ನಾಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಮಣಿ ಕಲಾ ಸಂಘದಿಂದ ಸಾಂಸ್ಕೃತಿಕ ಕಲಾಸಂಗಮ
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಧನುಪೂಜೆ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜ. 13ರಂದು ಸಂಜೆ 5.30ರಿಂದ ನೆಹರೂನಗರ ರಕ್ತೇಶ್ವರಿ ವಠಾರದ ಶಿವಮಣಿ ಕಲಾ ಸಂಘದಿಂದ ಸಾಂಸ್ಕೃತಿಕ ಕಲಾಸಂಗಮ ನಡೆಯಲಿದೆ. ಕಲಾಸಂಗಮದಲ್ಲಿ ಭಕ್ತಿಗಾನ ಭಜನಾಮೃತ, ಭಕ್ತಿರಸಮಂಜರಿ, ಸಾಂಪ್ರದಾಯಿಕ ನೃತ್ಯ, ಯಕ್ಷಗಾನ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಸಂಚಾಲಕ ಮನುಕುಮಾರ್ ಶಿವನಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ನಾಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಮಣಿ ಕಲಾ ಸಂಘದಿಂದ ಸಾಂಸ್ಕೃತಿಕ ಕಲಾಸಂಗಮ Read More »








