ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಭಜನೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಸಮಾಲೋಚನಾ ಸಭೆ

ಅಳಿಕೆ ವಲಯ ಮಟ್ಟದ ಭಜನೋತ್ಸವ ಸಮಿತಿ ಅಧ್ಯಕ್ಷರಾಗಿ ಮಾರಪ್ಪ ಶೆಟ್ಟಿ ಬೈಲುಗುತ್ತು ಆಯ್ಕೆ ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ, ಅಳಿಕೆ ವಲಯದ ಭಜನೋತ್ಸವ ಕಾರ್ಯಕ್ರಮದ ಪೂರ್ವತಯಾರಿ ಬಗ್ಗೆ ಸಮಾಲೋಚನೆ ಸಭೆ ನಡೆಯಿತು. ಡಿ. 21 ಆದಿತ್ಯವಾರದಂದು ನಡೆಯುವ ವಲಯಮಟ್ಟದ ಭಜನೋತ್ಸವ ಕಾರ್ಯಕ್ರಮದ ಪೂರ್ವತಯಾರಿ ಸಭೆಯನ್ನು ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಸಲಾಯಿತು. ಸಭೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಅಧ್ಯಕ್ಷರಾಗಿ ದೇವಸ್ಥಾನದ ಆಡಳಿತ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ತಾಲೂಕು […]

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಭಜನೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಸಮಾಲೋಚನಾ ಸಭೆ Read More »

ಡಾಕ್ಟರ್‌ಗಳ ವೈಟ್‌ ಕಾಲರ್‌ ಉಗ್ರ ಜಾಲಕ್ಕೆ ಹರಿದು ಬಂದಿದೆ ಅಪಾರ ಹಣ

ಕಾರು ಸ್ಫೋಟಿಸಿಕೊಂಡು ಸತ್ತಿರುವ ಡಾ.ಉಮರ್‌ ನಬಿಯ ಖಾತೆಯಲ್ಲಿ ಲಕ್ಷಾಂತರ ರೂ. ವ್ಯವಹಾರ ಪತ್ತೆ ನವದೆಹಲಿ: ಇತ್ತೀಚೆಗೆ ಪೊಲೀಸರು ಬಯಲಿಗೆಳೆದಿರುವ ಡಾಕ್ಟರ್‌ಗಳು ಒಳಗೊಂಡಿರುವ ವೈಟ್‌ ಕಾಲರ್‌ ಉಗ್ರ ಜಾಲಕ್ಕೆ ಅಪಾರ ಪ್ರಮಾಣದಲ್ಲಿ ಹಣ ಹರಿದು ಬಂದಿರುವುದು ತನಿಖೆಯಿಂದ ಬಯಲಾಗಿದೆ. ದೆಹಲಿ ಕೆಂಪುಕೋಟೆ ಬಳಿ ಕಾರು ಸ್ಫೋಟಿಸಿಕೊಂಡು ಸತ್ತಿರುವ ಡಾ.ಉಮರ್‌ ನಬಿಯ ಒಂದು ಖಾತೆಗೆ ಸುಮಾರು 20 ಲ.ರೂ. ವರ್ಗಾಯಿಸಿದ್ದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಇತರ ವೈಟ್‌ ಕಾಲರ್‌ ಉಗ್ರರ ಹಣಕಾಸು ವಹಿವಾಟುಗಳ ಕುರಿತು ತೀವ್ರ ತನಿಖೆ ನಡೆಯುತ್ತಿದೆ.

ಡಾಕ್ಟರ್‌ಗಳ ವೈಟ್‌ ಕಾಲರ್‌ ಉಗ್ರ ಜಾಲಕ್ಕೆ ಹರಿದು ಬಂದಿದೆ ಅಪಾರ ಹಣ Read More »

