ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದ ಸಭೆ

ಪುತ್ತೂರು : ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್ ಬಂಟ್ವಾಳ ಇದರ ಪುತ್ತೂರು ಘಟಕದ  ಸಭೆಯು ಸ್ವಾಗತ ಹೋಟೆಲ್ ನಲ್ಲಿ ಜರಗಿತು.  ಶಂಕರ ನಾಯ್ಕ್ ಪುಣಚ ಅವರನ್ನು ನೂತನ ಸದಸ್ಯರಾಗಿ ಸೇರ್ಪಡೆ ಗೊಳಿಸಲಾಯಿತು. ಚಂಚಲಾಕ್ಷಿ ಮತ್ತು ಪದ್ಮನಾಭ ಅವರು ಮಾಡುತ್ತಿರುವ ಸಮಾಜ ಸೇವೆಯ ಬಗ್ಗೆ ಅಭಿನಂದನೆ ಸಲ್ಲಿಸಲಾಯಿತು. ಕೇಂದ್ರ‌ ಸಮಿತಿಯ ಕಾರ್ಯಯೋಜನೆಯ ಮಾಹಿತಿಯನ್ನು ಭಾಸ್ಕರ ಬಾರ್ಯ ನೀಡಿದರು.  ಜಿಲ್ಲಾ ಸಮಿತಿಯ ಸಂಚಾಲಕ ಭಾಸ್ಕರ ಬಾರ್ಯ, ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ, ಸಂಚಾಲಕ […]

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದ ಸಭೆ Read More »

ಬೆಳ್ಳಿಪ್ಪಾಡಿಯಲ್ಲಿ ಯೌವನಾಶ್ವ ಕಾಳಗ ತಾಳ ಮದ್ದಳೆ

ಪುತ್ತೂರು : ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ ಇದರ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ   ಕಂಬಳದಡ್ಡ – ಬೆಳ್ಳಿಪ್ಪಾಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯೌವ್ವನಾಶ್ವ ಕಾಳಗ ತಾಳಮದ್ದಳೆ ಜರಗಿತು.  ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ್ ರಾವ್. ಬಿ, ನಿತೇಶ್ ಕುಮಾರ್.ವೈ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ, ಅರ್ಥಧಾರಿಗಳಾಗಿ ರವೀಂದ್ರ ದರ್ಬೆ(ಧರ್ಮರಾಯ), ದಿವಾಕರ ಆಚಾರ್ಯ ಗೇರುಕಟ್ಟೆ, ಪ್ರದೀಪ ಹೆಬ್ಬಾರ್ ಚಾರ (ವ್ಯಾಸ ಮಹರ್ಷಿ,) ಶ್ರೀಧರ ಎಸ್ಪಿ ಸುರತ್ಕಲ್ 

ಬೆಳ್ಳಿಪ್ಪಾಡಿಯಲ್ಲಿ ಯೌವನಾಶ್ವ ಕಾಳಗ ತಾಳ ಮದ್ದಳೆ Read More »

ಛತ್ತೀಸ್‌ಗಢದಲ್ಲಿ 16 ನಕ್ಸಲರ ಹತ್ಯೆ

ರಾಯ್‌ಪುರ: ಛತ್ತೀಸ್‌ಗಢದ ಸುಕ್ಮಾ ಮತ್ತು ದಾಂತೆವಾಡ ಜಿಲ್ಲೆಗಳ ಗಡಿಭಾಗದಲ್ಲಿರುವ ಗೋಮಗುಂಡ ದಟ್ಟಾರಣ್ಯದಲ್ಲಿ ಇಂದು ಮತ್ತೆ 16 ನಕ್ಸಲರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ನಸುಕಿನ ವೇಳೆಗೆ ಪೊಲೀಸರು ಮತ್ತು ನಕ್ಸಲರ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ. ನಿನ್ನೆಯಿಂದೀಚೆಗೆ ಇಲ್ಲಿ ನಕ್ಸಲ್‌ ನಿಗ್ರಹ ಪಡೆಯ ಪೊಲೀಸರು ಭದ್ರತಾ ಪಡೆಯ ಸಹಕಾರದೊಂದಿಗೆ ಕೂಂಬಿಂಗ್‌ ನಡೆಸುತ್ತಿದ್ದರು. ಇಂದು ನಸುಕಿನ ಹೊತ್ತು ಪೊಲೀಸರಿಗೆ ನಕ್ಸಲರು ಎದುರಾಗಿದ್ದು, ಗುಂಡಿನ ಕಾಳಗದಲ್ಲಿ 16 ನಕ್ಸಲರು ಸತ್ತಿರುವುದು ದೃಢಪಟ್ಟಿದೆ. ಇನ್ನೂ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ

