನ್ನು ರಕ್ಷಣೆ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಎತ್ತಿನ ಭುಜದ ಮೇಲ್ಭಾಗಕ್ಕೆ ಯಾವುದೇ ವಾಹನಗಳ ಸಂಚಾರ ಇಲ್ಲ. ಹಾಗಾಗಿ ಪ್ರವಾಸಿಗರಿಗೆ ಅಪಾಯವಾದರೆ

ಸುರಕ್ಷತಾ ದೃಷ್ಟಿಯಿಂದ ಪ್ರವಾಸಿಗರಿಗೆ ಎತ್ತಿನ ಭುಜ ಚಾರಣಕ್ಕೆ ನಿರ್ಬಂಧ Read More »

ಮಂಗಳೂರು: ತನ್ನದೇ ಬ್ಯಾಂಕಿನಿಂದ 6.5 ಕೆಜಿ ಚಿನ್ನ ಕದ್ದ ಮ್ಯಾನೇಜರ್‌

ಕದ್ದ ಚಿನ್ನವನ್ನು ಇನ್ನೊಂದು ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದು ವಂಚನೆ ಮಂಗಳೂರು : ಬ್ಯಾಂಕ್‌ ಮ್ಯಾನೇಜರ್‌ ಒಬ್ಬ ತನ್ನದೇ ಬ್ಯಾಂಕಿನಿಂದ 6.5 ಕೆಜಿಯಷ್ಟು ಚಿನ್ನ ಕದ್ದು ಅದನ್ನು ಇನ್ನೊಂದು ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ಶಕ್ತಿನಗರ ವ್ಯವಸಾಯ ಸೇವಾ ಸಹಕಾರಿ ಸಂಘದ ಮ್ಯಾನೇಜರ್‌ ಗ್ರಾಹಕರು ತನ್ನ ಬ್ಯಾಂಕಿನಲ್ಲಿ ಅಡವಿಟ್ಟಿದ್ದ 6.5 ಕೆಜಿ ಚಿನ್ನಾಭರಣಗಳನ್ನು ಕದ್ದು, ಕೋ-ಆಪರೇಟಿವ್‌ ಸೊಸೈಟಿ ಒಂದರಲ್ಲಿ ಅಡವಿಟ್ಟು 3.5 ಕೋಟಿ ರೂ. ಸಾಲ ಪಡೆದಿದ್ದಾನೆ. ಮಂಗಳೂರಿನ ಶಕ್ತಿನಗರದ ಪದುವಾ ವ್ಯವಸಾಯ

ಮಂಗಳೂರು: ತನ್ನದೇ ಬ್ಯಾಂಕಿನಿಂದ 6.5 ಕೆಜಿ ಚಿನ್ನ ಕದ್ದ ಮ್ಯಾನೇಜರ್‌ Read More »

ತುಂಬಿದ ಕೆಆರ್‌ಎಸ್: ಸಿ.ಎಂ. ಸಿದ್ದರಾಮಯ್ಯ ಅವರಿಂದ ಬಾಗಿನ ಸಮರ್ಪಣೆ

ಬೆಂಗಳೂರು: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರು ಭರ್ತಿಯಾಗಿದ್ದು, ಸಿ.ಎಂ. ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಇನ್ನಿತರರ ಜೊತೆಗೆ ಸೋಮವಾರ ಜಲಾಶಯಕ್ಕೆ ಆಗಮಿಸಿ ಕಾವೇರಿ ನದಿಗೆ ಬಾಗಿನ ಸಮರ್ಪಿಸಿದರು. ಬಾಗಿನ ಸಮರ್ಪಣೆ ಹಿನ್ನೆಲೆಯಲ್ಲಿ ಜಲಾಶಯಕ್ಕೆ ವೈದಿಕರ ತಂಡ ಬೆಳಗ್ಗಿನಿಂದಲೇ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳನ್ನು ನಡೆಸಿತು. ಜಲಾಶಯದ ಕೆಳಗಿನ ಕಾವೇರಿಯ ಪ್ರತಿಮೆಗೂ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ಕೆಆರ್‌ಎಸ್‌ನಲ್ಲಿ ಇದೆ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲೇ ಡ್ಯಾಂ ಭರ್ತಿಯಾಗಿದ್ದು, ಇದೊಂದು ದಾಖಲೆಯಾಗಿದೆ. ಈ

ತುಂಬಿದ ಕೆಆರ್‌ಎಸ್: ಸಿ.ಎಂ. ಸಿದ್ದರಾಮಯ್ಯ ಅವರಿಂದ ಬಾಗಿನ ಸಮರ್ಪಣೆ Read More »

error: Content is protected !!
Scroll to Top