ಕೌನ್ಸೆಲಿಂಗ್‌ ಸೆಂಟರ್‌ನಲ್ಲಿ ಮಹಿಳೆಗೆ ಕಿರುಕುಳ : ಆರೋಪಿ ಸೆರೆ

ಉಡುಪಿ: ಕಾಪು ತಾಲೂಕಿನ ಮೂಳೂರು ಗ್ರಾಮದಲ್ಲಿರುವ ‘ಸುನಂದಾ ವೆಲ್ನೆಸ್ ಸೆಂಟರ್’ನಲ್ಲಿ ಕೌನ್ಸೆಲಿಂಗ್‌ಗೆ ಬಂದಿದ್ದ ಮಹಿಳೆಯ ದೇಹ ಸ್ಪರ್ಶ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪಿ ನಿರಂಜನ ಶೇಖರ ಶೆಟ್ಟಿ (52) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದಾಂಪತ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆ ಕೌನ್ಸಿಲಿಂಗ್‌ಗಾಗಿ ಕಂಕಣಗುತ್ತು ಕಂಪೌಂಡ್‌ನಲ್ಲಿರುವ ವೆಲ್ನೆಸ್ ಸೆಂಟರ್‌ಗೆ ಭೇಟಿ ನೀಡಿದ್ದರು. ಈ ವೇಳೆ ಕೌನ್ಸೆಲಿಂಗ್‌ ಮಾಡುತ್ತಿದ್ದ ನಿರಂಜನ ಶೇಖರ ಶೆಟ್ಟಿ ದೈಹಿಕ ಸ್ಪರ್ಶ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು ದಾಖಲಾಗಿದೆ. ಘಟನೆ ಬಳಿಕ

ಕೌನ್ಸೆಲಿಂಗ್‌ ಸೆಂಟರ್‌ನಲ್ಲಿ ಮಹಿಳೆಗೆ ಕಿರುಕುಳ : ಆರೋಪಿ ಸೆರೆ Read More »

ಇಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ : ಪೊಲೀಸರ ಬಿಗು ಬಂದೋಬಸ್ತು

ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಪಥಸಂಚಲನ ಕಿತ್ತಾಟ ಬೆಂಗಳೂರು: ಸಾಕಷ್ಟು ಕಾದಾಟಕ್ಕೆ ಸಾಕ್ಷಿಯಾಗಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದ ಆರ್‌ಎಸ್‌ಎಸ್‌ ಪಥಸಂಚಲನ ಇಂದು ಅಪರಾಹ್ನ ನಡೆಯಲಿದೆ. ಪಥಸಂಚಲನಕ್ಕೆ ಹೈಕೋರ್ಟ್‌ ಅನುಮತಿ ನೀಡಿದ್ದು, ಇಡೀ ರಾಜ್ಯದ ಚಿತ್ತ ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರದತ್ತ ನೆಟ್ಟಿದೆ. ಅಭೂತಪೂರ್ವ ಪೊಲೀಸ್‌ ಬಂದೋಬಸ್ತಿನಲ್ಲಿ ಪಥಸಂಚಲನ ನಡೆಯಲಿದೆ. ಕಳೆದೊಂದು ತಿಂಗಳಿಂದ ರಾಷ್ಟ್ರಮಟ್ಟದಲ್ಲಿ ಚಿತ್ತಾಪುರದ ಆರ್‌ಎಸ್‌ಎಸ್‌ ಪಥಸಂಚಲನ ಸುದ್ದಿ ಮಾಡಿತ್ತು. ಬಿಹಾರದಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿಗೆ ಪ್ರಿಯಾಂಕ್‌ ಖರ್ಗೆಯ ಆರ್‌ಎಸ್‌ಎಸ್‌ ವಿರೋಧಿ ಹೇಳಿಕೆಗಳು ಒಂದು ಕಾರಣ ಎಂಬ

ಇಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ : ಪೊಲೀಸರ ಬಿಗು ಬಂದೋಬಸ್ತು Read More »

ವಿದ್ಯಾರ್ಥಿನಿಗೆ ಕಿರುಕುಳ : ಉಪನ್ಯಾಸಕನ ವಿರುದ್ಧ ಎಫ್‌ಐಆರ್‌

ಹೆಚ್ಚು ಮಾರ್ಕ್‌ ಕೊಡುತ್ತೇನೆ ಎಂದು ಕಿರುಕುಳ ನೀಡುತ್ತಿದ್ದ ಇಂಜಿನಿಯರಿಂಗ್‌ ಕಾಲೇಜು ಉಪನ್ಯಾಸಕ ಮೈಸೂರು : ನಗರದ ಪ್ರತಿಷ್ಠಿತ ಇಂಜಿನಿಯರಿಂಗ್​​ ಕಾಲೇಜಿನಲ್ಲಿ ಉಪನ್ಯಾಸಕನೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ಕೇಸ್‌ ದಾಖಲಾಗಿದೆ. ಹೆಚ್ಚು ಮಾರ್ಕ್ಸ್ ನೀಡ್ತೇನೆ, ಒಳ್ಳೆಯ ಕೆಲಸ ಕೊಡಿಸುತ್ತೇನೆ. ಹೊರಗಡೆ ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಎಂದು ಕಿರುಕುಳ ನೀಡಿರುವುದಾಗಿ ವಿದ್ಯಾರ್ಥಿನಿ ದೂರು ನೀಡಿದ್ದು, ಉಪನ್ಯಾಸಕ ಭರತ್ ಭಾರ್ಗವ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಉಪನ್ಯಾಸಕ ನೀಡುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ವಿದ್ಯಾರ್ಥಿನಿ ಮಹಿಳಾ ಉಪನ್ಯಾಸಕರ

