ಸಮುದಾಯ ಹಿಂದೂ ಸಮಾಜದ ರೆಂಬೆ | ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆಗೆ ಚಪ್ಪರ ಮುಹೂರ್ತ ನೆರವೇರಿಸಿ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

ಪುತ್ತೂರು: ಸಮುದಾಯದ ಸಂಸ್ಕೃತಿ, ಸಂಸ್ಕಾರಗಳು ತನ್ನ ಚೌಕಟ್ಟಿನಲ್ಲಿ ಮುಂದುವರಿದಾಗ, ಹಿಂದೂ ಸಮಾಜ ಬಲಿಷ್ಠವಾಗಿ ಮುಂದುವರಿಯಲು ಸಾಧ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ೭೮ನೇ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದ ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿಂದೂ ಸಮಾಜ ಎನ್ನುವುದು ಒಂದು ವೃಕ್ಷ. ಸಮುದಾಯಗಳು ಅದರ ರೆಂಬೆಗಳಿದ್ದAತೆ. […]

ಸಮುದಾಯ ಹಿಂದೂ ಸಮಾಜದ ರೆಂಬೆ | ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆಗೆ ಚಪ್ಪರ ಮುಹೂರ್ತ ನೆರವೇರಿಸಿ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ Read More »

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ: ಕಾರ್ಯಾಲಯ ಉದ್ಘಾಟನೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ ಹಿನ್ನೆಲೆಯಲ್ಲಿ ಮಹಾಲಿಂಗೇಶ್ವರ ಸಭಾಭವನ ಕಟ್ಟಡದಲ್ಲಿ ಜ. ೧೫ರಂದು ಕಾರ್ಯಾಲಯ ಉದ್ಘಾಟನೆಗೊಂಡಿತು. ಆದಿಚುಂಚನಗಿರಿ ಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಕಾರ್ಯಾಲಯ ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಜಯಂತ್ಯೋತ್ಸವ ಸಂಸ್ಮರಣಾ ಜಿಲ್ಲಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯೋತ್ಸವ ಸಂಸ್ಮರಣೆ: ಕಾರ್ಯಾಲಯ ಉದ್ಘಾಟನೆ Read More »

ಇಂದು ಅಂತಿಮ ಏಕದಿನ ಹಣಾಹಣಿ

ಗೆಲ್ಲಲೇ ಬೆಕಾದ ಒತ್ತಡದಲ್ಲಿ ಲಂಕಾ; ಕ್ಲೀನ್‌ಸ್ವೀಪ್‌ ಭಾರತದ ಗುರಿ ತಿರುವನಂತಪುರಂ : ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಈಗಾಗಲೇ ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ಮೂರನೇ ಹಾಗೂ ಅಂತಿಮ ಪಂದ್ಯಕ್ಕೆ ಸಿದ್ಧವಾಗಿದೆ. ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ಕೊನೆಯ ಪಂದ್ಯ ನಡೆಯಲಿದ್ದು, ರೋಹಿತ್ ಪಡೆ ಲಂಕಾ ತಂಡವನ್ನು ಕ್ಲೀನ್‌ಸ್ವೀಪ್ ಮಾಡುವತ್ತ ಚಿತ್ತ ಹರಿಸಿದೆ. ಈ ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯ ಮಧ್ಯಾಹ್ನ 1.30ಕ್ಕೆ ಶುರುವಾಗುತ್ತದೆ.ಸರಣಿ ಗೆದ್ದಿರುವ ಕಾರಣ ರೋಹಿತ್ ಪಡೆ ನಾಳೆ

ಇಂದು ಅಂತಿಮ ಏಕದಿನ ಹಣಾಹಣಿ Read More »

ಕಾಳಿ ಪೋಸ್ಟರ್‌ ವಿವಾದ : ಎಫ್‌ಐಆರ್‌ ರದ್ದುಗೊಳಿಸಲು ನಿರ್ದೇಶಕಿ ಅರ್ಜಿ

ಕಾಳಿ ಮಾತೆಯನ್ನು ಅಸಭ್ಯವಾಗಿ ಚಿತ್ರಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ ಹೊಸದಿಲ್ಲಿ : ಸಾಕ್ಷ್ಯಚಿತ್ರದ ಪೋಸ್ಟರ್‌ನಲ್ಲಿ ಕಾಳಿ ದೇವತೆ ಕೈಯಲ್ಲಿ ಸಿಗರೇಟ್ ಇರುವ ಪೋಸ್ಟರ್‌ ರಚಿಸಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಅನಿವಾಸಿ ಭಾರತೀಯ ಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ತನ್ನ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.ಮಣಿಮೇಕಲೈ ಸ್ವತಃ ಕಾಳಿ ದೇವಿಯ ವೇಷ ಧರಿಸಿ ಬಾವುಟ ಹಿಡಿದು ಸಿಗರೇಟ್ ಸೇದುತ್ತಿರುವ ಪೋಸ್ಟರ್‌ ವಿರುದ್ಧ ದಿಲ್ಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ

