8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದು ಊರು ಸುತ್ತಿದ ಕ್ರೂರಿ ತಂದೆ

ಹೆಂಡತಿ ವರದಕ್ಷಿಣೆ ತರಲಿಲ್ಲ ಎಂಬ ಸಿಟ್ಟಿನಲ್ಲಿ ಎಸಗಿದ ಕೃತ್ಯ ಲಖನೌ: ಉತ್ತರ ಪ್ರದೇಶದ ರಾಂಪುರದಲ್ಲಿ ಕ್ರೂರಿ ತಂದೆಯೊಬ್ಬ ಹೆಂಡತಿ ಮೇಲಿನ ಸಿಟ್ಟಿಗೆ ತನ್ನ ಎಂಟು ತಿಂಗಳು ಪ್ರಾಯದ ಹಸುಗೂಸನ್ನು ತಲೆಕೆಳಗಾಗಿ ಹಿಡಿದುಕೊಂಡು ಊರಿಡೀ ಸುತ್ತುಹಾಕಿದ ಅಮಾನವೀಯ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ. ವರದಕ್ಷಿಣೆಗಾಗಿ ಪತ್ನಿ ಜತೆ ಜಗಳವಾಡಿದ ಬಳಿಕ ಈ ಪಾಪಿ ತಂದೆ ತನ್ನ ಮಗುವನ್ನು ತಲೆ ಕೆಳಗಾಗಿಸಿ ಹಿಡಿದುಕೊಂಡು ಊರಿಡೀ ತಿರುಗಾಡಿದ್ದಾನೆ. ಆರೋಪಿಯನ್ನು ಸಂಜು ಎಂದು ಗುರುತಿಸಲಾಗಿದೆ. ಸುಮನ್‌ ಎಂಬ […]

8 ತಿಂಗಳ ಮಗುವನ್ನು ತಲೆಕೆಳಗಾಗಿ ಹಿಡಿದು ಊರು ಸುತ್ತಿದ ಕ್ರೂರಿ ತಂದೆ Read More »

ಬೆಂಗಳೂರಿನ ಉದ್ಯಮಿ ತಂದೆ-ಮಗ ಆಂಧ್ರದಲ್ಲಿ ಭೀಕರವಾಗಿ ಕೊಲೆ

ಚೆಕ್‌ಬೌನ್ಸ್‌ ವಿಚಾರಣೆಗೆ ಹೋದ ವೇಳೆ ಹಾಡಹಗಲೇ ಅಪಹರಿಸಿ ಹತ್ಯೆ ಬೆಂಗಳೂರು: ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳು ಹಾಗೂ ಬಿಜೆಪಿ ಮುಖಂಡರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕೇಸಿಗೆ ತೆರಳಿದ್ದ ತಂದೆ ವೀರಸ್ವಾಮಿರೆಡ್ಡಿ ಹಾಗೂ ಅವರ ಪುತ್ರ ಪ್ರಶಾಂತ್ ರೆಡ್ಡಿಯನ್ನು ಅಪಹರಿಸಿದ ದುಷ್ಕರ್ಮಿಗಳು ಇಬ್ಬರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೊಲೆಯಾದ ತಂದೆ-ಮಗ ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಆಪ್ತರಾಗಿದ್ದರು. ವೀರಸ್ವಾಮಿ ರೆಡ್ಡಿ ಮುಂಬರುವ ಬಿಬಿಎಂಪಿ

ಬೆಂಗಳೂರಿನ ಉದ್ಯಮಿ ತಂದೆ-ಮಗ ಆಂಧ್ರದಲ್ಲಿ ಭೀಕರವಾಗಿ ಕೊಲೆ Read More »

ಪುತ್ತೂರು : ಭಾರಿ ಮಳೆ ಕಾರಣ ಇಂದು ಶಾಲೆಗಳಿಗೆ ರಜೆ

ಪುತ್ತೂರು : ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನಲ್ಲೂ ಇಂದು (ಜು.24) ಶಾಲೆಗಳಿಗೆ ರಜೆ ಸಾರಲಾಗಿದ್ದು, ಇದರೊಂದಿಗೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ಶಾಲೆಗಳಿಗೆ ರಜೆ ನೀಡಿದಂತಾಗಿದೆ. ಪುತ್ತೂರು ತಾಲೂಕಿನ ಎಲ್ಲ ಅಂಗನವಾಡಿ, ಕೇಂದ್ರಗಳು, ಪ್ರಾಥಮಿಕ ಶಾಳೆಗಳು, ಪ್ರೌಢಾಲೆಗಳು, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ನೀಡಲಾಗಿದೆ. ನೀರು ಹರಿಯುವ ತಗ್ಗು ಪ್ರದೇಶಗಳು, ಕೆರೆಮ ನದಿತೀರಗಳಿಗೆ ಮಕ್ಕಳು ಹೋಗದಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರ್‌ ಸೂಚನೆ ನೀಡಿದ್ದಾರೆ.

