ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ | ಸವಣೂರಿನಲ್ಲಿ ಪೂರ್ವಸಿದ್ಧತಾ ಸಭೆ

ಪುತ್ತೂರು: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 86ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ ಸವಣೂರಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು. ಮನೆಮನೆಗೆ ಆಮಂತ್ರಣ ಪತ್ರ ತಲುಪಿಸುವ ಕುರಿತು ಮಾಹಿತಿ ನೀಡಲಾಯಿತು. ಜೊತೆಗೆ, ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಭಾವಚಿತ್ರವುಳ್ಳ ಸ್ಟಿಕ್ಕರನ್ನು ಪ್ರತಿ ಮನೆಮನೆಗೆ ತಲುಪಿಸಿ, ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಲಾಯಿತು.

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ | ಸವಣೂರಿನಲ್ಲಿ ಪೂರ್ವಸಿದ್ಧತಾ ಸಭೆ Read More »

ಉಪ್ಪಿನಂಗಡಿ ಗ್ರಾಮ ಪಂಚಾಯತ್ಗೆ ಗ್ರಂಥಾಲಯ, ಮಾಹಿತಿ ಕೇಂದ್ರ ಕಟ್ಟಡಕ್ಕೆ ಶಾಸಕರಿಂದ ಶಂಕುಸ್ಥಾಪನೆ

ಪುತ್ತೂರು: ಉಪ್ಪಿನಂಗಡಿ ಗ್ರಾಮ ಪಂಚಾಯತ್ಗೆ ಗ್ರಂಥಾಲಯ ಕೊಠಡಿ, ಮಾಹಿತಿ ಕೇಂದ್ರ ಕಟ್ಟಡಕ್ಕೆ ಶಾಸಕ ಸಂಜೀವ ಮಠಂದೂರು ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭ ಸಾರ್ವಜನಿಕ ಉದ್ಯಾನವನಕ್ಕೆ ಶಿಲಾನ್ಯಾಸ ನಡೆಸಲಾಯಿತು. ಬಳಿಕ ಮಾತನಾಡಿದ ಶಾಸಕರು, ಅಮೃತ ಗ್ರಾಮ ಯೋಜನೆಯಡಿ ಒಟ್ಟು 27 ಲಕ್ಷದ 25 ಸಾವಿರ ರೂ. ಮಂಜೂರಾಗಿದ್ದು, ಇದರಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಕ್ಕೆ ಕಟ್ಟಡ ನಿರ್ಮಾಣ ಆಗಲಿದೆ. ಈ ಮೂಲಕ ಆಧುನಿಕತೆಗೆ ಗ್ರಂಥಾಲಯದ ಸ್ಪರ್ಶ ನೀಡುವ ಕೆಲಸ ಇಲ್ಲಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣ, ಮೊಬೈಲ್

ಉಪ್ಪಿನಂಗಡಿ ಗ್ರಾಮ ಪಂಚಾಯತ್ಗೆ ಗ್ರಂಥಾಲಯ, ಮಾಹಿತಿ ಕೇಂದ್ರ ಕಟ್ಟಡಕ್ಕೆ ಶಾಸಕರಿಂದ ಶಂಕುಸ್ಥಾಪನೆ Read More »

ಹಾವೇರಿಯಲ್ಲಿ ನಾಳೆಯಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳ

1 ಸಾವಿರ ಬಾಣಸಿಗರಿಂದ ಅಡುಗೆ ತಯಾರಿ; ಭದ್ರತೆಗೆ 12 ಸಾವಿರ ಪೊಲೀಸರು ಹಾವೇರಿ: ಹಾವೇರಿಯಲ್ಲಿ ಶುಕ್ರವಾರದಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳನನಡೆಯಲಿದ್ದು, ಅದಕ್ಕಾಗಿ ಭರ್ಜರಿ ತಯಾರಿ ನಡೆಸಲಾಗಿದೆ. ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಸಮ್ಮೇಳನದಲ್ಲಿ ಭದ್ರತೆ ಮತ್ತು ಸಂಚಾರ ನಿರ್ವಹಣೆಯ ಮೇಲ್ವಿಚಾರಣೆಗೆ ಸುಮಾರು 12 ಸಾವಿರ ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕರನ್ನು ನಿಯೋಜಿಸಲಾಗಿದೆ.ಸಂದರ್ಶಕರು ಸ್ಥಳವನ್ನು ತಲುಪಲು ಮತ್ತು ಪಾರ್ಕಿಂಗ್ ಸ್ಲಾಟ್‌ಗಳನ್ನು ಹುಡುಕಲು ಕ್ಯೂಆರ್ ಕೋಡ್‌ಗಳನ್ನು ಪರಿಚಯಿಸಲಾಗುತ್ತಿದೆ. ಅಡುಗೆ ಕೋಣೆ ಸೇರಿದಂತೆ

