ಅನೈತಿಕ ಚಟುವಟಿಕೆ : ಪೊಲೀಸರಿಂದ ದಾಳಿ, ಮಹಿಳೆ ರಕ್ಷಣೆ

ಪುತ್ತೂರು: ಮನೆಯೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಕುರಿತು  ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಯುವತಿಯನ್ನು ರಕ್ಷಿಸಿ, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ಸಾಮೆತ್ತಡ್ಕದಲ್ಲಿ ನಡೆದಿದೆ. ಪೊಲೀಸರ ದಾಳಿ ವೇಳೆ ಮನೆ ಮಾಲಕ, ಯುವತಿ ಮತ್ತು ಪುರುಷನನ್ನು ಅಲ್ಲಿಂದ ತಪ್ಪಿಸಲು ಸಹಾಯ ಮಾಡಿದ್ದಾರೆ. ಆದರೆ ಬೆನ್ನತ್ತಿದ್ದ ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ. ಸುಳ್ಯ ಮೂಲದ ಪುರುಷ ಮತ್ತು ಅವರಿಗೆ ಮನೆ ನೀಡಿದ ವಿಲ್ಫ್ರೆಡ್ ಎಂಬವರನ್ನು ವಶಕ್ಕೆ ಪಡೆದು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ […]

ಅನೈತಿಕ ಚಟುವಟಿಕೆ : ಪೊಲೀಸರಿಂದ ದಾಳಿ, ಮಹಿಳೆ ರಕ್ಷಣೆ Read More »

ಕೋಸ್ಟಲ್‍ ರೌಂಡ್‍ ಟೇಬಲ್‍ 190 ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಪುತ್ತೂರು: ನರೇಂದ್ರ ಪದವಿಪೂರ್ವ ಕಾಲೇಜಿನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ 190 ವತಿಯಿಂದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಎಂ ಸಿ ಆರ್ ಟಿ ನ ಚೇರ್ಮನ್ ಆಶ್ರಯ ಭಂಡಾರಿ, ಕೋಶಾಧಿಕಾರಿ, ಎಂ ಸಿ ಆರ್ ಟಿ ನ ಭಾವಿ ಚೇರ್ಮೆನ್ ದಶರಥ ಶೆಟ್ಟಿ, ಪುತ್ತೂರಿನ ಸ್ವರ್ಣೋದ್ಯಮಿ ಸುಧನ್ವ ಆಚಾರ್ಯ 1,50,000  ಚೆಕ್ ನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ

ಕೋಸ್ಟಲ್‍ ರೌಂಡ್‍ ಟೇಬಲ್‍ 190 ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ Read More »

ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

ಕೊಲೆ, ಹತ್ಯಾಯತ್ನ ಪ್ರಕರಣದ ಆರೋಪಿಗಳು ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ ನಂತರ ಸುಮಾರು ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಮೊಹಮ್ಮದ್ ಮುಸ್ತಫಾ ಅಲಿಯಾಸ್ ಮುಸ್ತ ಎಂಬಾತನನ್ನು ಮೂಲ್ಕಿ ಸಮೀಪ ಪಕ್ಷಕೆರೆಯಲ್ಲಿ ಬಂಧಿಸಲಾಗಿದೆ. ಮೊಹಮ್ಮದ್ ಮುಸ್ತಫಾ ಅಲಿಯಾಸ್ ಮುಸ್ತ 2020ರಲ್ಲಿ ಮುಲ್ಕಿ ಹೆದ್ದಾರಿಯ ಬಳಿ ವಿಜಯ ಸನ್ನಿಧಿ ಎದುರು ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ.

ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ Read More »

ಧರ್ಮಸ್ಥಳ : ಫೇಸ್‌ಬುಕ್‌ನಲ್ಲಿ ಅಶ್ಲೀಲ, ಪ್ರಚೋದನಕಾರಿ ಪೋಸ್ಟ್‌ ಹಾಕಿದವರ ವಿರುದ್ಧ ಕೇಸ್‌

ಬೆಳ್ತಂಗಡಿ : ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಶ್ಲೀಲ ಮತ್ತು ಪ್ರಚೋದನಕಾರಿ ಪೋಸ್ಟ್‌ ಹಾಕಿದ ಸಂಬಂಧ ಇಬ್ಬರ ವಿರುದ್‌ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅಶ್ಲೀಲ ಪದಗಳನ್ನು ಬಳಸಿ ಪೋಸ್ಟ್ ಹಾಕಿದ ಆರೋಪದಲ್ಲಿ ನವೀನ್ ಗೌಡ ಎಂಬಾತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಯೊಬ್ಬರು ನೀಡಿರುವ ದೂರಿನಂತೆ ಪ್ರಕರಣ‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.Naveen Gowda (https://facebook.com/naveen.gowda.938621) ಎಂಬ ಫೇಸ್‌ಬುಕ್ ಖಾತೆಯಲ್ಲಿ ಮಹೇಶ್ ಶೆಟ್ಟಿ ಎಂತವರನ್ನು ಸಾಕಿಕೊಂಡಿದ್ದಾನೆ ಎಂದು ಆರಂಭಿಸಿ

ಧರ್ಮಸ್ಥಳ : ಫೇಸ್‌ಬುಕ್‌ನಲ್ಲಿ ಅಶ್ಲೀಲ, ಪ್ರಚೋದನಕಾರಿ ಪೋಸ್ಟ್‌ ಹಾಕಿದವರ ವಿರುದ್ಧ ಕೇಸ್‌ Read More »

ಎಲ್ಲ ಸೇವೆಗಳು ಒಂದೆಡೆ ಸಿಗುವ ರೈಲ್‌ ಒನ್‌ ಆ್ಯಪ್ ಬಿಡುಗಡೆ ಮಾಡಿದ ರೈಲ್ವೆ

ಪ್ರಯಾಣಿಕರಿಗೆ ಅನುಕೂಲವಾಗುವ ಸೂಪರ್‌ ಆ್ಯಪ್ ನವದೆಹಲಿ: ಭಾರತೀಯ ರೈಲ್ವೆ ರೈಲ್ ಒನ್ ಎಂಬ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ರೈಲ್ವೆ ಪ್ರಯಾಣಿಕರ ಎಲ್ಲ ಅಗತ್ಯಗಳನ್ನು ಪೂರೈಸಬಲ್ಲ ಸೂಪರ್ ಆ್ಯಪ್ ಇದು. ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೇಶನ್ ಸಿಸ್ಟಮ್ಸ್​​ನ 40ನೇ ಸಂಸ್ಥಾಪನಾ ದಿನ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ ಒನ್ ಆ್ಯಪ್ ಬಿಡುಗಡೆ ಮಾಡಿದ್ದಾರೆ. ರೈಲ್ ​ಒನ್ ಆ್ಯಪ್ ಆಂಡ್ರಾಯ್ಡ್ ಮತ್ತು ಆ್ಯಪಲ್ ಪ್ಲಾಟ್​​ಫಾರ್ಮ್ ಎರಡರಲ್ಲೂ ಲಭ್ಯ ಇದೆ. ರೈಲ್ವೆಗೆ ಸಂಬಂಧಿತ ಯಾವುದೇ ಮಾಹಿತಿಯನ್ನು ಪಡೆಯಲು

ಎಲ್ಲ ಸೇವೆಗಳು ಒಂದೆಡೆ ಸಿಗುವ ರೈಲ್‌ ಒನ್‌ ಆ್ಯಪ್ ಬಿಡುಗಡೆ ಮಾಡಿದ ರೈಲ್ವೆ Read More »

1.07 ಲಕ್ಷ ಕೋಟಿ ರೂ.ಗಳ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡುವ ಯೋಜನೆಗೆ ಪ್ರಧಾನಿ ಮೋದಿ ಸರ್ಕಾರ ಅಸ್ತು

