ಅಮಿತ್ ಶಾ ಆಗಮನ ಹಿನ್ನೆಲೆ: ಪ್ರಚಾರಾರ್ಥವಾಗಿ ಪುತ್ತೂರು ಪೇಟೆಯಲ್ಲಿ ಬಿಜೆಪಿ ಜಾಥಾ

ಪುತ್ತೂರು: ಮೊದಲ ಬಾರಿಗೆ ಪುತ್ತೂರಿಗೆ ಆಗಮಿಸುತ್ತಿರುವ ಕೇಂದ್ರದ ಗೃಹ ಸಚಿವ, ಸಹಕಾರ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಪುತ್ತೂರು ಪೇಟೆಯಲ್ಲಿ ಗುರುವಾರ ಜಾಥಾ ನಡೆಸಲಾಯಿತು. ಪುತ್ತೂರು ಬಿಜೆಪಿ ಘಟಕದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜಾಥಾಕ್ಕೆ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ದರ್ಬೆಯಿಂದ ಹೊರಟ ಜಾಥಾ, ಪುತ್ತೂರು ಪೇಟೆಯಾಗಿ ಸಾಗಿ ಬೊಳುವಾರಿನಲ್ಲಿ ಸಮಾಪನಗೊಂಡಿತು. ದಾರಿಯುದ್ಧಕ್ಕೂ ಆಸುಪಾಸಿನ ಅಂಗಡಿಗಳಿಗೆ, ಸಾರ್ವಜನಿಕರಿಗೆ ಆಮಂತ್ರಣ ಪತ್ರ ನೀಡಲಾಯಿತು. ಜಾಥಾದ ಮುಂಭಾಗದಿಂದ ಕಾರ್ಯಕ್ರಮದ ವಿವರಣೆಯನ್ನು […]

ಅಮಿತ್ ಶಾ ಆಗಮನ ಹಿನ್ನೆಲೆ: ಪ್ರಚಾರಾರ್ಥವಾಗಿ ಪುತ್ತೂರು ಪೇಟೆಯಲ್ಲಿ ಬಿಜೆಪಿ ಜಾಥಾ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ನಿರಂತರ ನಡೆಯುವ ಕಾರ್ಯಕ್ರಮದ ನೂತನ ಕ್ಯಾಲೆಂಡರ್ ಬಿಡುಗಡೆ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರವನ್ನೊಳಗೊಂಡ 2023ನೇ ಸಾಲಿನ ನೂತನ ಕ್ಯಾಲೆಂಡರ್‍ನ್ನು ಗುರುವಾರ ಶಾಸಕ ಸಂಜೀವ ಮಠಂದೂರು ಬಿಡುಗಡೆ ಮಾಡಿದರು. ದೇವಸ್ಥಾನದ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಕ್ಯಾಲೆಂಡರ್‍ ಬಿಡುಗಡೆ ಮಾಡಲಾಯಿತು. ನೂತನ ಕ್ಯಾಲೆಂಡರನ್ನು ಭಕ್ತರಿಗೆ ಉಚಿತವಾಗಿ ನೀಡಲಾಗುವುದು. ಜತೆಗೆ ಯುಗಾದಿ ಸಂದರ್ಭದಲ್ಲಿ ಭಾರತೀಯ ದಿನದರ್ಶಿಕೆಯ ಕ್ಯಾಲೆಂಡರ್‍ ಲೋಕಾರ್ಪಣೆ ಮಾಡಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‍ ಮುಳಿಯ ಈ ಸಂದರ್ಭ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ನಿರಂತರ ನಡೆಯುವ ಕಾರ್ಯಕ್ರಮದ ನೂತನ ಕ್ಯಾಲೆಂಡರ್ ಬಿಡುಗಡೆ Read More »