ಪುತ್ತೂರು : ಭಾರಿ ಮಳೆ ಕಾರಣ ಇಂದು ಶಾಲೆಗಳಿಗೆ ರಜೆ Read More »

ಧರ್ಮಸ್ಥಳ ಪ್ರಕರಣ : ಎಸ್‌ಐಟಿಯಿಂದ ಓರ್ವ ಐಪಿಎಸ್‌ ಅಧಿಕಾರಿಯನ್ನು ಕೈಬಿಡಲು ಶಿಫಾರಸು

ಇನ್ನೋರ್ವ ಐಪಿಎಸ್‌ ಅಧಿಕಾರಿಯಿಂದ ಕೈಬಿಡುವಂತೆ ಮನವಿ ಬೆಂಗಳೂರು: ಧರ್ಮಸ್ಥಳದ ಕಾಡಿನಲ್ಲಿ ಶವಗಳನ್ನು ಹೂತ ಆರೋಪದ ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡದಿಂದ ಓರ್ವ ಐಪಿಎಸ್‌ ಅಧಿಕಾರಿಯನ್ನು ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಇನ್ನೋರ್ವ ಐಪಿಎಸ್‌ ಅಧಿಕಾರಿ ಕೂಡ ತನಿಖಾ ತಂಡದಿಂದ ತನ್ನನ್ನು ಕೈಬಿಡಲು ಮನವಿ ಮಾಡಿದ್ದಾರೆ. ತನಿಖಾ ತಂಡದಿಂದ ಕೈಬಿಡುವಂತೆ ಸಿಎಆರ್‌ ಕೇಂದ್ರಸ್ಥಾನದ ಉಪ ಪೊಲೀಸ್‌ ಆಯುಕ್ತರಾದ ಸೌಮ್ಯಲತಾ ಮನವಿ ಮಾಡಿದ್ದರು. ವೈಯಕ್ತಿಕ ಕಾರಣ ನೀಡಿ ಸೌಮ್ಯಲತಾ ಹಿಂದೆ ಸರಿದಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಎಸ್‌ಐಟಿ ಮುಖ್ಯಸ್ಥ

ಧರ್ಮಸ್ಥಳ ಪ್ರಕರಣ : ಎಸ್‌ಐಟಿಯಿಂದ ಓರ್ವ ಐಪಿಎಸ್‌ ಅಧಿಕಾರಿಯನ್ನು ಕೈಬಿಡಲು ಶಿಫಾರಸು Read More »

ಉಪ್ಪಿನಂಗಡಿ : ಸರ್ಕಾರಿ ಬಸ್‌ ಚಾಲಕ, ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ ಇಬ್ಬರು ಯುವಕರ ಬಂಧನ

ಸೈಡ್‌ ಕೊಡಲು ಹಾರ್ನ್‌ ಹಾಕಿದ್ದಕ್ಕೆ ಚಾಲಕನ ಮೇಲೆ ಹಲ್ಲೆ ಮಾಡಿದ ಯುವಕರು ಉಪ್ಪಿನಂಗಡಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ಸಿನ ಚಾಲಕ ಹಾರ್ನ್ ಹಾಕಿದ ಎಂಬ ಕಾರಣಕ್ಕೆ ಬೈಕ್ ಸವಾರರಿಬ್ಬರು ಬಸ್ಸನ್ನು ಅಡ್ಡ ಹಾಕಿ ಬಸ್ಸಿನ ಚಾಲಕನ ಮೇಲೆ ಹಲ್ಲೆ ನಡೆಸಿದ ಹಾಗೂ ಇದನ್ನು ಪ್ರಶ್ನಿಸಿದ ಪ್ರಯಾಣಿಕನ ಮೇಲೂ ಹೆಲ್ಮೆಟ್‌ನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿನತ್ತ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ಸಿನ ಚಾಲಕ ರಿಯಾಝ್

ಉಪ್ಪಿನಂಗಡಿ : ಸರ್ಕಾರಿ ಬಸ್‌ ಚಾಲಕ, ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ ಇಬ್ಬರು ಯುವಕರ ಬಂಧನ Read More »