ಕಾಳಿ ಪೋಸ್ಟರ್‌ ವಿವಾದ : ಎಫ್‌ಐಆರ್‌ ರದ್ದುಗೊಳಿಸಲು ನಿರ್ದೇಶಕಿ ಅರ್ಜಿ Read More »

ಚೀನದಲ್ಲಿ ಕೋವಿಡ್‌ಗೆ ಒಂದು ತಿಂಗಳಲ್ಲಿ 60 ಸಾವಿರ ಜನ ಬಲಿ

ಮನೆಗಳಲ್ಲಿ ಸತ್ತವರ ಲೆಕ್ಕ ಸಿಕ್ಕಿಲ್ಲ ಬೀಜಿಂಗ್: ಕೋವಿಡ್ ಸಾಂಕ್ರಾಮಿಕ ರೋಗದ ಸ್ಥಿತಿಗತಿಯ ಬಗ್ಗೆ ಅಂಕಿಅಂಶ ಬಿಡುಗಡೆ ಮಾಡದೆ ಜಗತ್ತಿನ ಕಣ್ಣಿಗೆ ಮಣ್ಣೆರಚುತ್ತಿದ್ದ ಚೀನದ ಕರಾಳ ಪರಿಸ್ಥಿತಿ ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಡಿಸೆಂಬರ್ ತಿಂಗಳೊಂದರಲ್ಲೇ ಚೀನದಲ್ಲಿ ಮಾರಕ ಸೋಂಕಿಗೆ ಸುಮಾರು 60 ಸಾವಿರ ಮಂದಿ ಬಲಿಯಾಗಿರುವುದು ಈಗ ಬೆಳಕಿಗೆ ಬಂದಿದೆ.ಈ ಎಲ್ಲ ಸಾವುಗಳು ಆಸ್ಪತ್ರೆಗಳಲ್ಲಿ ಸಂಭವಿಸಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಇದಲ್ಲದೆ ಕೋವಿಡ್‌ನಿಂದ ಇನ್ನೂ ಹೆಚ್ಚಿನ ಜನ ಮನೆಯಲ್ಲಿ ಸಾವನ್ನಪ್ಪಿರುವ ಸಾಧ್ಯತೆ ಇರುವುದರಿಂದ ಸಾವಿನ

ಚೀನದಲ್ಲಿ ಕೋವಿಡ್‌ಗೆ ಒಂದು ತಿಂಗಳಲ್ಲಿ 60 ಸಾವಿರ ಜನ ಬಲಿ Read More »

ಲೆಜೆಂಡ್‌ಗಳು ಮತ್ತು ಅವರ ಪ್ರಭಾವಳಿ

ಎಲ್ಲರಿಗೂ ಇದೆ ಒಂದು ಇಮೇಜ್‌ ಪ್ರತಿಯೊಬ್ಬ ಲೆಜೆಂಡ್ ಒಂದು ಪ್ರಭಾವಳಿ ಹೊಂದಿರುತ್ತಾನೆ ಮತ್ತು ಆ ಇಮೇಜ್‌ ಆತನನ್ನು ಗೆಲ್ಲಿಸುತ್ತವೆ. ಮತ್ತೆ ಕೆಲವು ಉದಾಹರಣೆಗಳಿಂದ ಆರಂಭ ಮಾಡುತ್ತೇನೆ.1) ಭಾರತದ ಮಹೋನ್ನತ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರನ್ನೊಮ್ಮೆ ಕಣ್ಣು ಮುಚ್ಚಿ ನೆನಪಿಸಿಕೊಳ್ಳಿ. ತಕ್ಷಣ ನಮಗೆ ನೆನಪಿಗೆ ಬರುವುದು ಅವರು ತುಂಬಾ ತಾಳ್ಮೆಯಿಂದ ಇಡೀ ದಿನ ನಿಂತು ಆಡಿದ ಟೆಸ್ಟ್ ಇನ್ನಿಂಗ್ಸ್‌ಗಳು. ಅದಕ್ಕೆ ಅನುರೂಪವಾಗಿ ಅವರನ್ನು ವಾಲ್ ಆಫ್ ಕ್ರಿಕೆಟ್ (ಭಾರತೀಯ ಕ್ರಿಕೆಟ್ಟಿನ ಗೋಡೆ) ಎಂದು ಕರೆದಿರುವುದು.ಆದರೆ ಅವರ ಏಕದಿನದ ಪಂದ್ಯಗಳ

ಲೆಜೆಂಡ್‌ಗಳು ಮತ್ತು ಅವರ ಪ್ರಭಾವಳಿ Read More »

