ಧರ್ಮಸ್ಥಳ ಪ್ರಕರಣ : ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಿದ ಎಸ್‌ಐಟಿ

ಕೇಸಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದರೆ ಸಹಾಯವಾಣಿಗೆ ಕರೆ ಮಾಡಲು ಮನವಿ ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ ಆರಂಭಿಸಿದ್ದು, ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇದ್ದರೆ 0824-2005301ಕ್ಕೆ ಕರೆ ಮಾಡಿ ತಿಳಿಸುವಂತೆ ಮನವಿ ಮಾಡಿದ್ದಾರೆ. ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ತಂಡ ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಒಂದೊಂದೇ ಜಾಗಗಳನ್ನು ಅಗೆದು ಶೋಧ ನಡೆಸುತ್ತಿದೆ. ದೂರುದಾರ ಸೂಚಿಸಿದ 5 ಸ್ಪಾಟ್‌ಗಳಲ್ಲಿ ಈಗಾಗಲೇ […]

ಧರ್ಮಸ್ಥಳ ಪ್ರಕರಣ : ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಿದ ಎಸ್‌ಐಟಿ Read More »

ಧರ್ಮಸ್ಥಳ ಪ್ರಕರಣ: ನಾಲ್ಕನೇ ಪಾಯಿಂಟಿನಲ್ಲೂ ‌ಸಿಕ್ಕಿಲ್ಲ ಯಾವುದೇ ಕುರುಹು

ನಾಲ್ಕನೇ ಪಾಯಿಂಟ್‌ಗೆ ಡಾ. ಮೊಹಂತಿ ಭೇಟಿ, ಪರಿಶೀಲನೆ ಧರ್ಮಸ್ಥಳ: ನೂರಾರು ಹೆಣಗಳನ್ನು ಹೂಳಲಾಗಿದೆ ಎಂಬ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಅಧಿಕಾರಿಗಳು ನಾಲ್ಕನೇ ಪಾಯಿಂಟ್ ಬಳಿಯೂ ಕಳೇಬರಕ್ಕಾಗಿ ಹುಡುಕಾಟ ನಡೆಸಿದ್ದು, ಇದರಲ್ಲಿಯೂ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಈಗಾಗಲೇ ಮೂರು ಪಾಯಿಂಟ್‌ಗಳಲ್ಲಿ ಕಾರ್ಮಿಕರು, ಜೆಸಿಬಿ ‌ಮತ್ತು ಶ್ವಾನ ದಳದ ಮೂಲಕವೂ ಕಳೇಬರದ ಕುರುಹುಗಳಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಇದರಲ್ಲಿ ಹೂತಿಡಲಾಗಿದೆ ಎನ್ನಲಾದ ಯಾವುದೇ ಶವದ ಕುರುಹು ಸಹ ಪತ್ತೆಯಾಗಿಲ್ಲ. ಇದೀಗ ನಾಲ್ಕನೇ ಪಾಯಿಂಟ್ ಅಗೆದು

ಧರ್ಮಸ್ಥಳ ಪ್ರಕರಣ: ನಾಲ್ಕನೇ ಪಾಯಿಂಟಿನಲ್ಲೂ ‌ಸಿಕ್ಕಿಲ್ಲ ಯಾವುದೇ ಕುರುಹು Read More »

