ಪವಿತ್ರಾ ಗೌಡ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ತನ್ನ ಪುತ್ರಿಗೆ ಪರೀಕ್ಷೆ ಇರುವ ಹಿನ್ನೆಲೆ ತನಗೆ ಮಧ್ಯಂತರ ಜಾಮೀನು ನೀಡುವಂತೆ ಪವಿತ್ರಾ ಕೋರ್ಟ್‌ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಅವರ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಆ ಮೂಲಕ ಜಾಮೀನಿಗೆ ಸಂಬಂಧಿಸಿದ ಹಾಗೆ ಪವಿತ್ರಾ ಗೌಡಗೆ ಮತ್ತೆ ನಿರಾಸೆಯಾಗಿದೆ. ಮಗಳಿಗೆ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆ ತಮಗೆ 25 ದಿನಗಳ ಮಧ್ಯಂತರ ಜಾಮೀನು ನೀಡುವಂತೆ ಜಾಮೀನು ಅರ್ಜಿಯಲ್ಲಿ […]

ಪವಿತ್ರಾ ಗೌಡ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್ Read More »

ರಸ್ತೆ ಅವ್ಯವಸ್ತೆಗೆ ಬಲಿಯಾಯ್ತು 2 ವರ್ಷದ ಕಂದನ ಜೀವ

ಬೆಂಗಳೂರು: ರಸ್ತೆ ಅವ್ಯವಸ್ಥೆಯಿಂದಾಗಿ ಎರಡು ವರ್ಷದ ಕಂದಮ್ಮ ಮೃತಪಟ್ಟ ಘಟನೆ ಮಹದೇವಪುರದಲ್ಲಿ ‌ನಡೆದಿದೆ. ರಸ್ತೆ ದುರಸ್ತಿ ವಿಳಂಬದಿಂದಾಗಿ ಸಂಭವಿಸಿದ ಅಪಘಾತದಲ್ಲಿ ಈ ದುರ್ಘಟನೆ ನಡೆದಿದೆ. ಮಗು ಇದ್ದ ಬೈಕ್‌ಗೆ ಹಿಂದಿನಿಂದ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮಗು ಕೆಳಕ್ಕೆ ಬಿದ್ದು ಮೃತಪಟ್ಟಿದೆ. ಮೃತ ಮಗುವನ್ನು ತ್ರಿಶೂಲ್ ಎಂದು ಗುರುತಿಸಲಾಗಿದೆ. ಮಗು ಕೆಳಕ್ಕೆ ಬಿದ್ದಾಗ ಅದರ ತಲೆಯ ಮೇಲೆ ಕಾರು ಹರಿದು ಹೋಗಿದೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಈ ಅಪಘಾತಕ್ಕೆ ಅರೆಪೂರ್ಣವಾದ ರಸ್ತೆಗಳ ಅವ್ಯವಸ್ಥೆ ಎಂದು

ರಸ್ತೆ ಅವ್ಯವಸ್ತೆಗೆ ಬಲಿಯಾಯ್ತು 2 ವರ್ಷದ ಕಂದನ ಜೀವ Read More »

