ವಿಟ್ಲ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ವಿಟ್ಲ ಪೊಲೀಸ್ ಠಾಣಾ ಗ್ರಹ ರಕ್ಷಕದಳ ಸಿಬ್ಬಂದಿಗಳಿಗೆ ರೈನ್ ಕೋಟ್ ವಿತರಣೆ.

ವಿಟ್ಲ: ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಹರಕ್ಷಕದಳ ಸಿಬ್ಬಂದಿಗಳಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ವತಿಯಿಂದ ರೈನ್ ಕೋಟ್ ವಿತರಣಾ ಸಮಾರಂಭ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಗುರುವಾರ ನಡೆಯಿತು. ಸಾರ್ವಜನಿಕ ದುರ್ಗಾ ಪೂಜಾ ಸಮಿತಿ ಅಧ್ಯಕ್ಷ, ನ್ಯಾಯವಾದಿ ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಳೆಗಾಲಕ್ಕೆ ಅವಶ್ಯಕತೆ ಇರುವ ರೈನ್ ಕೋಟ್ ವಿತರಿಸಿ ಮಾತಾನಾಡಿದ ಬಿಜೆಪಿ ಮುಖಂಡ ಅರುಣ್ ಪುತ್ತಿಲ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಗ್ರಹ ರಕ್ಷಕ ದಳ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ […]

ವಿಟ್ಲ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ವಿಟ್ಲ ಪೊಲೀಸ್ ಠಾಣಾ ಗ್ರಹ ರಕ್ಷಕದಳ ಸಿಬ್ಬಂದಿಗಳಿಗೆ ರೈನ್ ಕೋಟ್ ವಿತರಣೆ. Read More »

ಅಂಬಿಕಾ ಸಿಬಿಎಸ್‌ ಇ ವಿದ್ಯಾಲಯದಲ್ಲಿ ಗುರುಪೂರ್ಣಿಮಾ ಆಚರಣೆ | ಪಶುತ್ವದಿಂದ ಪಾವನತ್ವಕ್ಕೆ ಕರೆದೊಯ್ಯುವವನು ಗುರು : ಪ್ರಿಯಾಶ್ರೀ ಕೆ.ಎಸ್.

ಪುತ್ತೂರು: ನಗರದ ಬಪ್ಪಳಿಗೆಯ ಅಂಬಿಕಾ ಸಿಬಿಎಸ್‌ ಇ ವಿದ್ಯಾಲಯದಲ್ಲಿ ಬುಧವಾರ ಗುರುಪಾದುಕೆಯನ್ನು ಪೂಜಿಸುವ ಮೂಲಕ ಗುರುಪೂರ್ಣಮಿ ದಿನವನ್ನು ಆಚರಿಸಲಾಯಿತು. ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್. ಮಾತನಾಡಿ, ಗುರು ಎಂದರೆ ಅಜ್ಞಾನದ ಅಂಧಕಾರವನ್ನು ದೂರಮಾಡುವವನು. ಮನುಷ್ಯ ಜಗತ್ತಿಗೆ ಅರಿವನ್ನು ತೋರಿದಾತ ಗುರು. ಪಶುತ್ವದಿಂದ ಪಾವನತ್ವಕ್ಕೆ ಕರೆದೊಯ್ಯುವವನು ಗುರುವೇ ಆಗಿದ್ದಾನೆ. ಹರಿ ಪಥವನ್ನರಿವೊಡೆ ಗುರು ಪಥವೇ ಮೊದಲು, ಹರಿ ಮುನಿದರೆ ಗುರು ಕಾಯುವ ಎಂಬ ಮಾತು ಸಹ ಇದೆ, ಆದ್ದರಿಂದ ನಮ್ಮ ಪರಂಪರೆ ದೇವರಿಗೂ ಮಿಗಿಲಾದ ಸ್ಥಾನವನ್ನು ಗುರುವಿಗೆ ನೀಡಿತ್ತು ಎನ್ನುವುದಕ್ಕೆ

