ಜಾರ್ಖಂಡ್‌: ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ನಕ್ಸಲರ ಖತಂ, ಓರ್ವ ಯೋಧ ಹುತಾತ್ಮ

ನವದೆಹಲಿ: ಜಾರ್ಖಂಡ್ ರಾಜ್ಯದ ಬೊಕಾರೋ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರನ್ನು ಯಮಪುರಿಗೆ ಅಟ್ಟಲಾಗಿದೆ. ಈ ಸಂದರ್ಭದಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಭದ್ರತಾ ಪಡೆಗಳು ಬಿರ್ಹೊರ್ಡೆರಾ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸಿದ್ದು, ಈವೇಳೆ ಯೋಧರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಸಿಆರ್‌ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಮಾವೋವಾದಿಗಳನ್ನು ಹತ್ಯೆ ಮಾಡಿರುವುದಾಗಿ ‌ಮೂಲಗಳು ಮಾಹಿತಿ ನೀಡಿವೆ. ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜಾರ್ಖಂಡ್‌: ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ನಕ್ಸಲರ ಖತಂ, ಓರ್ವ ಯೋಧ ಹುತಾತ್ಮ Read More »

ದೇಶದ ಮೊದಲ ಟೆಸ್ಲಾ ಕಾರು ಉದ್ಘಾಟನೆ | ಉದ್ಘಾಟನೆ ನೆರವೇರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್‍

ಮುಂಬಯಿ: ವಿಶ್ವದ ಆಟೋಮೊಬೈಲ್ ಕ್ಷೇತ್ರದ ದಿಗ್ಗಜ,ಎಲೆಕ್ಟಿಕ್ ಕಾರು ತಯಾರಕ ಸಂಸ್ಥೆಯಾದ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಮುಂಬಯಿಯ ಬಾಂದ್ರಾ-ಕುರ್ಲಾ ಸಂಕೀರ್ಣದಲ್ಲಿ ತನ್ನ ಮೊದಲ ಎಕ್ಷೀರಿಯನ್ಸ್ ಸೆಂಟರ್ ಮಂಗಳವಾರ ಉದ್ಘಾಟನೆಗೊಂಡಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, ವಿಶ್ವದ ಅತ್ಯಂತ ಸ್ಮಾರ್ಟ್ ಕಾರು ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ಮುಂಬಯಿಗೆ ಬರುತ್ತಿರುವುದು ಸಂತೋಷದ ವಿಷಯ. ಟೆಸ್ಲಾ ತನ್ನ ಎಕ್ಸಿರಿಯನ್ಸ್ ಸೆಂಟರ್ ಮೂಲಕ ಮಹಾರಾಷ್ಟ್ರದಿಂದ ಭಾರತಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಿದೆ ಎಂದು ಫಡ್ನವೀಸ್ ಘೋಷಿಸಿದರು. ಮುಂಬಯಿಯಲ್ಲಿ ಈಗ ಟೆಸ್ಲಾ ಕಾರುಗಳ

ದೇಶದ ಮೊದಲ ಟೆಸ್ಲಾ ಕಾರು ಉದ್ಘಾಟನೆ | ಉದ್ಘಾಟನೆ ನೆರವೇರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್‍ Read More »

