ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಡಿ.ಕೆ. ಶಿವಕುಮಾರ್ ಭರವಸೆ

ಬೆಂಗಳೂರು: ಕಬ್ಬನ್ ಪಾರ್ಕ್ ಪುನಶ್ಚೇತನ ಕಾರ್ಯಕ್ಕೆ ಡಿ ಸಿ ಎಂ ಡಿ.ಕೆ. ಶಿವಕುಮಾರ್ 5 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಬೆಂಗಳೂರಿನ ಶ್ವಾಸ ಕೋಶಗಳು ಎಂದು ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಅನ್ನು ಬಣ್ಣಿಸಿರುವ ಅವರು, ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ನೀಡುವುದಾಗಿ ವಾಗ್ದಾನ ನೀಡಿರುವುದಾಗಿದೆ. ಕಬ್ಬನ್ ಪಾರ್ಕ್ ಆಸುಪಾಸಿನಲ್ಲಿ ಯಾವುದೇ ಹೊಸ ನಿರ್ಮಾಣಕ್ಕೆ ಆಸ್ಪದ ಇಲ್ಲ. ಕಬ್ಬನ್ ಪಾರ್ಕ್ ಬಗ್ಗೆ ಜನರು ಸಹ ಕಾಳಜಿ ವಹಿಸಬೇಕು. ಈ ಸ್ಥಳದ […]

ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಡಿ.ಕೆ. ಶಿವಕುಮಾರ್ ಭರವಸೆ Read More »

ಕೊಟ್ಟ ಸಾಲ ಮರಳಿ ಕೊಡದಕ್ಕೆ ಗೆಳೆಯನ ಹತ್ಯೆ

ಬೆಳಗಾವಿ: ಕೊಟ್ಟ ಎರಡು ಸಾವಿರ ರೂ. ಸಾಲ ತಿರುಗಿಸಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಕೊಡಲಿಯಿಂದ ಕಡಿದು ಕೊಲೆ ಮಾಡಿ, ಆರೋಪಿ ಪೊಲೀಸರಿಗೆ ಶರಣಾದ ಘಟನೆ ಬೈಲಹೊಂಗಲದ ಗಿರಿಯಾಲ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಗೌಡರ್ ‌ಎಂಬವನೇ ಮೃತ ದುರ್ದೈವಿ. ಆರೋಪಿ ದಯಾನಂದ ಗುಂಡ್ಲೂರ ಎಂಬಾತನಿಂದ ಕಳೆದ ವಾರವಷ್ಟೇ ಮಂಜುನಾಥ ಹಣ ಸಾಲ ಪಡೆದು, ಒಂದು ವಾರದಲ್ಲಿ ಹಿಂದಿರುಗಿಸುವುದಾಗಿ ತಿಳಿಸಿದ್ದ. ಅವಧಿ ಮುಗಿದಾಗ ದಯಾನಂದ ಹಣ ವಾಪಸ್ಸು ಕೇಳಿದ್ದಾನೆ. ಆಗ ಇಬ್ಬರಿಗೂ ಜಗಳವಾಗಿದೆ. ಜಗಳ ಮಂಜುನಾಥನ ಕೊಲೆಯಲ್ಲಿ ಅಂತ್ಯವಾಗಿದೆ.

ಕೊಟ್ಟ ಸಾಲ ಮರಳಿ ಕೊಡದಕ್ಕೆ ಗೆಳೆಯನ ಹತ್ಯೆ Read More »

ಭಾರೀ ಮಳೆ: ಹಂಪಿ ವಿರೂಪಾಕ್ಷ ದೇವಾಲಯ ಜಲಾವೃತ

ವಿಜಯನಗರ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿದ್ದು, ಪರಿಣಾಮ ಹಂಪಿ ವಿರೂಪಾಕ್ಷ ದೇಗುಲದ ಆವರಣ ಜಲಾವೃತವಾಗಿದೆ. ದೇಗುಲದ ಆವರಣದಲ್ಲಿ ಮೊಣಕಾಲು ಮುಳುಗುವಷ್ಟು ನೀರು ನಿಂತಿದ್ದು, ಜನರು ಪರದಾಡುವಂತಾಗಿದೆ. ಭಕ್ತರು, ಪ್ರವಾಸಿಗರು ಸಮಸ್ಯೆ ಅನುಭವಿಸುವಂತಾಗಿದೆ. ನೀರಿನ ನಡುವೆಯೇ ಭಕ್ತರು ವಿರೂಪಾಕ್ಷನ ದರ್ಶನ ಪಡೆಯುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಭಾರೀ ಮಳೆ: ಹಂಪಿ ವಿರೂಪಾಕ್ಷ ದೇವಾಲಯ ಜಲಾವೃತ Read More »

