ಸಿಂಧೂ ಒಪ್ಪಂದ ಮುರಿಯುವ ಮೂಲಕ ನೆಹರೂ ನೀತಿಗಳ ತಪ್ಪನ್ನು ತಿದ್ದಲಾಗಿದೆ: ಎಸ್. ಜೈಶಂಕರ್

ನವದೆಹಲಿ: ಆಪರೇಷನ್ ಸಿಂಧೂರ್‌ಗೆ ‌ಸಂಬಂಧಿಸಿದ ಹಾಗೆ ಕೇಂದ್ರ ಸಚಿವ ಎಸ್. ಜೈಶಂಕರ್ ಅವರು ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಭಾರತ 1947 ರಿಂದಲೂ ಎದುರಿಸುತ್ತಲೇ ಬಂದಿದೆ. ಪ್ರಸ್ತುತ ಪ್ರಧಾನಿ ಮೋದಿ ಸರ್ಕಾರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತ ಮಾಡುವ ಮೂಲಕ ನೆಹರೂ ಅವರ ತಪ್ಪನ್ನು ಸರಿ ಮಾಡಿದ್ದಾರೆ. ಅಂದು ಪ್ರಧಾನಿ ನೆಹರೂ ಪಾಕ್ ಜೊತೆ ಒಪ್ಪಂದ ಮಾಡಿಕೊಂಡದ್ದು ತುಷ್ಠೀಕರಣಕ್ಕಾಗಿ, ಶಾಂತಿಗಾಗಿ ಅಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ಸಿಂಧೂ ಜಲ ಒಪ್ಪಂದವೇ ಒಂದು ವಿಶಿಷ್ಟ ಒಪ್ಪಂದ. ಒಂದು ದೇಶದ […]

ಸಿಂಧೂ ಒಪ್ಪಂದ ಮುರಿಯುವ ಮೂಲಕ ನೆಹರೂ ನೀತಿಗಳ ತಪ್ಪನ್ನು ತಿದ್ದಲಾಗಿದೆ: ಎಸ್. ಜೈಶಂಕರ್ Read More »

ಪಾಕಿಸ್ತಾನ ಗುಂಡು ಹೊಡೆಯಿತು, ನಾವು ಬಿರಿಯಾನಿ ಕೊಟ್ಟೆವು: ಕಾಂಗ್ರೆಸ್ ವಿರುದ್ಧ ನಡ್ಡಾ ವ್ಯಂಗ್ಯ

ನವದೆಹಲಿ: ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭಯೋತ್ಪಾದಕ ದಾಳಿಗಳ ಮೇಲೆ ನಿರಂತರ ನಿಷ್ಕ್ರಿಯತೆ ಹೊಂದಿತ್ತು ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ. ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತಂತೆ ಮಾತನಾಡಿದ ಅವರು, ಪಾಕ್ ಪದೇ ಪದೇ ಭಯೋತ್ಪಾದಕ ದಾಳಿಗಳನ್ನು ನಡೆಸಿತು. ಆದರೆ ಕಾಂಗ್ರೆಸ್ ಅವರಿಗೆ ವಿಶ್ವಾಸ ವೃದ್ಧಿಸುವ ಕೆಲಸಗಳನ್ನು ಮಾಡಿತು. ಪಾಕ್ ನಮ್ಮ ಮೇಲೆ ಬಾಂಬ್‌ಗಳನ್ನು ಹಾಕುತ್ತಿದ್ದರೆ, ಕಾಂಗ್ರೆಸ್ ಪಾಕಿಸ್ತಾನಕ್ಕೆ ಬಿರಿಯಾನಿ ‌ತಿನ್ನಿಸುವ ಕೆಲಸದಲ್ಲಿ ತೊಡಗಿತ್ತು ಎಂದು ವ್ಯಂಗ್ಯವಾಡಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ 2008 ರಲ್ಲಿ ನಡೆಸಿದ

ಪಾಕಿಸ್ತಾನ ಗುಂಡು ಹೊಡೆಯಿತು, ನಾವು ಬಿರಿಯಾನಿ ಕೊಟ್ಟೆವು: ಕಾಂಗ್ರೆಸ್ ವಿರುದ್ಧ ನಡ್ಡಾ ವ್ಯಂಗ್ಯ Read More »

ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣ : ಬಿಜೆಪಿ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್‌ ದೋಷಮುಕ್ತಿ