ಛತ್ತೀಸ್‌ಗಢದಲ್ಲಿ 16 ನಕ್ಸಲರ ಹತ್ಯೆ Read More »

ಕೆವಿಜಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ | ವಸತಿನಿಲಯದ ಮೇಲ್ವಿಚಾರಕಿಗೆ  ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು

ಪುತ್ತೂರು :  ಸುಳ್ಯದ ಡೆಂಟಲ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿಯೋರ್ವರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರ ಪ್ರಕರಣಕ್ಕೆ ಸಂಬಂಧಿಸಿದ  ವಸತಿನಿಲಯ  ಮೇಲ್ವಿಚಾರಕಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಿದ್ಯಾರ್ಥಿನಿಯ ತಂದೆ ಬೆಳಗಾವಿ ಜಿಲ್ಲೆಯ ಅಥೇನಿ ತಾಲೂಕಿನ ಸಿದ್ಧಪ್ಪ ಶಿವಪ್ಪ ನಿಡೋಣಿ ಅವರು ಫೆ.27ರಂದು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿರುವ ವೇಳೆ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನವೀನ್ ಎಂಬ ವಿದ್ಯಾರ್ಥಿಯು ಮಗಳಿಗೆ ಫೋನ್ ಮಾಡಿ, ನಿನ್ನ ಫೋಟೋಸ್‍

ಕೆವಿಜಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ | ವಸತಿನಿಲಯದ ಮೇಲ್ವಿಚಾರಕಿಗೆ  ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು Read More »

ಹತ್ಯೆಗೆ ಸುಪಾರಿ : ದೂರು ದಾಖಲಿಸಿದ ಎಂಎಲ್‌ಸಿ ರಾಜೇಂದ್ರ

ಸಾಯಿಸಲು ರೌಡಿಶೀಟರ್‌ಗೆ 70 ಲ.ರೂ. ಸುಪಾರಿ ನೀಡಿದ್ದಾರೆ ಎಂದು ಆರೋಪ ತುಮಕೂರು: ಸದನದಲ್ಲಿ ಹನಿಟ್ರ್ಯಾಪ್‌ ಬಾಂಬ್‌ ಸಿಡಿಸಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ಅವರು ತನ್ನ ಹತ್ಯೆಗೆ ಯತ್ನ ನಡೆಯುತ್ತಿದೆ ಎಂದು ತುಮಕೂರಿನಲ್ಲಿ ದೂರು ದಾಖಲಿಸಿದ್ದಾರೆ. ರಾಜೇಂದ್ರ ನೀಡಿದ ದೂರಿನ ಪ್ರಕಾರ ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ರೌಡಿ ಶೀಟರ್ ಸೋಮು ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭರತ್, ಅಮಿತ್, ಗುಂಡಾ ಮತ್ತು ಯತೀಶ್ ಇತರ ಆರೋಪಿಗಳು.

ಹತ್ಯೆಗೆ ಸುಪಾರಿ : ದೂರು ದಾಖಲಿಸಿದ ಎಂಎಲ್‌ಸಿ ರಾಜೇಂದ್ರ Read More »

