ಭಾರತೀಯ ವಾಯುಪಡೆ ಯುದ್ಧ ವಿಮಾನ ಪತನ

ರಾಜಸ್ಥಾನ: ಭಾರತೀಯ ವಾಯುಪಡೆಯ ಯುದ್ಧ ವಿಮಾನವೊಂದು ರಾಜಸ್ಥಾನದ ಚುರುವಿನ ಬನೋಡಾ ಗ್ರಾಮದ ಬಳಿ ಪತನಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ವಿಮಾನದ ಅವಶೇಷಗಳಡಿಯಿಂದ ಪೈಲಟ್ ಮೃತದೇಹ ಹೊರತೆಗೆಯಲಾಗಿದೆ. ಜಿಲ್ಲಾಧಿಕಾರಿ ಅಭಿಷೇಕ್ ಸುರಾನ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಅಪಘಾತದ ಪರಿಣಾಮ ಹೊಲದಲ್ಲಿ ಬೆಂಕಿ ಕಾಣಿಸಿಕೊಂಡಿತು. ಅದನ್ನು ತಾವೇ ನಂದಿಸಲು ಪ್ರಯತ್ನಿಸಿದೆವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಭಾರತೀಯ ವಾಯುಪಡೆ ಯುದ್ಧ ವಿಮಾನ ಪತನ Read More »

22ನೇ ರಾಜ್ಯಮಟ್ಟದ ಅಂಚೆ-ಕುಂಚ ಚಿತ್ರಕಲಾ ಸ್ಪರ್ಧೆ | ಸಾನ್ವಿ ನೇರಳ ಪ್ರಥಮ

ಪಂಜ: ಶ್ರೀ ಧ.ಮಂ.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ‘ನಮ್ಮೂರ ಜಾತ್ರೆಗಳು’ ವಿಷಯದ ಕುರಿತು ನಡೆದ 22ನೇ ರಾಜ್ಯ ಮಟ್ಟದ ಅಂಚೆ ಕುಂಚ ಚಿತ್ರಕಲಾ ಸ್ಪರ್ಧೆಯಲ್ಲಿ ಸಾನ್ವಿ ನೇರಳ ಪ್ರಥಮ ಬಹುಮಾನ ಗಳಿಸಿದ್ದಾಳೆ. ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ಸೋಮಶೇಖರ ನೇರಳ ಹಾಗೂ ಕವಿತಾ ದಂಪತಿಗಳ ಪುತ್ರಿ. ಇತ್ತೀಚೆಗೆ ವಿಜಯಕರ್ನಾಟಕ ಪತ್ರಿಕೆಯವರು ನಡೆಸಿದ ಪರಿಸರ ಜಾಗೃತಿ ಜಿಲ್ಲಾ

22ನೇ ರಾಜ್ಯಮಟ್ಟದ ಅಂಚೆ-ಕುಂಚ ಚಿತ್ರಕಲಾ ಸ್ಪರ್ಧೆ | ಸಾನ್ವಿ ನೇರಳ ಪ್ರಥಮ Read More »

ಹಗರಣಗಳ ಸುಳಿಯಲ್ಲಿದೆ ‌ರಾಜ್ಯ ಕಾಂಗ್ರೆಸ್ ಸರ್ಕಾರ: ಸಂಸದ ಯದುವೀರ್ | ಕರ್ನಾಟಕದ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸುವುದು ನಮ್ಮೆಲ್ಲರ ಜವಾಬ್ದಾರಿ | ಜನಪರ ಕಾಳಜಿ ಇರುವ ಬಿಜೆಪಿಯನ್ನು ಅಧಿಕಾರಕ್ಕೇರುವಂತೆ ಮಾಡಬೇಕು

ಸೋಮವಾರಪೇಟೆ: ಕಾಂಗ್ರೆಸ್‌ ಸರ್ಕಾರ ಹಗರಣಗಳ ಸುಳಿಯಲ್ಲಿದ್ದು, ಇಂತಹ ಸರ್ಕಾರದಿಂದ ಅಭಿವೃದ್ಧಿ ಅಸಾಧ್ಯ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಕೊಡವ‌ ಸಮಾಜ ಆಯೇಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಆಡಳಿತದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ? ಕೇವಲ ಹಗರಣಗಳ ಸುಳಿಯಲ್ಲಿ ಸಿಲುಕುತ್ತಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳಲ್ಲಿ ಹೆಚ್ಚಿನವು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದವು ಎಂದು ಅವರು ತಿಳಿಸಿದ್ದಾರೆ. ಕೊಡಗಿನಲ್ಲಿ ಬಿಜೆಪಿ ಎರಡು ಶಾಸಕರನ್ನು ಕಳೆದುಕೊಂಡಿದೆ. ಆದರೆ ಆಡಳಿತ