ಚಿನ್ನುಪಾಪು‌ ಆತ್ಮಹತ್ಯೆಯ ಬೆನ್ನಲ್ಲೇ ಸ್ನೇಹಿತ ಸಂದೇಶ್ ಸಹ ಆತ್ಮಹತ್ಯೆ

ಕಾಸರಗೋಡು: ಕೆಲ ದಿನಗಳ ಹಿಂದಷ್ಟೇ ಜಿಲ್ಲೆಯ ಅಡೂರು ಮೂಲದ ಸೋಷಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಖ್ಯಾತಿಯ ರೇಷ್ಮಾ ಎಂಬಾಕೆ ಉಳಿಯತ್ತಡ್ಕದ ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಘಟನೆಯ ಬೆನ್ನಲ್ಲೇ ಆಕೆಯ ಸ್ನೇಹಿತ ಸಂದೇಶ್ ಸಹ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗಂಡನಿಂದ ಬೇರ್ಪಟ್ಟ ಬಳಿಕ ತನ್ನ ಸ್ನೇಹಿತ ಉಳಿಯತ್ತಡ್ಕದ ಸಂದೇಶ್ ಎಂಬಾತನ ಜೊತೆಗೆ ವಾಸವಿದ್ದಳು. ಇದೀಗ ಸಂದೇಶ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಉಳಿಯತ್ತಡ್ಕದ ಮನ್ನಿಪ್ಪಾಡಿಯಲ್ಲಿನ ತನ್ನ ಮನೆಯಲ್ಲಿ ಆತ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ರೇಷ್ಮಾ

ಚಿನ್ನುಪಾಪು‌ ಆತ್ಮಹತ್ಯೆಯ ಬೆನ್ನಲ್ಲೇ ಸ್ನೇಹಿತ ಸಂದೇಶ್ ಸಹ ಆತ್ಮಹತ್ಯೆ Read More »

ಹತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಚಿತ್ರದುರ್ಗ: ನಗರದ ವಸತಿ ಶಾಲೆಯೊಂದರ ಎಸ್‌ಎಸ್‌ಎಲ್‌ಸಿ ‌ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಚಿತ್ರದುರ್ಗದ ಕರಿಯಣ್ಣನಹಳ್ಳಿ ನಿವಾಸಿ, ಭರಮಸಾಗರದ ‌ಖಾಸಗಿ ವಸತಿ ಶಾಲಾ ವಿದ್ಯಾರ್ಥಿ ಕೊಟ್ರೇಶ್ ಎಂಬವನೇ‌ ಮೃತ ವಿದ್ಯಾರ್ಥಿ. ಈತ ಶಾಲಾ ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿರುವುದಾಗಿದೆ. ಯಾವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಕಾರಣ ತಿಳಿದು ಬಂದಿಲ್ಲ. ಈತ ಕಟ್ಟಡದಿಂದ ಜಿಗಿಯುವ ದೃಶ್ಯ ಸಿಸಿಟಿವಿಯಲ್ಲಿ ‌ಸೆರೆಯಾಗಿದೆ. ಪರಮ ಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹತ್ತನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ Read More »

ಕರಾವಳಿಗೆ ಕೋಮುವಾದದ ಪಟ್ಟಿ ಕಟ್ಟಿದ ಪ್ರಿಯಾಂಕ್ ಖರ್ಗೆಗೆ ತಿರುಗೇಟು ಕೊಟ್ಟ ಸಿ.ಟಿ. ರವಿ

ಬೆಂಗಳೂರು: ಕರಾವಳಿ ಭಾಗದಲ್ಲಿ ಕೋಮುವಾದ ಹೆಚ್ಚಾಗಿರುವ ಕಾರಣ ಆ ಭಾಗದಲ್ಲಿ ಐಟಿಬಿಟಿ ಕಂಪನಿಗಳು ಹೂಡಿಕೆ ಮಾಡಲು ಭಯಪಡುತ್ತಿವೆ ಎಂಬ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಎಂಎಲ್‌ಸಿ ಸಿ.ಟಿ. ರವಿ ಅವರು ತಿರುಗೇಟು ‌ನೀಡಿದ್ದಾರೆ. ಅವರ ಆರೋಪಕ್ಕೆ ‌ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಕರಾವಳಿಯ ಕುರಿತು ಮಾತನಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ವಿಚಾರ. ಕರ್ನಾಟಕದ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರದೇಶವಾದ ಕರಾವಳಿಯ ಕುರಿತು ಟೀಕೆ ಮಾಡುವ ಮುನ್ನ, ಪ್ರಿಯಾಂಕ್ ಖರ್ಗೆಯವರು ಆರು ದಶಕಗಳಿಂದ

ಕರಾವಳಿಗೆ ಕೋಮುವಾದದ ಪಟ್ಟಿ ಕಟ್ಟಿದ ಪ್ರಿಯಾಂಕ್ ಖರ್ಗೆಗೆ ತಿರುಗೇಟು ಕೊಟ್ಟ ಸಿ.ಟಿ. ರವಿ Read More »

ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು

ವಿಟ್ಲ: ಉಕ್ಕುಡದಲ್ಲಿ ವಿದ್ಯುತ್ ಕಂಬಕ್ಕೆ ಕಾರೊಂದು ಗುದ್ದಿದ ಘಟನೆ ನಡೆದಿದೆ. ಕಾರು ಢಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದ್ದು, ಕಾರಿನ ಮುಂಭಾಗ ಸಹ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದಿವೆ. ಇದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಜೊತೆಗೆ ಕಾರಿನಲ್ಲಿದ್ದ ಪ್ರಯಾಣಿಕರಿಗೆ ‌ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು Read More »

ದೇಶದ ರೈತರನ್ನು ಹಾದಿ ತಪ್ಪಿಸುವ ಕಾರ್ಯ ರಾಹುಲ್ ಗಾಂಧಿ ಅವರದ್ದು: ಅಮಿತ್ ಶಾ ವ್ಯಂಗ್ಯ

ಗಾಂಧಿನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ರೈತಾಪಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅಮೆರಿಕ, ಇಂಗ್ಲೆಂಡ್ ಮತ್ತು ಐರೋಪ್ಯ ಒಕ್ಕೂಟದ ಜೊತೆಗಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಪಟ್ಟ ಹಾಗೆ ಅವರು ಸುಳ್ಳಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಒಪ್ಪಂದ ದೇಶದ ರೈತರಿಗೆ ಮಾರಕ ಎಂದಿರುವ ರಾಹುಲ್ ಹೇಳಿಕೆ ಹಾಸ್ಯಾಸ್ಪದ. ರಾಹುಲ್ ಸಂಸತ್ತಿನಲ್ಲಿ ರೈತರ ರಕ್ಷಣೆ ಮಾಡುವುದಾಗಿ ಹೇಳುವಾಗ ನಗು ಬರುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ರೈತರನ್ನು ತಪ್ಪು ದಾರಿಗೆ ಎಳೆದ ಮತ್ತು ಇಂತಹ

ದೇಶದ ರೈತರನ್ನು ಹಾದಿ ತಪ್ಪಿಸುವ ಕಾರ್ಯ ರಾಹುಲ್ ಗಾಂಧಿ ಅವರದ್ದು: ಅಮಿತ್ ಶಾ ವ್ಯಂಗ್ಯ Read More »

ವಂದೇ ಮಾತರಂ ಅನ್ನು ರಾಷ್ಟ್ರಗೀತೆಯಾಗಿಸುವ ಕೇಂದ್ರದ ಪ್ರಯತ್ನ ಸರಿಯಲ್ಲ: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ‌ಮಾಡುವ ಕೇಂದ್ರ ಸರ್ಕಾರದ ಪ್ರಯತ್ನ ಸರಿಯಲ್ಲ ಎಂದು MLC ಬಿ.ಕೆ. ಹರಿಪ್ರಸಾದ್ ಕಿಡಿ ಕಾರಿದ್ದಾರೆ. ಭಾರತ ದೇಶದಲ್ಲಿ ವಿವಿಧ ಧರ್ಮದ ಜನರಿದ್ದಾರೆ. ಅವರೆಲ್ಲರಿಗೂ ಈ ಗೀತೆ ಸಮಾನ ಸ್ವೀಕಾರಾರ್ಹವಲ್ಲ. ರಾಷ್ಟ್ರ ಗೀತೆಯ ಗೌರವವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆಗೆ ಅಧಿಕ ಪ್ರಶಾಸ್ತ್ಯ ನೀಡುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಗೀತೆಗೂ ಮೊದಲು ವಂದೇ ಮಾತರಂ‌ ಹಾಡುವುದು ಸಂಪ್ರದಾಯಕ್ಕೆ ವಿರುದ್ಧ. ಕೋಮು ರಾಜಕೀಯ ಉದ್ದೀಪನಕ್ಕೆ ಈ ವಿಷಯವನ್ನು