ಕರಾವಳಿಯಲ್ಲಿ ತೀವ್ರಗೊಂಡ ಮಳೆ : ಆರು ತಾಲೂಕುಗಳಲ್ಲಿ ಪಿಯುಸಿ ತನಕ ರಜೆ ಘೋಷಣೆ

ಬಂಟ್ವಾಳ : ಕರಾವಳಿಯಲ್ಲಿ ಮಳೆ ತೀವ್ರಗೊಂಡಿದ್ದು, ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು, ಬಂಟ್ವಾಳ, ಮೂಲ್ಕಿ, ಮೂಡುಬಿದಿರೆ, ಕಡಬ, ಉಳ್ಳಾಲ ತಾಲೂಕುಗಳಲ್ಲಿ ಶಾಲಾ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜು.24ರ ಗುರುವಾರ ಬಂಟ್ವಾಳ ತಾಲೂಕಿನ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಮಂಗಳೂರು, ಬಂಟ್ವಾಳ, ಮೂಲ್ಕಿ, ಮೂಡುಬಿದಿರೆ ತಾಲೂಕುಗಳಲ್ಲಿ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ.

ಕರಾವಳಿಯಲ್ಲಿ ತೀವ್ರಗೊಂಡ ಮಳೆ : ಆರು ತಾಲೂಕುಗಳಲ್ಲಿ ಪಿಯುಸಿ ತನಕ ರಜೆ ಘೋಷಣೆ Read More »

ಶೀಘ್ರ ದರ್ಶನಕ್ಕೆ TTD ಯಿಂದ ‘ಶ್ರೀ ವಾಣಿ’ ಟಿಕೆಟ್ ವ್ಯವಸ್ಥೆ

ತಿರುಪತಿ: ಭಕ್ತರ ಕಾಯುವಿಕೆಯ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಮತ್ತು ಶೀಘ್ರ ದರ್ಶನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಟಿಟಿಡಿಯು ‘ಶ್ರೀ ವಾಣಿ’ ಹೆಸರಿನಲ್ಲಿ ಟಿಕೆಟ್ ವ್ಯವಸ್ಥೆ ಆರಂಭಿಸಿದೆ. ಶ್ರೀ ವಾಣಿ ನೂತನ ಟಿಕೆಟ್ ವಿತರಣಾ ಕೌಂಟರ್ ಅನ್ನು ದೇವಾಲಯದಲ್ಲಿ ತೆರೆಯಲಾಗಿದೆ. ಈ ಟಿಕೆಟ್ ಕೌಂಟರ್ ಅನ್ನು ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ಎಲ್ಲಾ ರೀತಿಯ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಇದು ಒಳಗೊಂಡಿದೆ. ಭಕ್ತರಿಗೆ ಸುಲಭವಾಗಿ ದರ್ಶನದ ಟಿಕೆಟ್ ವಿತರಿಸಲು ಈ ವ್ಯವಸ್ಥೆ ಕಲ್ಪಿಸಲಾಗಿದೆ. ಈ

ಶೀಘ್ರ ದರ್ಶನಕ್ಕೆ TTD ಯಿಂದ ‘ಶ್ರೀ ವಾಣಿ’ ಟಿಕೆಟ್ ವ್ಯವಸ್ಥೆ Read More »

ಲಂಡನ್ ಯೂನಿವರ್ಸಿಟಿ ಮುಂಭಾಗ ತುಳು ಧ್ವಜ ಹಿಡಿದು ತನ್ನ ಶೈಕ್ಷಣಿಕ ಸಾಧನೆ ಸಂಭ್ರಮಿಸಿದ ಪುತ್ತೂರಿನ ಗಾಯಕ್

ಪುತ್ತೂರು: ಲಂಡನ್‌ ಯೂನಿವರ್ಸಿಟಿಯಲ್ಲಿ ಕನ್ಸ್ಟ್ರಕ್ಷನ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಗಾಯಕ್ ಜಿ. ಎನ್. ಅವರು ಯೂನಿವರ್ಸಿಟಿ ಮುಂಭಾಗದಲ್ಲಿ ತುಳುನಾಡಿನ ಧ್ವಜವನ್ನು ಪ್ರದರ್ಶಿಸುವ ಮೂಲಕ ನಾಡಿಗೆ ಹಿರಿಮೆ ತಂದು ಕೊಟ್ಟಿದ್ದಾರೆ. ಗಾಯಕ್ ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಥೆಗಳಲ್ಲಿ ಹೈಸ್ಕೂಲ್, ಪಿಯುಸಿ ವಿದ್ಯಾಭ್ಯಾಸ ಮಾಡಿದ್ದು, ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿರುತ್ತಾರೆ. ಗಾಯಕ್ ಅವರು ಹಾರಾಡಿಯ ಗಣೇಶ್ ನಂದಿಲ ಮತ್ತು ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ ಅವರ ಪುತ್ರ. ಇವರ ತಮ್ಮ