ಹಾವೇರಿಯಲ್ಲಿ ನಾಳೆಯಿಂದ 86ನೇ ಕನ್ನಡ ಸಾಹಿತ್ಯ ಸಮ್ಮೇಳ Read More »

ಕಂಬಳ ನಿಯಮದಲ್ಲಿ ಕೆಲವು ಬದಲಾವಣೆ

ತುರ್ತುಸಭೆಯಲ್ಲಿ ನಿರ್ಧಾರ ಮೂಡುಬಿದಿರೆ : ಕಂಬಳ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಬುಧವಾರ ನಡೆದ ತುರ್ತುಸಭೆಯಲ್ಲಿ ನಿರ್ಧರಿಸಲಾಗಿದೆ.ಮುಂದಿನ ಕಂಬಳಗಳಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ಕೊಡುಗೆಯಾಗಿ ನೀಡದ ಸೆನ್ಸಾರ್‌ ಸಿಸ್ಟಂ ಅಳವಡಿಸಿಕೊಂಡು ಫಲಿತಾಂಶ ನಿರ್ಧರಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸೆನ್ಸಾರ್‌ ಸಿಸ್ಟಂ ನಿರ್ವಹಣೆಯ ಪೂರ್ಣ ಜವಾಬ್ದಾರಿ ಕಂಗಿನಮನೆ ವಿಜಯಕುಮಾರ್‌ ಅವರದ್ದು. ಒಂದು ವೇಳೆ ಈ ಸೆನ್ಸಾರ್‌ ಸಿಸ್ಟಂ ಕಂಬಳ ಆಗುವಾಗ ಕೈಕೊಟ್ಟರೆ ಮೂರನೇ ತೀರ್ಪುಗಾರರ ತೀರ್ಮಾನವನ್ನು ಅವಲಂಬಿಸಲಾಗುವುದು. ಮೂರನೇ ತೀರ್ಪುಗಾರರಾಗಿ ಜಿಲ್ಲಾ ಕಂಬಳ ಸಮಿತಿ ಮತ್ತು ಆಯಾಯ ಕಂಬಳ

ಕಂಬಳ ನಿಯಮದಲ್ಲಿ ಕೆಲವು ಬದಲಾವಣೆ Read More »

ಮರಕ್ಕೆ ಡಿಕ್ಕಿಯಾದ ಬೊಲೆರೊ : 6 ಮಂದಿ ಸಾವು

ದೇವಸ್ಥಾನಕ್ಕೆ ಹೊರಟವರ ದುರಂತ ಅಂತ್ಯ ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದ ಬಳಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಆಲದ ಮರಕ್ಕೆ ಬೊಲೆರೊ ವಾಹನ ಡಿಕ್ಕಿಹೊಡೆದು ಅಪಘಾತ ಸಂಬವಿಸಿದೆ.ಹುಲಕುಂದ ಗ್ರಾಮದಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ. ಪಿಕ್‌ಅಪ್ ಬೊಲೆರೊ ವಾಹನದಲ್ಲಿ 23 ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ

ಮರಕ್ಕೆ ಡಿಕ್ಕಿಯಾದ ಬೊಲೆರೊ : 6 ಮಂದಿ ಸಾವು Read More »

ಮಂಗಳೂರು-ಮಡ್‌ಗಾಂವ್‌ ರೈಲು ಪುನರಾರಂಭ

ವಾರದಲ್ಲಿ ಆರು ದಿನ ಸಂಚಾರ ಮಂಗಳೂರು : ಮಂಗಳೂರು-ಮಡಗಾಂವ್ ರೈಲನ್ನು ಪುನರಾರಂಭಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.ಮಂಗಳೂರು ಸೆಂಟ್ರಲ್‌ನಿಂದ ಮಡಗಾಂವ್ ಜಂಕ್ಷನ್‌ವರೆಗೆ ರೈಲು(10107 / 10108) ಮತ್ತೆ ಸಂಚರಿಸಲಿದೆ. ಭಾನುವಾರ ಹೊರತುಪಡಿಸಿ ವಾರದ ಉಳಿದ ಆರು ದಿನ ಈ ರೈಲಿನ ಸಂಚಾರವಿರುತ್ತದೆ. ರೈಲು ಸಂಖ್ಯೆ 10107 ಮಡಗಾಂವ್ ಜಂಕ್ಷನ್‌ನಿಂದ ಪ್ರತಿ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ಬೆಳಗ್ಗೆ 5:15 ಗಂಟೆಗೆ ಹೊರಟು ಅದೇ ದಿನ 12.15ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.ರೈಲು ಸಂಖ್ಯೆ 10108 ಮಂಗಳೂರು

