ಕುಂಜೂರುಪಂಜದಲ್ಲಿ ಕುಡಿಯುವ ನೀರು ಸರಾಗ ಪೂರೈಕೆ

ಪುತ್ತೂರು: ಕುಂಜೂರುಪಂಜ ನಿವಾಸಿಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿದ್ದು, ಬುಧವಾರ ರಾತ್ರಿಯೇ ಹೊಸ ಬೋರ್ ವೆಲ್ ಗೆ ಪಂಪ್ ಅಳವಡಿಸಲಾಗಿದೆ. ಏಕಾಏಕೀ ಬೋರ್ ವೆಲ್ ಕೈಕೊಟ್ಟ ಕಾರಣ, ತರಾತುರಿಯಲ್ಲಿ ಹೊಸ ಬೋರ್ ವೆಲ್ ಕೊರೆಸುವಲ್ಲಿ ಆರ್ಯಾಪು ಗ್ರಾ.ಪಂ. ಯಶಸ್ವಿಯಾಗಿದೆ. ಇದೀಗ ನೀರು ಸರಾಗವಾಗಿ ಪೂರೈಕೆ ಆಗುತ್ತಿದೆ.

ಕುಂಜೂರುಪಂಜದಲ್ಲಿ ಕುಡಿಯುವ ನೀರು ಸರಾಗ ಪೂರೈಕೆ Read More »

ಇಂದು ಮಕ್ಕಳೊಂದಿಗೆ ಮೋದಿ ಪರೀಕ್ಷಾ ಪೆ ಚರ್ಚಾ

155 ದೇಶಗಳಿಂದ 38.8 ಲಕ್ಷ ಮಕ್ಕಳು ನೋಂದಣಿ ಹೊಸದಿಲ್ಲಿ :ಪ್ರಧಾನಿ ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಇಂದು ನಡೆಯಲಿದೆ. 2023ರ ಬೋರ್ಡ್ ಪರೀಕ್ಷೆ ಬಗ್ಗೆ ಮೋದಿ ವಿದ್ಯಾರ್ಥಿಗಳೊಂದಿಗೆ ಮಾತನಾಡಲಿದ್ದಾರೆ ಮತ್ತು ಅವರಿಗೆ ಒತ್ತಡ-ಮುಕ್ತ ಮಂತ್ರಗಳನ್ನು ನೀಡಲಿದ್ದಾರೆ. ದಿಲ್ಲಿಯ ತಲ್‌ಕಟೋರ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪರಿಕ್ಷಾ ಪೇ ಚರ್ಚಾ 2023 ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ.ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ಈ ಬಾರಿ ಸುಮಾರು 38.8 ಲಕ್ಷ ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ.

ಇಂದು ಮಕ್ಕಳೊಂದಿಗೆ ಮೋದಿ ಪರೀಕ್ಷಾ ಪೆ ಚರ್ಚಾ Read More »

ಟ್ಯಾಂಕರ್ ನೀರು ಚುನಾವಣಾ ಗಿಮಿಕ್: ಕಲ್ಲಂದಡ್ಕದಲ್ಲಿ ನೀರಿನ ವ್ಯತ್ಯಯ ಉಂಟಾಗಿಲ್ಲವೆಂದ ಕುಡಿಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ

ಪುತ್ತೂರು: ಕುಡಿಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಕಲ್ಲಂದಡ್ಕದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿಲ್ಲ. ನಿನ್ನೆ(ಬುಧವಾರ)ಯಷ್ಟೇ ಬೋರ್ ವೆಲ್ ಪಂಪ್ ಹಾಳಾಗಿದ್ದು, ನಾಳೆ(ಶುಕ್ರವಾರ) ಪಂಪ್ ಅಳವಡಿಕೆ ಮಾಡಲಾಗುವುದು. ತಕ್ಷಣವೇ ನೀರು ಸರಬರಾಜು ಆಗಲಿದೆ ಎಂದು ಕುಡಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಬಟ್ರುಪ್ಪಾಡಿ ತಿಳಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಗಿಮಿಕ್ ಗಳನ್ನು ಮಾಡಲು ಕೆಲವರು ಮುಂದಾಗುತ್ತಾರೆ. ಅಲ್ಲಿ ನೀರಿನ ಕೊರತೆ ಇಲ್ಲದೇ ಇದ್ದರೂ, ಅನಾವಶ್ಯಕವಾಗಿ ಪ್ರಚಾರ ಗಿಟ್ಟಿಸುವ ಉದ್ದೇಶದಿಂದ ನೀರು ನೀಡಲಾಗುತ್ತಿದೆ. ಬಳಿಕ ಅದನ್ನು ಫೊಟೋ ತೆಗೆದು, ಪ್ರಚಾರ ತೆಗೆದುಕೊಳ್ಳುವ ಪ್ರಯತ್ನವಷ್ಟೇ ಇದು.

