ಕಾರಿನಲ್ಲಿ ಡ್ರಗ್ಸ್ ಮಾರಾಟ: ಐವರು ಆರೋಪಿಗಳ ಬಂಧನ

ಹಾಸನ: ಕಾರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಶಿವಮೊಗ್ಗ ಮೂಲದ ಫರ್ವೀಜ್, ಸುಹೇಲ್, ಅಬ್ದುಲ್ ಯಾಸಿನ್, ಇಬ್ರತ್ ಖಾನ್ ಮತ್ತು ಹಾಸನದ ಸೈಯದ್ ಯೂಸಫ್ ಎಂದು ಗುರುತಿಸಲಾಗಿದೆ. ಹಾಸನದ ರಾಜ್‌ಕುಮಾರ್ ರಸ್ತೆಯ ಚೆಕ್ ಪೋಸ್ಟ್ ಬಳಿಯಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ 40 ಗ್ರಾಂ ಗಳಷ್ಟು ಎಂಡಿಎಂಎ ಪತ್ತೆಯಾಗಿದೆ. ಪೊಲೀಸರು ಕರು ಮತ್ತು ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.

ಕಾರಿನಲ್ಲಿ ಡ್ರಗ್ಸ್ ಮಾರಾಟ: ಐವರು ಆರೋಪಿಗಳ ಬಂಧನ Read More »

ಬೆಳ್ತಂಗಡಿ : ಗ್ಯಾಸ್‌ ಸೋರಿಕೆಯಾಗಿ ಅಂಗಡಿ ಬೆಂಕಿಗಾಹುತಿ

ಬಲೂನ್‌ಗಳಿಗೆ ಗ್ಯಾಸ್ ತುಂಬಿಸುವಾಗ ಹೀಲಿಯಂ ಗ್ಯಾಸ್ ಸೋರಿಕೆ ಬೆಳ್ತಂಗಡಿ : ಹೀಲಿಯಂ ಗ್ಯಾಸ್ ಸೋರಿಕೆಯಾದ ಪರಿಣಾಮ ಬೆಂಕಿಹತ್ತಿಕೊಂಡು ಅಂಗಡಿ ಸುಟ್ಟು ಭಸ್ಮವಾದ ಘಟನೆ ಬೆಳ್ತಂಗಡಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಹೇರಾಜೆ ಕಾಂಪ್ಲೆಕ್ಸ್‌ನಲ್ಲಿ ಮೊದಲ ಮಹಡಿಯ ಮೊಹಮ್ಮದ್ ಸಮೀಲ್ ಎಂಬವರ ಮಾಲೀಕತ್ವದ KAF ಕ್ರಿಯೇಟಿವ್ ಅರ್ಟ್ & ಕ್ರಾಫ್ಟ್ ಸ್ಟೋರ್‌ನಲ್ಲಿ ಇಬ್ಬರು ಕೆಲಸದವರು ಫೆ.14ರಂದು ಬೆಳಗ್ಗೆ 7.30ಕ್ಕೆ ಕಾರ್ಯಕ್ರಮವೊಂದಕ್ಕೆ ಬಲೂನ್‌ಗಳಿಗೆ ಗ್ಯಾಸ್ ತುಂಬಿಸುವಾಗ ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಬೆಂಕಿ ಉಂಟಾಗಿ ಸಂಪೂರ್ಣ ಸುಟ್ಟು ಹೋಗಿದೆ.

ಬೆಳ್ತಂಗಡಿ : ಗ್ಯಾಸ್‌ ಸೋರಿಕೆಯಾಗಿ ಅಂಗಡಿ ಬೆಂಕಿಗಾಹುತಿ Read More »

