ಸಂಜೀವ ಪೂಜಾರಿ ಅಮಾನತಿಗೆ ಆಗ್ರಹಿಸಿ ಏಕಕಾಲದಲ್ಲಿ ಪ್ರತಿಭಟನೆ | ಪುತ್ತೂರು ನಗರ ಪೊಲೀಸ್ ಠಾಣೆ, ಉಪ್ಪಿನಂಗಡಿ, ಬೆಳ್ಳಾರೆ, ಕಡಬ, ಬೆಳ್ತಂಗಡಿ, ಸುಳ್ಯ ಪೊಲೀಸ್ ಠಾಣಾ ಮುಂಭಾಗ ಧರಣಿ

ಪುತ್ತೂರು: ಭಜನೆ ಹಾಗೂ ಭಜಕರ ಬಗ್ಗೆ, ಹಿಂದೂ ದೇವರ ಬಗ್ಗೆ ನಿಂದನೆಯ ಪೋಸ್ಟ್ ಗಳನ್ನು ಫೇಸ್ ಬುಕ್ ಹಾಗೂ ವಾಟ್ಸ್ ಆ್ಯಪ್ ಗಳಲ್ಲಿ ಹರಿಬಿಟ್ಟು ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಉಪವಲಯ ಅರಣ್ಯ ಅಧಿಕಾರ ಸಂಜೀವ ಪೂಜಾರಿ ಕಾಣಿಯೂರ್ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆಗ್ರಹಿಸಿ ಪುತ್ತೂರು ನಗರ ಪೊಲೀಸ್ ಠಾಣೆ, ಉಪ್ಪಿನಂಗಡಿ, ಬೆಳ್ಳಾರೆ, ಕಡಬ, ಬೆಳ್ತಂಗಡಿ, ಸುಳ್ಯ ಪೊಲೀಸ್ ಠಾಣೆಗಳಲ್ಲಿ ಗುರುವಾರ ವಿಶ್ವ ಹಿಂದು ಪರಿಷದ್ ಹಾಗೂ ಭಜರಂಗದಳ ಏಕಕಾಲದಲ್ಲಿ ಪ್ರತಿಭಟನೆ ನಡೆಸಿತು. ಪುತ್ತೂರು ನಗರ ಪೊಲೀಸ್ […]

ಸಂಜೀವ ಪೂಜಾರಿ ಅಮಾನತಿಗೆ ಆಗ್ರಹಿಸಿ ಏಕಕಾಲದಲ್ಲಿ ಪ್ರತಿಭಟನೆ | ಪುತ್ತೂರು ನಗರ ಪೊಲೀಸ್ ಠಾಣೆ, ಉಪ್ಪಿನಂಗಡಿ, ಬೆಳ್ಳಾರೆ, ಕಡಬ, ಬೆಳ್ತಂಗಡಿ, ಸುಳ್ಯ ಪೊಲೀಸ್ ಠಾಣಾ ಮುಂಭಾಗ ಧರಣಿ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದರ್ಶನ ಬಲಿ

ಪುತ್ತೂರು: ಕಾರಣಿಕ ಕ್ಷೇತ್ರ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಉತ್ಸವದ ಅಂಗವಾಗಿ ಡಿ. 29ರಂದು ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಡಿ. 28 ಹಾಗೂ 29ರಂದು ಕಿರುಷಷ್ಠಿ ಉತ್ಸವ ನಡೆಯಿತು. ಡಿ. 29ರಂದು ಬೆಳಿಗ್ಗೆ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಗಂಧ – ಪ್ರಸಾದ, ನವಕ ಕಲಶ, ಮಹಾಪೂಜೆ, ಮಂತ್ರಾಕ್ಷತೆ ಜರಗಿತು. ಮಧ್ಯಾಹ್ನದ ನಂತರ ಶ್ರೀ ವ್ಯಾಘ್ರ

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದರ್ಶನ ಬಲಿ Read More »

ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ತಡೆ ಮಾಸಾಚರಣೆ

ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ‌ ಗುರುವಾರ ಅಪರಾಧ ತಡೆ ಮಾಸಾಚರಣೆ ನಡೆಯಿತು. ಭಜನೆ, ಪ್ರಾರ್ಥನೆಗೆ ಮಹತ್ವವಿದೆ:ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಮಾತನಾಡಿ, ಗಾಂಧೀಜಿ ಹೇಳಿರುವಂತೆ ಭಜನೆ ಹಾಗೂ ಪ್ರಾರ್ಥನೆಗೆ ಅದರದ್ದೆ ಆದ ಮಹತ್ವವಿದೆ. ನಮ್ಮ ಸಂಸ್ಕೃತಿ ಉಳಿವಿಗಾಗಿ ಭಜನಾ ಕಾರ್ಯ ಮಾಡುವುದು ಉತ್ತಮ ಕೆಲಸ. ಯಾವಾಗಲು ಅಪರಾಧ ಪ್ರಕರಣಗಳನ್ನು ದಾಖಲಿಸುವ ಠಾಣೆಯಲ್ಲಿ ಕಾರ್ಯಕರ್ತರು ಭಜನೆ ಮಾಡಿದ್ದು ತುಂಬಾ ಸಂತೋಷದ ವಿಷಯ ಎಂದರು.ಅಪರಾಧ ತಡೆಗಟುವಲ್ಲಿ ತಮ್ಮ ಸಹಕಾರ ಅತ್ಯಗತ್ಯ.ಮೊಬೈಲ್, ತಂತ್ರಜ್ಞಾನ ಅಭಿವೃದ್ಧಿ ಆಗುತ್ತಿದ್ದಂತೆ, ಅಪರಾಧಗಳು ಹೆಚ್ಚಾಗಿ ನಡೆಯುತ್ತವೆ.

ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ತಡೆ ಮಾಸಾಚರಣೆ Read More »

ಡೆಂಟಲ್‌ ವಿದ್ಯಾರ್ಥಿನಿಗೆ ಸಹಪಾಠಿಗಳಿಂದ ರ‍್ಯಾಗಿಂಗ್‌

ಆರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲು ಸುಳ್ಯ : ವಿದ್ಯಾರ್ಥಿನಿಗೆ ರ‍್ಯಾಗಿಂಗ್‌ ಮಾಡಿ ಮಾನಸಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಸುಳ್ಯದ ಪ್ರತಿಷ್ಠಿತ ಡೆಂಟಲ್‌ ಕಾಲೇಜಿನಲ್ಲಿ ಸಂಭವಿಸಿದೆ. ಈ ಸಂಬಂಧ ಆರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿ ಡಾ.ಪಲ್ಲವಿ ರ‍್ಯಾಗಿಂಗ್‌ಗೆ ಒಳಗಾದ ಡೆಂಟಲ್ ವಿದ್ಯಾರ್ಥಿನಿ. ಮೂರನೇ ವರ್ಷದ ಡೆಂಡಲ್ ವಿದ್ಯಾರ್ಥಿನಿಯಾಗಿರುವ ಡಾ.ಪಲ್ಲವಿ ರ‍್ಯಾಂಕ್ ಹೋಲ್ಡರ್ ಆಗಿದ್ದಾರೆ.ಡಾ.ಪಲ್ಲವಿಗೆ ರ‍್ಯಾಂಗಿಗ್ ಮಾಡಿದ ಆರೋಪದ ಮೇಲೆ ಕೇರಳ ಮೂಲದ ಆರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ.

ಡೆಂಟಲ್‌ ವಿದ್ಯಾರ್ಥಿನಿಗೆ ಸಹಪಾಠಿಗಳಿಂದ ರ‍್ಯಾಗಿಂಗ್‌ Read More »

ಕುವೆಂಪು ಜನ್ಮ ದಿನ ವಿಶ್ವ ಮಾನವ ದಿನಾಚರಣೆ

ಪುತ್ತೂರು: ರಾಷ್ಟ್ರಕವಿ ಕುವೆಂಪು ಅವರ ಹುಟ್ಟುಹಬ್ಬದ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುತ್ತಿದ್ದು, ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿಯಿಂದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವುದನ್ನು ತಿಳಿಸಿದವರು ಕುವೆಂಪು. ಈ ಮೂಲಕ ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್

ಕುವೆಂಪು ಜನ್ಮ ದಿನ ವಿಶ್ವ ಮಾನವ ದಿನಾಚರಣೆ Read More »