ನವದೆಹಲಿ: ಕೇಂದ್ರದ ಪ್ರಧಾನಿ ಮೋದಿ ಸರ್ಕಾರವು ಉತ್ಪಾದನಾ ವಲಯದ ಮೇಲೆ ವಿಶೇಷ ದೃಷ್ಟಿ ಹರಿಸಿದ್ದು, ಎಲ್ಲಾ ವಲಯಗಳಿಗೆ ಸಂಬಂಧಿಸಿದ ಹಾಗೆ ಉದ್ಯೋಗ ಸೃಷ್ಟಿ ಹೆಚ್ಚಿಸಲು ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲು ಮಹತ್ವದ ನಿರ್ಣಯವೊಂದನ್ನು ಅನುಮೋದಿಸಿದೆ. ಉದ್ಯೋಗದ ಅವಕಾಶಗಳು ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚು ಮಾಡಲು 1.07 ಲಕ್ಷ ಕೋಟಿ ರೂ. ವೆಚ್ಚದ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆ ಇದಾಗಿದೆ. ಪಿಎಂ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಂದಿನ

1.07 ಲಕ್ಷ ಕೋಟಿ ರೂ.ಗಳ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡುವ ಯೋಜನೆಗೆ ಪ್ರಧಾನಿ ಮೋದಿ ಸರ್ಕಾರ ಅಸ್ತು Read More »

ನನಗೆ ಅವಕಾಶ ಸಿಕ್ಕಿದ್ದರಿಂದ ಸಿಎಂ ಆಗಿದ್ದೇನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಾನು ಮತ್ತು ಬಿ.ಆರ್. ಪಾಟೀಲ್ ಅವರು ಒಟ್ಟಿಗೆ ಶಾಸಕರಾದವರು. ನನಗೆ ಮುಖ್ಯಮಂತ್ರಿಯಾಗಲು ಅವಕಾಶ ಸಿಕ್ಕಿದ್ದರಿಂದ ಪಾಟೀಲ್ ಅವರು ಈ ರೀತಿಯ ಹೇಳಿಕೆ ನೀಡಿರಬಹುದು. ಅವರ ಹೇಳಿಕೆಗಳ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಅದೃಷ್ಟದಿಂದ ಮುಖ್ಯಮಂತ್ರಿಯಾದವರು ಎಂಬ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಇದೇ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಕೇಂದ್ರ ಆಡಳಿತ ನ್ಯಾಯ ಮಂಡಳಿಯ

ನನಗೆ ಅವಕಾಶ ಸಿಕ್ಕಿದ್ದರಿಂದ ಸಿಎಂ ಆಗಿದ್ದೇನೆ: ಸಿಎಂ ಸಿದ್ದರಾಮಯ್ಯ Read More »

ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಕಾಂಗ್ರೆಸಿಗರಿಗೆ ಡಿಕೆಶಿ ತಾಕೀತು

ಬೆಂಗಳೂರು: ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಹೋಗಬಾರದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸಿಗರಿಗೆ ಖಡಕ್ ತಾಕೀತು ಮಾಡಿದ್ದಾರೆ. ಬಾಲಕೃಷ್ಣ ಆಗಲಿ, ಬಿ.ಆರ್‌. ಪಾಟೀಲ್ ಆಗಲಿ ಯಾರೇ ಆದರೂ ಮಾಧ್ಯಮಗಳ ಮುಂದೆ ಹೋಗಿ ಹೇಳಿಕೆ ನೀಡಬಾರದು ಎಂದು ಅವರು ಖಡಕ್ ಸೂಚನೆ ನೀಡಿದ್ದಾರೆ. ನಾವು ಸಿಎಂ ಸಿದ್ದರಾಮಯ್ಯ ಅವರ ಕೈ ಬಲಪಡಿಸುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಬದಲಾವಣೆಗಳಿಲ್ಲ. ಇಕ್ಬಾಲ್ ಹುಸೇನ್ ಅವರಿಗೆ ನೊಟೀಸ್ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಕಾಂಗ್ರೆಸಿಗರಿಗೆ ಡಿಕೆಶಿ ತಾಕೀತು Read More »

