ಧರ್ಮಸ್ಥಳ ಪ್ರಕರಣ : ಊಹಾಪೋಹದ ವಿಡಿಯೋಗಳನ್ನು ಹರಿಯಬಿಟ್ಟವರಿಗೆ ಎಸ್​ಐಟಿ ನೋಟಿಸ್

ಸೋಷಿಯಲ್‌ ಮೀಡಿಯಾ ವಿಡಿಯೋಗಳ ತೀವ್ರ ಪರಿಶೀಲನೆ ಧರ್ಮಸ್ಥಳ : ಧರ್ಮಸ್ಥಳ ಪ್ರಕರಣ ಸಂಬಂಧ ಕಳೆದ ಒಂದೂವರೆ ತಿಂಗಳಿನಿಂದ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ ಸಾವಿರಾರು ಎಲ್ಲ ವಿಡಿಯೋಗಳನ್ನು ಎಸ್​ಐಟಿ ಸಂಗ್ರಹಿಸಿ ಪರಿಶೀಲಿಸುತ್ತಿದೆ. ಸೋಶಿಯಲ್ ಮೀಡಿಯಾವನ್ನು ಸಂಪೂರ್ಣವಾಗಿ ಮಾನಿಟರ್ ಮಾಡಲಾಗುತ್ತಿದ್ದು ಎಲ್ಲರ ಮೇಲೂ ಎಸ್‌ಐಟಿ ಕಣ್ಣಿಟ್ಟಿದೆ. ಧರ್ಮಸ್ಥಳ ಪ್ರಕರಣ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹದ ವಿಡಿಯೋಗಳನ್ನು ಹರಿಯಬಿಟ್ಟವರಿಗೆ ಎಸ್​ಐಟಿ ನೋಟಿಸ್ ನೀಡಲು ಆರಂಭಿಸಿದೆ. ಈ ಸಂಬಂಧ ವಿಶೇಷ ತಂಡ ರಚಿಸಿರುವ ಎಸ್​​ಐಟಿ, ತನಿಖೆ ಕುರಿತು ಬಾಯಿಗೆ ಬಂದಂತೆ ಮಾತನಾಡಿದವರ ಪಟ್ಟಿ […]

ಧರ್ಮಸ್ಥಳ ಪ್ರಕರಣ : ಊಹಾಪೋಹದ ವಿಡಿಯೋಗಳನ್ನು ಹರಿಯಬಿಟ್ಟವರಿಗೆ ಎಸ್​ಐಟಿ ನೋಟಿಸ್ Read More »

ಧರ್ಮಸ್ಥಳ ಪ್ರಕರಣದ ಎನ್‌ಐಎ ತನಿಖೆ : ಆರ್‌. ಅಶೋಕ್‌ ಆಗ್ರಹ

ಟಿಪ್ಪು ಗ್ಯಾಂಗ್ ಒತ್ತಡಕ್ಕೆ ಮಣಿದು ಎಸ್‌ಐಟಿ ರಚನೆ ಎಂದು ಆರೋಪ ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಿಲ್ಲಿಸದೆ ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸುವಂತೆ ವಿಧಾನಸಭೆ ವಿರೋಧ ಪಕ್ಷಧ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ. ಧರ್ಮಸ್ಥಳದ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಟಿಪ್ಪು ಗ್ಯಾಂಗ್ ಒತ್ತಡ ಹಾಕಿ ಯಾವನೋ ದೂರು ಕೊಟ್ಟಿದ್ದನ್ನು ಇಟ್ಟುಕೊಂಡು ದೊಡ್ಡದಾಗಿ ಬಿಂಬಿಸುತ್ತಿದೆ. ಧರ್ಮಸ್ಥಳದಲ್ಲಿ ನೂರಾರು ಅತ್ಯಾಚಾರ, ಕೊಲೆ ಆಗಿದೆ ಎನ್ನುವಂತೆ ಮಾಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಷಡ್ಯಂತ್ರ ಮಾಡುತ್ತಿದೆ. ಒಂದೊಮ್ಮೆ ಮಸೀದಿಯಲ್ಲಿ