ಅಂಬಿಕಾ ಸಿಬಿಎಸ್‌ ಇ ವಿದ್ಯಾಲಯದಲ್ಲಿ ಗುರುಪೂರ್ಣಿಮಾ ಆಚರಣೆ | ಪಶುತ್ವದಿಂದ ಪಾವನತ್ವಕ್ಕೆ ಕರೆದೊಯ್ಯುವವನು ಗುರು : ಪ್ರಿಯಾಶ್ರೀ ಕೆ.ಎಸ್. Read More »

ಜು.11(ನಾಳೆ) : ‘ಧರ್ಮ ಚಾವಡಿ’ ತುಳು ಚಿತ್ರ ದ.ಕ., ಉಡುಪಿ ಜಿಲ್ಲಾದ್ಯಂತ ತೆರೆಗೆ

ಪುತ್ತೂರು: ಮಂಗಳೂರು ಕೃಷ್ಣವಾಣಿ ಪಿಕ್ಚರ್ಸ್‍ ಲಾಂಛನದಲ್ಲಿ ತಯಾರಾದ ನಡುಬೈಲ್‍ ಜಗದೀಶ್‍ ಅಮೀನ್‍ ನಿರ್ಮಾಣದಲ್ಲಿ, ನಿತಿನ್‍ ರೈ ಕುಕ್ಕುವಳ್ಳಿ ನಿರ್ದೇಶನದಲ್ಲಿ ತಯಾರಾದ ‘ ಧರ್ಮ ಚಾವಡಿ’ ತುಳು ಚಿತ್ರ ಜು.11 ರಂದು ದ.ಕ ಹಾಗೂ ಉಡುಪಿ ಜಿಲ್ಲಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರ ನಿರ್ದೇಶಕ ನಿತಿನ್‍‍ ರೈ ಕುಕ್ಕುವಳ್ಳಿ ತಿಳಿಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಧರ್ಮ ದೈವ ಚಿತ್ರ ಬಳಿಕ ಇದು ಎರಡನೇ ಚಿತ್ರವಾಗಿದ್ದು, ಧರ್ಮ ಚಾವಡಿ ಈಗಾಗಲೇ ಮುಂಬೈಯಲ್ಲಿ ವೀಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಜು.11(ನಾಳೆ) : ‘ಧರ್ಮ ಚಾವಡಿ’ ತುಳು ಚಿತ್ರ ದ.ಕ., ಉಡುಪಿ ಜಿಲ್ಲಾದ್ಯಂತ ತೆರೆಗೆ Read More »

ದಸರಾ ಏರ್ ಶೋ‌ಗೆ ರಕ್ಷಣಾ ಸಚಿವರಿಂದ ಹಸಿರು ನಿಶಾನೆ

ಬೆಂಗಳೂರು: ನಾಡ ಹಬ್ಬ ದಸರಾದಲ್ಲಿ ಏರ್ ಶೋ‌ ನಡೆಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ಸಕಾರಾತ್ಮಕವಾಗಿ ‌ಸ್ವಂದಿಸಿದ್ದು, ಒಪ್ಪಿಗೆ ಸೂಚಿಸಿದ್ದಾರೆ. ಸಿ ಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರ ರಕ್ಷಣಾ ಸಚಿವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದ ಹಾಗೆ ಚರ್ಚೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ವಿಶ್ವವಿಖ್ಯಾತ ದಸರಾ ಹಬ್ಬದ ಸಂದರ್ಭದಲ್ಲಿ ಏರ್ ಶೋ ನಡೆಸುವುದಕ್ಕೆ ಅನುಮತಿ ಕೋರಲಾಗಿದ್ದು, ಇದಕ್ಕೆ ರಕ್ಷಣಾ