ಸಂತ ಫಿಲೋಮಿನಾ ಕಾಲೇಜಿನಿಂದ ಕೆದಂಬಾಡಿ ಗ್ರಾಮ ದತ್ತು ಸ್ವೀಕಾರ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಹಾಗೂ ಕೆದಂಬಾಡಿ ಗ್ರಾಮ ಪಂಚಾಯತ್‌ ಇವುಗಳ ನಡುವೆ ಕೆದಂಬಾಡಿ ಗ್ರಾಮ ದತ್ತು ಸ್ವೀಕಾರದ ಒಡಂಬಡಿಕೆ ನಡೆಸಲಾಯಿತು.ಕೆದಂಬಾಡಿ ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳು ಒಡಂಬಡಿಕೆಗೆ ಸಹಿ ಹಾಕಿದರು. ಸದರಿ ಒಡಂಬಡಿಕೆಯು 2027 ಡಿಸೆಂಬರ್‌ ತನಕ ಮಾನ್ಯವಾಗಿರುತ್ತದೆ. ಈ ಒಡಂಬಡಿಕೆಯನ್ನು ಕೆದಂಬಾಡಿ ಗ್ರಾಮದ ಸಾಮಾಜಿಕ ಉನ್ನತೀಕರಣ ಹಾಗೂ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ, ಪರಿಸರದ ಬಗ್ಗೆ ಕಾಳಜಿ ಹಾಗೂ ಸಾಮಾಜಿಕ

ಸಂತ ಫಿಲೋಮಿನಾ ಕಾಲೇಜಿನಿಂದ ಕೆದಂಬಾಡಿ ಗ್ರಾಮ ದತ್ತು ಸ್ವೀಕಾರ Read More »

ಆರ್ಯಾಪು ಗ್ರಾ.ಪಂ. ಸದಸ್ಯ ಗಿರೀಶ್ ಗೌಡ ಅಸೌಖ್ಯದಿಂದ ನಿಧನ

ಪುತ್ತೂರು: ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಗೌಡ ಮರಿಕೆ ಎನ್ನುವವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಡಿ.29ರ ಬೆಳಗ್ಗಿನ ಜಾವ ನಿಧನರಾದರು. ಇವರಿಗೆ 34 ವರ್ಷ ವಯಸ್ಸಾಗಿತ್ತು. ಆರ್ಯಾಪು ಪಂಚಾಯತ್ ನ 4ನೇ ವಾರ್ಡಿನ ಕ್ರಿಯಾಶೀಲ ಬಿಜೆಪಿ ಬೆಂಬಲಿತ ಸದಸ್ಯರಾದ ಗಿರೀಶ್ ಗೌಡ ಮರಿಕೆ ಇವರು ಕೆಲ ಸಮಯದಿಂದ ಜಾಂಡಿಸ್ ಖಾಯಿಲೆಯಿಂದ ಬಳಲುತಿದ್ದರು. ಎರಡು ದಿನಗಳ ಹಿಂದೆಯಷ್ಟೇ ಹೊಟ್ಟೆ ನೋವು ಉಲ್ಬಣಿಸಿದ ಕಾರಣ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ

ಆರ್ಯಾಪು ಗ್ರಾ.ಪಂ. ಸದಸ್ಯ ಗಿರೀಶ್ ಗೌಡ ಅಸೌಖ್ಯದಿಂದ ನಿಧನ Read More »

ಭಾರತದಿಂದ ರಫ್ತಾದ ಕೆಮ್ಮಿನ ಸಿರಪ್‌ ಸೇವಿಸಿ 18 ಮಕ್ಕಳು ಸಾವು

ಗ್ಯಾಂಬಿಯಾ ಬಳಿಕ ಉಜ್ಬೇಕಿಸ್ಥಾನ ಆರೋಪ ತಾಷ್ಕೆಂಟ್: ತನ್ನ ದೇಶದ ಸುಮಾರು 18 ಮಕ್ಕಳ ಸಾವಿನಲ್ಲಿ ಭಾರತದಲ್ಲಿ ತಯಾರಿಸಲಾದ ಕೆಮ್ಮಿನ ಸಿರಪ್‌ನ ಪಾತ್ರವಿದೆ ಎಂದು ಉಜ್ಬೇಕಿಸ್ಥಾನ ಆರೋಪಿಸಿದೆ.ಕೆಲ ತಿಂಗಳ ಹಿಂದೆ ಗ್ಯಾಂಬಿಯಾ ದೇಶದ ಸುಮಾರು 70 ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಕಾರಣ ಎಂದು ಆರೋಪ ಮಾಡಲಾಗಿತ್ತು. ಇದೀಗ ಉಜ್ಬೇಕಿಸ್ಥಾನ ಕೂಡ ಇದೇ ರೀತಿಯ ಆರೋಪ ಮಾಡಿದೆ. ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ದೇಶದಲ್ಲಿ ಕನಿಷ್ಠ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ ಹೇಳಿಕೊಂಡಿದೆ.

