ಸವಣೂರು ಕಿನಾರ ವಾರಿಜ ಶೆಟ್ಟಿ ನಿಧನ

ಪುತ್ತೂರು: ಸವಣೂರು ಕಿನಾರ ದಿ. ಸಂಕಪ್ಪ ಶೆಟ್ಟಿಯವರ ಪತ್ನಿ ವಾರಿಜ ಶೆಟ್ಟಿ (75 ವ) ಫೆ. 15ರಂದು ಬೆಳಿಗ್ಗೆ ನಿಧನರಾದರು. ಮೃತರು ಪುತ್ರರಾದ ಪ್ರಗತಿಪರ ಕೃಷಿಕ ಸತೀಶ್ ಶೆಟ್ಟಿ ಕಿನಾರ, ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ, ಪುತ್ರಿಯರಾದ ಜಯಶ್ರೀ, ವಸಂತಿ, ಉಷಾ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಅಂತ್ಯ ಸಂಸ್ಕಾರ: ಫೆ. 15ರಂದು ಮಧ್ಯಾಹ್ನ ಗಂಟೆ 12ಕ್ಕೆ ಮೃತರ ಅಂತ್ಯಸಂಸ್ಕಾರ ಸವಣೂರಿನ ಕಿನಾರ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸವಣೂರು ಕಿನಾರ ವಾರಿಜ ಶೆಟ್ಟಿ ನಿಧನ Read More »

ಮಾ. 5: ಸಂಟ್ಯಾರು ಕಲ್ಲಕಟ್ಟದಲ್ಲಿ ರಾಜಗುಳಿಗ ದೈವದ ಕೋಲ, ಆಮಂತ್ರಣ ಬಿಡುಗಡೆ

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರು ಜಂಕ್ಷನ್ ಬಳಿಯ ಕಲ್ಲಕಟ್ಟ ಶ್ರೀ ರಾಜಗುಳಿಗ ದೈವದ ಸಾನಿಧ್ಯದಲ್ಲಿ ಮಾ. 5ರಂದು ಶ್ರೀ ರಾಜಗುಳಿಗ ದೈವದ ಕೋಲವು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಫೆ. 13ರಂದು ಬಿಡುಗಡೆಗೊಳಿಸಲಾಯಿತು. ಸಂಕ್ರಮಣದ ಪ್ರಯುಕ್ತ ತಂಬಿಲ ಸೇವೆ ನಡೆದ ಬಳಿಕ ದೈವ ನರ್ತಕರಿಗೆ ವೀಳ್ಯ ನೀಡುವುದರೊಂದಿಗೆ ಶ್ರೀ ರಾಜಗುಳಿಗ ದೈವದ ಕೋಲ ಹಾಗೂ ವೈದಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಎಸ್. ಮಾಧವ ರೈ ಕುಂಬ್ರ, ನವೀನ್ ಸಾಲ್ಯಾನ್ ಕಿನ್ನಿಮಜಲು, ದೇವದಾಸ್ ಕುರಿಯ, ದಾದು

ಮಾ. 5: ಸಂಟ್ಯಾರು ಕಲ್ಲಕಟ್ಟದಲ್ಲಿ ರಾಜಗುಳಿಗ ದೈವದ ಕೋಲ, ಆಮಂತ್ರಣ ಬಿಡುಗಡೆ Read More »

ಕರ್ನಾಟಕದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ : ಅಮಿತ್‌ ಶಾ ವಿಶ್ವಾಸ

ಮೋದಿ ನಾಯಕತ್ವ, ಅಭಿವೃದ್ಧಿ ಕಾರ್ಯಗಳಿಗೆ ಜನಮನ್ನಣೆ ಹೊಸದಿಲ್ಲಿ : ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ಕರ್ನಾಟಕಕ್ಕೆ ಎರಡು ತಿಂಗಳಲ್ಲಿ ಐದು ಬಾರಿ ಹೋಗಿದ್ದೇನೆ. ಅಲ್ಲಿನ ಜನರ ನಾಡಿಮಿಡಿತ ಅರಿತಿದ್ದೇನೆ. ನರೇಂದ್ರ ಮೋದಿ ಅವರು ಜನಪ್ರಿಯತೆಯನ್ನು ಕರ್ನಾಟಕ ಕಣ್ಣಾರೆ ಕಂಡಿದೆ. ಅಲ್ಲಿ ತುಂಬ ದೊಡ್ಡ ಮಟ್ಟದ ಬಹುಮತ ಬಿಜೆಪಿಗೆ