ದಸರಾ ಏರ್ ಶೋ‌ಗೆ ರಕ್ಷಣಾ ಸಚಿವರಿಂದ ಹಸಿರು ನಿಶಾನೆ Read More »

ರಷ್ಯಾದ ಕ್ಷಿಪಣಿ ಬಡಿದು ಮಲೇಷ್ಯಾದ ವಿಮಾನ ಪತನ

298 ಮಂದಿಯ ಸಾವಿಗೆ ರಷ್ಯಾವೇ ನೇರ ಹೊಣೆ ಎಂಬ ಸ್ಫೋಟಕ ಮಾಹಿತಿ ಬಹಿರಂಗ ಸ್ಟ್ರಾಸ್‌ಬರ್ಗ್: 283 ಪ್ರಯಣಿಕರು ಮತ್ತು 15 ಸಿಬ್ಬಂದಿ ಸಾವಿಗೀಡಾಗಿದ್ದ ಮಲೇಷ್ಯಾದ ನಾಗರಿಕ ಯಾನ ವಿಮಾನ ಪತನಕ್ಕೆ ಯಾವುದೇ ತಾಂತ್ರಿಕ ದೋಷ ಕಾರಣವಲ್ಲ, ರಷ್ಯಾದ ಕ್ಷಿಪಣಿ ಬಡಿದು ಈ ವಿಮಾನ ಪತನಗೊಂಡಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಯುರೋಪ್‌ನ ಉನ್ನತ ಮಾನವ ಹಕ್ಕುಗಳ ನ್ಯಾಯಾಲಯ ಬಹಿರಂಗಪಡಿಸಿದೆ. 2014ರ ಜುಲೈ 17ರಂದು ಮಲೇಷ್ಯಾ ಏರ್‌ಲೈನ್ಸ್‌ MH17 ಬೋಯಿಂಗ್‌ 777 ವಿಮಾನ ಪತನಗೊಂಡು ಅದರಲ್ಲಿದ್ದ ಎಲ್ಲ 283 ಪ್ರಯಾಣಿಕರು

ರಷ್ಯಾದ ಕ್ಷಿಪಣಿ ಬಡಿದು ಮಲೇಷ್ಯಾದ ವಿಮಾನ ಪತನ Read More »

ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ಧೋರಣೆ ಬೇಡ: ಡಾ. ಹೆಚ್.ಸಿ. ಮಹದೇವಪ್ಪ

ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವರು ಬೆಂಗಳೂರು: ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪಯೋಜನೆಗಳನ್ನು ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಯ ದೃಷ್ಟಿಯಿಂದ ಜಾರಿಗೆ ತರಲಾಗಿದ್ದು, ಇದನ್ನು ಸಮರ್ಪಕವಾಗಿ ಅನುಷ್ಟಾನ ಮಾಡುವಲ್ಲಿ ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಚಿವ ಡಾ. ಹೆಚ್. ಸಿ. ಮಹದೇವಪ್ಪ ನೀಡಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದಿದೆ‌. ಆದರೂ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ಸಾಧ್ಯವಾಗಿಲ್ಲ. ಅವರ ಕಲ್ಯಾಣ ಯೋಜನೆಗಳು ಸಹ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಪರಿಶಿಷ್ಟ ಸಮುದಾಯಗಳ

ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ಧೋರಣೆ ಬೇಡ: ಡಾ. ಹೆಚ್.ಸಿ. ಮಹದೇವಪ್ಪ Read More »