ಮಂಗಳೂರು-ಮಡ್‌ಗಾಂವ್‌ ರೈಲು ಪುನರಾರಂಭ Read More »

ಕೈ ಟಿಕೆಟ್‌ ಹಂಚಿಕೆಗೆ ತ್ರಿ ಸೂತ್ರ

ಆಕಾಂಕ್ಷಿಗಳ ಸಂಖ್ಯೆಯಿಂದ ನಾಯಕರು ಕಕ್ಕಾಬಿಕ್ಕಿ ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಈಗ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಅರ್ಜಿ ಹಾಕಿ ಟಿಕೆಟ್‌ ಕೇಳುವ ತಂತ್ರಕ್ಕೆ ಮೊರೆ ಹೋದ ಪರಿಣಾಮವಾಗಿ ಒಂದೊಂದು ಕ್ಷೇತ್ರಗಳಿಂದಲೂ ೮-೧೦ ಆಕಾಂಕ್ಷಿಗಳು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಯಾರಿಗೆ ಟಿಕೆಟ್‌ ನೀಡಿದರೂ ಬಂಡಾಯ ಏಳುವ ಸಾಧ್ಯತೆಯಿರುವುದರಿಂದ ಕಾಂಗ್ರೆಸ್‌ ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್‌ ಹಂಚಿಕೆಗೆ ಮೂರು ಸೂತ್ರಗಳನ್ನು ಅನ್ವಯಿಸಲು ನಿರ್ಧರಿಸಿದ್ದಾರೆ.ಮೊದಲ ಸೂತ್ರವೆಂದರೆ ಈಗಿರುವ ಎಲ್ಲ ಹಾಲಿ ಶಾಸಕರು ಹಾಗೂ ಕಳೆದ ಬಾರಿಯ

ಕೈ ಟಿಕೆಟ್‌ ಹಂಚಿಕೆಗೆ ತ್ರಿ ಸೂತ್ರ Read More »

ಪ್ಲಾಟ್‌ಫಾರ್ಮ್‌ನ ಡ್ರಮ್‌ನಲ್ಲಿ ಯುವತಿಯ ಕೊಳೆತ ಶವ ಪತ್ತೆ

ಯಶವಂತಪುರ ರೈಲು ನಿಲ್ದಾಣದಲ್ಲಿ ಸಂಭವಿಸಿದ ಘಟನೆ ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದ ಹಳಿಯ ಬಳಿಯಲ್ಲಿದ್ದ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ತುಂಬಾ ದಿನಗಳ ಹಿಂದೆಯೇ ಇದನ್ನು ಇಲ್ಲಿಡಲಾಗಿದ್ದು, ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ವಚ್ಛತಾ ಸಿಬ್ಬಂದಿ ಅದನ್ನು ತೆರವುಗೊಳಿಸುವ ವೇಳೆ ಡ್ರಮ್‌ನಲ್ಲಿ ಮಹಿಳೆ ಶವ ಇರುವುದು ಪತ್ತೆಯಾಗಿದೆ. ಡ್ರಮ್‌ ಮೇಲೆ ಬಟ್ಟೆಗಳನ್ನು ಸುತ್ತಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಯಶವಂತಪುರ ರೈಲು ನಿಲ್ದಾಣದ ಗೂಡ್ಸ್ ಪ್ಲಾಟ್‌ಫಾರ್ಮ್‌ನ ಡ್ರಮ್‌ ಒಂದರಲ್ಲಿ ಶವ ಪತ್ತೆಯಾಗಿದೆ. ಅಂದಾಜು 23

ಪ್ಲಾಟ್‌ಫಾರ್ಮ್‌ನ ಡ್ರಮ್‌ನಲ್ಲಿ ಯುವತಿಯ ಕೊಳೆತ ಶವ ಪತ್ತೆ Read More »

ಸಾವಿರ ಅನಾಥ ಮಕ್ಕಳ ತಾಯಿ ಸಿಂಧೂತಾಯಿ ಸಪ್ಕಾಲ್!