ಕರ್ನಾಟಕದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ : ಅಮಿತ್‌ ಶಾ ವಿಶ್ವಾಸ Read More »

ಸರಕಾರದಿಂದ ಕೋಟಿಗಟ್ಟಲೆ ರೂ. ಟೆಂಡರ್‌ ಹಗರಣ : ಡಿಕೆಶಿ 

ತರಾತುರಿಯಲ್ಲಿ ಟೆಂಡರ್‌ ಕರೆಯಲಾಗುತ್ತಿದೆ ಎಂದು ಆರೋಪ ಬೆಂಗಳೂರು : ಸರ್ಕಾರದ ಅವಧಿ ಕೆಲವೇ ದಿನಗಳಿರುವುದರಿಂದ ಎಲ್ಲ ಇಲಾಖೆಗಳಲ್ಲಿ ತರಾತುರಿಯಿಂದ ಟೆಂಡರ್ ಕರೆಯಲಾಗುತ್ತಿದೆ. 500 ಕೋಟಿ ರೂ. ಟೆಂಡರ್ ಅನ್ನು 1000 ಕೋಟಿಗೆ ಮಾರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಟೆಂಡರ್ ಗೋಲ್ಮಾಲ್​ನಲ್ಲಿ ತೊಡಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಆರೋಪಿಸಿದ್ದಾರೆ.ಡಿಕೆಶಿ ಮನೆಯಲ್ಲಿ ಬುಧವಾರ ಬೆಳಗ್ಗೆ ಸುದ್ದಿಗೋಷ್ಠಿ ಕರೆದು ವಿವಿಧ ಇಲಾಖೆಗಳಲ್ಲಿ ಟೆಂಡರ್ ಗೋಲ್ಮಾಲ್ ಹೇಗೆ ನಡೆಯುತ್ತಿದೆ ಎಂಬ ವಿವರ ನೀಡಿದ್ದಾರೆ. ಸರ್ಕಾರ ಇನ್ನು ಒಂದು

ಸರಕಾರದಿಂದ ಕೋಟಿಗಟ್ಟಲೆ ರೂ. ಟೆಂಡರ್‌ ಹಗರಣ : ಡಿಕೆಶಿ  Read More »

ಶರವೂರು: ಮೊಟ್ಟೆ ಸಾಗಾಟದ ಟೆಂಪೋ ಪಲ್ಟಿ, ಚಾಲಕ ಗಂಭೀರ

ಪುತ್ತೂರು: ಆಲಂಗಾರು ಬಳಿಯ ಶರವೂರು ದೇವಸ್ಥಾನದ ಬಳಿಯಲ್ಲಿ ಮೊಟ್ಟೆ ಸಾಗಿಸುತ್ತಿದ್ದ ಟೆಂಪೋವೊಂದು ಪಲ್ಟಿಯಾದ ಘಟನೆ ಫೆ. 15ರಂದು ಬೆಳಿಗ್ಗೆ ನಡೆದಿದೆ. ಆಲಂಗಾರು ಕಡೆಯಿಂದ ಶಾಂತಿಮೊಗರು ಕಡೆಗೆ ಬರುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಟೆಂಪೋದಲ್ಲಿದ್ದ ಚಾಲಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಟೆಂಪೋದಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದಾರೆ.

ಶರವೂರು: ಮೊಟ್ಟೆ ಸಾಗಾಟದ ಟೆಂಪೋ ಪಲ್ಟಿ, ಚಾಲಕ ಗಂಭೀರ Read More »

ಎಲಿಕ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಅಗೇಲು

ಪುತ್ತೂರು: ನರಿಮೊಗರು ಗ್ರಾಮದ ಎಲಿಕ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಸಂಕ್ರಮಣದ ಪ್ರಯುಕ್ತ ಕಲ್ಲುರ್ಟಿ ದೈವದ ಅಗೇಲು ಸೇವೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಮೋನಪ್ಪ ಸಪಲ್ಯ ಅಗೇಲು ಸೇವೆಯನ್ನು ಹಾಗೂ ನಿತಿನ್ ಭಟ್ ದೇವರ ಪೂಜೆಯನ್ನು ನೆರವೇರಿಸಿದರು. ಜಗದೀಶ ಗೌಡ ಸಹಕರಿಸಿದರು.