ಟ್ಯಾಂಕರ್ ನೀರು ಚುನಾವಣಾ ಗಿಮಿಕ್: ಕಲ್ಲಂದಡ್ಕದಲ್ಲಿ ನೀರಿನ ವ್ಯತ್ಯಯ ಉಂಟಾಗಿಲ್ಲವೆಂದ ಕುಡಿಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ Read More »

ಜ. 28ರಂದು 30ನೇ ವರ್ಷದ ಹೊನಲು ಬೆಳಕಿನ ಪುತ್ತೂರು “ಕೋಟಿ-ಚೆನ್ನಯ” ಜೋಡುಕರೆ ಕಂಬಳ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಜ. 28 ಹಾಗೂ 29ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಗೌರವ ಮಾರ್ಗದರ್ಶಕಿ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಮಾಜಿ ಸಚಿವ ವಿಜಯಕುಮಾರ್ ಸೊರಕೆ ಅವರ ಗೌರವಾಧ್ಯಕ್ಷತೆಯಲ್ಲಿ, ಶಕುಂತಳಾ ಟಿ. ಶೆಟ್ಟಿ ಅವರ ಗೌರವ

ಜ. 28ರಂದು 30ನೇ ವರ್ಷದ ಹೊನಲು ಬೆಳಕಿನ ಪುತ್ತೂರು “ಕೋಟಿ-ಚೆನ್ನಯ” ಜೋಡುಕರೆ ಕಂಬಳ Read More »

ಪ್ರಜಾಪ್ರಭುತ್ವ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಮಾದರಿ: ಡಾ. ಶ್ರೀಪತಿ ಕಲ್ಲೂರಾಯ

ಪುತ್ತೂರು: ಗಣರಾಜ್ಯೋತ್ಸವ ಎಂದರೆ ಉತ್ಸವ ಎಂದರ್ಥ. ಪ್ರಜಾಪ್ರಭುತ್ವದ ಹಿನ್ನೆಲೆ, ಸಂವಿಧಾನದ ನೀತಿ ನಿಯಮಗಳನ್ನು ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು, ಪ್ರಜೆಗಳಿಗೆ ಗಣರಾಜ್ಯೋತ್ಸವವು ತಿಳಿಸುತ್ತದೆ. ಭಾರತದ ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಭಾರತದ ಆರ್ಥಿಕ ವ್ಯವಸ್ಥೆಯು ಹಿಂದುಳಿದಿತ್ತು. ಆದರೆ ಈಗ ವಿಶ್ವದಲ್ಲೇ ಭಾರತ ಅತಿ ಹೆಚ್ಚು ಆರ್ಥಿಕವಾಗಿ ಬೆಳೆದು ನಿಂತಿದೆ. ಅಲ್ಲದೆ ಭಾರತದ ಅಭಿವೃದ್ಧಿಗಾಗಿ ಪ್ರಕೃತಿಯ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಜಾಗೃತಿಗೊಳಿಸುವುದು ನಮ್ಮ ಕರ್ತವ್ಯ. ಒಳ್ಳೆಯ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಸ್ವಾಸ್ಥ್ಯ ಸಮಾಜದ ಬೆಳವಣಿಗೆಗೆ ಕಾರಣರಾಗಬೇಕು. ಹಾಗೇ ಭಾರತದ ಪ್ರಜೆಗಳಾದ ನಾವು