ವಿದ್ಯಾರ್ಥಿನಿಗೆ ಕಿರುಕುಳ : ಉಪನ್ಯಾಸಕನ ವಿರುದ್ಧ ಎಫ್‌ಐಆರ್‌ Read More »

ಲಂಚ ಪಡೆದು ಪ್ರಶ್ನೆ ಕೇಳಿದ ಪ್ರಕರಣ : ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿ

ಉದ್ಯಮಿಯಿಂದ ಲಂಚ ಪಡೆದು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ಟಿಎಂಸಿ ಸಂಸದೆ ನವದೆಹಲಿ : ತೃಣಮೂಲ ಕಾಂಗ್ರೆಸ್‌ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ವಿರುದ್ಧವಿರುವ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ನಾಲ್ಕು ವಾರಗಳಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಲೋಕಪಾಲವು ಸಿಬಿಐಗೆ ಅನುಮತಿ ನೀಡಿದೆ. ಇದರೊಂದಿಗೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರ ಕ್ಷೇತ್ರದ ಸಂಸದೆ ವಿರುದ್ಧ ಸಿಬಿಐ ಕಾನೂನು ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ನವೆಂಬರ್ 12ರಂದು ಸಭೆ ನಡೆಸಿದ

ಲಂಚ ಪಡೆದು ಪ್ರಶ್ನೆ ಕೇಳಿದ ಪ್ರಕರಣ : ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿ Read More »

ಹಾವು, ನಾಯಿ ಕಡಿತಕ್ಕೆ ಮುಂಗಡ ಹಣ ಕೇಳದೆ ಚಿಕಿತ್ಸೆ : ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಆದೇಶ

ಆ್ಯಂಟಿ ರೇಬೀಸ್ ಲಸಿಕೆ, ರೇಬೀಸ್ ಇಮ್ಯುನೊಗ್ಲೋಬುಲಿನ್‌ಗಳ ಸಂಗ್ರಹ ಕಡ್ಡಾಯ ಬೆಂಗಳೂರು : ಖಾಸಗಿ ಆಸ್ಪತ್ರೆಗಳು ಹಾವು ಕಡಿತ, ನಾಯಿ ಕಡಿತ ಸೇರಿ ಪ್ರಾಣಿ ಕಡಿತದ ತುರ್ತು ಸಂದರ್ಭಗಳಲ್ಲಿ ಮುಂಗಡ ಹಣ ಪಾವತಿಗೆ ಒತ್ತಾಯಿಸದೆ ಸಂತ್ರಸ್ತರಿಗೆ ಚಿಕಿತ್ಸೆ ನೀಡಬೇಕು ಎಂದು ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಆ್ಯಂಟಿ ರೇಬೀಸ್ ಲಸಿಕೆಗಳು ಮತ್ತು ರೇಬೀಸ್ ಇಮ್ಯುನೊಗ್ಲೋಬುಲಿನ್‌ಗಳ ಸಂಗ್ರಹ ಹೊಂದಿರಬೇಕು. ನಾಯಿ, ಹಾವು ಸೇರಿದಂತೆ ಇತರ ಪ್ರಾಣಿಗಳು ಕಚ್ಚಿದವರಿಗೆ ಉಚಿತ ಪ್ರಾಥಮಿಕ

ಹಾವು, ನಾಯಿ ಕಡಿತಕ್ಕೆ ಮುಂಗಡ ಹಣ ಕೇಳದೆ ಚಿಕಿತ್ಸೆ : ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಆದೇಶ Read More »

ಎಸ್‌ಐಟಿ ಅಧಿಕಾರಿಗಳ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಿದ ಜಯಂತ್‌ ಟಿ.

