ಇಂದು (ಮಾ.5) : ಬೈಂದೂರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭವತಿ ಭೀಕ್ಷಾಂ ದೇಹಿ ಅಭಿಯಾನದ ಮೂಲಕ ನಿಧಿ ಸಂಗ್ರಹ

ಪುತ್ತೂರು : ಕರ್ನಾಟಕ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಪತ್ ಭಾಂದವ ಈಶ್ವರ್ ಮಲ್ಪೆ ಅವರ ಸಹಕಾರದಲ್ಲಿ ಸೇವೆ ಎಂಬ ಯಜ್ಞದಲ್ಲಿ ಮಾ.5 ಭಾನುವಾರ ಬೈಂದೂರು ಸಮೀಪದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭವತಿ ಭೀಕ್ಷಾಂ ದೇಹಿ ಅಭಿಯಾನ ನಡೆಸಿ ನಿಧಿ ಸಂಗ್ರಹ ನಡೆಸಲಿದೆ. ಮಂಗಳೂರು ತಾಲ್ಲೂಕಿನ  ಬಿಂದು ಅವರ ಮಗು ಗೌರವ್ ಎಂಬ 14 ವರ್ಷದ ಬಾಲಕ ಕರುಳು ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸುಮಾರು 15 ಲಕ್ಷ ರೂಪಾಯಿ ಅಗತ್ಯವಿರುತ್ತದೆ. […]

ಇಂದು (ಮಾ.5) : ಬೈಂದೂರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಭವತಿ ಭೀಕ್ಷಾಂ ದೇಹಿ ಅಭಿಯಾನದ ಮೂಲಕ ನಿಧಿ ಸಂಗ್ರಹ Read More »

ಅರಿಯಡ್ಕ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಪುತ್ತೂರು : ಅರಿಯಡ್ಕ ಗ್ರಾಮದ ನೂತನ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಗ್ರಾಮ ಪಂಚಾಯಿತಿಗಳು ಸ್ಥಳೀಯ ಗ್ರಾಮಸ್ಥರ ಆಶೋತ್ತರಗಳನ್ನು ಈಡೇರಿಸುವ ಕೇಂದ್ರವಾಗಿದ್ದು, ಗ್ರಾಪಂ ಮೂಲಕ ಹಲವಾರು ಯೋಜನೆಗಳು ಜನಸಾಮಾನ್ಯರನ್ನು ತಪುಲುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಹಾಗೂ ಊರ ಗ್ರಾಮಸ್ಥರು

ಅರಿಯಡ್ಕ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ Read More »

ಕುರಿಯ: ದತ್ತು ಶಾಲೆಗೆ ಹೊಸ ಗತ್ತು

ನೂತನ ಕೊಠಡಿಗೆ ಶಿಲಾನ್ಯಾಸ, ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಮಠಂದೂರು ಕುರಿಯ ಶಾಲೆಯನ್ನು ದತ್ತು ತೆಗೆದುಕೊಂಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಪುತ್ತೂರು: ಕುರಿಯ ಉನ್ನತ ಹಿರಿಯ ಪ್ರಾಥಮಿಕ ಶಾಲೆಯನ್ನು ಬೂಡಿಯಾರ್ ರಾಧಾಕೃಷ್ಣ ರೈ ಅವರು ದತ್ತು ತೆಗೆದುಕೊಂಡಿದ್ದಾರೆ. ಶಾಲೆಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಯೋಜನೆಯ ಮೊದಲ ಕಾರ್ಯಕ್ರಮವಾಗಿ ನೂತನ ಕೊಠಡಿಗೆ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಮೂಡಿಬಂದಿತು. ಇದರೊಂದಿಗೆ ಶಾಸಕ ಸಂಜೀವ ಮಠಂದೂರು ಅವರು ನೀಡಿರುವ ಸ್ಮಾರ್ಟ್

ಕುರಿಯ: ದತ್ತು ಶಾಲೆಗೆ ಹೊಸ ಗತ್ತು Read More »