ಬಿಳಿಯೂರು ಸ. ಹಿ. ಪ್ರಾ. ಶಾಲೆಯಲ್ಲಿ ರಕ್ತದಾನ ಶಿಬಿರ

ಪುತ್ತೂರು: ಸ್ಪಂದನಾ ಯುವತಿ ಮಂಡಳಿ(ರಿ) ಬಿಳಿಯೂರು ಮತ್ತು ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು(ಲೇಡಿಗೋಷನ್ ಆಸ್ಪತ್ರೆ) ಇವರುಗಳ ಜಂಟಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಪೆರ್ನೆ- ಕರ್ವೇಲು ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಿಳಿಯೂರು ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ರಕ್ತದಾನ ಶಿಬಿರ ನಡೆಯಿತು. ಶಿಬಿರದಲ್ಲಿ ಪೆರ್ನೆ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ 15 ಕ್ಕೂ ಹೆಚ್ಚು

ಬಿಳಿಯೂರು ಸ. ಹಿ. ಪ್ರಾ. ಶಾಲೆಯಲ್ಲಿ ರಕ್ತದಾನ ಶಿಬಿರ Read More »

ಡಾ. ಶ್ರೀಕುಮಾರ್ ಈಶ್ವರಮಂಗಲ ಇವರಿಗೆ ಪುತ್ತಿಲ ಪರಿವಾರ ಕಾವು ಘಟಕದಿಂದ ಸನ್ಮಾನ

ಪುತ್ತೂರು: ಕಳೆದ ಒಂದೂವರೆ ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ 8 ನೇ ತರಗತಿಯ ವಿದ್ಯಾರ್ಥಿಯು ಅನೇಕ ವೈದ್ಯರ ಚಿಕಿತ್ಸೆಯ ನಂತರವೂ ಚೇತರಿಸಿಕೊಳ್ಳದೇ ಅವನ ವಿದ್ಯಾಭ್ಯಾಸವನ್ನೇ ಅರ್ಧದಲ್ಲಿ ನಿಲ್ಲಿಸುವ ಪರಿಸ್ಥಿತಿಯಲ್ಲಿ ಪೋಷಕರೂ ಕಂಗಾಲಾಗಿದ್ದರು. ಈ ವಿಚಾರವನ್ನು ಅರಿತ ಕತ್ರಿಬೈಲ್ ಡಾ.ಶ್ರೀಕುಮಾರ್ ಅವರು ಮತ್ತು ಮಂಗಳೂರಿನ ಸರ್ಜನ್ ಡಾ.ರಾಜೇಶ್ ಬಲ್ಲಾಳ್ ಈ ಖಾಯಿಲೆಯನ್ನು ಸವಾಲಾಗಿ ಸ್ವೀಕರಿಸಿ ಕೇವಲ 15 ದಿನದಲ್ಲಿ ವಿದ್ಯಾರ್ಥಿಯ ಹೊಟ್ಟೆನೋವು ಸಂಪೂರ್ಣವಾಗಿ ಗುಣವಾಗಿ ಆ ಪ್ರತಿಭಾವಂತ ವಿದ್ಯಾರ್ಥಿಯ ಬದುಕಿಗೆ ಬಾಳ ಬೆಳಕಾಗಿದ್ದಾರೆ. ಇಬ್ಬರು ವೈದ್ಯರ ಈ ಸೇವೆಯನ್ನು ಮನಗಂಡು

ಡಾ. ಶ್ರೀಕುಮಾರ್ ಈಶ್ವರಮಂಗಲ ಇವರಿಗೆ ಪುತ್ತಿಲ ಪರಿವಾರ ಕಾವು ಘಟಕದಿಂದ ಸನ್ಮಾನ Read More »

