ಆಯುಷ್ಮಾನ್‌ ಯೋಜನೆ ಜಾರಿ ಮಾಡದ ಕರ್ನಾಟಕ ಸರ್ಕಾರ : ಸದನದಲ್ಲಿ ಕ್ಯಾ.ಬ್ರಿಜೇಶ್‌ ಚೌಟ ಪ್ರಸ್ತಾವ

70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಗೆ ತನ್ನ ಪಾಲು ಕೊಡದ ರಾಜ್ಯ ಸರ್ಕಾರ ಮಂಗಳೂರು: 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಆಯುಷ್ಮಾನ್‌ ಯೋಜನೆಗೆ ಕರ್ನಾಟಕ ಸರ್ಕಾರ ತನ್ನ ಪಾಲು ನೀಡದ ಕಾರಣ ಯೋಜನೆ ಅನುಷ್ಠಾನ ಸ್ಥಗಿತಗೊಂಡಿರುವ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಸಂಸತ್ತಿನಲ್ಲಿ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ದೇಶಾದ್ಯಂತ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ […]

ಆಯುಷ್ಮಾನ್‌ ಯೋಜನೆ ಜಾರಿ ಮಾಡದ ಕರ್ನಾಟಕ ಸರ್ಕಾರ : ಸದನದಲ್ಲಿ ಕ್ಯಾ.ಬ್ರಿಜೇಶ್‌ ಚೌಟ ಪ್ರಸ್ತಾವ Read More »

ಮನೆಯ ಸುತ್ತ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ : ರಕ್ಷಣೆ ಕೋರಿ ಸಂತ್ರಸ್ತ ಯುವತಿಯಿಂದ ಐಜಿಪಿಗೆ ಮನವಿ

ಯಾರೋ ಗೇಟ್‌ ಬಡಿದಂತೆ, ಟೆರೇಸ್‌ ಮೇಲೆ ಹತ್ತಿ ಹೋದಂತಾಗುತ್ತದೆ ಎಂದು ದೂರು ಪುತ್ತೂರು : ಪುತ್ತೂರಿನ ಬಿಜೆಪಿ ನಾಯಕ ಪಿ.ಜಿ.ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ. ರಾವ್ ಅವರಿಂದ ಅತ್ಯಾಚಾರ ಮತ್ತು ವಂಚನೆಗೊಳಗಾಗಿ ತಾಯಿಯಾಗಿರುವ ವಿದ್ಯಾರ್ಥಿನಿ ತನಗೆ ಮತ್ತು ನವಜಾತ ಶಿಶುವಿಗೆ ಬೆದರಿಕೆ ಇದೆ ಎಂದು ಪೊಲೀಸ್ ರಕ್ಷಣೆ ಕೋರಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರನ್ನು ಭೇಟಿ ಮಾಡಿ ಮಾನವಿ ನೀಡಿದ್ದಾರೆ. ಸೋಮವಾರ ಸಂತ್ರಸ್ತೆ ಮಂಗಳೂರಿನಲ್ಲಿರುವ ಪಶ್ಚಿಮ ವಲಯ ಐಜಿಪಿ ಕಚೇರಿಗೆ ಭೇಟಿ

ಮನೆಯ ಸುತ್ತ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ : ರಕ್ಷಣೆ ಕೋರಿ ಸಂತ್ರಸ್ತ ಯುವತಿಯಿಂದ ಐಜಿಪಿಗೆ ಮನವಿ Read More »

ಧರ್ಮಸ್ಥಳ ಪ್ರಕರಣ : ಮಾನವ ಹಕ್ಕು ಆಯೋಗದಿಂದಲೂ ತನಿಖೆ

ಐಪಿಎಸ್‌ ಅಧಿಕಾರಿಯನ್ನೊಳಗೊಂಡಿರುವ ತಂಡದಿಂದ ವಿವಿಧೆಡೆ ತೆರಳಿ ಮಾಹಿತಿ ಸಂಗ್ರಹ ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನಿಖೆ ಆರಂಭಿಸಿದೆ. ಧರ್ಮಸ್ಥಳ ಗ್ರಾಮ ಪಂಚಾಯತ್‌ಗೆ ಆಯೋಗದ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಬೀಡುಬಿಟ್ಟ ನಾಲ್ವರು ಅಧಿಕಾರಿಗಳ ತಂಡದಲ್ಲಿ ಓರ್ವ ಐಪಿಎಸ್ ಅಧಿಕಾರಿ ಇದ್ದಾರೆ. ವಿವಿಧ ಆಯಾಮಗಳಲ್ಲಿ ದಾಖಲೆ ಮತ್ತು ಮಾಹಿತಿಗಳ ಸಂಗ್ರಹ ಮಾಡುತ್ತಿರುವ ತಂಡ ಪಂಚಾಯತ್‌ನಿಂದ ದಾಖಲೆಗಳನ್ನು ಕೇಳಿ ಪರಿಶೀಲನೆ ನಡೆಸುತ್ತಿದೆ. ಮುಂದಿನ