ಎಲಿಕ ಸತ್ಯದೇವತೆ ಪಾಷಾಣಮೂರ್ತಿ ದೈವಸ್ಥಾನದಲ್ಲಿ ಅಗೇಲು Read More »

ಸಂಟ್ಯಾರ್: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಮೃತ್ಯು

ಪುತ್ತೂರು: ಸಂಟ್ಯಾರ್ ಸಮೀಪದ ಬಳಕದಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಮುರಳಿ ಭಟ್ ಎನ್ನುವವರು ಮೃತಪಟ್ಟಿದ್ದಾರೆ. ಮೃತರನ್ನು ನಿಡ್ಪಳ್ಳಿ ಗ್ರಾಮ ಪಂಚಾಯತಿಯ ಬಿಜೆಪಿ ಬೆಂಬಲಿತ ಸದಸ್ಯ ಎಂದು ಗುರುತಿಸಲಾಗಿದೆ. ಪುತ್ತೂರಿನಿಂದ ಬೆಟ್ಟಂಪಾಡಿ ಕಡೆಗೆ ತೆರಳುವ ಕಾರು ಸಂಟ್ಯಾರ್ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯ ಸುಮಾರು 50 ಅಡಿಯ ತೋಟಕ್ಕೆ ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಮುರಳಿ ಭಟ್ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮುರಳಿ ಭಟ್ ಅವರ ಜೊತೆ

ಸಂಟ್ಯಾರ್: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಮೃತ್ಯು Read More »

ಆಮದು ಅಡಿಕೆ ಸುಂಕ ಹೆಚ್ಚಿಸಿದ ಕೇಂದ್ರ ಸರಕಾರ | ವಿದೇಶಿ ಅಡಿಕೆ ದರ 700 ರೂ. ಸಮೀಪಿಸಲಿದೆ! | ದೇಶಿಯ ಅಡಿಕೆ ಧಾರಣೆ ಹೆಚ್ಚುವ ಸುಳಿವು

ಪುತ್ತೂರು: ಅಮಿತ್ ಶಾ ಪುತ್ತೂರಿಗೆ ಆಗಮಿಸಿ ಏನೂ ಘೋಷಣೆ ಮಾಡಲಿಲ್ಲ ಎನ್ನುವ ಹೇಳಿಕೆಗಳ ಬೆನ್ನಲ್ಲೇ, ಅಡಿಕೆ ಬೆಳೆಗಾರರ ಪಾಲಿಗೆ ಮಹತ್ವದ್ದೆನ್ನಲಾದ ಅಧಿಸೂಚನೆ ಕೇಂದ್ರದಿಂದ ಹೊರಬಿದ್ದಿದೆ. ವಿದೇಶಗಳಿಂದ ಆಮದಾಗುತ್ತಿದ್ದ ಅಡಿಕೆ ಕೆ.ಜಿ.ಗೆ 100 ರೂ.ನಷ್ಟು ಸುಂಕ ಹೆಚ್ಚಿಸಿದ್ದು, ಮುಂದೆ ವಿದೇಶಿ ಅಡಿಕೆಗಳಿಗೆ ಕಡಿವಾಣ ಬೀಳುವುದು ಪಕ್ಕಾ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹಳೆ ಅಡಿಕೆ 460 ರೂ.ನಿಂದ 500 ರೂವರೆಗೆ ಹಾಗೂ ಹೊಸಅಡಕೆಗೆ 400 ರೂ.ವರೆಗೆ ಧಾರಣೆ ಇದೆ. ಆದರೆ ವಿದೇಶಗಳಿಂದ ಆಮದಾಗುತ್ತಿದ್ದ ಅಡಿಕೆಗೆ ಆಮದು ಸುಂಕ ಕಡಿಮೆ ಇರುತ್ತಿದ್ದ