ಸುಳ್ಯ : ಜನವಸತಿಯಿಲ್ಲದ ಮನೆಯ ಶೌಚಾಲಯದಲ್ಲಿ ಯುವಕನ ಶವಪತ್ತೆ

ಮದ್ಯದ ಅಮಲಿನಲ್ಲಿ ತನ್ನದೇ ಮನೆಗೆ ಬೆಂಕಿ ಹಚ್ಚಿ ಓಡಿಹೋಗಿದ್ದ ಯುವಕ ಸುಳ್ಯ: ಮನೆಗೆ ಬೆಂಕಿಹಚ್ಚಿ ಓಡಿಹೋಗಿದ್ದ ಯುವಕನ ಮೃತದೇಹ ಜನವಸತಿಯಿಲ್ಲದ ಮನೆಯ ಶೌಚಾಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸುಳ್ಯದ ಗುತ್ತಿಗಾರು ಗ್ರಾಮದ ಅಡ್ಡನಪಾರೆಯಲ್ಲಿ ಗುರುವಾರ ಸಂಭವಿಸಿದೆ. ಅಡ್ಡನಪಾರೆ ಗೋಪಾಲ ನಾಯ್ಕ ಎಂಬವರ ಪುತ್ರ ಮಹಾಬಲ ನಾಯ್ಕ (27) ಮೃತಪಟ್ಟಿರುವ ಯುವಕ. ಮಹಾಬಲ ಕಳೆದ ಫೆ.4ರಂದು ಮದ್ಯದ ಅಮಲಿನಲ್ಲಿ ಬಂದು ತನ್ನ ಮನೆಗೇ ಬೆಂಕಿಹಚ್ಚಿ ಅಲ್ಲಿಂದ ಓಡಿಹೋಗಿದ್ದ. ಮನೆಗೆ ಬೆಂಕಿಹಚ್ಚಿದ ಕುರಿತು ಗೋಪಾಲ ನಾಯ್ಕ ಮಗನ ವಿರುದ್ಧ

ಸುಳ್ಯ : ಜನವಸತಿಯಿಲ್ಲದ ಮನೆಯ ಶೌಚಾಲಯದಲ್ಲಿ ಯುವಕನ ಶವಪತ್ತೆ Read More »

ಕಾಂಗ್ರೆಸ್‌ ಸರ್ಕಾರಕ್ಕೆ ಸಾವಿರ ದಿನದ ಸಂಭ್ರಮ

ಕಚ್ಚಾಟ, ವಿವಾದ, ಸಂಘರ್ಷದ ಸುಳಿಯಲ್ಲೇ ಕಳೆದು ಹೋದ ಸಾವಿರ ದಿನಗಳು ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಾವಿರ ದಿನ ಪೂರೈಸಿದ ಸಂಭ್ರಮಾಚರಣೆಯಲ್ಲಿದೆ. 2023ರಲ್ಲಿ ಗ್ಯಾರಂಟಿ ಬಲದಿಂದ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಸರ್ಕಾರ ಆರಂಭದ ದಿನದಿಂದಲೂ ಸಂಘರ್ಷದಲ್ಲೇ ಕಳೆದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಮೊದಲ ದಿನದಿಂದ ಶುರುವಾದ ಕುರ್ಚಿ ಕಿತ್ತಾಟ ಈಗಲೂ ಮುಂದುವರಿದಿದೆ ಮಾತ್ರವಲ್ಲದೆ ಸಾವಿರ ದಿನ ಪೂರೈಸುವ ಸಂದರ್ಭದಲ್ಲೇ ತಾರಕ್ಕೇರಿರುವುದು ಗಮನಾರ್ಹ. ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿ ತನ್ನ ಪಾತ್ರವೇ

ಕಾಂಗ್ರೆಸ್‌ ಸರ್ಕಾರಕ್ಕೆ ಸಾವಿರ ದಿನದ ಸಂಭ್ರಮ Read More »