ಧರ್ಮಸ್ಥಳ ಪ್ರಕರಣ : ಮಾನವ ಹಕ್ಕು ಆಯೋಗದಿಂದಲೂ ತನಿಖೆ Read More »

ರಾಜಣ್ಣ ತಲೆದಂಡಕ್ಕೆ ಕಾರಣವಾದರೂ ಏನು?

ಮಂತ್ರಿ ಸ್ಥಾನ ಕಿತ್ತುಕೊಂಡ ಕ್ರಮದ ಹಿಂದೆ ದೊಡ್ಡದೊಂದು ಪಿತೂರಿ ಇದೆಯೇ? ಬೆಂಗಳೂರು: ಕಾಂಗ್ರೆಸ್‌ನೊಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ನೋಡ್ತಾ ಇರಿ ಎಂದಿದ್ದ ಕೆ.ಎನ್.ರಾಜಣ್ಣ ಅವರನ್ನು ಆಗಸ್ಟ್‌ನಲ್ಲೇ ಸಂಪುಟದಿಂದ ಕಿತ್ತು ಹಾಕಲಾಗಿದೆ. ಸದಾ ಪಕ್ಷದ ತಪ್ಪುಗಳ ಬಗ್ಗೆ ನೇರವಾಗಿ ಮಾತನಾಡುತ್ತಿದ್ದ ಹಿರಿಯ ನಾಯಕನ ತಲೆದಂಡವನ್ನು ಕಾಂಗ್ರೆಸ್‌ ಹೈಕಮಾಂಡ್‌ ಪಡೆದುಕೊಂಡಿದೆ. ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಕಾಂಗ್ರೆಸ್‌ ಕೈಗೊಂಡ ಈ ನಿರ್ಧಾರ ಪ್ರತಿಪಕ್ಷಗಳಿಗೆ ಸರ್ಕಾರವನ್ನು ಟೀಕಿಸಲು ಬಲವಾದ ಅಸ್ತ್ರವಾಗಿ ಸಿಕ್ಕಿದೆ. ಕಾಂಗ್ರೆಸ್‌ನಲ್ಲಿ ಸತ್ಯವಂತರಿಗೆ ಉಳಿಗಾಲವಿಲ್ಲ ಎಂಬ ಸಂದೇಶವನ್ನು ರವಾನಿಸುವಲ್ಲಿ ವಿಪಕ್ಷ ಯಶಸ್ವಿಯಾಗಿದೆ. ರಾಷ್ಟ್ರಮಟ್ಟದಲ್ಲೂ

ರಾಜಣ್ಣ ತಲೆದಂಡಕ್ಕೆ ಕಾರಣವಾದರೂ ಏನು? Read More »

ಧರ್ಮಸ್ಥಳ ಪ್ರಕರಣದ ತನಿಖೆ ಬಳಿಕ ವಾಸ್ತವಾಂಶ ತಿಳಿಯುತ್ತದೆ: ಡಾ. ಜಿ. ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ SIT ತನಿಖೆ ನಡೆಸುತ್ತಿದ್ದು, ಅದು ಪೂರ್ಣವಾಗುವ ವರೆಗೆ ತಾನು ಈ ಸಂಬಂಧ ಮಾತನಾಡುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಈ ಬಗ್ಗೆ ಹಲವರು ಸಾಕಷ್ಟು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ನನ್ನ ಗಮನಕ್ಕೂ ಬಂದಿದೆ. ಆದರೆ ತನಿಖೆ ಮುಗಿಯುವ ವರೆಗೆ ಈ ಬಗ್ಗೆ ಮಾತನಾಡುವುದು ಸಮಂಜಸವಲ್ಲ. ತನಿಖೆಯ ಬಳಿಕ ವಾಸ್ತವಾಂಶ ಬೆಳಕಿಗೆ ಬರಲಿದೆ ಎಂದಿದ್ದಾರೆ. ಈ ಬಗ್ಗೆ ಸದನದಲ್ಲಿ ಪ್ರಶ್ನೆಗಳು ಬಂದರೆ ಉತ್ತರ ನೀಡಲಾಗುವುದು ಎಂದು ಅವರು ನುಡಿದಿದ್ದಾರೆ.