ಕ್ಯಾಂಪ್ಕೋ ಸುವರ್ಣ ಮಹೋತ್ಸವ : ಸಾರ್ವಜನಿಕರ ಅನುಕೂಲಕ್ಕೆ ಹೆಚ್ಚಿನ ಬಸ್‍ ನಿಯೋಜನೆ

ಪುತ್ತೂರು : ಫೆ.11 ರಂದು ನಡೆಯುವ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್‍ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ್‍ ಬೊಮ್ಮಾಯಿ , ಸಚಿವರುಗಳು ಆಗಮಿಸುವ ಹಿನ್ನಲೆಯಲ್ಲಿ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್‍ಆರ್‍ಟಿಸಿ ಪುತ್ತೂರು ವಿಭಾಗದಿಂದ ಹೆಚ್ಚುವರಿ ಬಸ್‍ ನಿಯೋಜನೆ ಮಾಡಲಾಗುತ್ತಿದೆ. ಈ ಕುರಿತು ಕಾರ್ಯಕ್ರಮ ಸಂಯೋಜಕರಿಂದ ಪುತ್ತೂರು ಕೆಎಸ್‍ಆರ್‍ಟಿಸಿ ವಿಭಾಗಕ್ಕೆ ಮನವಿ ಬಂದ ಹಿನ್ನಲೆಯಲ್ಲಿ ಹೆಚ್ಚುವರಿ ಬಸ್‍ ನಿಯೋಜನೆ ಮಾಡಲಾಗುವುದು. ಆದ್ದರಿಂದ ಪುತ್ತೂರು, ಸುಳ್ಯ, ಬೆಳ್ತಂಗಡಿ. ಬಂಟ್ವಾಳ. ಕಡಬ ಹಾಗೂ ಮಡಿಕೇರಿ

ಕ್ಯಾಂಪ್ಕೋ ಸುವರ್ಣ ಮಹೋತ್ಸವ : ಸಾರ್ವಜನಿಕರ ಅನುಕೂಲಕ್ಕೆ ಹೆಚ್ಚಿನ ಬಸ್‍ ನಿಯೋಜನೆ Read More »

ಮುಂಡೂರು ಶಾಲೆಯಲ್ಲಿ ನೀರಿನ ಘಟಕ, ಸ್ಮಾರ್ಟ್‍ ಕ್ಲಾಸ್‍ ಉದ್ಘಾಟನೆ

ಪುತ್ತೂರು : ಮುಂಡೂರು ಉನ್ನತಿ ಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಸಮಾರಂಭ ಗುರುವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಕ್ಕಳು ಮನೆಯಿಂದ ಪ್ಲಾಸ್ಟಿಕ್‍ ಬಾಟಲಿಗಳಲ್ಲಿ ನೀರು ತರಬಾರದು ಎಂಬ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಲೆಗಳಿಗೆ ಒದಗಿಸಲಾಗುತ್ತಿದೆ. ಇದರ ಸದುಪಯೋಗ ಮಾಡಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ವಿಜಯ ಪಿ, ಎಎಸ್‍ಡಿಎಂ ಸಿ ಅಧ್ಯಕ್ಷ ರಮೇಶ್ ಪಜಿಮಣ್ಣು, ಗ್ರಾ.ಪಂ. ಸದಸ್ಯ

ಮುಂಡೂರು ಶಾಲೆಯಲ್ಲಿ ನೀರಿನ ಘಟಕ, ಸ್ಮಾರ್ಟ್‍ ಕ್ಲಾಸ್‍ ಉದ್ಘಾಟನೆ Read More »

ಡಿಜಿಟಲ್‍ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಚಣಿಕ, ವೈಜ್ಞಾನಿಕ ವ್ಯವಸ್ಥೆ ಆಗಬೇಕು : ಶಾಸಕ ಸಂಜೀವ ಮಠಂದೂರು | ಸುದಾನ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಭೆ

ಪುತ್ತೂರು : ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ  ಫೆ 9 ಗುರುವಾರ ಮಂಜಲ್ಪಡ್ಪು ಸುಧಾನ ಪ್ರೌಢ ಶಾಲಾ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಪ್ರೌಢ ಶಾಲೆಗಳಲ್ಲಿ ಯಾವುದೇ ಕೊರತೆ ಆಗದಂತೆ ಸರಕಾರ ಯೋಜನೆಯನ್ನು ಹಾಕಿಕೊಳ್ಳುವ ಮೂಲಕ ಸರಕಾರಿ ಶಾಲೆಗಳನ್ನು ಬೆಳೆಸುವ, ಉಳಿಸುವ ಕೆಲಸ ಆಗಿದೆ. ರಾಷ್ಟ್ರಿಯ ಶಿಕ್ಷಣ ನೀತಿಯಿಂದ ಇಂದಿನ ನಮ್ಮ ಶಿಕ್ಷಣ  ಡಿಜಿಟಲ್ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಷಣಿಕ, ವೈಜ್ಞಾನಿಕ ವ್ಯವಸ್ಥೆ ಮುಂದಿನ ದಿನಗಳಲ್ಲಿ ಆಗಬೇಕು. ಈ

ಡಿಜಿಟಲ್‍ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಚಣಿಕ, ವೈಜ್ಞಾನಿಕ ವ್ಯವಸ್ಥೆ ಆಗಬೇಕು : ಶಾಸಕ ಸಂಜೀವ ಮಠಂದೂರು | ಸುದಾನ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಸಭೆ Read More »