ಹಗರಣಗಳ ಸುಳಿಯಲ್ಲಿದೆ ‌ರಾಜ್ಯ ಕಾಂಗ್ರೆಸ್ ಸರ್ಕಾರ: ಸಂಸದ ಯದುವೀರ್ | ಕರ್ನಾಟಕದ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸುವುದು ನಮ್ಮೆಲ್ಲರ ಜವಾಬ್ದಾರಿ | ಜನಪರ ಕಾಳಜಿ ಇರುವ ಬಿಜೆಪಿಯನ್ನು ಅಧಿಕಾರಕ್ಕೇರುವಂತೆ ಮಾಡಬೇಕು Read More »

ಭಾರತ ರಫೇಲ್‌ಗೆ ಸಂಬಂಧಿಸಿದಂತೆ ಸುಳ್ಳು ಹೇಳಿದ ಪಾಕಿಸ್ತಾನಕ್ಕೆ ಮುಖಭಂಗ | ಆಪರೇಷನ್ ಸಿಂಧೂರ್ ವೇಳೆ ಭಾರತದ ರಫೇಲ್ ಅನ್ನು ನಾಶ ಮಾಡಿದ್ದಾಗಿ ‌ಸುಳ್ಳು ಹೇಳಿದ್ದ ಪಾಕಿಸ್ತಾನ

ನವದೆಹಲಿ: ಪಾಕಿಸ್ತಾನವು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಭಾರತದ ರಫೇಲ್ ಯುದ್ಧ ವಿಮಾನವನ್ನು ಹೊಡೆದು ಹಾಕಿದ್ದೇವೆ ಎಂದು ಹೇಳಿರುವುದು ‌ಸತ್ಯಕ್ಕೆ ದೂರವಾದ ಸಂಗತಿ ಎಂದು ಫ್ರಾನ್ಸ್‌‌‌ನ ಡಸಾಲ್ಟ್ ಏವಿಯೇಷನ್ ಕಂಪನಿ ಬಹಿರಂಗಪಡಿಸಿದೆ. ಭಾರತವು ಒಂದು ರಫೇಲ್ ವಿಮಾನವನ್ನು ಕಳೆದುಕೊಂಡಿರುವುದು ‌ಸತ್ಯ. ಆದರೆ ಅದು ತಾಂತ್ರಿಕ ಕಾರಣಗಳಿಂದಾಗಿ ಸಂಭವಿಸಿದ ಘಟನೆ. ಹೊರತಾಗಿ ಪಾಕಿಸ್ತಾನ ಹೊಡೆದುರುಳಿಸಿರುವುದಲ್ಲ ಎನ್ನುವ ಮೂಲಕ ಪಾಕಿಸ್ತಾನಕ್ಕೆ ಛಾಟಿಯೇಟು ನೀಡಿದೆ. ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತಕ್ಕೆ ಸೇರಿದ ಮೂರು ರಫೇಲ್‌ಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಸುಳ್ಳು ಹೇಳಿಕೆ ನೀಡಿತ್ತು.

ಭಾರತ ರಫೇಲ್‌ಗೆ ಸಂಬಂಧಿಸಿದಂತೆ ಸುಳ್ಳು ಹೇಳಿದ ಪಾಕಿಸ್ತಾನಕ್ಕೆ ಮುಖಭಂಗ | ಆಪರೇಷನ್ ಸಿಂಧೂರ್ ವೇಳೆ ಭಾರತದ ರಫೇಲ್ ಅನ್ನು ನಾಶ ಮಾಡಿದ್ದಾಗಿ ‌ಸುಳ್ಳು ಹೇಳಿದ್ದ ಪಾಕಿಸ್ತಾನ Read More »

ಭದ್ರತಾ ಸಿಬ್ಬಂದಿ ವಿಷ ಸೇವಿಸಿ ಆತ್ಮಹತ್ಯೆ

ಉಪ್ಪಿನಂಗಡಿ: ಸಹಕಾರಿ ಸಂಸ್ಥೆಯ ಭದ್ರತಾ ಸಿಬ್ಬಂದಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಭದ್ರತಾ ಸಿಬ್ಬಂದಿ ಸುರೇಶ್ (30) ಆತ್ಮಹತ್ಯೆ ಮಾಡಿಕೊಂಡವರು. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಮನೆಗಾರ ಮಜಲು ಮನೆ ನಿವಾಸಿ  ದಿ. ನೀಲಯ್ಯ ಗೌಡ ಎಂಬವರ ಪುತ್ರರಾಗಿರುವ ಸುರೇಶ್  ಕರ್ತವ್ಯಕ್ಕೆ ರಜೆ ಹಾಕಿ ಮನೆಯಲ್ಲಿದ್ದರು. ವೈಯಕ್ತಿಕ ಕಾರಣಗಳಿಂದ ಮನನೊಂದು ಈ ಕೃತ್ಯಕ್ಕೆ ಎಸಗಿದ್ದಾರೆ ಎಂದು ದೂರಲಾಗಿದೆ. ಈ ಕುರಿತು  ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಭದ್ರತಾ ಸಿಬ್ಬಂದಿ ವಿಷ ಸೇವಿಸಿ ಆತ್ಮಹತ್ಯೆ Read More »