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಕೃತ ತರಗತಿ ಉದ್ಘಾಟನೆ

ಪುತ್ತೂರು: ಸಂಸ್ಕೃತ ಮತ್ತು ಸಂಸ್ಕೃತಿ ಒಂದಕ್ಕೊಂದು ಪೂರಕವಾಗಿದೆ. ಸಂಸ್ಕೃತವು ಎಲ್ಲಾ ಭಾಷೆಗಳಿಗೂ ಮೂಲವಾಗಿದ್ದು ಅತ್ಯಂತ ಸರಳ ಹಾಗೂ ಸುಂದರ ಭಾಷೆಯಾಗಿದೆ. ಇದನ್ನು ಕೂಡ ಕಲಿಯುವ ಅವಶ್ಯಕತೆ ಇಂದಿನ ಕಾಲದಲ್ಲಿ ಅನಿವಾರ್ಯ ಎಂದು ಎವಿಜಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಹೇಳಿದರು. ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ವರ್ಷ ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಕೃತ ಭಾಷೆಯ ತರಗತಿಯನ್ನು ಉದ್ಘಾಟಿಸಿ ಅವರು ಮಾತಾಡಿದರು. ಸಂಸ್ಕೃತ ಶಿಕ್ಷಕ ಕುಶಾಲ ನೇರಳಕಟ್ಟೆ, ಶಾಲಾ ಆಡಳಿತ ಸಮಿತಿ ಕಾರ್ಯದರ್ಶಿ

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಕೃತ ತರಗತಿ ಉದ್ಘಾಟನೆ Read More »

ಪುತ್ತೂರು ಧಾನ್ಯದ ಸಹಕಾರಿ ಸಂಘದ ಅಧ್ಯಕ್ಷರಾಗಿ ಯು.ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್‍ ಹೆಗ್ಡೆ ಅವಿರೋಧ ಆಯ್ಕೆ

ಪುತ್ತೂರು: ಧಾನ್ಯದ ಸಹಕಾರಿ ಸಂಘದ 2025-30ನೇ ಸಾಲಿಗೆ  ನೂತನ ಅಧ್ಯಕ್ಷರಾಗಿ ಯು. ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್ ಹೆಗ್ಡೆ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಸಂಘದ ಕಛೇರಿಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಆಡಳಿತ ಮಂಡಳಿಗೆ ನಿರ್ದೇಶಕ ರ ಆಯ್ಕೆ ಪ್ರಕ್ರಿಯೆ ಚುನಾವಣಾಧಿಕಾರಿ ಶೋಭಾ ಎನ್.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ನಿರ್ದೇಶಕರಾಗಿ ಅಜಿತ್ ಕುಮಾರ್, ಕೆ. ಸಂಜೀವ ನಾಯಕ್, ಕೆ. ಸಂತೋಷ್ ಕುಮಾರ್, ಚಂದ ಶೇಖರ ರಾವ್ ಬಪ್ಪಳಿಗೆ, ನಹುಷ ಪಿ.ವಿ., ಯು. ಪೂವಪ್ಪ, ರಾಜೇಶ್ ಬನ್ನೂರು, ಜಯರಾಜ್

ಪುತ್ತೂರು ಧಾನ್ಯದ ಸಹಕಾರಿ ಸಂಘದ ಅಧ್ಯಕ್ಷರಾಗಿ ಯು.ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್‍ ಹೆಗ್ಡೆ ಅವಿರೋಧ ಆಯ್ಕೆ Read More »

error: Content is protected !!
Scroll to Top