ಬೆಟ್ಟಂಪಾಡಿಯ ಕುವರಿಯಿಂದ ಮೈಸೂರಿನಲ್ಲಿ ಸಂವಿಧಾನ ಪೀಠಿಕೆ ಗಾಯನ

ಪುತ್ತೂರು: ಇಲ್ಲಿನ ಬೆಟ್ಟಂಪಾಡಿಯ ಬಾಲ ಪ್ರತಿಭೆ ಸೋನಿಕಾ ಜನಾರ್ದನ್‌ ಮೈಸೂರಿನಲ್ಲಿ ಜರುಗಿದ ದಸರಾ ಯುವ ಸಂಭ್ರಮದಲ್ಲಿ ಸಂವಿಧಾನ ಪೀಠಿಕೆಯ ಹಾಡನ್ನು ಹಾಡಿ ಜನಮೆಚ್ಚುಗೆ ಗಳಿಸಿದ್ದಾಳೆ. ಸಚಿವ ಮಹದೇವಪ್ಪರಿಂದ ಪ್ರಶಂಸೆ ಮೈಸೂರಿನ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಸೋನಿಕಾ ಜನಾರ್ಧನ್‌ರವರು ಡಾ. ಹಂಸಲೇಖಾಅವರು ಸಂಗೀತ ಸಂಯೋಜನೆ ಮಾಡಿರುವ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿರಚಿತ ಭಾರತೀಯ ಸಂವಿಧಾನದ ಸಾರವನ್ನು ಪೀಠಿಕೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಸರ್ವತ್ರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ದ. ಕ ಜಿಲ್ಲೆಯಿಂದ ಪ್ರಪ್ರಥಮ ಬಾರಿಗೆ ಮೈಸೂರು […]

ಬೆಟ್ಟಂಪಾಡಿಯ ಕುವರಿಯಿಂದ ಮೈಸೂರಿನಲ್ಲಿ ಸಂವಿಧಾನ ಪೀಠಿಕೆ ಗಾಯನ Read More »

ಯುಕೆ ಪೈಯವರಿಗೆ ಕೊಂಕಣಿ ಅಕಾಡೆಮಿಯಿಂದ ಗೌರವ ಸನ್ಮಾನ

ಪುತ್ತೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಪುತ್ತೂರು ಜಿ. ಎಸ್.ಬಿ ಮಹಿಳಾ ಮಂಡಳಿ ಸಹಯೋಗದೊಂದಿಗೆ ಸುಕೃತಿಂದ್ರ ಕಲಾಮಂದಿರದಲ್ಲಿ ಜರುಗಿದ ಸಾಹಿತ್ಯ ಸಂಭ್ರಮ- 3 ಮತ್ತು ಕೊಂಕಣಿರಂಗ ತರಂಗ ಕಾರ್ಯಕ್ರಮದಲ್ಲಿ ಖ್ಯಾತ ಬಹುಭಾಷಾ ಮಕ್ಕಳ ಸಾಹಿತಿ ಉಲ್ಲಾಸಣ್ಣ ಅವರನ್ನು ಗೌರವ ಸನ್ಮಾನ ಮಾಡಲಾಯಿತು. ಕೊಂಕಣಿ ಭಾಷಾ ಮಕ್ಕಳ ಸಾಹಿತ್ಯ ಕ್ಷೇತ್ರದ ಗಣನೀಯ ಸಾಧನೆಗಾಗಿ, ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಆಲ್ವಾರಿಸ್ ಗೌರವ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾಕ್ಟರ್ ಅಶೋಕ್

ಯುಕೆ ಪೈಯವರಿಗೆ ಕೊಂಕಣಿ ಅಕಾಡೆಮಿಯಿಂದ ಗೌರವ ಸನ್ಮಾನ Read More »

ಸೆ.22ರಂದು ಪುತ್ತೂರಿನ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್‌ ಸಿವಿಲ್ ಇಂಜಿನಿಯರ್ಸ್ ಇಂಡಿಯಾದಿಂದ ಇಂಜಿನಿಯರ್ಸ್ ಡೇ -ನೂತನ ಪದಾಧಿಕಾರಿಗಳ ಪದಪ್ರದಾನ