ಪ್ರಜಾಪ್ರಭುತ್ವ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಮಾದರಿ: ಡಾ. ಶ್ರೀಪತಿ ಕಲ್ಲೂರಾಯ Read More »

ಸಿ.ಪಿ.ಸಿ.ಆರ್.ಐ. ನಿರ್ದೇಶಕರಾಗಿ ಡಾ. ಕೆ.ಬಿ. ಹೆಬ್ಬಾರ್

ಪುತ್ತೂರು: ಕಾಸರಗೋಡು ಐ.ಸಿ.ಎ.ಆರ್ – ಸಿ.ಪಿ.ಸಿ.ಆರ್.ಐ. ನಿರ್ದೇಶಕರಾಗಿ ಡಾ. ಕೆ.ಬಿ. ಹೆಬ್ಬಾರ್ ಅವರು ಅಧಿಕಾರ ಸ್ವೀಕರಿಸಿದರು. ಅಗ್ರಿಕಲ್ಚರಲ್ ಸೈಂಟಿಸ್ಟ್ ರಿಕ್ರೂಟ್ಮೆಂಟ್ ಬೋರ್ಡ್, ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್ ಶಿಫಾರಸಿನ ಮೇಲೆ ಐ.ಸಿ.ಎ.ಆರ್ – ಸಿ.ಪಿ.ಸಿ.ಆರ್.ಐ. ನಿರ್ದೇಶಕರ ನೇಮಕ ಮಾಡಲಾಗಿದೆ. ವಿಟ್ಲ ಸಿಪಿಸಿಆರ್ಐ ಹಾಗೂ ಕಡಬದ ಕಿದು ಸಿಪಿಸಿಆರ್ಐ ಕಾಸರಗೋಡು ಸಿಪಿಸಿಆರ್ಐ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 1995ರಲ್ಲಿ ನಾಗಪುರದ ಸೆಂಟ್ರಲ್ ಇನ್ಸ್ಟಿಟ್ಯೂಟ್ ಫಾರ್ ಕಾಟನ್ ರೀಸರ್ಚಿನಲ್ಲಿ ವಿಜ್ಞಾನಿಯಾಗಿ ವೃತ್ತಿ ಜೀವನ ಆರಂಭಿಸಿದ ಡಾ. ಕೆ.ಬಿ. ಹೆಬ್ಬಾರ್ ಅವರು, 2007ರಲ್ಲಿ

ಸಿ.ಪಿ.ಸಿ.ಆರ್.ಐ. ನಿರ್ದೇಶಕರಾಗಿ ಡಾ. ಕೆ.ಬಿ. ಹೆಬ್ಬಾರ್ Read More »

ವೀರಮಂಗಲ ಶಾಲೆಯಲ್ಲಿ ಗಣರಾಜ್ಯೋತ್ಸವ

ಪುತ್ತೂರು: ವೀರಮಂಗಲ ಶಾಲೆಯಲ್ಲಿ 74 ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.,ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮಾ ಧ್ವಜಾರೋಹಣಗೈದರು. ಬಳಿಕ ಸ್ಕೌಟ್ ಧ್ವಜಾರೋಹಣ ಮಾಡಲಾಯಿತು.ನರಿಮೊಗರು ಗ್ರಾಮ ಪಂಚಾಯಿತಿ ಸದಸ್ಯೆ ಪದ್ಮಾವತಿ ಇವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆಗಳು ಹಾಗೂ ದೇಶಭಕ್ತಿಗೀತೆ ಸಂಬಂಧ ಸೇವಾದಳ ತಂಡದಿಂದ ನೃತ್ಯಕಾರ್ಯಕ್ರಮ ನಡೆಯಿತು. ಶಾಲೆಯ ಶಿಕ್ಷಕರಾದ ಹರಿಣಾಕ್ಷಿ, ಶೋಭಾ, ಶೀಲತಾ, ಕವಿತಾ, ಹೇಮಾವತಿ, ಅಡುಗೆ ಸಿಬ್ಬಂಧಿಗಳಾದ ಪಾರ್ವತಿ,