ಧರ್ಮಸ್ಥಳ ಪ್ರಕರಣದ ತನಿಖೆ ಬಳಿಕ ವಾಸ್ತವಾಂಶ ತಿಳಿಯುತ್ತದೆ: ಡಾ. ಜಿ. ಪರಮೇಶ್ವರ್ Read More »

ಧರ್ಮಸ್ಥಳ ಪ್ರಕರಣ: 13 ನೇ ಪಾಯಿಂಟ್ ಶೋಧನೆಗೆ ಡ್ರೋಣ್ ಜಿಪಿಆರ್ ಬಲ

ಧರ್ಮಸ್ಥಳ: ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಈಗಾಗಲೇ ಮುಸುಕುಧಾರಿ ‌ದೂರುದಾರ ಗುರುತಿಸಿದ 13 ನೇ ಪಾಯಿಂಟ್ ಉತ್ಖನನಕ್ಕೆ ಡ್ರೋಣ್- ಮೌಂಟೆಡ್ GPR ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ಆರಂಭ ಮಾಡಲಾಗಿದೆ. ಸಾಮಾನ್ಯ GPR ಆ್ಯಂಟೆನಾ‌ವನ್ನು ಡ್ರೋಣ್ ಕೆಳಭಾಗದಲ್ಲಿ ಅಳವಡಿಕೆ ಮಾಡುವ ಮೂಲಕ ಭೂಮಿಯೊಳಗೆ ಸಿಗ್ನಲ್ ರವಾನೆ ಮಾಡುತ್ತದೆ. ಈ ಸಿಗ್ನಲ್‌ಗೆ ಭೂಮಿಯೊಳಗಿಂದ ಮರು‌‌ ಸಿಗ್ನಲ್ ಬರುತ್ತದೆ. ಈ ಸಿಗ್ನಲ್‌ಗಳನ್ನು ಸೆನ್ಸಾರ್‌ಗಳು ದಾಖಲಿಸಿಕೊಂಡು 2D ಅಥವಾ 3 D ಚಿತ್ರವಾಗಿ ಪರಿವರ್ತಿಸಿ ಫಲಿತಾಂಶ ನೀಡುತ್ತದೆ. ಈ

ಧರ್ಮಸ್ಥಳ ಪ್ರಕರಣ: 13 ನೇ ಪಾಯಿಂಟ್ ಶೋಧನೆಗೆ ಡ್ರೋಣ್ ಜಿಪಿಆರ್ ಬಲ Read More »

‌ಮತಗಳ್ಳತನ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧವೇ ಆರೋಪ ಮಾಡಿದ್ದ ಸಚಿವ ಕೆ. ಎನ್. ರಾಜಣ್ಣ ರಾಜೀನಾಮೆ?

ಬೆಂಗಳೂರು: ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಹೇಳಿಕೆ ನೀಡುತ್ತಿದ್ದ ಸಚಿವ ಕೆ. ಎನ್. ರಾಜಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿರುವುದಾಗಿ ತಿಳಿದು ಬಂದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಆರೋಪ ಮಾಡಿದ್ದ ಸಂದರ್ಭದಲ್ಲಿ ರಾಜಣ್ಣ ಅವರು ಕಾಂಗ್ರೆಸ್ ವಿರುದ್ಧವೇ ಆರೋಪ ಮಾಡಿದ್ದರು. ಮತಗಳ್ಳತನ ನಡೆದದ್ದು ನಿಜ. ಆದರೆ ನಾವು ಮೊದಲು ನೋಡಿಕೊಳ್ಳದೆ ಈಗ ಹೇಳುತ್ತಿರುವುದು ನಾಚಿಕೆಯ ‌ಸಂಗತಿ. ವೋಟರ್ ಲಿಸ್ಟ್ ಮಾಡಿದ್ದು ನಮ್ಮದೇ ‌ಸರ್ಕಾರ ಇದ್ದಾಗ. ಆಗೇನು ಕಣ್ಮುಚ್ಚಿ ಕುಳಿತಿದ್ದಿರಾ

‌ಮತಗಳ್ಳತನ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧವೇ ಆರೋಪ ಮಾಡಿದ್ದ ಸಚಿವ ಕೆ. ಎನ್. ರಾಜಣ್ಣ ರಾಜೀನಾಮೆ? Read More »