ಕೇಂದ್ರ ಗೃಹ ಸಚಿವ ಅಮಿತ್‍ಶಾ ಆಗಮನ ಹಿನ್ನಲೆ : ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

ಪುತ್ತೂರು : ಅಮಿತ್‍ ಶಾ ಫೆ.11 ರಂದು ಪುತ್ತೂರಿಗೆ ಆಗಮಿಸುವ ಹಿನ್ನಲೆಯಲ್ಲಿ ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಗುರುವಾರ ಪ್ರಾರ್ಥ‍ನೆ ಸಲ್ಲಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್‍.ಭಟ್‍ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ,, ನಗರಸಭೆ ಅಧ್ಯಕ್ಷ ಜೀವಂಧರ್‍ ಜೈನ್‍, ಬಿಜೆಪಿ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ,, ರಾಧಾಕೃಷ್ಣ ಬೋರ್ಕರ್‍, ರಾಜೇಶ್‍

ಕೇಂದ್ರ ಗೃಹ ಸಚಿವ ಅಮಿತ್‍ಶಾ ಆಗಮನ ಹಿನ್ನಲೆ : ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ Read More »

ಕೃಷಿಕರಾದ ತುಳುವರ ಪ್ರಮುಖ ಹಬ್ಬ ಕೆಡ್ಡಸ | ಏನಿದು ಕೆಡ್ಡಸ ; ಆಚರಣೆ ಹೇಗೆ | ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಪುತ್ತೂರು : ಮೂಲತಃ ಕೃಷಿರಾದ ತುಳುವರ ಹಬ್ಬಗಳು ಕೃಷಿ ಆಧಾರಿತ ಹಿನ್ನಲೆಯಲ್ಲಿ ಆಚರಿಸಲಾಗುತ್ತಿದ್ದು, ಈ ಪೈಕಿ ಕೆಡ್ಡಸ ತುಳುವರ ಪೊನ್ನಿ ಅಥವಾ ಪುಯಿಂತೆಲ್ (ಫೆಬ್ರವರಿ) ತಿಂಗಳಿನ  27 ರಿಂದ ಕುಂಭ ಸಂಕ್ರಮಣದ ವರೆಗೆ ಅಂದರೆ ಮೂರು ದಿನ ಕೆಡ್ಡಸ ಆಚರಿಸಲ್ಪಡುತ್ತದೆ. ಶುರು ಕೆಡ್ಡಸ, ನಡುಕೆಡ್ಡಸ ಹಾಗೂ ಕಡೆಕೆಡ್ಡಸ ಎಂದು ಆಚರಣೆಗೊಳ್ಳುತ್ತದೆ. ಏನಿದು ಕೆಡ್ಡಸ : ನಮ್ಮ ಪೂರ್ವಿಕರು ಭೂಮಿಯನ್ನು ಹೆಣ್ಣೆಂದು ಪರಿಗಣಿಸಿ ಆರಾಧಿಸಿಕೊಂಡು ಬಂದಿದ್ದು, ಹೆಣ್ಣಾದ ಭೂಮಿತಾಯಿಯು ವರ್ಷಕ್ಕೆ ಮೂರುದಿನ ರಜಸ್ವಲೆಯಾಗುತ್ತಾಳೆ (ಋತುಮತಿ) ಎಂದು ನಂಬಿಕೆಯಿದೆ. ಈ

ಕೃಷಿಕರಾದ ತುಳುವರ ಪ್ರಮುಖ ಹಬ್ಬ ಕೆಡ್ಡಸ | ಏನಿದು ಕೆಡ್ಡಸ ; ಆಚರಣೆ ಹೇಗೆ | ಇಲ್ಲಿದೆ ಕಂಪ್ಲೀಟ್ ಸ್ಟೋರಿ Read More »