ಪುತ್ತೂರು: ವೃತ್ತಿಪರ ಇಂಜಿನಿಯರ್‌ಗಳಿಗೆ ಸಹಕಾರ ನೀಡುವುದು, ಕಾಮಗಾರಿಯಲ್ಲಿ ಗುಣಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಹುಟ್ಟಿಕೊಂಡ ರಾಷ್ಟ್ರೀಯ ಸಂಸ್ಥೆಯಾಗಿರುವ ಎಸೋಸಿಯೇಶನ್‌ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ಇಂಜಿನಿಯರ್ಸ್ ಡೇ ಮತ್ತು ಸಂಸ್ಥೆಯ ಮುಂದಿನ 2 ವರ್ಷದ ಅವಧಿಗೆ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಸೆ.22ರಂದು ಸಂಜೆ ಮರೀಲ್‌ನಲ್ಲಿರುವ ದಿ ಪುತ್ತೂರು ಕ್ಲಬ್‌ನಲ್ಲಿ ನಡೆಯಲಿದೆ. ನಿಯೋಜಿತ ಅಧ್ಯಕ್ಷ ಶಿವರಾಮ್ ಎಂ.ಎಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಎಸೋಸಿಯೇಶನ್‌ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್‌ನ

ಸೆ.22ರಂದು ಪುತ್ತೂರಿನ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್‌ ಸಿವಿಲ್ ಇಂಜಿನಿಯರ್ಸ್ ಇಂಡಿಯಾದಿಂದ ಇಂಜಿನಿಯರ್ಸ್ ಡೇ -ನೂತನ ಪದಾಧಿಕಾರಿಗಳ ಪದಪ್ರದಾನ Read More »

ಅಂಬಿಕಾ ವಿದ್ಯಾಲಯದ ದೃಶಾನ ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ದೃಶಾನ ಎಸ್. ಸರಳಿಕಾನ ಅವರು ವಿದ್ಯಾಭಾರತಿ ವತಿಯಿಂದ ಖಾನಾಪುರದ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ 17 ವರ್ಷದೊಳಗಿನ ಬಾಲಕಿಯರ 52 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.ಕರಾಟೆ ಅಧ್ಯಾಪಕ ಶಿವಪ್ರಸಾದ್ ಇವರ ಶಿಷ್ಯೆಯಾಗಿದ್ದಾರೆ.ಈಕೆ ಬೆಟ್ಟಂಪಾಡಿಯ ಸುರೇಶ್ ಗೌಡ ಹಾಗೂ ವಿದ್ಯಾಶ್ರೀ ದಂಪತಿ ಪುತ್ರಿ..

ಅಂಬಿಕಾ ವಿದ್ಯಾಲಯದ ದೃಶಾನ ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

ಪುತ್ತೂರು ಶಾಸಕರಿಗೆ ಮನವಿ ನೀಡಲು ಹೋದದ್ದು ಹೊರತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಲ್ಲ’-ಪುತ್ತೂರು ತಾಲೂಕು ಒಳಮೊಗ್ರು ಬಿಜೆಪಿ ಕಾರ್ಯಕರ್ತರಿಂದ ಸ್ಪಷ್ಟನೆ.

ಪುತ್ತೂರು: ರಸ್ತೆ ಅಭಿವೃದ್ಧಿಯ ಕುರಿತು ಮನವಿ ನೀಡಲು ಹೋದ ವೇಳೆ ಕಾಂಗ್ರೆಸ್ ಪಕ್ಷದ ಶಲ್ಯವನ್ನು ಹಾಕಿ ಫೋಟೋ ತೆಗೆದು ಪತ್ರಿಕೆಗೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಎಂದು ಬಿಂಬಿಸಿದ್ದಾರೆ ಹೊರತು ನಾವು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಲ್ಲ ಎಂದು ಒಳಮೊಗ್ರು ಗ್ರಾಮದ ಮುಡಾಲಮೂಲೆಯ ಬಿಜೆಪಿ ಕಾರ್ಯಕರ್ತರು ಸೆ.20ರಂದು ಸಂಜೆ ಬಿಜೆಪಿ ಕಚೇರಿಗೆ ಆಗಮಿಸಿ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರುರವರಲ್ಲಿ ವಿಷಯ ತಿಳಿಸಿ ನಾವು ಎಂದೆಂದೂ ಬಿಜೆಪಿಗರೇ ಎಂದು ಸ್ಪಷ್ಟಪಡಿಸಿದ್ದಾರೆ. ಒಳಮೊಗ್ರು ಗ್ರಾಮದ ಮುಡಾಲಮೂಲೆ ಬಿಜೆಪಿ ಕಾರ್ಯಕರ್ತರಾದ ಬಾಳಪ್ಪ

