ಎ.ವಿ.ಜಿ. ಶಾಲೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ | ಪ್ರಸ್ತುತ ಯಕ್ಷಗಾನ ವಿಶ್ವಮಾನ್ಯವಾಗಿದೆ : ಪ್ರಸನ್ನ ಬಾಗಿನ

ಪುತ್ತೂರು: ಬನ್ನೂರಿನ ಅಲುಂಬುಡದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ತರಗತಿಯನ್ನು ಉದ್ಘಾಟಿಸಲಾಯಿತು. ಕನ್ನಡ , ತುಳು ಸಿನಿಮಾ ಹಾಗೂ ಕಿರುತೆರೆ ನಟ ಪುತ್ತೂರಿನ ಪ್ರಸನ್ನ ಬಾಗಿನ ಬಪ್ಪಳಿಗೆ ಜ್ಯೋತಿ ಬೆಳಗಿಸಿ ಯಕ್ಷಗಾನ ತರಗತಿ ಉದ್ಘಾಟಿಸಿ ಮಾತನಾಡಿ, ಇಂದು ಯಕ್ಷಗಾನ ವಿಶ್ವ ಮಾನ್ಯವಾಗಿದೆ. ಮಕ್ಕಳಲ್ಲಿ ಎಳವೆಯಿ೦ದಲೇ ಇದರ ಕಲಿಕೆ ಆರಂಭವಾದರೆ ಅವರು ಮುಂದಕ್ಕೆ ಈ ಕ್ಷೇತ್ರದಲ್ಲಿ ಸಮರ್ಥವಾಗಿ ಬೆಳೆಯಲು ಸಾಧ್ಯ, ಇದೊಂದು ದೃಶ್ಯ ಹಾಗೂ ಶ್ರಾವ್ಯಕ್ಕೆ ಸಂಬಂಧಪಟ್ಟ ಕಲೆಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲಾ […]

ಎ.ವಿ.ಜಿ. ಶಾಲೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ | ಪ್ರಸ್ತುತ ಯಕ್ಷಗಾನ ವಿಶ್ವಮಾನ್ಯವಾಗಿದೆ : ಪ್ರಸನ್ನ ಬಾಗಿನ Read More »

ಬೊಳುವಾರಿನಲ್ಲಿ ಹರಿತವಾದ ಆಯುಧ ಪ್ರದರ್ಶನ | ಆರೋಪಿ ಪೊಲೀಸ್ ವಶಕ್ಕೆ

ಪುತ್ತೂರು: ಬೊಳುವಾರಿನಲ್ಲಿ ಹರಿತವಾದ ಆಯುಧ ಪ್ರದರ್ಶನ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಬನ್ನೂರು ಮೂಲದ ವ್ಯಕ್ತಿಯೊಬ್ಬರು ಹರಿತವಾದ ಆಯುಧವನ್ನು ದುರಸ್ಥಿಗಾಗಿ ಪುತ್ತೂರು ಪೇಟೆಗೆ ತಂದವರು ಬೊಳುವಾರು ಮಸೀದಿಯ ಬಳಿ ಶರ್ಟ್ ಹಿಂಬದಿ ಸಿಕ್ಕಿಸಿ ಪ್ರದರ್ಶನ ಮಾಡಿದ್ದಾರೆಂದು ಆರೋಪಿಸಲಾಗಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ನಗರ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬೊಳುವಾರಿನಲ್ಲಿ ಹರಿತವಾದ ಆಯುಧ ಪ್ರದರ್ಶನ | ಆರೋಪಿ ಪೊಲೀಸ್ ವಶಕ್ಕೆ Read More »