17 ವರ್ಷದ ಬಳಿಕ ಎಲ್ಲ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ ಮುಂಬೈ: ನಾಸಿಕ್‌ ಸಮೀಪ ಮಾಲೇಗಾಂವ್‌ನಲ್ಲಿ 2008ರಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಸೇರಿ 7 ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತಿಗೊಳಿಸಿದೆ.ಪ್ರಕರಣ ಸಂಭವಿಸಿದ 17 ವರ್ಷಗಳ ಬಳಿಕ ತೀರ್ಪು ನೀಡುವ ಸಂದರ್ಭದಲ್ಲಿ ಎನ್‍ಐಎ ವಿಶೇಷ ಕೋರ್ಟ್ ಈ ಪ್ರಕರಣದ ತನಿಖೆಯೇ ಸರಿಯಾಗಿ ನಡೆದಿಲ್ಲ ಎಂದು ಅಭಿಪ್ರಾಯಪಟ್ಟು ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಏಪ್ರಿಲ್ 19ರಂದು ಪ್ರಕರಣದ ವಿಚಾರಣೆ ಮುಗಿಸಿದ್ದ ಕೋರ್ಟ್ ಮೇ

ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣ : ಬಿಜೆಪಿ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್‌ ದೋಷಮುಕ್ತಿ Read More »

ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ದೇಶ ವಿರೋಧಿ ಗೋಡೆ ಬರಹ

ಬೆಂಗಳೂರು: ನಗರದ ಕೊಡಿಗೇಹಳ್ಳಿಯ ಅಲ್ಫೈನ್ ಫಿರಮಿಡ್ ಅಪಾರ್ಟ್‌ಮೆಂಟ್‌ನಲ್ಲಿ ‘ಪಾಕಿಸ್ತಾನದಿಂದಲೇ ಇಡೀ ಭಾರತವನ್ನು ನಾನು ಬ್ಲಾಸ್ಟ್ ಮಾಡುತ್ತೇನೆ’ ಎಂಬ ದೇಶ ವಿರೋಧಿ ಘೋಷಣೆ ಕಾಣಿಸಿಕೊಂಡಿದ್ದು, ಇದು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಈ ಅಪಾರ್ಟ್‌ಮೆಂಟ್‌ನಲ್ಲಿ 200 ರಿಂದ 300 ಮನೆಗಳಿವೆ. ಈ ಗೋಡೆ ಬರಹ ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಶ್ವಾನ ದಳದ ಜೊತೆಗೆ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅಪಾಯಕಾರಿಯಾಗಿರುವ ಯಾವುದೇ ವಸ್ತುಗಳು ಲಭ್ಯವಾಗಿಲ್ಲ ಎಂಬ

ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ದೇಶ ವಿರೋಧಿ ಗೋಡೆ ಬರಹ Read More »

ಕಾಂಗ್ರೆಸ್‌ಗೆ ದೇಶದ ಭದ್ರತೆ ಮುಖ್ಯವಲ್ಲ, ಓಟ್‌ಬ್ಯಾಂಕ್ ಓಲೈಕೆ ಮುಖ್ಯ: ಅಮಿತ್ ಶಾ ವಾಗ್ದಾಳಿ

ನವದೆಹಲಿ: ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ್ ಮತ್ತು ಆಪರೇಷನ್ ಮಹಾದೇವ್‌ಗೆ ಸಂಬಂಧಿಸಿದ ಹಾಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಾಕ್ ಆಕ್ರಮಿತ ಕಾಶ್ಮೀರವನ್ನು ನೀವು ಬಿಟ್ಟು ಕೊಟ್ಟಿದ್ದೀರಿ. ಆದರೆ ನಾವದನ್ನು ಮರಳಿ ಪಡೆಯುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಹಿಂದೆ ಯುದ್ಧಗಳನ್ನು ಮಾಡುವಾಗ ಛತ್ರಪತಿ ಶಿವಾಜಿ ಮಹಾರಾಜರು ‘ಹರ ಹರ ಮಹಾದೇವ್’ ಎಂದು ಘೋಷಣೆ ಕೂಗುತ್ತಿದ್ದರು. ಸೈನಿಕರಲ್ಲಿ ಈ ಶಬ್ದ ಉತ್ಸಾಹ ತುಂಬುತ್ತಿತ್ತು. ಇದನ್ನು