ಆಧುನಿಕ ಶಸ್ತ್ರಾಸ್ತ್ರಗಳನ್ನು ನಾವೇ ತಯಾರಿಸುವಂತಾಗಬೇಕು: ಜನರಲ್ ಅನಿಲ್ ಚೌಹಾಣ್

ನವದೆಹಲಿ: ನಾವು ಇಂದು ಗೆಲುವು ಪಡೆಯಬೇಕಾದರೆ ‌ನಿನ್ನೆಯ ಶಸ್ತ್ರಾಸ್ತ್ರಗಳಿಂದ ಸಾಧ್ಯವಿಲ್ಲ. ಬದಲಾಗಿ ನಾಳಿನ ತಂತ್ರಜ್ಞಾನದ ಶಸ್ತ್ರಾಸ್ತ್ರಗಳು ನಮ್ಮ ಬತ್ತಳಿಕೆಯಲ್ಲಿ ಇರಬೇಕು ಎಂದು ಸೇನಾಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ನುಡಿದಿದ್ದಾರೆ. ಸ್ವದೇಶಿ ನಿರ್ಮಿತ ಮಾನವ ರಹಿತ ವೈಮಾನಿಕ ಸಾಧನಗಳು (UAV) ಮತ್ತು ಅವುಗಳನ್ನು ಎದುರಿಸುವ C-UAVಗಳ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಆಪರೇಷನ್ ಸಿಂಧೂರ್ ಕುರಿತಾಗಿಯೂ ಮಾತನಾಡಿದ ಅವರು, ಪಾಕಿಸ್ತಾನದ ಸಿಡಿತಲೆ ಹೊತ್ತ ಡ್ರೋನ್‌ಗಳ ದಾಳಿಯಲ್ಲಿ ಭಾರತೀಯ ಸೇನೆ ಅಥವಾ ನಾಗರಿಕರ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಭವಿಷ್ಯದಲ್ಲಿ

ಆಧುನಿಕ ಶಸ್ತ್ರಾಸ್ತ್ರಗಳನ್ನು ನಾವೇ ತಯಾರಿಸುವಂತಾಗಬೇಕು: ಜನರಲ್ ಅನಿಲ್ ಚೌಹಾಣ್ Read More »

ಆರೇಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೊಡಿತ್ತಾಯಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಸಂಕ್ರಾಂತಿ ತಂಬಿಲ | ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾಗಿ | ಆರೇಲ್ತಡಿಯಲ್ಲಿ ಕೆಡೆಂಜೊಡಿತ್ತಾಯ ಬಸ್‍ ತಂಗುದಾಣಕ್ಕೆ ಚಾಲನೆ, ನೂತನ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ರೆಡ್ಡಿ

ಸವಣೂರು: ಕಡಬ ತಾಲೂಕಿನ ಸವಣೂರು ಆರೇಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೊಡಿತ್ತಾಯಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಸಂಕ್ರಾಂತಿ ದಿನವಾದ ಬುಧವಾರ ಸಂಕ್ರಾಂತಿ ತಂಬಿಲ ಹಾಗೂ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಪಾಲ್ಗೊಂಡಿದ್ದರು. ಬೆಳಿಗ್ಗೆ ಗಾಲಿ ಜನಾರ್ದನ ರೆಡ್ಡಿ ಅವರು 2023-24ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸವಣೂರು ಆರೇಲ್ತಡಿಯಲ್ಲಿ ನಿರ್ಮಾಣಗೊಂಡ ಕೆಡೆಂಜೊಡಿತ್ತಾಯಿ ಬಸ್‍ ತಂಗುದಾಣವನ್ನು ಉದ್ಘಾಟಿಸಿದರು. ಬಳಿಕ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ಸಂಕ್ರಾಂತಿ

ಆರೇಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೊಡಿತ್ತಾಯಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಸಂಕ್ರಾಂತಿ ತಂಬಿಲ | ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾಗಿ | ಆರೇಲ್ತಡಿಯಲ್ಲಿ ಕೆಡೆಂಜೊಡಿತ್ತಾಯ ಬಸ್‍ ತಂಗುದಾಣಕ್ಕೆ ಚಾಲನೆ, ನೂತನ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ರೆಡ್ಡಿ Read More »

ಯಶಸ್ವಿ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪುತ್ತೂರಿನ ಪ್ರತಿಷ್ಠಿತ ಪಿಕ್ಸೆಲ್ ಸಂಸ್ಥೆ

ಪುತ್ತೂರು : ಪುತ್ತೂರಿನಲ್ಲಿ ಸತತವಾಗಿ 7 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಜ್ವಲ್ ಪುತ್ತೂರು ಮಾಲಕತ್ವದ ಪಿಕ್ಸೆಲ್ ಸಂಸ್ಥೆ ಇಂದು ಯಶಸ್ವಿ 8ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿದೆ. “ಎಲ್ ಇ ಡಿ ವಿಡಿಯೋ ವಾಲ್, ಟಿವಿ, ಪ್ರೊಜೆಕ್ಟರ್, ವಿಡಿಯೋಗ್ರಾಫಿ, ಮಾಧ್ಯಮ ನೇರಪ್ರಸಾರಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆ ಹಾಗೂ ಲೈವ್ ವೀಡಿಯೊ ಮಿಕ್ಸಿಂಗ್ ಇತ್ಯಾದಿ ಉತ್ತಮ ಗುಣಮಟ್ಟದ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಪಿಕ್ಸೆಲ್ ಸಹ ಸಂಸ್ಥೆಯಾಗಿರುವ  ‘ ಪಿಕ್ಸೆಲ್ ಟೆಕ್ ಸೊಲ್ಯೂಷನ್ಸ್ ‘ ಮೂಲಕ ಮಿಂಚಿನಿಂದ ಸಮಗ್ರ ರಕ್ಷಣೆಗಾಗಿ ಸಂಯೋಜಿತ