ಕಾವು ನವೋದಯ ಒಕ್ಕೂಟದಿಂದ ವೈದ್ಯಕೀಯ ನೆರವು

ಪುತ್ತೂರು: ಕಾವು ಮಾಡ್ನೂರು ಗ್ರಾಮದ ನವೋದಯ ಸದಸ್ಯೆಯರಾದ ಮಾಣಿಯಡ್ಕದ ನಂದಾದೀಪ ಗುಂಪಿನ ವನಜಾಕ್ಷಿ ಮತ್ತು ಕೆರೆಮಾರು ಬ್ರಹ್ಮಶ್ರೀ ಗುಂಪಿನ ದಿವ್ಯಶ್ರೀ ಅವರ ತುರ್ತು ಚಿಕಿತ್ಸೆಗೆ ಧನ ಸಹಾಯ ಹಸ್ತಾಂತರಿಸಲಾಯಿತು. ಅವರ ಮನೆಗೆ ತೆರಳಿ ಕಾವು ನವೋದಯ ಒಕ್ಕೂಟದ ತುರ್ತು ನಿಧಿಯಿಂದ ವೈದ್ಯಕೀಯ ನೆರವಿಗಾಗಿ ಧನ ಸಹಾಯ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ನವೋದಯ ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡ, ಕಾವು ವಲಯ ಪ್ರೇರಕಿ ಮಾಧವಿ, ಗೌರವಾಧ್ಯಕ್ಷ ಅಮ್ಮು ಪೂಂಜ ಮತ್ತಿತರರು ಉಪಸ್ಥಿತರಿದ್ದರು.

ಕಾವು ನವೋದಯ ಒಕ್ಕೂಟದಿಂದ ವೈದ್ಯಕೀಯ ನೆರವು Read More »

ನಾಡದೋಣಿ ಮೀನುಗಾರಿಕೆ ದೋಣಿ ಮಗುಚಿ ಮೂವರು ಮೀನುಗಾರರು ಸಮುದ್ರಪಾಲು

ನೀರಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಯತ್ನಿಸಿದ ಇನ್ನಿಬ್ಬರು ನೀರುಪಾಲು ಉಡುಪಿ: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ. ಸುರೇಶ್ ಖಾರ್ವಿ (45), ರೋಹಿತ್ ಖಾರ್ವಿ (38) ಮತ್ತು ಜಗ್ಗು ಯಾನೆ ಜಗದೀಶ್ ಖಾರ್ವಿ (36) ನೀರುಪಾಲಾದ ಮೀನುಗಾರರು. ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆ ವಾಪಸ್ ಆಗುವಾಗ ದೋಣಿ ಮಗುಚಿದೆ. ದೋಣಿ ಮಗುಚಿದ ವೇಳೆ ಓರ್ವ ನೀರಿಗೆ ಬಿದ್ದಿದ್ದಾರೆ. ಆತನನ್ನು ರಕ್ಷಿಸಲು ಮುಂದಾದ ಇನ್ನಿಬ್ಬರು ಕೂಡ

ನಾಡದೋಣಿ ಮೀನುಗಾರಿಕೆ ದೋಣಿ ಮಗುಚಿ ಮೂವರು ಮೀನುಗಾರರು ಸಮುದ್ರಪಾಲು Read More »

ಮದ್ಯದ ದರದಲ್ಲಿ ಭಾರಿ ಇಳಿಕೆ!

ಬಾಟಲಿಗೆ 10ರಿಂದ 100 ರೂ. ತನಕ ಕಡಿತ ಮಾಡಿದ ಸರ್ಕಾರ ಅಮರಾವತಿ: ಸರ್ಕಾರ ಮದ್ಯದ ದರದಲ್ಲಿ ಭಾರಿ ಇಳಿಕೆ ಮಾಡಿದೆ. ಬಾಟಲಿಗೆ 10ರಿಂದ 100 ರೂ. ತನಕ ಇಳಿಕೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ ಈ ಸುದ್ದಿ ನೋಡಿ ಕರ್ನಾಟಕದ ಮದ್ಯಪ್ರಿಯರು ಖುಷಿಯಿಂದ ಕುಪ್ಪಳಿಸುವ ಅಗತ್ಯವಿಲ್ಲ. ದರ ಇಳಿಕೆಯಾಗಿರುವುದು ಪಕ್ಕದ ಆಂಧ್ರ ಪ್ರದೇಶದಲ್ಲಿ. ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳು ಕಂದಾಯ ಸಂಗ್ರಹಕ್ಕೆ ಮದ್ಯದ ದರ ಏರಿಕೆ ಮಾಡುತಿದ್ದರೆ ಆಂಧ್ರದ ಚಂದ್ರಬಾಬು ನಾಯ್ಡು ಸರ್ಕಾರ ಮಾತ್ರ ಮದ್ಯದ ದರ

ಮದ್ಯದ ದರದಲ್ಲಿ ಭಾರಿ ಇಳಿಕೆ! Read More »