ಜು.12 : ‘ಪೆರ್ಮೆದ ಬಂಟೆರ್’ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಪುತ್ತೂರು: ತಾಲೂಕು ಬಂಟರ ಸಂಘದ ವತಿಯಿಂದ ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ‘ಪೆರ್ಮೆದ ಬಂಟೆರ್’ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಜು.12 ಶನಿವಾರ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಲಿದೆ ಎಂದುತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಮಾಜದ ವಿಶೇಷ ಸಾಧಕರನ್ನು ಸನ್ಮಾನಿಸುವುದರ ಜತೆಗೆ ಶೈಕ್ಷಣಿಕವಾಗಿ ಸಾಧನೆ

ಜು.12 : ‘ಪೆರ್ಮೆದ ಬಂಟೆರ್’ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ Read More »

ಗೆಜ್ಜೆಗಿರಿ ಕ್ಷೇತ್ರ ಅಭಿವೃದ್ದಿಗೆ 2 ಕೋಟಿ ಅನುದಾನ ಮಂಜೂರು : ಶಾಸಕ ಅಶೋಕ್ ರೈ

ಪುತ್ತೂರು: ವಿಧಾನಸಭಾ ಕ್ಷೆತ್ರದ ಪ್ರಸಿದ್ದ ಕ್ಷೇತ್ರವಾದ ಗೆಜ್ಜೆಗಿರಿಯ ಅಭಿವೃದ್ದಿಗೆ 2 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದರು. ಕೋಟಿಂಬಾಡಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಗೆಜ್ಜೆಗಿರಿ ಎಂಬ ಪವಿತ್ರ ಹಾಗೂ ಪ್ರಸಿದ್ಧ ಕ್ಷೇತ್ರವನ್ನು ಅಭಿವೃದ್ದಿ ಮಾಡುವ ವಿಚಾರದಲ್ಲಿ ನಾನು ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿ ಸರಕಾರದ ಗಮನ ಸೆಳೆದಿದ್ದೆ. ಪ್ರವಾಸೋಧ್ಯಮ ಇಲಾಖೆ ಹಾಗೂ ಸಚಿವರ ಜೊತೆಯೂ ಮಾತುಕತೆ ನಡೆಸಿದ್ದೇನೆ. ಕ್ಷೇತ್ರವನ್ನು ಪ್ರವಾಸೋಧ್ಯಮ ಇಲಾಖೆಯಲ್ಲಿ ಸೇರ್ಪಡೆ ಮಾಡುವ

ಗೆಜ್ಜೆಗಿರಿ ಕ್ಷೇತ್ರ ಅಭಿವೃದ್ದಿಗೆ 2 ಕೋಟಿ ಅನುದಾನ ಮಂಜೂರು : ಶಾಸಕ ಅಶೋಕ್ ರೈ Read More »

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಮೊಟ್ಟೆ ಅಭಿಯಾನ | ಶಾಲಾ ಮಕ್ಕಳಿಗೆ ನೀಡಬೇಕಾದ ಮೂರು ಮೊಟ್ಟೆ ಯಾರ ಹೊಟ್ಟೆಗೆ ಸೇರುತ್ತಿದೆ? ಎಂದು ಪ್ರಶ್ನೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಮೊಟ್ಟೆ ಅಭಿಯಾನ ನಡೆಸಿದೆ. ರಾಜ್ಯದ 568 ಶಾಲೆಗಳಲ್ಲಿ ಮಕ್ಕಳಿಗೆ ವಾರಕ್ಕೆ ಮೂರು ದಿನವಷ್ಟೇ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ ಎಂಬ ಮಾಹಿತಿ ಅಜೀಂ ಪ್ರೇಂಜಿ ಫೌಂಡೇಶನ್ ವರದಿಯಿಂದ ಬಹಿರಂಗವಾಗಿದೆ. ಈ ವಿಷಯವನ್ನಿಟ್ಟುಕೊಂಡು ಆರರಲ್ಲಿ ಮೂರು ಮೊಟ್ಟೆಗಳು ಮಕ್ಕಳಿಗೆ, ಉಳಿದ ಮೂರು ಮೊಟ್ಟೆಗಳು ಯಾರ ಬಾಯಿಗೆ ಹೋಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತನ್ನ ಎಕ್ಸ್ ಖಾತೆಯ ಮೂಲಕ ಪ್ರಶ್ನೆ ಮಾಡಿದೆ. ಸಿಎಂ ‌ಸಿದ್ದರಾಮಯ್ಯ, ಡಿಸಿಎಂ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಮೊಟ್ಟೆ ಅಭಿಯಾನ | ಶಾಲಾ ಮಕ್ಕಳಿಗೆ ನೀಡಬೇಕಾದ ಮೂರು ಮೊಟ್ಟೆ ಯಾರ ಹೊಟ್ಟೆಗೆ ಸೇರುತ್ತಿದೆ? ಎಂದು ಪ್ರಶ್ನೆ Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷಾಚರಣೆ | ವಿಶೇಷ ಉಪನ್ಯಾಸ