ವಂದೇ ಮಾತರಂ ಅನ್ನು ರಾಷ್ಟ್ರಗೀತೆಯಾಗಿಸುವ ಕೇಂದ್ರದ ಪ್ರಯತ್ನ ಸರಿಯಲ್ಲ: ಬಿ.ಕೆ. ಹರಿಪ್ರಸಾದ್ Read More »

ನ್ಯಾಯವಾದಿ ಪ್ರದೀಶ್ ಪಿ.ಜೆ. ಕ್ರಿಶ್ಚಿಯನ್‌ ವಿವಾಹ ನೋಂದಣಿ ಅಧಿಕಾರಿಯಾಗಿ ನೇಮಕ

ಕಡಬ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯ ಯುವ ನ್ಯಾಯವಾದಿ ಪ್ರದೀಶ್ ಪಿ.ಜೆ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಕ್ರಿಶ್ಚಿಯನ್‌ ವಿವಾಹ ನೋಂದಣಿ ಅಧಿಕಾರಿಯಾಗಿ ಸರ್ಕಾರ ನೇಮಿಸಿದೆ. 1872ರ ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯ್ದೆಯ ಕಲಂ 07 (ಕೇಂದ್ರ ಕಾಯ್ದೆ XV) ಹಾಗೂ ಕ್ರಿಶ್ಚಿಯನ್ ವಿವಾಹ (ಕರ್ನಾಟಕ) ನಿಯಮಗಳು 1961ರನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಲು ವಿವಾಹ ನೋಂದಣಿ ಮಾಡುವ ಉದ್ದೇಶಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತಗೊಳಿಸಿ ಕ್ರಿಶ್ಚಿಯನ್ ಜನಾಂಗದ ವಿವಾಹ ವಿಧಿ ನೆರವೇರಿಸಲು ವಿವಾಹ ನೋಂದಣಾಧಿಕಾರಿಯನ್ನಾಗಿ ತಕ್ಷಣದಿಂದ

ನ್ಯಾಯವಾದಿ ಪ್ರದೀಶ್ ಪಿ.ಜೆ. ಕ್ರಿಶ್ಚಿಯನ್‌ ವಿವಾಹ ನೋಂದಣಿ ಅಧಿಕಾರಿಯಾಗಿ ನೇಮಕ Read More »

ಮಂಗಳವಾರ ಕಂಕಣ ಸೂರ್ಯ ಗ್ರಹಣ

ಎಷ್ಟು ಹೊತ್ತಿಗೆ ಗ್ರಹಣ, ಎಲ್ಲೆಲ್ಲಿ ಗೋಚರ? ನವದೆಹಲಿ: 2026ರ ಮೊದಲ ಸೂರ್ಯ ಗ್ರಹಣ ಮಂಗಳವಾರ (ಫೆ.17) ಗೋಚರವಾಗಲಿದೆ. ಇದನ್ನ ʻರಿಂಗ್ ಆಫ್ ಫೈರ್ʼ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಮಂಗಳವಾರ ಮಧ್ಯಾಹ್ನ 3.26ರ ವೇಳೆಗೆ ಗ್ರಹಣ ಪ್ರಾರಂಭವಾಗಿ ಸಂಜೆ 7.57ಕ್ಕೆ ಕೊನೆಗೊಳ್ಳಲಿದೆ. ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಕೇಂದ್ರದ 96%ರಷ್ಟನ್ನು ಚಂದ್ರ ಆವರಿಸಲಿದೆ. ಆದ್ರೆ ಈ ಗ್ರಹಣ ಭಾರತದಲ್ಲಿ ಗೋಚರ ಆಗುವುದಿಲ್ಲ. ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕದ ಕೆಲವು ಭಾಗಗಳು, ಟಾಂಜಾನಿಯಾ,

ಮಂಗಳವಾರ ಕಂಕಣ ಸೂರ್ಯ ಗ್ರಹಣ Read More »

error: Content is protected !!
Scroll to Top