ಆಮದು ಅಡಿಕೆ ಸುಂಕ ಹೆಚ್ಚಿಸಿದ ಕೇಂದ್ರ ಸರಕಾರ | ವಿದೇಶಿ ಅಡಿಕೆ ದರ 700 ರೂ. ಸಮೀಪಿಸಲಿದೆ! | ದೇಶಿಯ ಅಡಿಕೆ ಧಾರಣೆ ಹೆಚ್ಚುವ ಸುಳಿವು Read More »

ನೆಲ್ಲಿಕಟ್ಟೆ ಪಾರ್ಕ್‌ನಲ್ಲಿ ಕಾಣಿಸಿಕೊಂಡ ಬೆಂಕಿ : ಬೆಂಕಿ ನಂದಿಸಿದ ಸ್ಥಳೀಯರು | ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ

ಪುತ್ತೂರು : ನಗರದ ನೆಲ್ಲಿಕಟ್ಟೆಯಲ್ಲಿರುವ ಪಾರ್ಕ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡು ಸ್ಥಳೀಯರು ಎಚ್ಚೆತ್ತುಕೊಂಡು ಬೆಂಕಿ ನಂದಿಸಿದ ಪರಿಣಾಮ ಸಂಭವಿಸಬಹುದಾದ ಅಪಾಯ ತಪ್ಪಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಪಾರ್ಕ್‌ನಲ್ಲಿ ಎಲೆಕ್ಟ್ರಿಕ್ ವೈರ್ ತುಂಡಾಗಿ ಬಿದ್ದದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹತ್ತಿಕೊಂಡ ತಕ್ಷಣ ಜಾಗೃತರಾದ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಕಾರ್ಯಪ್ರವೃತ್ತರಾದರು. ಬಳಿಕ ಅಗ್ಮಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಸಂಪೂರ್ಣ ಬೆಂಕಿ ನಂದಿಸಿದರು. ಯಾವುದೇ ನಷ್ಟವಾಗಲಿ, ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ನೆಲ್ಲಿಕಟ್ಟೆ ಪಾರ್ಕ್‌ನಲ್ಲಿ ಕಾಣಿಸಿಕೊಂಡ ಬೆಂಕಿ : ಬೆಂಕಿ ನಂದಿಸಿದ ಸ್ಥಳೀಯರು | ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ Read More »

ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ತನ್ನ ಹುಟ್ಟುಹಬ್ಬ ನಿರಾಕರಿಸಿದ ವಿದ್ಯಾರ್ಥಿನಿ  | ದೇಶಪ್ರೇಮ ಮೆರೆದು ಮಾದರಿಯಾದ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ  ತನ್ವಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಒಂಬತ್ತನೆಯ ತರಗತಿ ವಿದ್ಯಾರ್ಥಿನಿ ತನ್ವಿ ವಿ. ತನ್ನ ದಿಟ್ಟ ನಿರ್ಧಾರದಿಂದಾಗಿ ಮಾದರಿ ಎನಿಸಿದ್ದಾಳೆ. ಫೆ. 14 ಆಕೆಯ ಜನ್ಮದಿನ. ಆದರೆ ನಾಲ್ಕು ವರ್ಷದ ಹಿಂದೆ ಅದೇ ದಿನದಂದು ಪುಲ್ವಾಮಾ ದಾಳಿಯಲ್ಲಿ ದೇಶದ ವೀರಯೋಧರು ಮರಣಿಸಿದ್ದು ಈಕೆಯ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆ ಭಾವನೆ ಆಕೆ ದೊಡ್ಡವಳಾದಂತೆ ಮತ್ತಷ್ಟು ಗಾಢವಾಗಿದೆ. ಹಾಗಾಗಿ ಫೆ. 14 ರಂದು ತನಗೆ ಯಾವುದೇ ಸಂಭ್ರಮ ಇಲ್ಲ ಎಂದು ಆಕೆ

ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ತನ್ನ ಹುಟ್ಟುಹಬ್ಬ ನಿರಾಕರಿಸಿದ ವಿದ್ಯಾರ್ಥಿನಿ  | ದೇಶಪ್ರೇಮ ಮೆರೆದು ಮಾದರಿಯಾದ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ  ತನ್ವಿ Read More »

error: Content is protected !!
Scroll to Top