ಪ್ರೇರಣಾದಲ್ಲಿ ಸಿಎ ಓರಿಯಂಟೇಷನ್ ತರಗತಿ

ಏಪ್ರಿಲ್ 1ರಿಂದ ಸಿಎ ತರಗತಿ ಆರಂಭ ಪುತ್ತೂರು: ಇಲ್ಲಿನ ಪ್ರೇರಣಾ ಸಂಸ್ಥೆಯಲ್ಲಿ ಸಿಎ ಓರಿಯಂಟೇಷನ್ ತರಗತಿ ಮಾರ್ಚ್ 4ರಂದು ನಡೆಯಿತು. ಭಾರತದ ಅತ್ಯುನ್ನತ ಪರೀಕ್ಷೆಗಳಲ್ಲಿ ಒಂದಾದ ಸಿಎ ಪರೀಕ್ಷೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಹಿನ್ನೆಲೆಯಲ್ಲಿ ಪ್ರೇರಣಾ ಸಂಸ್ಥೆ ಸಿಎ ಓರಿಯಂಟೇಷನ್ ತರಗತಿಯನ್ನು ಹಮ್ಮಿಕೊಂಡಿತ್ತು. ನುರಿತ ಉಪನ್ಯಾಸಕರಿಂದ ಸಿಎ ಫೌಂಡೇಷನ್ ಕೋರ್ಸಿನ ಬಗ್ಗೆ ತರಬೇತಿ ನೀಡಲಾಯಿತು. ಏಪ್ರಿಲ್ 1ರಿಂದ ಸಿಎ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ತರಬೇತಿ ನಡೆಯಲಿದೆ. ಪ್ರೇರಣಾ ಸಂಸ್ಥೆಯ ನಿರ್ದೇಶಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ

ಪ್ರೇರಣಾದಲ್ಲಿ ಸಿಎ ಓರಿಯಂಟೇಷನ್ ತರಗತಿ Read More »

ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ | ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ 127 ಫಲಾನುಭವಿಗಳ ಅರ್ಜಿಗಳು ಇತ್ಯರ್ಥ

ಪುತ್ತೂರು: ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ಪುತ್ತೂರು ಆಡಳಿತ ಸೌಧದ ತಹಸೀಲ್ದಾರ್ ನ್ಯಾಯಾಲಯದಲ್ಲಿ ಶನಿವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಒಟ್ಟು 127 ಫಲಾನುಭವಿಗಳ ಅರ್ಜಿಗಳು ಸಭೆಯಲ್ಲಿ ಇತ್ಯರ್ಥವಾಯಿತು. ಸಭೆಯಲ್ಲಿ ತಹಸೀಲ್ದಾರ್ ರಮೇಶ್ ಬಾಬು, ಬಗರ್ ಹುಕುಂ ಸಮಿತಿಯ ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರಿ ಭಟ್, ತಾಲೂಕು ಆಡಳಿತದ ಅಧಿಕಾರಿಗಳು ಹಾಜರಿದ್ದರು.

ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ | ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ 127 ಫಲಾನುಭವಿಗಳ ಅರ್ಜಿಗಳು ಇತ್ಯರ್ಥ Read More »

ಬಂಗಾರಡ್ಕ ಶ್ರೀ ರಾಮ ಭಜನಾ ಮಂದಿರದ 14ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು : ಬಂಗಾರಡ್ಕ ಶ್ರೀ ರಾಮ ಭಜನಾ ಮಂದಿರದ  14 ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಭಜನಾ ಮಂದಿರದ ಅಧ್ಯಕ್ಷ ಪ್ರದೀಪ್ ಕೃಷ್ಣ ಬಂಗಾರಡ್ಕ,  ಉಪಾಧ್ಯಕ್ಷ ಗೋಪಾಲಕೃಷ್ಣ ಬಂಗಾರಡ್ಕ, ಕಾರ್ಯದರ್ಶಿ-ಕಿಟ್ಟಣ್ಣ ರೈ ಬಂಗಾರಡ್ಕ ಹಾಗೂ ಊರಿನ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 14ನೇ ವಾರ್ಷಿಕೋತ್ಸವ ಸಮಾರಂಭ ಮಾ.30 ರಂದು ನಡೆಯಲಿದ್ದು, ಅರ್ಧ ಏಕಾಹ ಭಜನೆ, ಸಾಮೂಹಿಕ ಶ್ರೀ ರಾಮ ಕಲ್ಪೋಕ್ತ ಪೂಜೆ ಹಾಗೂ ರಾತ್ರಿ ರಂಗಪೂಜೆ ನಡೆಯಲಿದೆ.