ಲಂಡನ್ ಯೂನಿವರ್ಸಿಟಿ ಮುಂಭಾಗ ತುಳು ಧ್ವಜ ಹಿಡಿದು ತನ್ನ ಶೈಕ್ಷಣಿಕ ಸಾಧನೆ ಸಂಭ್ರಮಿಸಿದ ಪುತ್ತೂರಿನ ಗಾಯಕ್ Read More »

ಕಾಂಗ್ರೆಸ್‌ನಲ್ಲಿ ಕೆ. ಮುರಳೀಧರನ್ ಅವರ ಸ್ಥಾನವೇನು? ಶಶಿ ತರೂರ್ ಪ್ರಶ್ನೆ?

ತಿರುವನಂತಪುರಂ: ಶಶಿ ತರೂರ್ ಅವರನ್ನು ಕೇರಳ ರಾಜ್ಯದ ರಾಜಧಾನಿಯಲ್ಲಿ ನಡೆಯುವ ಯಾವ ಕಾರ್ಯಕ್ರಮಗಳಿಗೂ ಆಹ್ವಾನಿಸುವುದಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿರುವ ತರೂರ್ ಅವರನ್ನು ಯಾವುದೇ ಕಾರ್ಯಕ್ರಮಗಳಿಗೆ ಮುಂದಿನ ದಿನಗಳಲ್ಲಿ ಆಹ್ವಾನಿಸುವುದಿಲ್ಲ ಎಂದು ಕೇರಳ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಹೇಳಿಕೆಗೆ ತರೂರ್ ತಿರುಗೇಟು ನೀಡಿದ್ದಾರೆ. ಈ ರೀತಿಯ ಹೇಳಿಕೆಯನ್ನು ನೀಡಿದವರು ಯಾರು ಮತ್ತು ಅವರಿಗೆ ಪಕ್ಷದಲ್ಲಿ ಯಾವ ಸ್ಥಾನಮಾನ ಇದೆ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಈ ರೀತಿ ಮಾತನಾಡಲು ಅವರು ಆಧಾರ ಹೊಂದಿರಬೇಕು. ಇದನ್ನು ಹೇಳುವ

ಕಾಂಗ್ರೆಸ್‌ನಲ್ಲಿ ಕೆ. ಮುರಳೀಧರನ್ ಅವರ ಸ್ಥಾನವೇನು? ಶಶಿ ತರೂರ್ ಪ್ರಶ್ನೆ? Read More »

ಕನ್ವರ್ ‌ಯಾತ್ರಾ ಮಾರ್ಗದ ಹೊಟೇಲ್‌ಗಳಿಗೆ QR ಕೋಡ್‌‌ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ‌ನೀಡಲು ಸುಪ್ರೀಂ ನಕಾರ

ಲಕ್ನೋ: ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಕನ್ವರ್ ಯಾತ್ರಿಗಳ ಅನುಕೂಲಕ್ಕಾಗಿ ಮಾರ್ಗದಲ್ಲಿರುವ ಹೊಟೇಲ್‌ಗಳಿಗೆ ಕ್ಯೂ‌ಆರ್ ಕೋಡ್ ಕಡ್ಡಾಯ ಎಂದು ಆದೇಶ ಹೊರಡಿಸಿದ್ದು, ಇದಕ್ಕೆ ತಡೆಯಾಜ್ಞೆ ಹೊರಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪನ್ನು ನೀಡಿರುವುದಾಗಿದೆ. ಈ ಅರ್ಜಿದಾರರ ಪರ ವಕೀಲರು, ಸರ್ಕಾರದ ಈ ಆದೇಶ‌ ವ್ಯಾಪಾರಿಗಳಲ್ಲಿ ಒತ್ತಡ ಉಂಟು ಮಾಡುತ್ತಿದೆ. ಗೌಪ್ಯತೆಯ ಉಲ್ಲಂಘನೆಗೂ ಕಾರಣವಾಗುತ್ತದೆ

ಕನ್ವರ್ ‌ಯಾತ್ರಾ ಮಾರ್ಗದ ಹೊಟೇಲ್‌ಗಳಿಗೆ QR ಕೋಡ್‌‌ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ‌ನೀಡಲು ಸುಪ್ರೀಂ ನಕಾರ Read More »

error: Content is protected !!
Scroll to Top