ಜಿತೇಂದ್ರ ದಯಾಮ, ಸೈಮನ್‌, ಆರ್‌.ಜಿ.ಮಂಜುನಾಥ ಮತ್ತಿತರರ ವಿರುದ್ಧ ದೂರು ಬೆಳ್ತಂಗಡಿ: ಎಸ್‌ಐಟಿ ತನ್ನ ಮೇಲೆ ಮಾಡಿ, ಬಲವಂತವಾಗಿ ಹೇಳಿಕೆ ಪಡೆದುಕೊಂಡಿದೆ ಎಂದು ಆರೋಪಿಸಿ ರಾಜ್ಯಪಾಲರು ಮತ್ತು ಪೊಲೀಸ್‌ ಮಹಾವರಿಷ್ಠರಿಗೆ ದೂರು ನೀಡಿದ್ದ ಜಯಂತ್‌ ಟಿ. ಈಗ ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತಿಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳ ವಿರುದ್ಧವೇ ಬೆಳ್ತಂಗಡಿ ಠಾಣೆಗೆ ಜಯಂತ್ ಟಿ. ದೂರು ನೀಡಿದ್ದಾರೆ. ಎಸ್‌ಐಟಿ ಅಧಿಕಾರಿಗಳಾದ ಜಿತೇಂದ್ರ ದಯಾಮ, ಎಸ್.ಪಿ. ಸೈಮನ್, ಡಿವೈಎಸ್ಪಿ ಆರ್ ಜಿ. ಮಂಜುನಾಥ, ಇನ್‌ಸ್ಪೆಕ್ಟ‌ರ್ ಮಂಜುನಾಥ

ಎಸ್‌ಐಟಿ ಅಧಿಕಾರಿಗಳ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಿದ ಜಯಂತ್‌ ಟಿ. Read More »

ಚಂದ್ರಾ ಫ್ಯಾನ್ಸಿ ಮಾಲೀಕ ದಿನೇಶ್ ಆಚಾರ್ಯ ಇನ್ನಿಲ್ಲ

ಪುತ್ತೂರು: ವೆಂಕಟರಮಣ ದೇವಾಲಯದ ಸಮೀಪದಲ್ಲಿರುವ ಚಂದ್ರಾ ಫ್ಯಾನ್ಸಿ ಮಾಲಕ ದಿನೇಶ್ ಆಚಾರ್ಯ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಕುಸಿದು ಬಿದ್ದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಗಲೇ ಅವರು ಮೃತಪಟ್ಚಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಮೃತರು ತಾಯಿ, ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

ಚಂದ್ರಾ ಫ್ಯಾನ್ಸಿ ಮಾಲೀಕ ದಿನೇಶ್ ಆಚಾರ್ಯ ಇನ್ನಿಲ್ಲ Read More »

ಪ್ರತಿಷ್ಠಿತ ಪ್ರೇರಣಾ ಸಂಸ್ಥೆಗೆ ಕಚೇರಿ ಸಿಬ್ಬಂದಿ ಬೇಕಾಗಿದ್ದಾರೆ

ಪುತ್ತೂರು: ಏಳ್ಮುಡಿಯ ಪ್ರಭು ಬಿಲ್ಡಿಂಗ್ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಪ್ರೇರಣಾ ಸಂಸ್ಥೆಯಲ್ಲಿ ಖಾಲಿ ಇರುವ ಕಚೇರಿ ಸಿಬ್ಬಂದಿ ಹುದ್ದೆಗೆ ಪದವಿ ವಿದ್ಯಾರ್ಹತೆ ಹೊಂದಿರುವ, ಅಕೌಂಟಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಕಂಪ್ಯೂಟರ್ ಬಲ್ಲ, ಕನ್ನಡ ಟೈಪಿಂಗ್ ತಿಳಿದಿರುವ ಅಭ್ಯರ್ಥಿ ಬೇಕಾಗಿದ್ದಾರೆ. ಆಸಕ್ತರು info@myprerana.in ಇ ಮೇಲ್ ಐಡಿಗೆ ದಿನಾಂಕ 18/11/2025 ರ ಒಳಗೆ ತಮ್ಮ ಬಯೋಡಟಾ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ:‪‪+918904877721‬‬, ‬ ನಂಬರ್ ಗೆ ಸಂಪರ್ಕಿಸಬಹುದು

ಪ್ರತಿಷ್ಠಿತ ಪ್ರೇರಣಾ ಸಂಸ್ಥೆಗೆ ಕಚೇರಿ ಸಿಬ್ಬಂದಿ ಬೇಕಾಗಿದ್ದಾರೆ Read More »

error: Content is protected !!
Scroll to Top