ಪೆಟ್ರೋಲು ತುಂಬಿಸಿ ಹಣ ಕೊಡದೆ ಪರಾರಿಯಾದ ಚಾಲಕ

ಸುಳ್ಯ : ಕಾರು ಚಾಲಕನೊಬ್ಬ ಪೆಎಟ್ರೋಲು ಪಂಪ್‌ನಲ್ಲಿ ಟ್ಯಾಂಕ್‌ ಪೆಟ್ರೋಲ್‌ ತುಂಬಿಸಿಕೊಂಡ ನಂತರ ಹಣ ಪಾವತಿಸದೆ ಪರಾರಿಯಾದ ಘಟನೆ ಅರಂತೋಡುನ ನಯಾರ ಪೆಟ್ರೋಲ್ ಪಂಪ್‌ನಲ್ಲಿ ಶುಕ್ರವಾರ ನಡೆದಿದೆ. ಕೇರಳದ ಕಾಸರಗೋಡಿನ ನೋಂದಣಿ ಹೊಂದಿದ ಕಾರು ಪೆಟ್ರೋಲ್ ಪಂಪ್‌ಗೆ ಬಂದು ವಾಹನಕ್ಕೆ 2,510 ರೂ. ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡಿದೆ. ಬಳಿಕ ಸಿಬ್ಬಂದಿ ಹಣ ಪಾವತಿಸಿ ಎಂದು ಕೇಳಿದಾಗ ಚಾಲಕ ಇದ್ದಕ್ಕಿದ್ದಂತೆ ಕಾರನ್ನು ಸ್ಟಾರ್ಟ್ ಮಾಡಿ ವೇಗವಾಗಿ ಪರಾರಿಯಾಗಿದ್ದಾನೆ. ಗಾಬರಿಗೊಂಡ ಪಂಪ್ ಸಿಬ್ಬಂದಿ ತಕ್ಷಣ ಜಾಲ್ಸೂರು ಚೆಕ್‌ಪೋಸ್ಟ್ ಮತ್ತು ಸ್ಥಳೀಯ

ಪೆಟ್ರೋಲು ತುಂಬಿಸಿ ಹಣ ಕೊಡದೆ ಪರಾರಿಯಾದ ಚಾಲಕ Read More »

ಸರಕಿನಂತೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಪ್ರಕರಣ : ಚಾಲಕರ ವಿರುದ್ಧ ಕೇಸ್‌ ದಾಖಲು

ಬಳೆಂಜ ಶಾಲೆಯ ಮಕ್ಕಳನ್ನು ಟಿಪ್ಪರ್‌, ಪಿಕಪ್‌ನಲ್ಲಿ ಪ್ರವಾಸಕ್ಕೆ ಕರೆದೊಯ್ದಿದ್ದ ಶಿಕ್ಷಕರು ಬೆಳ್ತಂಗಡಿ: ಟಿಪ್ಪರ್‌ನಲ್ಲಿ ಶಾಲಾ ಮಕ್ಕಳನ್ನು ಸರಕು ಸಾಗಿಸುವ ವಾಹನಗಳಲ್ಲಿ ಅಧ್ಯಯನ ಪ್ರವಾಸಕ್ಕೆ ಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕರನ್ನು ಅಮಾನತುಗೊಳಿಸಿದ ಬಳಿಕ ಇದೀಗ ಟಿಪ್ಪರ್ ಹಾಗೂ ಪಿಕಪ್ ವಾಹನ ಚಾಲಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಳೆದ ಗುರುವಾರ ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ಜೇನು ಕೃಷಿ ಅಧ್ಯಯನ ಪ್ರವಾಸಕ್ಕೆ ಶಾಲಾ ಮಕ್ಕಳನ್ನು ತೆರೆದ ಪಿಕಪ್ ಮತ್ತು ಟಿಪ್ಪರ್‌ನಲ್ಲಿ ಅಪಾಯಕಾರಿ ರೀತಿ ಕರೆದೊಯ್ಯಲಾಗಿತ್ತು. ಬಳೆಂಜ ಗ್ರಾಮದ ಹಿರಿಯ

ಸರಕಿನಂತೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಪ್ರಕರಣ : ಚಾಲಕರ ವಿರುದ್ಧ ಕೇಸ್‌ ದಾಖಲು Read More »

ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

ಕ್ರಿಕೆಟ್‌ ಅಭಿಮಾನಿಗಳ ಉತ್ಸಾಹಕ್ಕೆ ತಣ್ಣೀರು ಎರಚಿದ ಮುನ್ಸೂಚನೆ ಕೊಲಂಬೊ: ಹಲವು ಅಡ್ಡಿಗಳ ಬಳಿಕ ಕೊನೆಗೂ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡಲು ಪಾಕಿಸ್ತಾನ ಒಪ್ಪಿಕೊಂಡಿದೆ. ಭಾನುವಾರ ಶ್ರೀಲಂಕಾದಲ್ಲಿ ನಡೆಯಲಿರುವ ಈ ಹೈ ವೋಲ್ಟೇಜ್‌ ಪಂದ್ಯವನ್ನು ನೋಡಲು ಕ್ರಿಕೆಟ್‌ ಅಭಿಮಾನಗಳು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಿರುವಾಗ ಅವರ ಕುತೂಹಲಕ್ಕೆ ತಣ್ಣೀರು ಎರಚುವ ಸುದ್ದಿಯ್ನು ಹವಾಮಾನ ಇಲಾಖೆ ನೀಡಿದೆ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಭಾನುವಾರ ನಡೆಯುವ ರಣರೋಚಕ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ

ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ Read More »

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆ ವಿವಾದ : ಸಿಎಂ ಸ್ಪಷ್ಟನೆ

ಡಿಎಚ್‌ಒವನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಿದ ಪತ್ರದಿಂದ ಭಾರಿ ವಿವಾದ ಬೆಂಗಳೂರು : ಆರೋಗ್ಯ ಇಲಾಖೆ ಅಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾದ ಪತ್ರ ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೊಳಗಾಗಿದೆ. ಮೊದಲೇ ವರ್ಗಾವಣೆ ದಂಧೆಯ ಆರೋಪ ಮಾಡುತ್ತಿದ್ದ ಬಿಜೆಪಿಗೆ ಹೊಸ ಅಸ್ತ್ರವೇ ಸಿಕ್ಕಂತಾಗಿತ್ತು. ಈ ವಿಚಾರವಾಗಿ ಖದ್ದು ಸಿಎಂ ಸಿದ್ದರಾಮಯ್ಯ ಸುಳ್ಳು ಆದೇಶ ಪ್ರತಿ ಹರಿಬಿಟ್ಟವರ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕಿಡಿಗೇಡಿಗಳು ನನ್ನ ಕಚೇರಿಯ ನಕಲಿ ಟಿಪ್ಪಣಿಯೊಂದನ್ನು

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆ ವಿವಾದ : ಸಿಎಂ ಸ್ಪಷ್ಟನೆ Read More »

ಡ್ರಗ್ಸ್ ಮಾರಾಟ: ಆರೋಪಿಗಳು ಪೊಲೀಸ್ ಬಲೆಗೆ

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಮಾದಕ ದ್ರವ್ಯ ತಂದು ಅದನ್ನು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ‌ಪೊಲೀಸರು ಬಂಧಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ಉಳ್ಳಾಲದ ಮುಸ್ತಫಾ ಸೀದಿಯಬ್ಬ, ಮೈಯದ್ದಿ, ಮೊಹಮ್ಮದ್ ಶಿಫಾನ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ನಿಷೇಧಿತ ಎಂಡಿಎಂಎ ಮಾದಕ ವಸ್ತುವನ್ನು ಬೂದು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ತಂದು, ಉಳ್ಳಾಲ ತಾಲೂಕಿನ ತಲಪಾಡಿ ಪರಿಸರದಲ್ಲಿ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ

ಡ್ರಗ್ಸ್ ಮಾರಾಟ: ಆರೋಪಿಗಳು ಪೊಲೀಸ್ ಬಲೆಗೆ Read More »

ಸೇವಾ ತೀರ್ಥವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಪ್ರಧಾನಮಂತ್ರಿ ಕಚೇರಿ ಸೇವಾತೀರ್ಥವನ್ನು ಉದ್ಘಾಟಿಸಿದ್ದಾರೆ. ಈ ಕಚೇರಿಯ್ನನು ಆಧುನಿಕ, ಪರಿಸರಸ್ನೇಹಿ, ಸುರಕ್ಷಿತ, ದಕ್ಷ ಮತ್ತು ನಾಗರಿಕ ಕೇಂದ್ರಿತ ಆಡಳಿತ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಸಈ ಹೆಸರಿನ ಕೆಳಗೆ ನಾಗರಿಕ ದೇವೋ ಭವ (ಪ್ರಜೆಗಳೇ ದೇವರು) ಎಂದು ಕೂಡ ಬರೆಯಲಾಗಿದೆ. ಅನೇಕ ದಶಕಗಳ ಕಾಲ ಸೆಂಟ್ರಲ್ ವಿಸ್ಟಾ ಪ್ರದೇಶದಲ್ಲಿ ಅನೇಕ ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ಸಚಿವಾಲಯಗಳು ಹಲವು ಪ್ರತ್ಯೇಕ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಕಾರ್ಯಾಚರಣೆಯಲ್ಲಿ ಸಮನ್ವಯ

ಸೇವಾ ತೀರ್ಥವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ Read More »

error: Content is protected !!
Scroll to Top