ಅಂಬೇಡ್ಕರ್‌ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ

ಕೇಂದ್ರ ಸರಕಾರಿ ಕಚೇರಿಗಳು, ಕೈಗಾರಿಕಾ ಸಂಸ್ಥೆಗಳಿಗೆ ಏ.14ರಂದು ರಜೆ ನವದೆಹಲಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮದಿನವಾದ ಏ.14ರಂದು ಸಾರ್ವತ್ರಿಕ ರಜೆ ಘೋಷಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಕೇಂದ್ರದ ಎಲ್ಲ ಸರ್ಕಾರಿ ಕಚೇರಿಗಳಿಗೆ ಅಂದು ರಜೆಯಿರುತ್ತದೆ.ಅಂಬೇಡ್ಕರರ ಜಯಂತಿ ದಿನದಂದು ರಾಷ್ಟ್ರೀಯ ರಜೆ ಇರಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಘೋಷಣೆ ಮಾಡಿದ್ದಾರೆ. ಸಮಾಜದಲ್ಲಿ ಸಮಾನತೆಯ ಹೊಸ ಯುಗವನ್ನು ಸ್ಥಾಪಿಸಿದ ಸಂವಿಧಾನ ಶಿಲ್ಪಿ, ನಮ್ಮ ಬಾಬಾ ಸಾಹೇಬ್ ಪೂಜ್ಯ ಡಾ.ಭೀಮರಾವ್ ಅಂಬೇಡ್ಕರ್‌ಜಿ

ಅಂಬೇಡ್ಕರ್‌ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ Read More »

ಮ್ಯಾನ್ಮಾರ್‌ನಲ್ಲಿ ತಡರಾತ್ರಿ ಮತ್ತೆ ಭೂಕಂಪ : ಸಾವಿನ ಸಂಖ್ಯೆ 700ಕ್ಕೇರಿಕೆ

10 ಸಾವಿರ ಜನ ಬಲಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ ಅಮೆರಿಕ ಮ್ಯಾನ್ಮಾರ್‌ : ನಿನ್ನೆ ಭೀಕರ ಭೂಕಂಪ ಸಂಭವಿಸಿ ಅಪಾರ ಪ್ರಮಾಣದಲ್ಲಿ ನಾಶನಷ್ಟ ಉಂಟಾಗಿದ್ದ ಮ್ಯಾನ್ಮಾರ್‌ನಲ್ಲಿ ತಡರಾತ್ರಿ ಮತ್ತೊಮ್ಮೆ ಭೂಮಿ ಕಂಪಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರೊಂದಿಗೆ ಶುಕ್ರವಾರ ಒಂದೇ ದಿನ ಮೂರು ಬಾರಿ ಭೂಕಂಪ ಸಂಭವಿಸಿದಂತಾಗಿದೆ. ಭೂಕಂಪನದ ತೀವ್ರತೆ 900 ಕಿ.ಮೀ. ದೂರವಿರುವ ಥ್ಯಾಯ್ಲೆಂಡ್‌ನ ಬ್ಯಾಂಕಾಂಕ್ ಮತ್ತು ಬಾಂಗ್ಲಾದೇಶದವರೆಗೂ ವ್ಯಾಪಿಸಿದೆ. ಭೂಕಂಪನದ ಕೇಂದ್ರ ಬಿಂದು ಇದ್ದ ಮ್ಯಾನ್ಮಾರ್‌ನಲ್ಲಿ ಭಾರಿ ಹಾನಿಯಾಗಿದ್ದು, ಈವರೆಗೆ 700ಕ್ಕೂ ಹೆಚ್ಚು

ಮ್ಯಾನ್ಮಾರ್‌ನಲ್ಲಿ ತಡರಾತ್ರಿ ಮತ್ತೆ ಭೂಕಂಪ : ಸಾವಿನ ಸಂಖ್ಯೆ 700ಕ್ಕೇರಿಕೆ Read More »

ಅಕ್ಷಯ ಕಾಲೇಜಿನಲ್ಲಿ ಇಫ್ತಾರ್ ಕೂಟ

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇಫ್ತಾರ ಕೂಟ ಆಚರಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು, ಸಂಪ್ಯದ ಮುಸ್ಲಿಂ ಬಾಂಧವರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.  ಆದರ್ಶ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ಸ್ ನ ಮಾಲಕ ಅಬ್ದುಲ್ ರಹಮಾನ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿ, ಇದೊಂದು ಉತ್ತಮವಾದ ಕಾರ್ಯಕ್ರಮವನ್ನು ಕಾಲೇಜು ಆಯೋಜಿಸಿದೆ ಹಾಗೂ ಸರ್ವಧರ್ಮ ಸಮನ್ವಯ ಎನ್ನುವ ಶೀರ್ಷಿಕೆಯಡಿ ಏಕತೆಯನ್ನು ಸಾರುವ ಜಯಂತ ನಡುಬೈಲು ಅವರ ಯೋಚನೆ ಶ್ಲಾಘನೀಯ ಎಂದರು. ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಆಡಳಿತಾಧಿಕಾರಿ