ದ್ವೇಷ ಭಾಷಣಗಳನ್ನು ನಿಯಂತ್ರಿಸಲು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ದ್ವೇಷ ಭಾಷಣ ನಿಯಂತ್ರಣ ಮಾಡುವಂತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನಿಯಂತ್ರಿಸುವ ಹಾಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಮತ್ತು ನ್ಯಾಯಮೂರ್ತಿ ಕೆ.ವಿ.‌ ವಿಶ್ವನಾಥನ್ ಅವರಿದ್ದ ನ್ಯಾಯ ಪೀಠವು ಸರ್ಕಾರಗಳು ಜನರಿಗೆ ವಾಕ್ ಸ್ವಾತಂತ್ರ್ಯದ ಮೌಲ್ಯಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದಿದೆ. ಇನ್ಸ್ಟಾಗ್ರಾಮ್ ಇನ್ಫುಯೆನ್ಸರ್ ಶರ್ಮಿಷ್ಠ ಪನೋಲಿ ವಿರುದ್ಧದ ದೂರುದಾರ ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿ ಕೋರ್ಟ್ ಈ ಸೂಚನೆ ನೀಡಿರುವುದಾಗಿದೆ. ದ್ವೇಷ ಭಾಷಣಗಳನ್ನು ನಿಯಂತ್ರಣ ಮಾಡಬೇಕು.

ದ್ವೇಷ ಭಾಷಣಗಳನ್ನು ನಿಯಂತ್ರಿಸಲು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ Read More »

ವೈವಾಹಿಕ ಸಂಬಂಧ ಸಮಸ್ಯೆಗೆ ರಹಸ್ಯ ಕಾಲ್ ರೆಕಾರ್ಡ್ ಸಾಕ್ಷ್ಯವಾಗುತ್ತದೆ: ಸುಪ್ರೀಂ ಕೋರ್ಟ್

ನವದೆಹಲಿ: ಸಂಗಾತಿಯ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ ಅದನ್ನು ವೈವಾಹಿಕ ಸಮಸ್ಯೆಗಳ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳುವುದು ಸ್ವೀಕಾರಾರ್ಹ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಗಂಡ ಹೆಂಡತಿ ಒಬ್ಬರ ಮೇಲೊಬ್ಬರು ಬೇಹುಗಾರಿಕೆ ಮಾಡುತ್ತಿದ್ದಾರೆ, ರಹಸ್ಯವಾಗಿ ಸಂಭಾಷಣೆಗಳ ರೆಕಾರ್ಡ್ ಮಾಡುತ್ತಿದ್ದಾರೆ ಎಂದರೆ ಅವರಿಬ್ಬರ ದಾಂಪತ್ಯದಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ, ನ್ಯಾ. ಸಂತೋಷ್‌ಚಂದ್ರ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಆ ಮೂಲಕ ದಂಪತಿಗಳ ನಡುವಿನ ರಹಸ್ಯ ಸಂಭಾಷಣೆಯು ಸಾಕ್ಷ್ಯ ಕಾಯ್ದೆಯಡಿ ರಕ್ಷಿಸಲ್ಪಟ್ಟಿದ್ದು, ಅದನ್ನು

ವೈವಾಹಿಕ ಸಂಬಂಧ ಸಮಸ್ಯೆಗೆ ರಹಸ್ಯ ಕಾಲ್ ರೆಕಾರ್ಡ್ ಸಾಕ್ಷ್ಯವಾಗುತ್ತದೆ: ಸುಪ್ರೀಂ ಕೋರ್ಟ್ Read More »

ಭಾವಿ ಪತಿ ಕೊಲೆ ಕೇಸ್‌ : ಅಪರಾಧಿಗಳಿಗೆ ಕ್ಷಮಾದಾನದ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್‌