ಭಿಕ್ಷೆ ಬೇಡಿ ಅನಾಥಾಶ್ರಮ ಕಟ್ಟಿದ ಮಹಾತಾಯಿ ಪೂನಾ ರೈಲು ನಿಲ್ದಾಣದಲ್ಲಿ 50 ವರ್ಷಗಳ ಹಿಂದೆ ಹಾಡುತ್ತ, ಭಿಕ್ಷೆ ಬೇಡುತ್ತಿದ್ದ ಒಬ್ಬರು ಅನಾಥ ಮಹಿಳೆ ಇಂದು 1,400 ಬೀದಿ ಬದಿಯ ಮಕ್ಕಳ ಮಹಾತಾಯಿ ಆದ ಕಥೆಯು ತುಂಬಾ ರೋಚಕವಾದದ್ದು. ಆಕೆಯ ಬದುಕು ಒಂದು ಅದ್ಭುತವಾದ ಯಶೋಗಾಥೆ.ಸಿಂಧೂತಾಯಿ ಹುಟ್ಟಿದ್ದು ಒಂದು ಅತ್ಯಂತ ಬಡತನದ ಕುಟುಂಬದಲ್ಲಿ. ಅವರು ದನಗಾಹಿಗಳು. ಸಿಂಧೂ ಹುಟ್ಟಿದಾಗ ಹೆಣ್ಣು ಮಗು ಅವಳ ಹೆತ್ತವರಿಗೆ ಹೊರೆ ಆಗಿತ್ತು. ಬಡತನದ ಕಾರಣಕ್ಕೆ ನಾಲ್ಕನೇ ತರಗತಿಗೆ ಅವಳ ವಿದ್ಯಾಭ್ಯಾಸ ನಿಂತು ಹೋಯಿತು.10ನೆಯ

ಸಾವಿರ ಅನಾಥ ಮಕ್ಕಳ ತಾಯಿ ಸಿಂಧೂತಾಯಿ ಸಪ್ಕಾಲ್! Read More »

ಜ. 5, 6: ಕಲ್ಲೇಗ ಮಾಡತ್ತಾರು ಶ್ರೀ ಪುಣ್ಯ ಕುಮಾರಸ್ವಾಮಿ, ಧರ್ಮದೈವಗಳ ಪುನಶ್ಚೈತನ್ಯ ಕಲಶಾಭಿಷೇಕ, ನೇಮೊತ್ಸವ

ಪುತ್ತೂರು: ಕಲ್ಲೇಗ ಮಾಡತ್ತಾರು ಶ್ರೀ ಪುಣ್ಯ ಕುಮಾರಸ್ವಾಮಿ ಹಾಗೂ ಧರ್ಮದೈವಗಳ ಪುನಶ್ಚೈತನ್ಯ ಕಲಶಾಭಿಷೇಕ ಹಾಗೂ ನೇಮೊತ್ಸವ ಜ. 5ರಿಂದ ನಡೆಯಲಿದೆ. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ, ಶೇವಿರೆ ಕೃಷ್ಣ ಮಡಪುಳಿತ್ತಾಯರವರ ಪೌರೋಹಿತ್ಯದಲ್ಲಿ ವೈದಿಕ ಕಾರ್ಯಕ್ರಮ ನಡೆಯಲಿದೆ. ಜ. 5ರಂದು ಬೆಳಿಗ್ಗೆ 6.30ಕ್ಕೆ ಕಲ್ಲೇಗ ಗುತ್ತಿನ ಭಂಡಾರ ಚಾವಡಿಯಿಂದ ಭಂಡಾರ ಹೊರಡಲಿದೆ. ಬೆಳಿಗ್ಗೆ 7ರಿಂದ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಪಂಚವಿಂಶತಿ, ಕಲಶ ಪೂಜೆ, ಬೆಳಿಗ್ಗೆ 10.28ಕ್ಕೆ ನಾಗಪ್ರತಿಷ್ಠೆ, ಪಂಚಾಮೃತ ಅಭಿಷೇಕ, ತಂಬಿಲಸೇವೆ, ಶ್ರೀ ಪುಣ್ಯಕುಮಾರ, ಶ್ರೀ ಅಣ್ಣಪ್ಪ

ಜ. 5, 6: ಕಲ್ಲೇಗ ಮಾಡತ್ತಾರು ಶ್ರೀ ಪುಣ್ಯ ಕುಮಾರಸ್ವಾಮಿ, ಧರ್ಮದೈವಗಳ ಪುನಶ್ಚೈತನ್ಯ ಕಲಶಾಭಿಷೇಕ, ನೇಮೊತ್ಸವ Read More »

error: Content is protected !!
Scroll to Top