ಕಾಂಗ್ರೆಸ್‌ಗೆ ದೇಶದ ಭದ್ರತೆ ಮುಖ್ಯವಲ್ಲ, ಓಟ್‌ಬ್ಯಾಂಕ್ ಓಲೈಕೆ ಮುಖ್ಯ: ಅಮಿತ್ ಶಾ ವಾಗ್ದಾಳಿ Read More »

ಕಾಫಿರ್​ಗಳ ಮೇಲೆ ದಾಳಿ, ಸರ್ಕಾರ ಉರುಳಿಸಲು ಸಶಸ್ತ್ರ ದಂಗೆ : ಭಯಾನಕವಾಗಿದೆ ಲೇಡಿ ಟೆರರಿಸ್ಟ್‌ ಚಟುವಟಿಕೆ

ಆನ್‌ಲೈನ್‌ ಮೂಲಕ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದ ಶಮಾ ಪರ್ವೀನ್‌ ಅನ್ಸಾರಿ ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ಸೆರೆಯಾಗಿರುವ ಲೇಡಿ ಟೆರರಿಸ್ಟ್‌ ಶಮಾ ಪರ್ವೀನ್ ಅನ್ಸಾರಿ ಅಲ್‌ಖೈದಾ ಸಂಘಟನೆಯ ಸಿದ್ಧಾಂತ ಪ್ರಚಾರಕಳಾಗಿದ್ದಳು. ಕಾಫಿರರನ್ನು ಕೊಲ್ಲುವುದು, ಸರ್ಕಾರ ಉರುಳಿಸಲು ಸಶಸ್ತ್ರ ದಂಗೆ ಎಬ್ಬಿಸುವುದು, ಕೋಮು ಗಲಭೆ ಸೃಷ್ಟಿಸಿ ಅಶಾಂತಿ ಉಂಟು ಮಾಡುವುದು ಮುಂತಾದ ಕೆಲಸಗಳನ್ನು ಮಾಡಲು ಆಕೆಯನ್ನು ನೇಮಿಸಿಕೊಳ್ಳಲಾಗಿತ್ತು ಎಂಬ ಭಯಾನಕ ವಿಚಾರ ಹೊರಬಿದ್ದಿದೆ. ಅಲ್ ಖೈದಾ ಉಗ್ರ ಸಂಘಟನೆ ಪರ ಬೆಂಗಳೂರಿನಿಂದ ಜಿಹಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಶಮಾ ಪರ್ವೀನ್

ಕಾಫಿರ್​ಗಳ ಮೇಲೆ ದಾಳಿ, ಸರ್ಕಾರ ಉರುಳಿಸಲು ಸಶಸ್ತ್ರ ದಂಗೆ : ಭಯಾನಕವಾಗಿದೆ ಲೇಡಿ ಟೆರರಿಸ್ಟ್‌ ಚಟುವಟಿಕೆ Read More »

ಧರ್ಮಸ್ಥಳ ಪ್ರಕರಣ : ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಜಟಾಪಟಿ

ಎಸ್‌ಐಟಿ, ಸರ್ಕಾರ ನಿಗೂಢ ಮೌನ; ಬಿಜೆಪಿಯಿಂದ ತೀವ್ರ ಆಕ್ಷೇಪ ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪದ ಬಗ್ಗೆ ಎಸ್‌ಐಟಿ ತನಿಖೆ ತೀವ್ರಗೊಳ್ಳುತ್ತಿರುವಂತೆಯೇ ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಪರ ಮತ್ತು ವಿರೋಧ ಚರ್ಚೆಯೂ ತೀವ್ರಗೊಂಡಿದೆ. ತನಿಖೆ ನಡೆಸುತ್ತಿರುವ ಎಸ್‌ಐಟಿ ಆಗಲಿ ಅಥವಾ ಸರ್ಕಾರವಾಗಲಿ ಪ್ರಕರಣದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಇಷ್ಟರ ತನಕ ನೀಡಿಲ್ಲ. ಆದರೆ ಸೋಷಿಯಲ್‌ ಮೀಡಿಯಾ ಮತ್ತು ಕೆಲವು ಸುದ್ದಿ ವಾಹಿನಿಗಳಲ್ಲಿ ಈ ಬಗ್ಗೆ ನಾನಾ ರೀತಿಯ ಸುದ್ದಿಗಳನ್ನು, ಚರ್ಚೆಗಳನ್ನು ಮತ್ತು ವೀಡಿಯೊಗಳನ್ನು

ಧರ್ಮಸ್ಥಳ ಪ್ರಕರಣ : ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಜಟಾಪಟಿ Read More »

ಪುತ್ತೂರು: ಪೋಕ್ಸೋ ಕೇಸ್‌ ಅಪರಾಧಿಗೆ ಕಠಿಣ ಜೈಲು ಶಿಕ್ಷೆ, ದಂಡ

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ರಿಯಲ್ಲಿ 7 ವರ್ಷದ ಹಿಂದೆ ನಡೆದಿದ್ದ ಪ್ರಕರಣ ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಏಳು ವರ್ಷಗಳ ಹಿಂದೆ ದಾಖಲಾಗಿದ್ದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಮೈಂದನಡ್ಕ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗದಗ ಜಿಲ್ಲೆಯ ರೋಣ ತಾಲೂಕಿನ ಅಪರಾಧಿ ಪೀರೇಶ್ ಪೀರಪ್ಪ ಸಂಗಪ್ಪ ಮಾಲೋತ್ತರ ಎಂಬಾತನಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ. 2007ರ ಅಗಸ್ಟ್ ತಿಂಗಳಲ್ಲಿ

ಪುತ್ತೂರು: ಪೋಕ್ಸೋ ಕೇಸ್‌ ಅಪರಾಧಿಗೆ ಕಠಿಣ ಜೈಲು ಶಿಕ್ಷೆ, ದಂಡ Read More »

ವಿಮಾನ ನಿಲ್ದಾಣದಲ್ಲಿ ಮಹಿಳೆಯಿಂದ 40 ಕೆಜಿ ಡ್ರಗ್ಸ್‌ ವಶ

ಎರಡು ಬ್ಯಾಗ್‌ಗಳಲ್ಲಿ ಅಡಗಿಸಿಟ್ಟು 14 ಕೋಟಿ ರೂ. ಮೌಲ್ಯದ ಡ್ರಗ್ಸ್‌ ತಂದಿದ್ದ ಮಹಿಳೆ ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಮಹಿಳೆಯೊಬ್ಬಳ ಲಗೇಜ್‌ನಿಂದ 14 ಕೋಟಿ ರೂ. ಮೌಲ್ಯದ 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಎನ್‌ಸಿಬಿ ವಶಪಡಿಸಿಕೊಂಡು ಮಹಿಳೆಯನ್ನು ಬಂಧಿಸಿದೆ. ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಎನ್‌ಸಿಬಿ ಅಧಿಕಾರಿಗಳು ಮಹಿಳೆಯ ಎರಡು ಬ್ಯಾಗ್‌ಗಳಿಂದ 40 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬ್ಯಾಂಕಾಕ್‌ನಿಂದ ನೇರವಾಗಿ ವಿವಿಧ ಭಾರತೀಯ ವಿಮಾನ ನಿಲ್ದಾಣಗಳಿಗೆ ಬರುವ ಪ್ರಯಾಣಿಕರಿಂದ ಹೈಡ್ರೋಪೋನಿಕ್ ಗಾಂಜಾವನ್ನು

ವಿಮಾನ ನಿಲ್ದಾಣದಲ್ಲಿ ಮಹಿಳೆಯಿಂದ 40 ಕೆಜಿ ಡ್ರಗ್ಸ್‌ ವಶ Read More »

ಆ.5ರಿಂದ ಕೆಎಸ್‌ಆರ್‌ಟಿಸಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸಹಿತ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹ ಬೆಂಗಳೂರು : ಸುಮಾರು 38 ತಿಂಗಳ ಹಿಂಬಾಕಿ, ಹೊಸ ವೇತನ ಪರಿಷ್ಕರಣೆ, 2021ರ ಮುಷ್ಕರದ ವೇಳೆ ವಜಾ ಮಾಡಲಾದ ನೌಕರರ ಮರು ನೇಮಕಾತಿಗೆ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. ಆಗಸ್ಟ್ 5ರಿಂದ ನಾಲ್ಕು ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ನಿರ್ಧಾರ ಮಾಡಿದ್ದು, ಈಗಾಗಲೇ ಮುಖ್ಯಮಂತ್ರಿ ಹಾಗೂ ನಾಲ್ಕು ನಿಗಮದ ಎಂಡಿಗಳಿಗೆ ನೊಟೀಸ್ ನೀಡಿದ್ದಾರೆ. ಸಾರಿಗೆ

ಆ.5ರಿಂದ ಕೆಎಸ್‌ಆರ್‌ಟಿಸಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ Read More »

error: Content is protected !!
Scroll to Top