ರಾಜ್ಯಪಾಲರು ಕ್ಷಮಿಸಿದರೆ ಜೀವಾವಧಿ ಜೈಲು ಶಿಕ್ಷೆಯಿಂದ ಬಚಾವಾಗಬಹುದು ಎಂದು ತೀರ್ಪು ಬೆಂಗಳೂರು : 2003ರಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಭಾವಿ ಪತಿ, ಸಾಫ್ಟ್‌ವೇರ್ ಎಂಜಿನಿಯರ್ ಬಿ.ವಿ ಗಿರೀಶ್ ಹತ್ಯೆ ಪ್ರಕರಣದಲ್ಲಿ ಶುಭಾ ಮತ್ತು ಆಕೆಯ ಪ್ರಿಯಕರ ಸೇರಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿ ಸುಪ್ರಿಂ ಕೋರ್ಟ್‌ ಸೋಮವಾರ ಅಂತಿಮ ತೀರ್ಪು ನೀಡಿದೆ. ಆದರೂ, ಇದು ಆರೋಪಿಗಳು ಯೌವ್ವನದ ದುಡುಕಿನಲ್ಲಿ ವಿವೇಚನೆಯಿಲ್ಲದೆ ನಡೆಸಿದ ಕೃತ್ಯ ಎಂದಿದ್ದು, ರಾಜ್ಯಪಾಲರಲ್ಲಿ ಕ್ಷಮಾದಾನ ಕೋರಲು ಅವಕಾಶ ಕಲ್ಪಿಸಲು ಆದೇಶಿಸಿದೆ. ಅದುವರೆಗೂ ಅಪರಾಧಿಗಳನ್ನು

ಭಾವಿ ಪತಿ ಕೊಲೆ ಕೇಸ್‌ : ಅಪರಾಧಿಗಳಿಗೆ ಕ್ಷಮಾದಾನದ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್‌ Read More »

ಯುಪಿಐ ಜಗತ್ತಿನ ಅತಿದೊಡ್ಡ ಡಿಜಿಟಲ್‌ ಪಾವತಿ ವ್ಯವಸ್ಥೆ

200 ದೇಶಗಳಲ್ಲಿರುವ ವೀಸಾವನ್ನು ಹಿಂದಿಕ್ಕಿದ 7 ರಾಷ್ಟ್ರಗಳಲ್ಲಿರುವ ಯುಪಿಐ ನವದೆಹಲಿ: ಭಾರತದಲ್ಲಿ ಮೊಬೈಲ್ ಮೂಲಕ ನಡೆಯುವ ವಹಿವಾಟಿನ ಮೂಲವಾದ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಈಗ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಈ ಮೂಲಕ ಈ ವರೆಗೆ ನಂ.1 ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದ ವೀಸಾವನ್ನು ಹಿಂದಿಕ್ಕಿದೆ. ನಿತ್ಯ 65 ಕೋಟಿ ರೂ. ವಹಿವಾಟು ನಡೆಸುವ ಮೂಲಕ ವೀಸಾವನ್ನು ಹಿಂದಿಕ್ಕಿ ಭಾರತದ ಯುಪಿಐ ವಿಶ್ವದಲ್ಲೇ ಅತೀ ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಈ ಕುರಿತು

ಯುಪಿಐ ಜಗತ್ತಿನ ಅತಿದೊಡ್ಡ ಡಿಜಿಟಲ್‌ ಪಾವತಿ ವ್ಯವಸ್ಥೆ Read More »

ಆ.27-28 : ಚಂದಳಿಕೆಯಲ್ಲಿ 27ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ

ವಿಟ್ಲ: ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಮತ್ತು ಚಂದಳಿಕೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ವತಿಯಿಂದ ಜರಗುವ 27ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಚಂದಳಿಕೆ ಮಂಗಳಾ ಮಂಟಪದಲ್ಲಿ ಬಿಡುಗಡೆ ಮಾಡಲಾಯಿತು. ಸಮಿತಿ ಅಧ್ಯಕ್ಷ ಶಂಕರ ಭಟ್ ಬದನಾಜೆ ಬಿಡುಗಡೆಗೊಳಿಸಿದರು. ಸಮಿತಿ ಕಾರ್ಯಧ್ಯಕ್ಷ ಕೃಷ್ಣಯ್ಯ ಕೆ ಅರಮನೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕ್ಲಬ್ ಗೌರವಾಧ್ಯಕ್ಷ ಗಂಗಾಧರ ಸಿ. ಅಧ್ಯಕ್ಷ ಕರುಣಾಕರ ಗೌಡ ಎಂ. ಕಾರ್ಯದರ್ಶಿ ಚೇತನ್ ಕುಮಾರ್ ಕಲ್ಲಕಟ್ಟಾ. ಕೋಶಾಧಿಕಾರಿ ವಿಶ್ವನಾಥ ಎಂ.  ಹಾಗೂ

ಆ.27-28 : ಚಂದಳಿಕೆಯಲ್ಲಿ 27ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ Read More »

error: Content is protected !!
Scroll to Top