ಧರ್ಮಸ್ಥಳ ಪ್ರಕರಣದ ಎನ್‌ಐಎ ತನಿಖೆ : ಆರ್‌. ಅಶೋಕ್‌ ಆಗ್ರಹ Read More »

ಸೆ.1ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರಿಗೆ ಆಗಮನ

ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭದ ಅತಿಥಿ ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಪ್ಟೆಂಬರ್ 1ರಂದು ಮೈಸೂರಿಗೆ ಆಗಮಿಸಲಿದ್ದಾರೆ. ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಎಐಐಎಸ್ಎಚ್) ವಜ್ರಮಹೋತ್ಸವ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮುರ್ಮು ಭಾಗವಹಿಸುವ ಬಗ್ಗೆ ಅಧಿಕೃತ ಮಾಹಿತಿ ಬಂದಿದೆ ಎಂದು ಎಐಐಎ‌ಸ್ ನಿರ್ದೇಶಕಿ ಎಂ.ಪುಷ್ಪಾವತಿ ತಿಳಿಸಿದ್ದಾರೆ. ಇದು ರಾಷ್ಟ್ರಪತಿಗಳು ಮೈಸೂರಿಗೆ ನೀಡುತ್ತಿರುವ ಎರಡನೇ ಭೇಟಿಯಾಗಿದೆ. ಅವರು 2022ರ ಸೆಪ್ಟೆಂಬರ್ 26 ರಂದು ನಾಡಹಬ್ಬ ದಸರಾವನ್ನು ಉದ್ಘಾಟಿಸಿದ್ದರು.

ಸೆ.1ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರಿಗೆ ಆಗಮನ Read More »

ರಥಕ್ಕೆ ವಿದ್ಯುತ್‌ ತಂತಿ ಸ್ಪರ್ಶಿಸಿ ಐವರ ದುರ್ಮರಣ

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ರಥಯಾತ್ರೆಯಲ್ಲಿ ಸಂಭವಿಸಿದ ದುರಂತ ಹೈದರಾಬಾದ್: ಕೃಷ್ಣ ಜನ್ಮಾಷ್ಟಮಿ ಆಚರಣೆಯ ಭಾಗವಾಗಿ ನಡೆದ ಮೆರವಣಿಗೆ ವೇಳೆ ರಥಕ್ಕೆ ವಿದ್ಯುತ್‌ ತಂತಿ ತಗುಲಿ ಕನಿಷ್ಠ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮೃತರನ್ನು ಕೃಷ್ಣಯಾದವ್ (21), ಸುರೇಶ್ ಯಾದವ್ (34), ಶ್ರೀಕಾಂತ್ ರೆಡ್ಡಿ (35), ರುದ್ರ ವಿಕಾಸ್ (39), ಮತ್ತು ರಾಜೇಂದ್ರ ರೆಡ್ಡಿ (45) ಎಂದು ಗುರುತಿಸಲಾಗಿದೆ. ರಾಮಂತಪುರದ ಗೋಕುಲನಗರದಲ್ಲಿ ಭಾನುವಾರ ತಡರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ಹಲವರು

ರಥಕ್ಕೆ ವಿದ್ಯುತ್‌ ತಂತಿ ಸ್ಪರ್ಶಿಸಿ ಐವರ ದುರ್ಮರಣ Read More »

ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ  ಶ್ರೀಮದ್ಭಾಗವತ ಸಪ್ತಾಹ

ಪುತ್ತೂರು: ಜೀವನದಲ್ಲಿ ಪ್ರತಿಯೊಬ್ಬರು ಒಮ್ಮೆಯಾದರ ಶ್ರೀಮದ್ಭಾಗವತವನ್ನು ಹೇಳಬೇಕು ಎಂದು ಜಿಎಲ್ ಸಮೂಹ ಸಂಸ್ಥೆಗಳ ಮಾಲಕ ಜಿ.ಎಲ್.ಬಲರಾಮ ಉಚಾರ್ಯ ಹೇಳಿದರು. ಶಿವಳ್ಳಿ ಸಂಪದ ಬೊಳುವಾರು ವಲಯ ವತಿಯಿಂದ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ  ಶ್ರೀಮದ್ಭಾಗವತ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ಸಪ್ತಾಹ ಕಾರ್ಯಕ್ರಮಗಳ ಉದ್ಘಾಟನೆಗೆ ಸಾಮಾನ್ಯವಾಗಿ ಜನರು ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಾರೆ. ಇದು ಅವರಲ್ಲಿನ ಆಸಕ್ತಿಯನ್ನು ತೋರಿಸುತ್ತದೆ. ಇಂತಹ ಉತ್ತಮವಾದ ಕಾರ್ಯಕ್ರಮಗಳು ಆಧ್ಯಾತ್ಮಿಕ ಚಿಂತನೆಗೆ ವೇಗ ನೀಡಲಿದೆ ಎಂದರು.

ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ  ಶ್ರೀಮದ್ಭಾಗವತ ಸಪ್ತಾಹ Read More »

ಮೊಸರು ಕುಡಿಕೆ ಮೆರವಣಿಗೆಯಲ್ಲಿ ಮಹಿಳಾ ಪೊಲೀಸರ ಜೊತೆ ಅಸಭ್ಯ ವರ್ತನೆ : ಇಬ್ಬರ ಬಂಧನ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಉಳ್ಳಾಲ: ತೊಕ್ಕೊಟ್ಟಿನಲ್ಲಿ ಶನಿವಾರ ರಾತ್ರಿ ನಡೆದಿದ್ದ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅಶ್ಲೀಲ ಕೈ ಸನ್ನೆ ಮಾಡಿ, ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಅಸೈಗೋಳಿ ನಿವಾಸಿ ದೀಪಕ್ ಮತ್ತು ತೊಕ್ಕೊಟ್ಟು ನಿವಾಸಿ ಕಿರಣ್ ಬಂಧಿತ ಆರೋಪಿಗಳು. ತೊಕ್ಕೊಟ್ಟುವಿನ ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ವತಿಯಿಂದ ನಡೆದ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯ ಸಂದರ್ಭದಲ್ಲಿ ಈ ಘಟನೆ

ಮೊಸರು ಕುಡಿಕೆ ಮೆರವಣಿಗೆಯಲ್ಲಿ ಮಹಿಳಾ ಪೊಲೀಸರ ಜೊತೆ ಅಸಭ್ಯ ವರ್ತನೆ : ಇಬ್ಬರ ಬಂಧನ Read More »

ಪುತ್ತೂರು : ಯುವತಿ ಆತ್ಮಹತ್ಯೆ

ಪುತ್ತೂರು: ಅವಿವಾಹಿತ ಯುವತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನ್ನೂರು ಗ್ರಾಮದ ಕನಡ್ಕ ಎಂಬಲ್ಲಿ ಭಾನುವಾರ ಸಂಭವಿಸಿದೆ. ಕಾನಡ್ಕ ನಿವಾಸಿ ಡೊಂಬಯ್ಯ ಕುಲಾಲ್ ಎಂಬವರ ಪುತ್ರಿ ತೇಜಸ್ವಿನಿ (22) ಆತ್ಮಹತ್ಯೆ ಮಾಡಿಕೊಂಡವರು. ಅವರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತೇಜಸ್ವಿನಿ ಅವರು ಜಿಡೆಕಲ್ಲು ಕಾಲೇಜಿನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮೃತರು ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

ಪುತ್ತೂರು : ಯುವತಿ ಆತ್ಮಹತ್ಯೆ Read More »

