ಇಂದಿನಿಂದ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಸಮರ

ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನ 8 ದೇಶಗಳು, 19 ಪಂದ್ಯ ದುಬೈ: ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಇಂದಿನಿಂದ ಆರಂಭವಾಗಲಿದೆ. ದುಬೈ, ಅಬುಧಾಬಿ ಕ್ರೀಡಾಂಗಣದಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ. ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್‌ ಮಧ್ಯೆ ನಡೆದರೆ ಸೆ.28ರಂದು ಫೈನಲ್‌ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಭಾರತ ಬುಧವಾರ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ಭಾರತ, ಪಾಕಿಸ್ತಾನ, […]

ಇಂದಿನಿಂದ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಸಮರ Read More »

ಮಂಗಳೂರು : ಸಹೋದರಿ, ಸ್ನೇಹಿತೆಯ ಎದುರೇ ಟೆರೇಸ್‌ನಿಂದ ಜಿಗಿದು ಬಾಲಕಿ ಆತ್ಮಹತ್ಯೆ

ಮಂಗಳೂರು : ಸಹೋದರಿ ಮತ್ತು ಸ್ನೇಹಿತೆಯ ಎದುರೇ ಬಾಲಕಿ ಟೆರೇಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಮಂಗಳೂರಿನ ಬಜಿಲಕೇರಿ ಸಮೀಪದ ವಸತಿ ಸಮುಚ್ಚಯದಲ್ಲಿ ಸಂಭವಿಸಿದೆ. ಮೂಲತಃ ಉತ್ತರ ಪ್ರದೇಶ ಬನಾರಸ್‌ನ ಪ್ರಸ್ತುತ ಬಜಿಲಕೇರಿ ನಿವಾಸಿಯಾಗಿರುವ ಖುಷಿ (14) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಈಕೆ ನಗರದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ಸೆ.7ರಂದು ಮಧ್ಯಾಹ್ನ ದೇವಸ್ಥಾನಕ್ಕೆ ತೆರಳಿದ್ದ ಖುಷಿ ಬಳಿಕ ತನ್ನ ಸಹೋದರಿ ಮತ್ತು ಸ್ನೇಹಿತೆಯ ಜತೆಗೆ ಅಪಾರ್ಟ್‌ಮೆಂಟ್‌ನ ಟೆರೇಸ್‌ಗೆ ಹೋಗೋಣ

ಮಂಗಳೂರು : ಸಹೋದರಿ, ಸ್ನೇಹಿತೆಯ ಎದುರೇ ಟೆರೇಸ್‌ನಿಂದ ಜಿಗಿದು ಬಾಲಕಿ ಆತ್ಮಹತ್ಯೆ Read More »

26 ವರ್ಷ ಹಿಂದಿನ ಕೋಮು ಗಲಭೆ ಪ್ರಕರಣದ ಆರೋಪಿಗಳು ಸೆರೆ

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ಮಂಗಳೂರು: 26 ವರ್ಷದ ಹಿಂದೆ ನಡೆದ ಕೋಮು ಗಲಭೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 31, 1998ರಂದು ಮೂಲ್ಕಿಯ ಹಳೆಯಂಗಡಿಯಲ್ಲಿ ಭುಗಿಲೆದ್ದ ಕೋಮು ಗಲಭೆಯ ಆರೋಪಿಗಳಾಗಿದ್ದ ಇವರಿಬ್ಬರು ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದರು. ಲೀಲಾಧರ್ ಮತ್ತು ಚಂದ್ರಹಾಸ್ ಕೇಶವ್ ಶೆಟ್ಟಿ ಸೆರೆಯಾಗಿರುವ ಆರೋಪಿಗಳು. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 436, 427 r/w 149 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ, ಮೂಲ್ಕಿ ಸಮೀಪ

26 ವರ್ಷ ಹಿಂದಿನ ಕೋಮು ಗಲಭೆ ಪ್ರಕರಣದ ಆರೋಪಿಗಳು ಸೆರೆ Read More »

ಧರ್ಮಸ್ಥಳ ಪ್ರಕರಣ : ಅಮಿತ್‌ ಶಾ ಭೇಟಿಯಾದ ಬಿಜೆಪಿ ನಿಯೋಗ

ಅನ್ಯರಾಜ್ಯದವರೂ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯಿಂದ ತನಿಖೆಗೆ ಪ್ರಸ್ತಾವ ನವದೆಹಲಿ: ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರದ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ರಾಜ್ಯ ಬಿಜೆಪಿ ನಾಯಕರ ನಿಯೋಗ ಭೇಟಿ ಮಾಡಿ ಮಾಹಿತಿ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಿಯೋಗ ದೆಹಲಿಗೆ ತೆರಳಿ ಅಮಿತ್‌ ಶಾ ಅವರನ್ನು ಭೇಟಿಯಾಗಿದೆ. ಈ ವೇಳೆ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ. ಆರಂಭದಿಂದ ಎಸ್‌ಐಟಿ ತನಿಖೆಗೆ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಯಾವುದೇ ಅಸ್ಥಿಪಂಜರ ಸಿಗದಿರುವ