‘ಕಾಂಗ್ರೆಸ್ ಸರ್ಕಾರದ ಮೇಲೆ ಕಾಂಗ್ರೆಸಿಗರಿಗೆಯೇ ನಂಬಿಕೆ ಇಲ್ಲ’ : ವ್ಯಂಗ್ಯವಾಡಿದ ಜೆಡಿಎಸ್

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೋ ಗೊತ್ತಿಲ್ಲ ಹೊಂದಿರುವ ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಮಾತುಗಳನ್ನಿಟ್ಟುಕೊಂಡು ‌ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ವ್ಯಂಗ್ಯವಾಡಿದೆ. ಕಾಂಗ್ರೆಸ್ ಶಾಸಕರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಅದಕ್ಕೆ ನಯನಾ ಮೋಟಮ್ಮ ಅವರ ಮಾತುಗಳು ಸಾಕ್ಷಿ. ಕಾಂಗ್ರೆಸಿಗರೇ ಸಮಯ ವ್ಯರ್ಥ ಮಾಡದೆ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿ ಎಂದು ಹೇಳಿದೆ. 2028 ರ ವೇಳೆಗೆ ಕರ್ನಾಟಕ ಕಾಂಗ್ರೆಸ್ ಮುಕ್ತವಾಗಲು ಗ್ಯಾರಂಟಿಯಾಗಿ ಮುನ್ನುಡಿ ಬರೆಯುತ್ತದೆ. ಹಾಗಾಗಿ ಕಾಂಗ್ರೆಸ್ ಶಾಸಕ, ಕಾರ್ಯಕರ್ತರು ಈಗಲೇ

‘ಕಾಂಗ್ರೆಸ್ ಸರ್ಕಾರದ ಮೇಲೆ ಕಾಂಗ್ರೆಸಿಗರಿಗೆಯೇ ನಂಬಿಕೆ ಇಲ್ಲ’ : ವ್ಯಂಗ್ಯವಾಡಿದ ಜೆಡಿಎಸ್ Read More »

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ನಿಷೇಧ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾಗಿದ್ದು, ವಿಶೇಷ ಪ್ರಸಾದ ಮತ್ತು ಸರ್ವ ಸೇವೆ ಪ್ರಸಾದಕ್ಕೆ ಉಚಿತ ಬಟ್ಟೆ ಚೀಲ ನೀಡಲು ಮುಂದಾಗಿದೆ. ಇತರ ಪ್ರಸಾದಗಳ ವಿತರಣೆಗೆ ರೂ. 5 ಕ್ಕೆ ಭಕ್ತರಿಗೆ ಬಟ್ಟೆ ಚೀಲಗಳನ್ನು ಒದಗಿಸಲಾಗುತ್ತದೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಮಾಹಿತಿ ನೀಡಿದೆ. ರಾಜ್ಯದ ದೇವಾಲಯಗಳಲ್ಲಿ ಅಕ್ಟೋಬರ್ 15, 2025 ರಿಂದ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡದಂತೆ, ಪ್ಲಾಸ್ಟಿಕ್ ನಿಷೇಧಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಈ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ನಿಷೇಧ Read More »

ಕುಶಾಲನಗರ: ಲಾರಿ – ಸ್ಕೂಟಿ ಢಿಕ್ಕಿಯಾಗಿ ಸವಾರ ಸಾವು

ಮಡಿಕೇರಿ: ಲಾರಿ ಮತ್ತು ಬೈಕ್ ನಡುವೆ ಕುಶಾಲನಗರದ ಶಿರಂಗಾಲ ಶ್ರೀ ಮಂಟಿಗಮ್ಮ ದೇವಾಲಯದ ಸಮೀಪ ಭೀಕರ ಅಪಘಾತ ನಡೆದಿದ್ದು, ಸ್ಕೂಟಿ ಸವಾರ ಮೃತಪಟ್ಟಿರುವುದಾಗಿ ವರದಿಯಾಗಿದೆ. ಚಾಮರಾಯನಕೋಟೆ ನಿವಾಸಿ ಅಶೋಕ್(36) ಮೃತ ದುರ್ದೈವಿ. ಲಾರಿ ಕೊಣನೂರು ‌ಕಡೆಯಿಂದ ಕುಶಾಲನಗರದತ್ತ ಬರುತ್ತಿದ್ದು, ಶಿರಂಗಾಲದಿಂದ ಕೊಣನೂರು ಕಡೆಗೆ ಸ್ಕೂಟಿ ಮೂಲಕ ಅಶೋಕ್ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಉಭಯ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಅಶೋಕ್ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು

ಕುಶಾಲನಗರ: ಲಾರಿ – ಸ್ಕೂಟಿ ಢಿಕ್ಕಿಯಾಗಿ ಸವಾರ ಸಾವು Read More »

ಕೆಂಪು ಕಲ್ಲು, ಮರಳು ಸಮಸ್ಯೆ: ಪರಿಹರಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ‌ ಸಲ್ಲಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಹಾಗೂ ಮರಳಿನ ಸಮಸ್ಯೆಯು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ಸಂಬಂಧ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಕೆಂಪುಕಲ್ಲು ಮತ್ತು ಮರಳು ಸಮಸ್ಯೆಗೆ ಆದಷ್ಟು ಬೇಗ ಅಂತ್ಯ ಹಾಡುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ಶಾಸಕ ಮಿತ್ರರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದರು. ಸಿ ಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಕರಾವಳಿ ಭಾಗದ ಜನರ ಈ

ಕೆಂಪು ಕಲ್ಲು, ಮರಳು ಸಮಸ್ಯೆ: ಪರಿಹರಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ‌ ಸಲ್ಲಿಕೆ Read More »

ಅಕ್ಷಯ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ “ಅನ್ವೇಷಣಾ -2” ಪ್ರತಿಭಾನ್ವೇಷಣ ಕಾರ್ಯಕ್ರಮ

ಪುತ್ತೂರು: ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಅಧೀನದಲ್ಲಿ ಕಾರ್ಯಾಚಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಲಲಿತ ಕಲಾ ಸಂಘ ಮತ್ತು ಐಕ್ಯೂ ಎಸಿ ಸಹಭಾಗಿತ್ವದಲ್ಲಿ “ಅನ್ವೇಷಣಾ 2” ಇದರ ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ಇಂತಹ ಕಾರ್ಯಕ್ರಮಗಳು ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹಾರೈಸಿದರು. ಅಧ್ಯಕ್ಷೀಯ ನೆಲೆಯಲ್ಲಿ

ಅಕ್ಷಯ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ “ಅನ್ವೇಷಣಾ -2” ಪ್ರತಿಭಾನ್ವೇಷಣ ಕಾರ್ಯಕ್ರಮ Read More »

ಧರ್ಮಸ್ಥಳ ಪ್ರಕರಣ: ಗುರುತಿಸಿದ ಎರಡು, ಮೂರನೇ ಸ್ಥಳದಲ್ಲೂ ಸಿಗದ ಕಳೇಬರದ ಕುರುಹು?

ಧರ್ಮಸ್ಥಳ: ನೂರಾರು ಹೆಣಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದೂರುದಾರ ಗುರುತಿಸಿದ್ದ ಪ್ರದೇಶದಲ್ಲಿ SIT ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಇಲ್ಲಿಯೂ ಯಾವುದೇ ಕಳೇಬರದ ‌ಕುರುಹು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಅಧಿಕಾರಿಗಳು ಗುರುತು ಮಾಡಲ್ಪಟ್ಟ ಮೂರನೇ ಸ್ಥಳದಲ್ಲಿಯೂ ಕಳೇಬರದ ಅವಶೇಷಗಳಿವೆಯೇ ಎಂದು ತಿಳಿಯಲು ಕಾರ್ಯಾಚರಣೆ ಆರಂಭಿಸಿದ್ದು ಇದರಲ್ಲಿಯೂ ಈ ವರೆಗೆ ಯಾವ ಅವಶೇಷವೂ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಕಾರ್ಯಾಚರಣೆ ಇನ್ನೂ ಚಾಲ್ತಿಯಲ್ಲಿರುವುದಾಗಿ ತಿಳಿದು ಬಂದಿದೆ. ನಿನ್ನೆ ಒಂದನೇ ಗುರುತಿನಲ್ಲಿ ಉತ್ಖನನ ನಡೆಸಿದ್ದು, ಅದರಲ್ಲಿಯೂ ಯಾವುದೇ ಶವದ