ಅಕ್ಷಯ ಕಾಲೇಜಿನಲ್ಲಿ ಇಫ್ತಾರ್ ಕೂಟ Read More »

ಸಲ್ಮಾನ್‌ ಖಾನ್‌ ಧರಿಸಿದ ಕೈಗಡಿಯಾರ ಹರಾಮ್‌ ಎಂದ ಧರ್ಮಗುರು

ರಾಮ ಜನ್ಮಭೂಮಿ ಎಡಿಷನ್ ವಾಚ್‌ ಧರಿಸಿದ್ದಕ್ಕೆ ಆಕ್ರೋಶ ಮುಂಬಯಿ: ನಟ ಸಲ್ಮಾನ್ ಖಾನ್ ಧರಿಸಿರುವ ಕೈಗಡಿಯಾರವೊಂದು ಮುಸ್ಲಿಂ ಧರ್ಮಗುರುಗಳ ಆಕ್ರೋಶಕ್ಕೆ ಗುರಿಯಾಗಿದೆ. ಈ ಕೈಗಡಿಯಾರವನ್ನು ಹರಾಮ್‌ ಎಂದು ಬಣ್ಣಿಸಿರುವ ಧರ್ಮಗುರುಗಳು ಸಲ್ಮಾನ್‌ ಖಾನ್‌ ಕ್ಷಮೆ ಯಚಿಸಬೇಕೆಂದು ಹೇಳಿದ್ದಾರೆ.ಇಷ್ಟಕ್ಕೂ ಈ ವಾಚ್ ‘ರಾಮ ಜನ್ಮಭೂಮಿ ಎಡಿಷನ್’ ಬ್ರ್ಯಾಂಡ್‌ನದ್ದು. ಧರ್ಮಗುರುಗಳ ಕಾರಣ ಇದು. ಈ ಬಗ್ಗೆ ಅಪಸ್ವರ ತೆಗೆದು ಸಲ್ಮಾನ್ ಖಾನ್ ಹರಾಮ್ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಸಲ್ಮಾನ್

ಸಲ್ಮಾನ್‌ ಖಾನ್‌ ಧರಿಸಿದ ಕೈಗಡಿಯಾರ ಹರಾಮ್‌ ಎಂದ ಧರ್ಮಗುರು Read More »

ಜಿಡೆಕಲ್ಲು ಸರಕಾರಿ ಕಾಲೇಜಿನಲ್ಲಿ ಜಾನಪದ ಉತ್ಸವ

ಪುತ್ತೂರು: ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ’ ಎಂಬ ಶಿರೋನಾಮೆಯಲ್ಲಿ ‘ಜಾನಪದ ಉತ್ಸವ-2025’ ನಡೆಯಿತು. ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ. ಹರಿಣಾಕ್ಷಿ ಎಂ.ಡಿ.ಯವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ತುಳುನಾಡ ಜಾನಪದ ಸಂಸ್ಕೃತಿ ಶ್ರೇಷ್ಠವಾಗಿದ್ದು ಅದು ಭಾರತೀಯ ಸಂಸ್ಕೃತಿಗೆ ಪ್ರಮುಖ ಕೊಡುಗೆಯಾಗಿದೆ. ಜನಪದ ಸಾಹಿತ್ಯದ ಪ್ರಕಾರಗಳಾದ ಗಾದೆ, ಒಗಟು, ಪಾಡ್ದನ ಮತ್ತು ಕತೆಗಳು ಜೀವನ ಮೌಲ್ಯಗಳನ್ನು ತಲೆಮಾರುಗಳ ಮೂಲಕ ದಾಟಿಸುವ ಪ್ರಮುಖ ಮಾಧ್ಯಮಗಳಾಗಿವೆ

ಜಿಡೆಕಲ್ಲು ಸರಕಾರಿ ಕಾಲೇಜಿನಲ್ಲಿ ಜಾನಪದ ಉತ್ಸವ Read More »

error: Content is protected !!
Scroll to Top