ಕೆಲಸದ ಒತ್ತಡ ಮತ್ತು ಮಾನಸಿಕ ಆರೋಗ್ಯ

ಯುವ ಜನತೆಯಲ್ಲಿ ಹೆಚ್ಚುತ್ತಿದೆ ಖಿನ್ನತೆ ಇತ್ತೀಚಿನ ದಿನಗಳಲ್ಲಿ ಬದುಕು ಹೆಚ್ಚು ಸ್ಪರ್ಧಾತ್ಮಕ ಆಗುತ್ತಾ ಇದೆ. ಯುವಜನತೆ ಹೆಚ್ಚು ಹೆಚ್ಚು ದುಡ್ಡು, ಅಧಿಕಾರ, ಕೀರ್ತಿ, ಯಶಸ್ಸುಗಳ ಹಿಂದೆ ಓಡುತ್ತಾ ಇದ್ದಾರೆ.ಪರಿಣಾಮವಾಗಿ ಸಣ್ಣ ಪ್ರಾಯದಲ್ಲಿಯೇ ಹತಾಶೆ, ನಿರಾಸೆ, ಒತ್ತಡಗಳ ಮೂಟೆಯನ್ನು ತಮ್ಮ ಭಾವಕೋಶಕ್ಕೆ ತಮಗೆ ಅರಿವು ಇಲ್ಲದಂತೆ ಸೇರಿಸಿಕೊಳ್ಳುತ್ತಿದ್ದಾರೆ. ಇಂದಿನ ಯುವಜನತೆ ತಮ್ಮ ವೃತ್ತಿ, ಕುಟುಂಬ ಮತ್ತು ಇತರ ಹೊಣೆಗಳನ್ನು ನಿಭಾಯಿಸಲು ವಿಪರೀತವಾಗಿ ಹೆಣಗುತ್ತಿದ್ಧಾರೆ. ಪರಿಣಾಮವಾಗಿ ಎಲ್ಲರೂ ಇಂದು ಒಂದು ಸಾಮಾನ್ಯ ಮಾನಸಿಕ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಅದರ ಹೆಸರು ಖಿನ್ನತೆ.

ಕೆಲಸದ ಒತ್ತಡ ಮತ್ತು ಮಾನಸಿಕ ಆರೋಗ್ಯ Read More »

ಶಾಸಕರ ಹೇಳಿಕೆಯನ್ನು ಅನ್ಯಥಾ ಭಾವಿಸಬೇಕಾಗಿಲ್ಲ | ಶಾಸಕರ ಹೇಳಿಕೆಯನ್ನು ಸಮರ್ಥಿಸಿಕೊಂಡ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್

ಪುತ್ತೂರು: ಅಮಿತ್ ಶಾ ಅವರು ಪುತ್ತೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ನಾನಾ ರೀತಿಯ ಹೇಳಿಕೆಗಳನ್ನು ನೀಡಲು ಶುರು ಮಾಡಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಶಾಸಕ ಸಂಜೀವ ಮಠಂದೂರು ಅವರು, ಅಣಬೆಗೆ ಹೋಲಿಸಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅನಪೇಕ್ಷಿತ ಸಂದೇಶವನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಹೇಳಿದರು. ಶಾಸಕ ಸಂಜೀವ ಮಠಂದೂರು ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳು ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಜೀವಂಧರ್ ಜೈನ್ ಅವರು ಈ

ಶಾಸಕರ ಹೇಳಿಕೆಯನ್ನು ಅನ್ಯಥಾ ಭಾವಿಸಬೇಕಾಗಿಲ್ಲ | ಶಾಸಕರ ಹೇಳಿಕೆಯನ್ನು ಸಮರ್ಥಿಸಿಕೊಂಡ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ Read More »

ಗಂಗೊಳ್ಳಿಯಲ್ಲಿ ಭವತಿ ಭಿಕ್ಷಾಂದೇಹಿ

ಪುತ್ತೂರು: ಪುತ್ತೂರು ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಕರ್ನಾಟಕ ಇದರ ನೇತೃತ್ವದಲ್ಲಿ ಬೆಳ್ತಂಗಡಿಯ ತೆಂಕಕಾರಂದೂರು ನಿವಾಸಿ ಪ್ರಶಾಂತ್ ಲಾವಣ್ಯ ದಂಪತಿ ಪುತ್ರಿ ಮಾನ್ಯ ಅವರ ಚಿಕಿತ್ಸೆ ಹಿನ್ನೆಲೆಯಲ್ಲಿ ಗಂಗೊಳ್ಳಿ ಖಾರ್ವಿಕೆರೆ ಶ್ರೀ ಮಹಾಂಕಾಳಿ ಅಮ್ಮ ದೇವಸ್ಥಾನದಲ್ಲಿ ಭವತಿ ಭಿಕ್ಷಾಂದೇಹಿ ಕಾರ್ಯಕ್ರಮ ನಡೆಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ ಈಶ್ವರ್ ಮಲ್ಪೆ ಅವರ ಸಹಕಾರದಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವ 6 ವರ್ಷದ ಮಾನ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗಂಗೊಳ್ಳಿಯಲ್ಲಿ ಭವತಿ ಭಿಕ್ಷಾಂದೇಹಿ Read More »

error: Content is protected !!
Scroll to Top