ನ್ಯಾ.ಸೂರ್ಯಕಾಂತ್ ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಾಧೀಶ

ಭಾರತದ 53ನೇ ಸಿಜೆಐಗೆ ಆಗಿ ನವೆಂಬರ್‌ನಲ್ಲಿ ಅಧಿಕಾರ ಸ್ವೀಕಾರ ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ನವೆಂಬರ್​ನಲ್ಲಿ ನಿವೃತ್ತಿ ಹೊಂದಲಿದ್ದು, ನ್ಯಾ.ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಗವಾಯಿ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನಿವೃತ್ತಿಯ ನಂತರ ಅವರು ಈ ಹುದ್ದೆಯನ್ನು ವಹಿಸಿಕೊಂಡಿದ್ದರು. ಸಿಜೆಐ ಗವಾಯಿ ಅವರು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಹಿರಿತನದ ಆಧಾರದ ಮೇಲೆ ನ್ಯಾಯಮೂರ್ತಿ ಸೂರ್ಯಕಾಂತ್ ಭಾರತದ 53ನೇ

ನ್ಯಾ.ಸೂರ್ಯಕಾಂತ್ ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಾಧೀಶ Read More »

ಧರ್ಮಸ್ಥಳ ಪ್ರಕರಣ : ಸುಜಾತ ಭಟ್‌ ವಿಚಾರಣೆಗೆ ಹಾಜರು

ಇಂದು ಎಸ್‌ಐಟಿಯಿಂದ ನಾಲ್ವರ ಮಹತ್ವದ ವಿಚಾರಣೆ ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಎಸ್.ಐ‌.ಟಿ ವಿಚಾರಣೆಗೆ ಸುಜಾತ ಭಟ್‌ ಆಗಮಿಸಿದ್ದಾರೆ. ಬೆಂಗಳೂರಿನಿಂದ ಇಂದು ಬೆಳಗ್ಗೆ ಆಗಮಿಸಿದ ಸುಜಾತ ಭಟ್ ಎಸ್‌ಐಟಿ ಅಧಿಕಾರಿಗಳ ಎದುರು ಹಾಜರಾಗಿದ್ದಾರೆ. ಧರ್ಮಸ್ಥಳ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಚಿನ್ನಯ್ಯ, ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್ ಜೊತೆ ಸುಜಾತ ಭಟ್ ದೆಹಲಿಗೆ ಹೋಗಿದ್ದ ಪ್ರಕರಣ ಮತ್ತು ಚಿನ್ನಯ್ಯನಿಗೆ ಬೆಂಗಳೂರು ಮನೆಯಲ್ಲಿ ಆಶ್ರಯ ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆಗೆ ಅ.27 ರಂದು ಸೋಮವಾರ ಬೆಳಗ್ಗೆ ಎಸ್.ಐ.ಟಿ ಕಚೇರಿಗೆ

ಧರ್ಮಸ್ಥಳ ಪ್ರಕರಣ : ಸುಜಾತ ಭಟ್‌ ವಿಚಾರಣೆಗೆ ಹಾಜರು Read More »

ಪ್ರಯಾಣಿಕರ ಸುರಕ್ಷೆಗೆ ಸರ್ಕಾರಿ ಬಸ್‌ಗಳಲ್ಲಿ ಇನ್ನು ಈ ವಸ್ತು ಇರುವುದು ಕಡ್ಡಾಯ

ಕೆಎಸ್‌ಆರ್‌ಟಿಸಿ ನಿಗಮಗಳಿಗೆ ಸರ್ಕಾರ ಮಹತ್ವದ ಸೂಚನೆ ಬೆಂಗಳೂರು: ಆಂಧ್ರ ಪ್ರದೇಶದ ಕರ್ನೂಲ್ ಬಳಿ ಖಾಸಗಿ ಬಸ್ ಬೆಂಕಿ ಹೊತ್ತಿಕೊಂಡು, 20 ಮಂದಿ ಸಜೀವ ದಹನವಾಗಿರುವ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣಿಕರ ಸುರಕ್ಷತೆಗಾಗಿ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಸಾರಿಗೆ ಬಸ್ಸುಗಳಲ್ಲಿ ಸ್ಪೋಟಗೊಳ್ಳುವಂಥ ವಸ್ತುಗಳನ್ನು ಪ್ರಯಾಣಿಕರು ಕೊಂಡೊಯ್ಯುವುದಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರ ಪ್ರತಿ ಬ್ಯಾಗ್ ಚೆಕ್ ಮಾಡುವಂತೆಯೂ ರಾಜ್ಯ ಸರ್ಕಾರ ಸೂಚಿಸಿದೆ. ಈ ಕುರಿತಂತೆ ಎಲ್ಲ ನಿಗಮಗಳ ವ್ಯವಸ್ಥಾಪಕ