ಜನರೇ ಕಾನೂನು ಕೈಗೆತ್ತಿಕೊಳ್ಳುವುದಲ್ಲ, ಪೊಲೀಸರಿಗೆ ತಿಳಿಸಿ: ಡಾ. ಜಿ. ಪರಮೇಶ್ವರ್

ಕರ್ನಾಟಕದ ಜನರನ್ನು ಡ್ರಗ್ಸ್‌ಗೆ ದಾಸರಾಗಲು ಬಿಡುವುದಿಲ್ಲ ಮಂಗಳೂರು: ಹಲವಾರು ಸಕಾರಾತ್ಮಕ ಸಲಹೆಗಳ ಮೂಲಕ ಶಾಂತಿ ಸಭೆ ಯಶಸ್ವಿಯಾಗಿದೆ. ಬಂದ ಸಲಹೆಗಳನ್ನು ಸಿ ಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರು ಕಾನೂನನ್ನು ಕೈಗೆತ್ತಿಕೊಂಡರೆ ಸಮಸ್ಯೆ ನಿರ್ಮಾಣವಾಗುತ್ತದೆ. ಕಾನೂನಿನ ಪ್ರಕಾರ ಪರಿಹಾರ ಕಂಡುಕೊಂಡರೆ ಸಮಸ್ಯೆ ಇಲ್ಲ. ನೈತಿಕ ಪೊಲೀಸ್‌ಗಿರಿ ‌ಮಾಡುವ ಬದಲು ಸಮಸ್ಯೆಗಳನ್ನು ಪೊಲೀಸರಿಗೆ ತಿಳಿಸಬೇಕು. ಆ ಬಳಿಕ ಅವರು

ಜನರೇ ಕಾನೂನು ಕೈಗೆತ್ತಿಕೊಳ್ಳುವುದಲ್ಲ, ಪೊಲೀಸರಿಗೆ ತಿಳಿಸಿ: ಡಾ. ಜಿ. ಪರಮೇಶ್ವರ್ Read More »

ಸಿ.ಪಿ. ಯೋಗೇಶ್ವರ್ ವಿರುದ್ಧ ಸುರ್ಜೇವಾಲಾಗೆ ದೂರು ನೀಡಿದ ಮಾಜಿ ಪತ್ನಿ, ಪುತ್ರಿ

ಯೋಗೇಶ್ವರ್ ನಮಗೆ ಹಿಂಸೆ ನೀಡುತ್ತಿದ್ದಾರೆ ಎಂದು ಅಳಲು ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಕಾಂಗ್ರೆಸ್ ಶಾಸಕ ಸಿ.ಪಿ. ಯೋಗೇಶ್ವರ್ ವಿರುದ್ಧ ಅವರ ಮಾಜಿ ಪತ್ನಿ ಮತ್ತು ಪುತ್ರಿ ದೂರು ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ ಒನ್ ಟು ಒನ್ ಮ್ಯಾರಥಾನ್ ಸಭೆಯಲ್ಲಿ ಅಸಮಾಧಾನಿತ ಕಾಂಗ್ರೆಸ್ ಶಾಸಕರು ಸುರ್ಜೇವಾಲಾ ಬಳಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದು, ಇದೇ ವೇದಿಕೆಯಲ್ಲಿ ಯೋಗೇಶ್ವರ್ ವಿರುದ್ಧ ಮಾಜಿ ಪತ್ನಿ ಮತ್ತು ಪುತ್ರಿ ತಮ್ಮ ಸಂಕಷ್ಟ ತೋಡಿಕೊಂಡಿರುವುದಾಗಿದೆ. ಯೋಗೇಶ್ವರ್ ಅವರ ವಿಚ್ಛೇದಿತ

ಸಿ.ಪಿ. ಯೋಗೇಶ್ವರ್ ವಿರುದ್ಧ ಸುರ್ಜೇವಾಲಾಗೆ ದೂರು ನೀಡಿದ ಮಾಜಿ ಪತ್ನಿ, ಪುತ್ರಿ Read More »