ಭಾರತದಿಂದ ರಫ್ತಾದ ಕೆಮ್ಮಿನ ಸಿರಪ್‌ ಸೇವಿಸಿ 18 ಮಕ್ಕಳು ಸಾವು Read More »

ಕೇರಳದಲ್ಲಿ ಹೊಸ ಹೆಸರಿನಲ್ಲಿ ತಲೆ ಎತ್ತಲು ಪಿಎಫ್‌ಐ ಯತ್ನ

ನಸುಕಿನ ಹೊತ್ತು 56 ಕಡೆಗಳಲ್ಲಿ ಎನ್‌ಐಎ ದಾಳಿ ತಿರುವನಂತಪುರ : ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಹೊಸ ಹೆಸರಿನಲ್ಲಿ ತಲೆ ಎತ್ತುವ ಪ್ರಯತ್ನದಲ್ಲಿರುವ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಬೆಳ್ಳಂಬೆಳಗ್ಗೆ ಕೇರಳದ 56 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಪಿಎಫ್‌ಐನ ನಾಯಕರಿಗೆ ಸೇರಿದ ಮನೆ, ಆಫೀಸ್‌ಗಳು ಇನ್ನಿತರ ಸಂಸ್ಥಾಪನೆಗಳು ಸೇರಿದಂತೆ ಒಟ್ಟು 56 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಪಿಎಫ್‌ಐ ಸಂಘಟನೆಯನ್ನು ಬೇರೊಂದು ಹೆಸರಿನಲ್ಲಿ ಮರುರೂಪಿಸಲು ಯೋಜನೆ ರೂಪಿಸುತ್ತಿರುವ

ಕೇರಳದಲ್ಲಿ ಹೊಸ ಹೆಸರಿನಲ್ಲಿ ತಲೆ ಎತ್ತಲು ಪಿಎಫ್‌ಐ ಯತ್ನ Read More »

ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ವಿರುದ್ಧ ಶಿವಮೊಗ್ಗದಲ್ಲಿ ಕೇಸ್‌

ದ್ವೇಷ ಭಾಷಣ ಮಾಡಿದ ಆರೋಪ ಶಿವಮೊಗ್ಗ: ನಗರದಲ್ಲಿ ಭಾನುವಾರ ನಡೆದ ಹಿಂದೂ ಜಾಗರಣ ವೇದಿಕೆಯ ಸಮಾವೇಶದಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಂಸದೆಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್.ಸುಂದರೇಶ್ ದೂರು ಸಲ್ಲಿಸಿದ್ದಾರೆ.ಸಾಧ್ವಿ ಪ್ರಜ್ಞಾ ಅವರ ಭಾಷಣ ಶಸ್ತ್ರಾಸ್ತ್ರಗಳ ಬಳಕೆಗೆ ಮುಕ್ತ ಕರೆಯಾಗಿತ್ತು, ಇದು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಗುಂಪು ಹಿಂಸಾಚಾರ ಮತ್ತು ಹಲ್ಲೆಗೆ ಕಾರಣವಾಗಬಹುದು. ಭಾಷಣವು ಅಸಹಿಷ್ಣುತೆ, ದ್ವೇಷ ಮತ್ತು ನಿರ್ದಿಷ್ಟ ಸಮುದಾಯದ ವಿರುದ್ಧ ಹಿಂಸಾಚಾರದ

ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕೂರ್‌ ವಿರುದ್ಧ ಶಿವಮೊಗ್ಗದಲ್ಲಿ ಕೇಸ್‌ Read More »

error: Content is protected !!
Scroll to Top