ಪ್ರಯಾಣಿಕರ ಸುರಕ್ಷೆಗೆ ಸರ್ಕಾರಿ ಬಸ್‌ಗಳಲ್ಲಿ ಇನ್ನು ಈ ವಸ್ತು ಇರುವುದು ಕಡ್ಡಾಯ Read More »

ಪಿಎಂಇಜಿಪಿ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚನೆ : ಮಹಿಳೆ ಬಂಧನ

ಉಡುಪಿ: ಕೇಂದ್ರ ಸರ್ಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣದಲ್ಲಿ ಆರೋಪಿ ಮಹಿಳೆಯೊಬ್ಬರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಉಡುಪಿ ಸಮೀಪದ ಬ್ರಹ್ಮಾವರದ ಕೌಶಲ್ಯ ಎಂದು ಗುರುತಿಸಲಾಗಿದೆ ಈಕೆ 2023ರ ನವೆಂಬರ್‌ನಲ್ಲಿ ಬಾರಕೂರು ಹೇರಾಡಿಯ ಸರಿತಾ ಲೂವಿಸ್ ಎಂಬವರಿಗೆ ಪಿಎಂಇಜಿಪಿ ಅಡಿಯಲ್ಲಿ ಸಬ್ಸಡಿ ಲೋನ್ ಮಾಡಿಸಿಕೊಡುವುದಾಗಿ ಹೇಳಿದ್ದು ನಂತರದ ದಿನಗಳಲ್ಲಿ ಸಬ್ಸಡಿ ಲೋನ್ ಬಗ್ಗೆ ಹಲವಾರು ಕಾರಣಗಳನ್ನು ತಿಳಿಸಿ ಹಣ ಪಾವತಿಸುವಂತೆ ತಿಳಿಸಿದ್ದಳು. ಅದರಂತೆ ಸರಿತಾ

ಪಿಎಂಇಜಿಪಿ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚನೆ : ಮಹಿಳೆ ಬಂಧನ Read More »

ಪಿಎಂಇಜಿಪಿ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚನೆ : ಮಹಿಳೆ ಬಂಧನ

ಉಡುಪಿ: ಕೇಂದ್ರ ಸರ್ಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣದಲ್ಲಿ ಆರೋಪಿ ಮಹಿಳೆಯೊಬ್ಬರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಉಡುಪಿ ಸಮೀಪದ ಬ್ರಹ್ಮಾವರದ ಕೌಶಲ್ಯ ಎಂದು ಗುರುತಿಸಲಾಗಿದೆ ಈಕೆ 2023ರ ನವೆಂಬರ್‌ನಲ್ಲಿ ಬಾರಕೂರು ಹೇರಾಡಿಯ ಸರಿತಾ ಲೂವಿಸ್ ಎಂಬವರಿಗೆ ಪಿಎಂಇಜಿಪಿ ಅಡಿಯಲ್ಲಿ ಸಬ್ಸಡಿ ಲೋನ್ ಮಾಡಿಸಿಕೊಡುವುದಾಗಿ ಹೇಳಿದ್ದು ನಂತರದ ದಿನಗಳಲ್ಲಿ ಸಬ್ಸಡಿ ಲೋನ್ ಬಗ್ಗೆ ಹಲವಾರು ಕಾರಣಗಳನ್ನು ತಿಳಿಸಿ ಹಣ ಪಾವತಿಸುವಂತೆ ತಿಳಿಸಿದ್ದಳು. ಅದರಂತೆ ಸರಿತಾ

ಪಿಎಂಇಜಿಪಿ ಸಾಲ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚನೆ : ಮಹಿಳೆ ಬಂಧನ Read More »

error: Content is protected !!
Scroll to Top