ಯಶಸ್ವಿ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪುತ್ತೂರಿನ ಪ್ರತಿಷ್ಠಿತ ಪಿಕ್ಸೆಲ್ ಸಂಸ್ಥೆ Read More »

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಬೆಂಗಳೂರು: ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮಾದನಾಯಕನಹಳ್ಳಿಯ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಅಟೋ ಚಾಲಕ ದೀಪು (26) ಎಂದು ಗುರುತಿಸಲಾಗಿದೆ. ಈತ ಬಾಲಕಿಯ ನೆರೆಮನೆಯ ನಿವಾಸಿಯಾಗಿದ್ದು ರಾತ್ರಿ ವೇಳೆ ಆಟೋ ಓಡಿಸಿ, ಹಗಲು ಮನೆಯಲ್ಲೇ ಇರುತ್ತಿದ್ದ. ನೆರೆಮನೆಯ ಬಾಲಕಿಯ ಜೊತೆಗೆ ಮಾತನಾಡುವ ನೆಪದಲ್ಲಿ ಮನೆಗೆ ಕರೆಸಿ ಆಕೆಯ ವಿರೋಧದ ನಡುವೆಯೂ ಅತ್ಯಾಚಾರ ನಡೆಸಿದ್ದಾನೆ. ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಕೆಯ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ಆಕೆ ಗರ್ಭಿಣಿ

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ Read More »

ರಾಜ್ಯದಲ್ಲಿ ಸಿದ್ದರಾಮಯ್ಯ ಒಬ್ಬರೇ ಮುಖ್ಯಮಂತ್ರಿ: ಸಚಿವ ಡಾ. ಎಚ್. ಸಿ. ಮಹದೇವಪ್ಪ

ಸಾಧನಾ ಸಮಾವೇಶ ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನಕ್ಕಲ್ಲ ಮೈಸೂರು: ಸಾಧನಾ ಸಮಾವೇಶ ಸಿಎಂ ‌ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಕಾರ್ಯಕ್ರಮ ಅಲ್ಲ ಎಂದು ಸಚಿವ ಡಾ. ಎಚ್. ಸಿ. ಮಹದೇವಪ್ಪ ತಿಳಿಸಿದ್ದಾರೆ. ಜು. 19 ರಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾದ ಸಾಧನಾ ಸಮಾವೇಶದ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಈ‌ ಮೊದಲೇ ಜನರು ಶಕ್ತಿ ತುಂಬಿದ್ದಾರೆ. ಈ‌ ಕಾರ್ಯಕ್ರಮ ಈಗಾಗಲೇ ಯಶಸ್ವಿಯಾಗಿದೆ. ಈ ಸಾಧನಾ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರಲಿರುವುದಾಗಿ ಅವರು ಮಾಹಿತಿ

ರಾಜ್ಯದಲ್ಲಿ ಸಿದ್ದರಾಮಯ್ಯ ಒಬ್ಬರೇ ಮುಖ್ಯಮಂತ್ರಿ: ಸಚಿವ ಡಾ. ಎಚ್. ಸಿ. ಮಹದೇವಪ್ಪ Read More »

ಪೊಲೀಸ್ ಕಾನ್ಸ್‌ಟೆಬಲ್‌ನಿಂದ ಅತ್ಯಾಚಾರ : ಕಮಿಷನರ್‌ಗೆ ದೂರು, ಆರೋಪಿಯ ಬಂಧನ

ಮಂಗಳೂರು: ತನ್ನ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರು ‌ಅತ್ಯಾಚಾರ ಎಸಗಿದ್ದಾಗಿ ಮಹಿಳೆಯೊಬ್ಬರು ಪೊಲೀಸ್ ಕಮಿಷನರ್‌ ಅವರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಕಾವೂರು ಪೊಲೀಸು ಠಾಣೆಯಲ್ಲಿ ಕಾನ್ಸ್‌ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರ ನಾಯಕ್ ಎಂದು ಗುರುತಿಸಲಾಗಿದೆ. ಕಂಕನಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚಂದ್ರ ನಾಯಕ್ ಅವರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾಗಿ ಮಹಿಳೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ದೂರು ಸಲ್ಲಿಸಿದ್ದರು. ಆ ದೂರಿನನ್ವಯ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.