ಪುತ್ತೂರು: ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರು ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು. ಸಮಾಜ ಸುಧಾರಕರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕರು. ಅವರು ಭಾರತದ ಏಕತೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು..ಅವರ ರಾಷ್ಟ್ರೀಯತೆ, ಸಂಘಟನಾ ಕೌಶಲ್ಯ ಮತ್ತು ಸಮಾಜ ಸುಧಾರಣಾ ಪ್ರಯತ್ನಗಳು ಭಾರತದ ಸ್ವಾತಂತ್ರ್ಯ ಮತ್ತು ಏಕತೆಗೆ ಮಹತ್ವದ ಕೊಡುಗೆ ನೀಡಿವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ವಿದ್ಯಾಸಂಸ್ಥೆಗಳ ಸಂಸ್ಕಾರ ಪರಿವೀಕ್ಷಣಾ ಪ್ರಮುಖರಾದ ಮೀನಾಕ್ಷಿ ಭಗಿನಿ ಹೇಳಿದರು. ನರೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ನಡೆದ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷಾಚರಣೆ | ವಿಶೇಷ ಉಪನ್ಯಾಸ Read More »

ಭಾರತೀಯ ಚಾರ್ಟರ್ಡ್ ಎಕೌಂಟೆಂಟ್ಸ್ ಸಂಸ್ಥೆ (ಐಸಿಎಐ) 2025 ರಲ್ಲಿ ನಡೆಸಿದ ಸಿ.ಎ. ಪರೀಕ್ಷೆಯಲ್ಲಿ ಮುಹಮ್ಮದ್ ಇಯಾಸ್‍ ಉತ್ತೀರ್ಣ

ಪುತ್ತೂರು: ಭಾರತೀಯ ಚಾರ್ಟರ್ಡ್‍ ಎಕೌಂಟೆಂಟ್ಸ್ ಸಂಸ್ಥೆ (ಐಸಿಎಐ)ಯು 2025 ರಲ್ಲಿ ನಡೆಸಿದ ಸಿ.ಎ. ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಮುಹಮ್ಮದ್ ಇಯಾಸ್ ರವರು ಮೊದಲ ಪ್ರಯತ್ನದಲ್ಲಿಯೇ ಗ್ರೂಪ್ ಒಂದು ಮತ್ತು ಗ್ರೂಪ್  ಎರಡರಲ್ಲೂ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಪೆರ್ನೆ ನಿವಾಸಿ ಇಸ್ಮಾಯಿಲ್ ಮತ್ತು ರುಖ್ಯಾ ದಂಪತಿಯ ಕಿರಿಯ ಪುತ್ರನಾಗಿರುವ ಮುಹಮ್ಮದ್ ಇಯಾಸ್ ರವರು ಸಿಎ ಗಣೇಶ್ ರಾವ್ ಪಿ. ಅವರ ಮಾರ್ಗದರ್ಶನದಲ್ಲಿ ಕಳೆದ ಮೇ ತಿಂಗಳು ನಡೆದ ಸಿಎ ಅಂತಿಮ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ. ಮುಹಮ್ಮದ್ ಇಯಾಸ್

ಭಾರತೀಯ ಚಾರ್ಟರ್ಡ್ ಎಕೌಂಟೆಂಟ್ಸ್ ಸಂಸ್ಥೆ (ಐಸಿಎಐ) 2025 ರಲ್ಲಿ ನಡೆಸಿದ ಸಿ.ಎ. ಪರೀಕ್ಷೆಯಲ್ಲಿ ಮುಹಮ್ಮದ್ ಇಯಾಸ್‍ ಉತ್ತೀರ್ಣ Read More »

error: Content is protected !!
Scroll to Top