ಬಂಗಾರಡ್ಕ ಶ್ರೀ ರಾಮ ಭಜನಾ ಮಂದಿರದ 14ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಪುತ್ತೂರು ಶಾಲೆಗಳಿಗೆ ಉಕ್ರೇನ್‍ನ ಸ್ಮಾರ್ಟ್ ಬೋರ್ಡ್ | ಕುರಿಯ ಉ.ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಂಜೀವ ಮಠಂದೂರು | ನೂತನ ಕೊಠಡಿಗೆ ಶಿಲಾನ್ಯಾಸ, ಸ್ಮಾರ್ಟ್ ಬೋರ್ಡ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಪುತ್ತೂರು: ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಸ್ಮಾರ್ಟ್ ಬೋರ್ಡ್ ಮೂಲಕ ಶಿಕ್ಷಣ ನೀಡುವ ಕೆಲಸ ಆಗುತ್ತಿದೆ. ಇದನ್ನು ನಮ್ಮೂರಿನ ಸರಕಾರಿ ಶಾಲೆಗಳಿಗೆ ನೀಡಿ ಯಾಕೆ ಪರಿಚಯಿಸಬಾರದು ಎನ್ನುವ ಆಲೋಚನೆ ಬಂದಿತು. ಈ ಹಿನ್ನೆಲೆಯಲ್ಲಿ ಉಕ್ರೇನ್‍ನಿಂದ ಸ್ಮಾರ್ಟ್ ಬೋರ್ಡ್‍ಗಳನ್ನು ತರಿಸಿಕೊಂಡು ಸರಕಾರಿ ಶಾಲೆಗಳಲ್ಲಿ ನೀಡಿ, ಆಧುನಿಕ ಶಿಕ್ಷಣವನ್ನು ಪರಿಚಯಿಸುವ ಕೆಲಸ ನಡೆಸಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಕುರಿಯ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ. 4ರಂದು ನಡೆದ ನೂತನ ಕೊಠಡಿಗೆ ಶಿಲಾನ್ಯಾಸ, ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ಧ

ಪುತ್ತೂರು ಶಾಲೆಗಳಿಗೆ ಉಕ್ರೇನ್‍ನ ಸ್ಮಾರ್ಟ್ ಬೋರ್ಡ್ | ಕುರಿಯ ಉ.ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಂಜೀವ ಮಠಂದೂರು | ನೂತನ ಕೊಠಡಿಗೆ ಶಿಲಾನ್ಯಾಸ, ಸ್ಮಾರ್ಟ್ ಬೋರ್ಡ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ Read More »

ಸ್ವಾತಂತ್ರ್ಯದ ಕ್ರಾಂತಿ ಸಿಂಹ ಬಿರುದಾಂಕಿತ ಅವರ ಶವ ರಸ್ತೆ ಬದಿಯಲಿ ಬಿದ್ದು ಕೊಳೆತ್ತಿತ್ತು

ಅನಾಮಧೇಯಳಾಗಿ ಸಾಯುವಾಗಲೂ ಪರ್ಸ್‌ನಲ್ಲಿದ್ದದ್ದು ಸುಭಾಶ್‌ ಬಾಬು ಫೋಟೊ 1930ರ ಸ್ವಾತಂತ್ರ್ಯ ಹೋರಾಟದ ತೀವ್ರತೆಯ ದಿನಗಳು. ಪಶ್ಚಿಮ ಬಂಗಾಳದ ಒಂದು ಸಾಧಾರಣವಾದ ಮನೆಯ ಒಳಗೆ ಸುಭಾಶ್‌ಚಂದ್ರ ಬೋಸರು ಮಾತಾಡುತ್ತ ಊಟ ಮಾಡುತ್ತಿದ್ದರು. ಇಪ್ಪತ್ತರ ಹರೆಯದ ಆ ಮನೆಯ ಮಗಳು ಸುಭಾಶರ ಎದುರು ಕುಳಿತು ಅವರ ಮಾತುಗಳನ್ನೇ ಕೇಳುತ್ತಿದ್ದಳು. ಆಕೆಯ ಅಮ್ಮ ಸುಭಾಶರಿಗೆ ಹೇಳಿದರು – ನಮ್ಮ ಮಗಳು ನಿಮ್ಮ ಬಹಳ ದೊಡ್ಡ ಆರಾಧಕಿ. ಆಕೆಯ ಪ್ರಪಂಚದಲ್ಲಿ ನೀವು ಮತ್ತು ನೀವು ಮಾತ್ರ ಇರುತ್ತೀರಿ ಬಿಟ್ಟರೆ ಬೇರೆ ಯಾರೂ ಇಲ್ಲ.