ಅಗಳಿ ಬ್ರಹ್ಮಕಲಶೋತ್ಸವ : ಭಗವತಿ ತ್ರಿಕಾಲ ಪೂಜೆ, ತತ್ವ ಕಲಶ ಹೋಮ

ಪುತ್ತೂರು: ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜ. 14ರಂದು ಬೆಳಿಗ್ಗೆ 5ಕ್ಕೆ ಧನು ಪೂಜೆ, ಬಳಿಕ ಶ್ರೀ ಗಣಪತಿ ಹೋಮ, ಭಗವತಿ ತ್ರಿಕಾಲ ಪೂಜೆ, ತತ್ವ ಕಲಶ ಹೋಮ, ತತ್ವ ಕಲಶಾಭಿಷೇಕ ಜರಗಿತು.ಬೆಳಂದೂರು ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ,ಬಿ.ಸಿ ಟ್ರಸ್ಟ್, ಅಬೀರ ಕೊಡಿಮಾರು ಗೆಳೆಯರ ಬಳಗದಿಂದ ಭಜನೆ ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಮಧಾಹ್ನ ಸವಣೂರು ಶ್ರವಣ ರಂಗ ಪ್ರತಿಷ್ಠಾನದಿಂದ ಯಕ್ಷಗಾನ ತಾಳಮದ್ದಳೆ, ಭಕ್ತಕೋಡಿ

ಅಗಳಿ ಬ್ರಹ್ಮಕಲಶೋತ್ಸವ : ಭಗವತಿ ತ್ರಿಕಾಲ ಪೂಜೆ, ತತ್ವ ಕಲಶ ಹೋಮ Read More »

ವಿವೇಕಾನಂದ ಜಯಂತಿ, ಯುವ ಸಪ್ತಾಹ, ತಾಲೂಕು ಯುವ ಮಂಡಲ ಪ್ರಶಸ್ತಿ ಪ್ರದಾನ

ಪುತ್ತೂರು: ತಾಲೂಕು ಪಂಚಾಯತ್ ಪುತ್ತೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವಜನ ಒಕ್ಕೂಟ ಇವುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜಯಂತಿ, ಯುವ ಸಪ್ತಾಹ, ವಿವೇಕ ರಥ-ಯುವ ಪಥ ಹಾಗೂ ತಾಲೂಕು ಯುವ ಮಂಡಲ ಪ್ರಶಸ್ತಿ ಪ್ರದಾನ ಸಮಾರಂಭವು ಜ. 14ರಂದು ನೆಹರು ನಗರದ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಿತು ವಿಷ್ಣು ಯುವಕ ಮಂಡಲ ಮಜ್ಜಾರಡ್ಕ, ವಿಕ್ರಂ ಯುವಕ ಮಂಡಲ ಶಾಂತಿಗೋಡು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ನವೋದಯ ಮಹಿಳಾ ಮಂಡಲ ಬನ್ನೂರು, ಸ್ಪೂರ್ತಿ

ವಿವೇಕಾನಂದ ಜಯಂತಿ, ಯುವ ಸಪ್ತಾಹ, ತಾಲೂಕು ಯುವ ಮಂಡಲ ಪ್ರಶಸ್ತಿ ಪ್ರದಾನ Read More »

ಬೆಟ್ಟಂಪಾಡಿ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಪುತ್ತೂರು: ತ್ಯಾಗ ಮತ್ತು ಸೇವೆ ಜೀವನದ ಪರಮೋಚ್ಚ ಧರ್ಮ ಎಂದು ಸವಣೂರು ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ ವಿ ಸೂರ್ಯನಾರಾಯಣ ಹೇಳಿದರು.ಆಂತರಿಕ ಗುಣಮಟ್ಟ ಭರವಸಾ ಕೋಶ , ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳು ಹಾಗೂ ಯೂತ್ ರೆಡ್ ಕ್ರಾಸ್ ಘಟಕಗಳ ವತಿಯಿಂದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿವೇಕಾನಂದರ ಧರ್ಮದ ವ್ಯಾಖ್ಯಾನವೇ ಬೇರೆ ಇತ್ತು. ‘ದೇವರು ಬಂದು ಭೂಮಂಡಲವನ್ನು

ಬೆಟ್ಟಂಪಾಡಿ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ Read More »

ಜ. 22: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 78ನೇ ಜಯಂತ್ಯೋತ್ಸವ ಸಂಸ್ಮರಣೆ

ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣಾ ಸಮಿತಿ ನೇತೃತ್ವದಲ್ಲಿ ಜ. 22ರಂದು ಬೆಳಿಗ್ಗೆ 10.30ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ಗುರುವಂದನೆ, ರಜತ ತುಲಾಭಾರ, ಗ್ರಂಥ ಬಿಡುಗಡೆ ಸಮಾರಂಭ ನಡೆಯಲಿದೆ. ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ, ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕ ದಶಮಾನೋತ್ಸವ ಹಿನ್ನೆಲೆಯಲ್ಲಿ ರಜತ ತುಲಾಭಾರ, ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರ ಮಹಾಪ್ರಬಂಧ ಸಂಸ್ಕೃತ

ಜ. 22: ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 78ನೇ ಜಯಂತ್ಯೋತ್ಸವ ಸಂಸ್ಮರಣೆ Read More »

error: Content is protected !!
Scroll to Top