ಪೊಲೀಸ್ ಕಾನ್ಸ್‌ಟೆಬಲ್‌ನಿಂದ ಅತ್ಯಾಚಾರ : ಕಮಿಷನರ್‌ಗೆ ದೂರು, ಆರೋಪಿಯ ಬಂಧನ Read More »

ಹೃದಯಾಘಾತದ ಭಯ ಬಿಡಿ: ಜನರಿಗೆ ರಾಜ್ಯ ಸರ್ಕಾರ ಕಿವಿಮಾತು

ಬೆಂಗಳೂರು: ಹೃದಯಾಘಾತದ ಬಗ್ಗೆ ಆತಂಕ ಬೇಡ. ಸರಿಯಾದ ನಿದ್ದೆ, ದೈಹಿಕ ವ್ಯಾಯಾಮ ಮಾಡುವುದರ ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳಿ. ಇಲ್ಲವಾದಲ್ಲಿ ವರ್ಷಕ್ಕೊಮ್ಮೆ ಹೃದಯದ ತಪಾಸಣೆ ಮಾಡಿಸಿಕೊಳ್ಳಿ ಎಂದು ರಾಜ್ಯ ಸರ್ಕಾರ ಸಲಹೆ ನೀಡಿದೆ. ರಾಜ್ಯದಲ್ಲಿ ಹೃದಯಾಘಾತದಿಂದ ಮರಣವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕರಿಗೆ ಕಿವಿಮಾತು ಹೇಳಿರುವುದಾಗಿದೆ. ಹೃದಯಾಘಾತದ ಭಯಕ್ಕೆ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಈ ಸಲಹೆ ನೀಡಲಾಗಿದೆ. ಹೃದಯಾಘಾತಕ್ಕೆ ಕೊರೋನಾ ಲಸಿಕೆ ಕಾರಣವಲ್ಲ. ಲಸಿಕೆ

ಹೃದಯಾಘಾತದ ಭಯ ಬಿಡಿ: ಜನರಿಗೆ ರಾಜ್ಯ ಸರ್ಕಾರ ಕಿವಿಮಾತು Read More »

ಪತಿ ಮನೆಯವರ ಚಿತ್ರಹಿಂಸೆ: ಮಗುವನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ ಕೇರಳದ ಮಹಿಳೆ

ತಿರುವನಂತಪುರ: ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ತನ್ನ ಒಂದೂವರೆ ವರ್ಷದ ಮಗುವನ್ನು ಕೊಂದ ಮಹಿಳೆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಾರ್ಜಾದಲ್ಲಿ ನಡೆದಿದೆ. ಮೃತರನ್ನು ಕೇರಳದ ತಿರುವನಂತಪುರ ಮೂಲದ ವಿಪಂಜಿಕಾ(32) ಮತ್ತು ವೈಭವಿ ಎಂದು ಗುರುತಿಸಲಾಗಿದೆ. ಈ ಸಂಬಂಧ ವಿಪಂಜಿಕಾ ಅವರ ತಾಯಿ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಪುತ್ರಿಯನ್ನು ನಿಧೀಶ್‌ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿದ್ದು ಅವರು ಶಾರ್ಜಾ‌ದಲ್ಲಿ ನೆಲೆಸಿದ್ದರು. ಪತಿ ಮತ್ತು ಆತನ ಮನೆಯವರು ನೀಡುತ್ತಿದ್ದ ಮಾನಸಿಕ, ದೈಹಿಕ ಕಿರುಕುಳ, ವರದಕ್ಷಿಣೆ

ಪತಿ ಮನೆಯವರ ಚಿತ್ರಹಿಂಸೆ: ಮಗುವನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ ಕೇರಳದ ಮಹಿಳೆ Read More »

error: Content is protected !!
Scroll to Top