ಧರ್ಮಸ್ಥಳ ಪ್ರಕರಣ : ಅಮಿತ್‌ ಶಾ ಭೇಟಿಯಾದ ಬಿಜೆಪಿ ನಿಯೋಗ Read More »

ಇಂದು ಉಪರಾಷ್ಟ್ರಪತಿ ಚುನಾವಣೆ : ರಾಧಾಕೃಷ್ಣನ್‌-ಸುದರ್ಶನ್‌ ರೆಡ್ಡಿ ನಡುವೆ ಸ್ಪರ್ಧೆ

ಎನ್‌ಡಿಎ ಅಭ್ಯರ್ಥಿ ರಾಧಾಕೃಷ್ಣನ್‌ ಗೆಲುವು ಬಹುತೇಕ ಖಚಿತ ನವದೆಹಲಿ: ಜಗದೀಪ್ ಧನ್‌ಕರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು (ಸೆ.9) ಚುನಾವಣೆ ನಡೆಯಲಿದೆ. ಆಡಳಿತ-ವಿರೋಧ ಪಕ್ಷದ ನಡುವೆ ಪ್ರತಿಷ್ಠೆಯ ಕಣವಾಗಿದ್ದು, ಎನ್‌ಡಿಎ ಅಭ್ಯರ್ಥಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್, ಇಂಡಿ ಒಕ್ಕೂಟದ ಅಭ್ಯರ್ಥಿ ಮತ್ತು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ

ಇಂದು ಉಪರಾಷ್ಟ್ರಪತಿ ಚುನಾವಣೆ : ರಾಧಾಕೃಷ್ಣನ್‌-ಸುದರ್ಶನ್‌ ರೆಡ್ಡಿ ನಡುವೆ ಸ್ಪರ್ಧೆ Read More »

ಸೌಜನ್ಯ ಹತ್ಯೆ ಕೇಸ್: ಸ್ಪೋಟಕ ಆರೋಪ ಮಾಡಿದ ಸ್ನೇಹಮಯಿ ಕೃಷ್ಣ

ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹೊಸ ಟ್ವಿಸ್ಟ್ ಒಂದನ್ನು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನೀಡಿದ್ದಾರೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಮಾಡಿರುವುದು ಆಕೆಯ ಮಾವ ವಿಠ್ಠಲ ಗೌಡ. ಆತನನ್ನು ಮಂಪರು ಪರೀಕ್ಷೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಹಾಗೆ ಪೂರಕ ಸಾಕ್ಷ್ಯ‌ಗಳನ್ನು ಸಂಗ್ರಹ ಮಾಡಲಾಗಿದ್ದು, ಇದನ್ನು ದಕ್ಷಿಣ ಕನ್ನಡದ SP ಅವರಿಗೆ ನೀಡಿ ದೂರು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಸೌಜನ್ಯ ಹತ್ಯೆ ಕೇಸ್: ಸ್ಪೋಟಕ ಆರೋಪ ಮಾಡಿದ ಸ್ನೇಹಮಯಿ ಕೃಷ್ಣ Read More »

ಬೆಂಗಳೂರಿನಲ್ಲಿ ಕಲಾಭಿಮಾನಿಗಳ ಮನಸೂರೆಗೊಂಡ ಡ್ಯಾನ್ಸ್ & ಬೀಟ್ಸ್ ತಂಡ ಬೆಳ್ಳಾರೆ

ಬೆಂಗಳೂರು: ತುಳುನಾಡ ಜವನೆರ್ (ರಿ), ಬೆಂಗಳೂರು ವತಿಯಿಂದ ವಿಜಯನಗರದ ಬಂಟರ ಸಂಘದ ಆವರಣದಲ್ಲಿ ನಡೆದ “ಅಷ್ಟಮಿದ ಐಸಿರ” 2025 ರ ತುಳುವ ಸಿರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೀವನ್ ಟಿ.ಎನ್ ಬೆಳ್ಳಾರೆ ನಿರ್ದೇಶನದ ‘ಡ್ಯಾನ್ಸ್ ಅಂಡ್ ಬೀಟ್ಸ್’ ಬೆಳ್ಳಾರೆ. ಪಂಜ, ಸುಬ್ರಹ್ಮಣ್ಯ, ಕೈಕಂಬ ನೃತ್ಯ ಶಾಖೆಗಳ ಸುಮಾರು 60 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅತ್ಯುತ್ತಮ ನೃತ್ಯ ಪ್ರದರ್ಶನದ ಮೂಲಕ ನೆರೆದಿದ್ದ ಸಾವಿರಾರು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿ ಸಂಘಟಕರ ಪ್ರಶಂಸೆ ಪಡೆಯಿತು. ತಂಡದ ಕಾರ್ಯಕ್ರಮದ ಸಂದರ್ಭದಲ್ಲಿ ಆಳ್ವಾಸ್ ಸಂಸ್ಥೆಯ ಡಾ|