ಜಿ. ಎಲ್. ಆಚಾರ್ಯದಲ್ಲಿ ಆಭರಣ ಖರೀದಿಸಿ: ಹಣ ಉಳಿಸಿ, ಬಹುಮಾನ ಗೆಲ್ಲಿ

ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಚಿನ್ನಾಭರಣಗಳ ಖರೀದಿ ಮೇಲೆ ಫ್ಲಾಟ್ ಡಿಸ್ಕೌಂಟ್ ‌ನಡೆಯುತ್ತಿದ್ದು, ಮುಂದಿನ ಕೇವಲ ಒಂದು ವಾರ ಮಾತ್ರವೇ ಈ ಆಫರ್ ಇರಲಿದೆ. ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಆಗಸ್ಟ್ 1 ರಿಂದ ಅಕ್ಟೋಬರ್ 5 ರ ವರೆಗೆ, ವರಮಹಾಲಕ್ಮೀ ಹಬ್ಬ, ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಈ ಆಫರ್ ಆಗಸ್ಟ್ 17 ರ ವರೆಗೆ ಇದ್ದು ಎಂಟು ಗ್ರಾಂ ಚಿನ್ನಾಭರಣ ಖರೀದಿಯ ಮೇಲೆ ಫ್ಲಾಟ್ 2400 ರೂ. ಕಡಿತ ಆಗಸ್ಟ್ 17

ಜಿ. ಎಲ್. ಆಚಾರ್ಯದಲ್ಲಿ ಆಭರಣ ಖರೀದಿಸಿ: ಹಣ ಉಳಿಸಿ, ಬಹುಮಾನ ಗೆಲ್ಲಿ Read More »

ಪದ್ಮಲತಾ ಪ್ರಕರಣ: ಮರುತನಿಖೆಗೆ ದೂರು ಸಲ್ಲಿಸಲು SIT ಕಚೇರಿಗೆ ಆಗಮಿಸಿದ ಸಹೋದರಿ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ದಶಕಗಳ ಹಿಂದೆ ಅತ್ಯಾಚಾರಕ್ಕೀಡಾಗಿ ಹತ್ಯೆಯಾದ ‌ಪದ್ಮಲತಾ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಕೋರಿ ಪದ್ಮಲತಾ ಸಹೋದರಿ SIT ಕಚೇರಿಗೆ ಆಗಮಿಸಿ, ದೂರು ಸಲ್ಲಿಸಲು ಮುಂದಾಗಿದ್ದಾರೆ. ಕಳೆದ 38 ವರ್ಷಗಳ ಹಿಂದೆ ನಡೆದ ಘಟನೆ ಇದಾಗಿದ್ದು, ಆ ಸಂದರ್ಭದಲ್ಲಿ ತನಿಖೆ ಮಾಡಲಾಗಿದ್ದರೂ ಯಾವುದೇ ಪ್ರಮುಖ ಸಾಕ್ಷ್ಯ ದೊರೆಯದ ಹಿನ್ನೆಲೆ ಕೇಸ್ ಮುಚ್ಚಿ ಹೋಗಿತ್ತು. ಆ ಸಂದರ್ಭದಲ್ಲಿ ಪದ್ಮಲತಾ ಶವವನ್ನು ದಫನ ಮಾಡಲಾಗಿತ್ತು. CPIM ನಾಯಕ ಬಿ.ಎಂ. ಭಟ್ ಮತ್ತು ಇತರರ ಜೊತೆಗೆ ಪದ್ಮಲತಾ ಸಹೋದರಿ ಇಂದ್ರಾವತಿ

ಪದ್ಮಲತಾ ಪ್ರಕರಣ: ಮರುತನಿಖೆಗೆ ದೂರು ಸಲ್ಲಿಸಲು SIT ಕಚೇರಿಗೆ ಆಗಮಿಸಿದ ಸಹೋದರಿ Read More »

ಕೋಮುಸೌಹಾರ್ಧತೆಗೆ ಭಂಗ ತರುವ ಪೋಸ್ಟ್: ಪೇಸ್ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಕೋಮು ಸೌಹಾರ್ದತೆ ಕದಡುವಂತಹ ಸುಳ್ಳು ಸುದ್ದಿಗಳನ್ನು ಪೋಸ್ಟ್ ಹಾಕಿದ ಫೇಸ್‌ಬುಕ್ ಪೇಜ್ ‘ಭಾರತೀಯ ಸೇನೆ’ ಯ ನಿರ್ವಾಹಕರ ಮೇಲೆ ಸ್ವಯಂಪ್ರೇರಿತವಾಗಿ ‌ಪುತ್ತೂರು ನಗರ ಠಾಣೆಯ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ಅಪರಾಧ ಸಂಖ್ಯೆ 70/2025 ರ ಅಡಿಯಲ್ಲಿ, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 196(1)(ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 353(2) (ಸಾರ್ವಜನಿಕ ಶಾಂತಿ ಕದಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೋಮುಸೌಹಾರ್ಧತೆಗೆ ಭಂಗ ತರುವ ಪೋಸ್ಟ್: ಪೇಸ್ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲು Read More »

error: Content is protected !!
Scroll to Top