ಪತಂಜಲಿ ಯೋಗ ಶಾಖೆಯಲ್ಲಿ ಗುರುಪೂರ್ಣಿಮಾ ಆಚರಣೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ.ರಿ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಇದರ ವತಿಯಿಂದ ಗೇರುಕಟ್ಟೆಯ ಕ್ಷೀರಸಂಗಮ ಸಭಾಭವನದಲ್ಲಿ ಜರಗುತ್ತಿರುವ ಯೋಗ ಶಿಬಿರದಲ್ಲಿ ಶ್ರೀ ಗುರು ಪೂರ್ಣಿಮೆ ದಿನವನ್ನು ಆಚರಿಸಲಾಯಿತು. ಭಗವಂತನ ಇನ್ನೊಂದು ರೂಪವಾಗಿಯೇ ಕಾಣಿಸಿಕೊಂಡ ವ್ಯಾಸ ಮಹರ್ಷಿಗಳು ಜ್ಞಾನದ ರಾಶಿಯನ್ನು ನಾಲ್ಕು ವೇದಗಳಾಗಿ ವಿಂಗಡಿಸಿ 18 ಪುರಾಣ, ಉಪ ಪುರಾಣ ಮತ್ತು ಮಹಾಭಾರತ ಕೃತಿಯನ್ನು ರಚಿಸಿ ಎಲ್ಲರಿಗೂ ಜೀವನದ ಮೌಲ್ಯಗಳನ್ನು ಬೋಧಿಸಿದ ಮಹಾನ್ ಗುರುಗಳೆಂದು ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ತಿಳಿಸಿದರು.ಗುರು ಪೂರ್ಣಿಮೆಯ ಬಗ್ಗೆ ಯೋಗಬಂಧು

ಪತಂಜಲಿ ಯೋಗ ಶಾಖೆಯಲ್ಲಿ ಗುರುಪೂರ್ಣಿಮಾ ಆಚರಣೆ Read More »

ಯುವತಿಯರ ವಿಡಿಯೋ ಶೂಟ್‌ ಮಾಡಿ ಇನ್‌ಸ್ಟಾಗ್ರಾಂಗೆ ಅಪ್‌ಲೋಡ್‌ : ಆರೋಪಿ ಸೆರೆ

ಬೆಂಗಳೂರಿನ ಜನನಿಬಿಢ ರಸ್ತೆಗಳಲ್ಲಿ ನಡೆದುಕೊಂಡು ಹೋಗುವವರ ವಿಡಿಯೋ ಮಾಡುತ್ತಿದ್ದ ಆರೋಪಿ ಬೆಂಗಳೂರು: ಬೆಂಗಳೂರಿನ ಜನನಿಬಿಢ ರಸ್ತೆಯಲ್ಲಿ ನಡೆದುಹೋಗುವ ಮಹಿಳೆಯರ ವಿಡಿಯೋ ಶೂಟ್‌ ಮಾಡಿ ಅಸಭ್ಯ ಕಮೆಂಟ್‌ಗಳೊಂದಿಗೆ ಇನ್‌ಗ್ರಾಂಗೆ ಅಪ್‌ಲೋಡ್‌ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಬನಶಂಕರಿ, ಕೋರಮಂಗಲ ಮತ್ತಿತರೆಡೆ ಸಾರ್ವಜನಿಕ ರಸ್ತೆಯ ಜನಜಂಗುಳಿಯ ವಿಡಿಯೋ ಮಾಡುತ್ತಿದ್ದೇನೆ ಎಂದು ಜನರನ್ನು ನಂಬಿಸಿ ರಹಸ್ಯವಾಗಿ ಯುವತಿಯರ ವಿಡಿಯೋ ಮತ್ತು ಫೋಟೊ ಶೂಟ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಕೆ.ಆರ್ ಪುರಂ ನಿವಾಸಿ

ಯುವತಿಯರ ವಿಡಿಯೋ ಶೂಟ್‌ ಮಾಡಿ ಇನ್‌ಸ್ಟಾಗ್ರಾಂಗೆ ಅಪ್‌ಲೋಡ್‌ : ಆರೋಪಿ ಸೆರೆ Read More »

error: Content is protected !!
Scroll to Top