ಬೆಂಗಳೂರಿನಲ್ಲಿ ಕಲಾಭಿಮಾನಿಗಳ ಮನಸೂರೆಗೊಂಡ ಡ್ಯಾನ್ಸ್ & ಬೀಟ್ಸ್ ತಂಡ ಬೆಳ್ಳಾರೆ Read More »

ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್‌ನ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್‌ನ 2025-27ನೇ ಸಾಲಿನ ಅಧ್ಯಕ್ಷರಾಗಿ ನಾಗಾರಾಜ್ ಕೆ.ಎಲ್. ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೆ. ರಘುವೀರ್ ಕಾಮತ್, ಪಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಯಾದವ ಕುಲಾಲ್ ಅಗ್ರಬೈಲು, ಕೋಶಾಧಿಕಾರಿಯಾಗಿ ಲಾವಣ್ಯ ಸುರೇಶ್ ಜ್ಯೋತಿಗುಡ್ಡೆ, ಜತೆಕಾರ್ಯದರ್ಶಿಗಳಾಗಿ ಮಿಥುನ್ ಎ.ಎಸ್. ಮತ್ತು ದಿನೇಶ್ ತುಂಬೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಈಶ್ವರ ಕುಮಾರ್ ಭಟ್, ಸಚ್ಚಿದಾನಂದ ಪ್ರಭು, ರಮೇಶ್, ಮುಸ್ತಾಫ, ವೆಂಕಟ್ರಮಣ ಕಲ್ಲಡ್ಕ, ಮಾಧವ ದರಿಬಾಗಿಲು ಆಯ್ಕೆಯಾಗಿದ್ದಾರೆ.

ಬಂಟ್ವಾಳ ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್‌ನ ಪದಾಧಿಕಾರಿಗಳ ಆಯ್ಕೆ Read More »

ಸೆ.13: ಆದರ್ಶ ವಿವಿಧೋದ್ಧೇಶ ಸಹಕಾರಿ ಸಂಘದ ಮಹಾಸಭೆ | ವಿದ್ಯಾ ನಿಧಿಯಿಂದ 250 ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

ಪುತ್ತೂರು: ಕಳೆದ 23 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದ.ಕ.ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 15 ಶಾಖೆಗಳನ್ನು ಹೊಂದಿರುವ ಪುತ್ತೂರಿನ ಆದರ್ಶ ವಿವಿಧೋದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾ ಸಂಸ್ಥೆಯ ನಿಧಿಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಸಮಾರಂಭವು ಸೆ.13 ರಂದು ದರ್ಬೆ ಪ್ರಶಾಂತ್ ಮಹಲ್‌ನ ಸನ್ನಿಧಿ ಹಾಲ್‌ನಲ್ಲಿ ನಡೆಯಲಿದೆ ಎಂದು ಸಂಘದ ನಿರ್ದೇಶಕರಾದ ಅಶ್ವಿನ್ ಎಲ್ ಶೆಟ್ಟಿ ತಿಳಿಸಿದ್ದಾರೆ. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್

ಸೆ.13: ಆದರ್ಶ ವಿವಿಧೋದ್ಧೇಶ ಸಹಕಾರಿ ಸಂಘದ ಮಹಾಸಭೆ | ವಿದ್ಯಾ ನಿಧಿಯಿಂದ 250 ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ Read More »

ಕೆಂಪುಕೋಟೆಯಿಂದ ಬಂಗಾರದ ಕಲಶ ಕದ್ದ ಆರೋಪಿ ಅಂದರ್

ನವದೆಹಲಿ: ಕೆಂಪು ಕೋಟೆಯ ಪರಿಸರದಲ್ಲಿ ನಡೆದ ಜೈನರ ಧಾರ್ಮಿಕ ಕಾರ್ಯಕ್ರಮದಲ್ಲಿ ಎರಡು ಚಿನ್ನದ ಕಲಶಗಳನ್ನು ಕದ್ದೊಯ್ದ ಆರೋಪಿಯನ್ನು ಉತ್ತರ ಪ್ರದೇಶದ ಅಪರಾಧ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಹಾಪುರ್‌ನ ನಿವಾಸಿ ಭೂಷಣ್ ವರ್ಮಾ ಎಂದು ಗುರುತಿಸಲಾಗಿದೆ. ಭೂಷಣ್ ಜೈನರ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಎರಡು ಬಂಗಾರದ ಕಲಶಗಳನ್ನು ಎಗರಿಸಿದ್ದ. ಜೈನ ಅರ್ಚಕನ ವೇಷದಲ್ಲಿ ಬಂದು ಆರೋಪಿ ಈ ಕುಕೃತ್ಯ ಎಸಗಿದ್ದ. ಈ ದೃಶ್ಯ ಸಿಸಿಟಿವಿ ಮತ್ತು ಸಾಮಾಜಿಕ ಜಾಲತಾಣದಲ್ಲೂ ‌ವೈರಲ್ ಆಗಿದೆ.

ಕೆಂಪುಕೋಟೆಯಿಂದ ಬಂಗಾರದ ಕಲಶ ಕದ್ದ ಆರೋಪಿ ಅಂದರ್ Read More »

error: Content is protected !!
Scroll to Top