ಪುತ್ತೂರು ಶಾಸಕರಿಗೆ ಮನವಿ ನೀಡಲು ಹೋದದ್ದು ಹೊರತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಲ್ಲ’-ಪುತ್ತೂರು ತಾಲೂಕು ಒಳಮೊಗ್ರು ಬಿಜೆಪಿ ಕಾರ್ಯಕರ್ತರಿಂದ ಸ್ಪಷ್ಟನೆ. Read More »

ಪ್ರಧಾನಮಂತ್ರಿ ನರೇಂದ್ರ ಮೋದಿ 75ನೇ ಹುಟ್ಟುಹಬ್ಬ | ಬಿಜೆಪಿ ಸೇವಾ ಪಾಕ್ಷಿಕವಾಗಿ ಅ.2 ರ ತನಕ ವಿವಿಧ ಸೇವಾ ಚಟುವಟಿಕೆ

ಪುತ್ತೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ಬಿಜೆಪಿ ಸೇವಾ ಪಾಕ್ಷಿಕವಾಗಿ ಅ.೨ರ ತನಕ ನಡೆಯುವ ವಿವಿಧ ಸೇವಾ ಚಟುವಟಿಗಳಿಗೆ ಪೂರಕವಾಗಿ ಸೆ.೨೦ರಂದು ಕಲ್ಲೇಗ ದೈವಸ್ಥಾನದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.14ದಿವಸ ನಿರಂತರ ಕಾರ್ಯಕ್ರಮ:ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನವನ್ನು ಸೇವಾ ಚಟುವಟಿಕೆಯ ಮೂಲಕ ಸೇವಾ ಪಾಕ್ಷಿಕ ಕಾರ್ಯಕ್ರಮವಾಗಿ ೧೪ ದಿವಸ ನಿರಂತರ ಕಾರ್ಯಕ್ರಮ ನಡೆಯಲಿದೆ. ಸಮಾಜದ ದೀನ ದಲಿತ, ದುರ್ಬಲ ಅನಾರೋಗ್ಯ ಪೀಡಿತರಿಗೆ ನೆರವು,

ಪ್ರಧಾನಮಂತ್ರಿ ನರೇಂದ್ರ ಮೋದಿ 75ನೇ ಹುಟ್ಟುಹಬ್ಬ | ಬಿಜೆಪಿ ಸೇವಾ ಪಾಕ್ಷಿಕವಾಗಿ ಅ.2 ರ ತನಕ ವಿವಿಧ ಸೇವಾ ಚಟುವಟಿಕೆ Read More »

ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಭಾಷಣ

ಜಿಎಸ್‌ಟಿ ಕಡಿತ, ಅಮೆರಿಕ ವಿಸಾ ವಿಚಾರ ಪ್ರಸ್ತಾವ ಸಾಧ್ಯತೆ ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರಧಾನಿಯವರ ಭಾಷಣವು ಜಿಎಸ್ಟಿ ಸುಧಾರಣೆಯ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಹೊಸ ಜಿಎಸ್​ಟಿ 2.0 ದರಗಳು ನಾಳೆಯಿಂದ ದೇಶದಲ್ಲಿ ಜಾರಿಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಮೋದಿ ಮಹತ್ವದ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಳ್ಳುಜವ ನಿರೀಕ್ಷೆಯಿದೆ. H1 B ವೀಸಾ ಹೊಂದಿರುವವರ ಮೇಲೆ ಅಮೆರಿಕ ಕೈಗೊಂಡಿರುವ ಕಠಿಣ ಕ್ರಮದ

ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಭಾಷಣ Read More »