ಧರ್ಮಸ್ಥಳ ಪ್ರಕರಣ: ಗುರುತಿಸಿದ ಎರಡು, ಮೂರನೇ ಸ್ಥಳದಲ್ಲೂ ಸಿಗದ ಕಳೇಬರದ ಕುರುಹು? Read More »

ಔಷಧ ಎಂದು ತಿಳಿದು ಇಲಿಪಾಷಾಣ ಸೇವನೆ: ಹೆಡ್‌ಕಾನ್ಸ್ಟೆಬಲ್ ‌ಸಾವು

ಮಂಗಳೂರು: ಇಲಿಪಾಷಾಣವನ್ನು ಔಷಧ ಎಂದು ಭಾವಿಸಿ ಸೇವಿಸಿದ ಹೆಡ್‌ಕಾನ್ಸ್ಟೆಬಲ್ ಒಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುರತ್ಕಲ್ ಬಳಿಯ ಚೆಲ್ಯಾರು ‌ನಿವಾಸಿ ಹರೇಕಳ ಮೂಲದ ಮಂಜುನಾಥ್ ಹೆಗ್ಡೆ(44) ಎಂಬವರೇ ‌ಮೃತ ದುರ್ದೈವಿ. ಅನಾರೋಗ್ಯದ ಹಿನ್ನೆಲೆಯಲ್ಲಿ ಆಯುರ್ವೇದಿಕ್ ಔಷಧಿ ಮಾಡುತ್ತಿದ್ದರು. ಇಲಿಪಾಷಾಣವನ್ನು ಔಷಧ ಎಂದು ತಪ್ಪಾಗಿ ತಿಳಿದು ಸೇವಿಸಿದ ಪರಿಣಾಮ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಗಂಭೀರವಾಗಿ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಚಿದ್ದಾರೆ. ಮೃತರು ಪತ್ನಿ

ಔಷಧ ಎಂದು ತಿಳಿದು ಇಲಿಪಾಷಾಣ ಸೇವನೆ: ಹೆಡ್‌ಕಾನ್ಸ್ಟೆಬಲ್ ‌ಸಾವು Read More »

ಉಗ್ರ ಸಂಘಟನೆ ಅಲ್ ಖೈದಾ ಜೊತೆ ನಂಟು: ಮಹಿಳೆಯ ಬಂಧನ

ಬೆಂಗಳೂರು: ಉಗ್ರ ಸಂಘಟನೆ ಅಲ್‌ ಖೈದಾ ಜೊತೆಗೆ ನಂಟು ಹೊಂದಿದ್ದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಗುಜರಾತ್ ಪೊಲೀಸ್ ಭಯೋತ್ಪಾದನ ನಿಗ್ರಹ ದಳ ಬಂಧಿಸಿದೆ. ಆರೋಪಿಯನ್ನು ಜಾರ್ಖಂಡ್ ಮೂಲದ ಶಮಾ ಪರ್ವೀನ್(30) ಎಂದು ಗುರುತಿಸಲಾಗಿದೆ. ಈಕೆ ಹೆಬ್ಬಾಳದ ಮನೋರಾಯಪಾಳ್ಯದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು. ಈಕೆ ಭಯೋತ್ಪಾದನೆ ಕಡೆಗೆ ಯುವ ಜನರನ್ನು ಸೆಳೆಯುವುದಕ್ಕಾಗಿ ‌ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಪೋಸ್ಟ್ ಗಳನ್ನು ಬಿತ್ತರಿಸುವ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಉಗ್ರ ಸಂಘಟನೆ ಅಲ್ ಖೈದಾ ಜೊತೆ ನಂಟು: ಮಹಿಳೆಯ ಬಂಧನ Read More »

error: Content is protected !!
Scroll to Top