ಧರ್ಮಸ್ಥಳ ಪ್ರಕರಣದ ಹಿಂದೆ ಸೆಂಥಿಲ್‌ ಕೈವಾಡ : ಯಶ್‌ಪಾಲ್‌ ಸುವರ್ಣ ಆರೋಪ

ಕಾಂಗ್ರೆಸ್‌ ಸಂಸದನನ್ನು ತನಿಖೆಗೆ ಒಳಪಡಿಸಲು ಆಗ್ರಹ ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣದ ಅನಾಮಿಕನ ಹಿಂದೆ ಕಾಂಗ್ರೆಸ್‌ ಸಂಸದ ಶಶಿಕಾಂತ್‌ ಸೆಂಥಿಲ್‌ ಇದ್ದಾರೆ ಎಂದು ಉಡುಪಿಯ ಬಿಜೆಪಿ ಶಾಸಕ ಯಶ್‌ಪಾಲ್‌ ಸುವರ್ಣ ಸ್ಫೋಟಕ ಆರೋಪ ಮಾಡಿದ್ದಾರೆ. ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಈ ಷಡ್ಯಂತ್ರ ಮಾಡಿದವರ ಮೂಲಕ್ಕೆ ಹೋಗಬೇಕು. ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರನ್ನು ತನಿಖೆಗೆ ಒಳಪಡಿಸಿದರೆ ಸತ್ಯ ಸಂಗತಿ ಬಯಲಾಗಲಿದೆ. ಅಂದು ಬ್ರಿಟಿಷರು ಬಂದು ಹಿಂದೂಗಳನ್ನು ಒಡೆದು ಆಳಿದ್ದರು.

ಧರ್ಮಸ್ಥಳ ಪ್ರಕರಣದ ಹಿಂದೆ ಸೆಂಥಿಲ್‌ ಕೈವಾಡ : ಯಶ್‌ಪಾಲ್‌ ಸುವರ್ಣ ಆರೋಪ Read More »

ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಲ್ಲೂ ಅಚ್ಚರಿ ತೋರಿಸಿದ ಬಿಜೆಪಿ

ತಮಿಳುನಾಡಿನ ಹಿರಿಯ ನಾಯಕ ಸಿ.ಪಿ.ರಾಧಾಕೃಷ್ಣನ್‌ಗೆ ಒಲಿದು ಬಂದ ಭಾಗ್ಯ ನವದೆಹಲಿ: ಜಗದೀಪ್‌ ಧನ್‌ಕರ್‌ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನದ ಚುನಾವಣೆಗೆ ಅಭ್ಯರ್ಥಿಯನ್ನು ಆಯಕೆ ಮಾಡುವಲ್ಲೂ ಬಿಜೆಪಿ ಅಚ್ಚರಿಯೆ ನಡೆ ತೋರಿಸಿದೆ. ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಸಹಿತ ಹಲವು ಪ್ರಮುಖರು ಉಪರಾಷ್ಟ್ರಪತಿ ರೇಸ್‌ನಲ್ಲಿ ಇದ್ದರೂ ಕೊನೆಗೆ ಆಯ್ಕೆಯಾಗಿರುವುದು ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್‌. ಅಷ್ಟರ ತನಕ ರಾಧಾಕೃಷ್ಣನ್‌ ಹೆಸರು ಉಲ್ಲೇಖದಲ್ಲೇ ಇರಲಿಲ್ಲ ಎನ್ನುವುದು ಗಮನಾರ್ಹ ಅಂಶ. ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ.ರಾಧಾಕೃಷ್ಣನ್‌ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ನಿನ್ನೆ

ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಲ್ಲೂ ಅಚ್ಚರಿ ತೋರಿಸಿದ ಬಿಜೆಪಿ Read More »

ಪುತ್ತೂರು : ಮನೆಯಿಂದ ಚಿನ್ನ ಕದ್ದವ ಸೆರೆ

ಪುತ್ತೂರು: ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ಕದ್ದ ಸರಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನನ್ನು ನೆಟ್ಟಣಿಗೆ ಮುಡೂರು ಗ್ರಾಮದ ನಿವಾಸಿ ದಯಾನಂದ್ ನಾಯ್ಕ ಎಂ (29) ಎಂದು ಗುರುತಿಸಲಾಗಿದೆ. ಪುತ್ತೂರಿನ ಈಶ್ವರಮಂಗಲದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ 30.120 ಗ್ರಾಂ ಬಂಗಾರ ಹಾಗೂ ರೂ.5000 ನಗದು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಕಳ್ಳತನಕ್ಕೆ ಬಳಸಿದ ಡಿಸ್ಕವರಿ ಬೈಕ್ ಕೂಡಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣದ ಪತ್ತೆ ಹಚ್ಚುವಲ್ಲಿ

ಪುತ್ತೂರು : ಮನೆಯಿಂದ ಚಿನ್ನ ಕದ್ದವ ಸೆರೆ Read More »

error: Content is protected !!
Scroll to Top