ಪರಿಪೂರ್ಣ ನಟನಿಗೆ ಫಾಲ್ಕೆ ಪ್ರಶಸ್ತಿ ಗರಿ : ಪ್ರಧಾನಿ ಮೋದಿ ಅಭಿನಂದನೆ

ಮಂಗಳವಾರ ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ನವದೆಹಲಿ : ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್‌ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಸೆ.23ರಂದು ನಡೆಯಲಿರುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೋಹನ್ ಲಾಲ್‌ಗೆ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಘೋಷಿಸಿದೆ. ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್, ಮಲಯಾಳಂ ಮಾತ್ರವಲ್ಲದೆ ಭಾರತದ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪರಿಪೂರ್ಣ ನಟನಿಗೆ ಫಾಲ್ಕೆ ಪ್ರಶಸ್ತಿ ಗರಿ : ಪ್ರಧಾನಿ ಮೋದಿ ಅಭಿನಂದನೆ Read More »

ಹೊಸ ಎಚ್‌-1ಬಿ ವೀಸಾಗೆ ಮಾತ್ರ 1 ಲಕ್ಷ ಡಾಲರ್‌ ಶುಲ್ಕ

ಭಾರಿ ಆತಂಕ ಸೃಷ್ಟಿಯಾದ ಬಳಿಕ ನಿಯಮ ತುಸು ಸಡಿಲಿಸಿದ ಟ್ರಂಪ್‌ ವಾಷಿಂಗ್ಟನ್‌: ಅಮೆರಿಕ ಎಚ್‌-1ಬಿ ವೀಸಾಗೆ 1 ಲಕ್ಷ ಡಾಲರ್‌ ಶುಲ್ಕ ವಿಧಿಸಲು ತೀರ್ಮಾನಿಸಿರುವುದು ಭಾರತದಲ್ಲಿ ಭಾರಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಈ ವಿಸಾದಡಿ ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯರು ದುಬಾರಿ ಶುಲ್ಕ ತೆರಲಾಗದೆ ನೌಕರಿ ಬಿಟ್ಟು ಭಾರತಕ್ಕೆ ಬರುವ ಸ್ಥಿತಿ ನಿರ್ಮಾಣವಾಗಲಿದೆ ಎನ್ನಲಾಗಿತ್ತು. ಆದರೆ ವಿಸಾ ವಿಚಾರದಲ್ಲಿ ತುಸು ಮೆತ್ತಗಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊಸ ವಿಸಾ ಅರ್ಜಿದಾರರಿಗೆ ಮಾತ್ರ 1 ಲಕ್ಷ ಡಾಲರ್‌ (ಸುಮಾರು 88

ಹೊಸ ಎಚ್‌-1ಬಿ ವೀಸಾಗೆ ಮಾತ್ರ 1 ಲಕ್ಷ ಡಾಲರ್‌ ಶುಲ್ಕ Read More »

ತಿಮರೋಡಿ-ಚಿನ್ನಯ್ಯ ಭೇಟಿಯ ಇನ್ನೆರಡು ವಿಡಿಯೋ ವೈರಲ್‌

ರಾಶಿ ರಾಶಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ತಿಮರೋಡಿಗೆ ವಿವರಿಸಿದ ಚಿನ್ನಯ್ಯ ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಪ್ರಸಕ್ತ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಡುವಿನ ಭೇಟಿಯ ಹಳೆಯ ಒಂದು ವಿಡಿಯೋ ಶುಕ್ರವಾರ ವೈರಲ್‌ ಆದ ಬಳಿಕ ಈಗ 2 ಮತ್ತು 3ನೇ ವಿಡಿಯೋ ಶನಿವಾರ ಹೊರಗೆ ಬಂದು ವೈರಲ್‌ ಆಗಿದೆ. ಧರ್ಮಸ್ಥಳ ಗ್ರಾಮದಲ್ಲಿ ಅನೇಕ ಶವಗಳನ್ನು

ತಿಮರೋಡಿ-ಚಿನ್ನಯ್ಯ ಭೇಟಿಯ ಇನ್ನೆರಡು ವಿಡಿಯೋ ವೈರಲ್‌ Read More »

error: Content is protected !!
Scroll to Top