ಸ್ವಾತಂತ್ರ್ಯದ ಕ್ರಾಂತಿ ಸಿಂಹ ಬಿರುದಾಂಕಿತ ಅವರ ಶವ ರಸ್ತೆ ಬದಿಯಲಿ ಬಿದ್ದು ಕೊಳೆತ್ತಿತ್ತು Read More »

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲೂ ಕೆಜಿಗಟ್ಟಲೆ, ಚಿನ್ನ, ಬೆಳ್ಳಿ, ನಗದು ಪತ್ತೆ

ದಾವಣಗೆರೆ: ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದ ಮಾಡಾಳ್ ನಿವಾಸದಲ್ಲಿ ಸತತ 10 ಗಂಟೆ ಲೋಕಾಯುಕ್ತ ಪೊಲೀಸರು ನಡೆಸಿದ್ದ ದಾಳಿ ಮುಕ್ತಾಯಗೊಂಡಿದ್ದು ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ಮಾಡಾಳ್ ನಿವಾಸದಲ್ಲಿ 2,800 ಗ್ರಾಂ ಚಿನ್ನಾಭರಣ, 20 ಕೆಜಿ ಬೆಳ್ಳಿ ಆಭರಣಗಳು, 16.5 ಲಕ್ಷ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಲೋಕಾಯುಕ್ತ ಪೊಲೀಸರು ಚಿನ್ನ, ಬೆಳ್ಳಿ, ನಗದು ಮತ್ತು ಆಸ್ತಿ ಪತ್ರಗಳ ಪಟ್ಟಿ ಮಾಡಿದ್ದು ಇದಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪತ್ನಿ ಲೀಲಾವತಿಯವರಿಂದ ಸಹಿ

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲೂ ಕೆಜಿಗಟ್ಟಲೆ, ಚಿನ್ನ, ಬೆಳ್ಳಿ, ನಗದು ಪತ್ತೆ Read More »

ವಿಹಿಂಪ, ಬಜರಂಗಳದ ದಕ್ಷಿಣ ಪ್ರಾಂತ ಬೈಠಕ್ ಹಾಗೂ ಶೌರ್ಯ ಯಾತ್ರೆ ಯಶಸ್ಸಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

ಪುತ್ತೂರು : ತೆಂಕಿಲ ವಿವೇಕಾನಂದ ಶಾಲೆಯಲ್ಲಿ ನಡೆಯುವ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಬೈಠಕ್ ಹಾಗೂ ಮಾ.5 ರಂದು ನಡೆಯುವ ಶೌರ್ಯ ಯಾತ್ರೆಯ ಯಶಸ್ಸಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲಾಯಿತು. ಮಾ.4 ಹಾಗೂ 5 ರಂದು ಪ್ರಾಂತ ಬೈಠಕ್ ನಡೆಯಲಿದ್ದು, ಮಾ.5 ರಂದು ಸಂಜೆ ಶೌರ್ಯ ಯಾತ್ರೆ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಶ್ರೀ ಮಗಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವೆ.ಮೂ.ವಿ.ಎಸ್್.ಭಟ್ ಪ್ರಾರ್ಥನೆ ಸಲ್ಲಿಸಿದರು.

ವಿಹಿಂಪ, ಬಜರಂಗಳದ ದಕ್ಷಿಣ ಪ್ರಾಂತ ಬೈಠಕ್ ಹಾಗೂ ಶೌರ್ಯ ಯಾತ್ರೆ ಯಶಸ್ಸಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ Read More »

error: Content is protected !!
Scroll to Top