ರ್ಯಾಗಿಂಗ್: ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ
ಬಾಗಲಕೋಟೆ: ಜೊತೆಯಲ್ಲಿ ಓದುವ ವಿದ್ಯಾರ್ಥಿಗಳ ರ್ಯಾಗಿಂಗ್‌ಗೆ ಬೇಸತ್ತ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಗುಳೇದಗುಡ್ಡದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಅಂತಿಮ ಬಿ.ಎ. ವಿದ್ಯಾರ್ಥಿನಿ ಅಂಜಲಿ ಮುಂಡಾಲಸ(21) ಎಂದು ಗುರುತಿಸಲಾಗಿದೆ. ಅಂಜಲಿಗೆ ಶುಕ್ರವಾರ ಸಹಪಾಠಿಗಳು ರ್ಯಾಗಿಂಗ್ ಮಾಡಿದ್ದರು. ಈ ವಿಷಯದಿಂದ ಅಂಜಲಿ ಬಹಳಷ್ಟು ನೊಂದಿದ್ದರು. ಮಾನಸಿಕ ಕಿರುಕುಳ ಅನುಭವಿಲಿದ್ದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗುಳೇದಗುಡ್ಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರ್ಯಾಗಿಂಗ್: ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ Read More »