ವೀರಮಂಗಲ ಶಾಲೆಯಲ್ಲಿ ಗಣರಾಜ್ಯೋತ್ಸವ Read More »

ಹಿರಿಯರನ್ನು, ಅವರ ಪರಿಶ್ರಮವನ್ನು ಮರೆಯದಿರೋಣ | ಪುತ್ತೂರು ತಾಲೂಕು ಮಟ್ಟದ ಗಣರಾಜ್ಯೋತ್ಸವದಲ್ಲಿ ಗಿರೀಶ್ ನಂದನ್

ಪುತ್ತೂರು: ಭಾಷೆ, ಪಂಗಡ ಮೀರಿ ನಮ್ಮ ದೇಶವನ್ನು ಹಿರಿಯರು ಒಂದಾಗಿಸಿದರು. ಅವರ ಪರಿಶ್ರಮವನ್ನು ಹಾಗೂ ಅವರನ್ನು ಮರೆಯದಿರೋಣ ಎಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು. ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ವಂದನೆ ಸ್ವೀಕರಿಸಿ ಮಾತನಾಡಿದರು. ಭಾರತ ಒಂದೊಮ್ಮೆ ಹರಿದು ಹಂಚಿ ಹೋಗಿತ್ತು. ಇದನ್ನು ಒಂದು ಮಾಡಲು ಸಾಕಷ್ಟು ಶ್ರಮ ವಹಿಸಬೇಕಾಯಿತು. ಆಗ ಎದುರಾದ ಹಲವು ಸಮಸ್ಯೆಗಳನ್ನು ಮೀರಿ,

ಹಿರಿಯರನ್ನು, ಅವರ ಪರಿಶ್ರಮವನ್ನು ಮರೆಯದಿರೋಣ | ಪುತ್ತೂರು ತಾಲೂಕು ಮಟ್ಟದ ಗಣರಾಜ್ಯೋತ್ಸವದಲ್ಲಿ ಗಿರೀಶ್ ನಂದನ್ Read More »

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಣರಾಜ್ಯ ದಿನಾಚರಣೆ

ಪುತ್ತೂರು: ಇಂದು ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವವನ್ನು ಅಸ್ಥಿತ್ವಗೊಳಿಸಿದ ದಿನ. ಜನರು ತಮ್ಮ ಸ್ವಂತ ಆಯ್ಕೆಯ ಪ್ರಕಾರ ದೇಶದ ಆಡಳಿತಗಾರರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ನಾವು ಸಂವೇದನಾಶೀಲರಾಗಿ ಆಯ್ಕೆ ಮಾಡಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿ ಸಂಚಾಲಕ ಸುಬ್ರಮಣ್ಯ ಭಟ್ ಟಿ.ಎಸ್. ಹೇಳಿದರು. ಕಾಲೇಜಿನಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಮಾಡಿ ಮಾತನಾಡಿದರು.ಅಸಂಖ್ಯಾತ ನೇತಾರರು, ತ್ಯಾಗ ಬಲಿದಾನದ

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಣರಾಜ್ಯ ದಿನಾಚರಣೆ Read More »

ಕೆವಿಜಿ ಮೆಡಿಕಲ್ ಕಾಲೇಜು-ಆಸ್ಪತ್ರೆಗೆ ಜಿಲ್ಲೆಯ ನಂ.1 ಸೇವಾ ಪುರಸ್ಕಾರ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸುಳ್ಯದ ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಆರೋಗ್ಯ ಭಾರತ್ -ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (AB-PMJAY-ArK)) ಅತ್ಯುತ್ತಮ ಸೇವಾ ಪುರಸ್ಕಾರ ದೊರೆತಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರವಿ ಕುಮಾರ್ ಅವರಿಂದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಕಾಲೇಜಿನ ಡೀನ್ ನೀಲಾಂಬಿಕೈ ನಟರಾಜನ್ ಪ್ರಶಂಸನಾ ಪತ್ರ ಸ್ವೀಕರಿಸಿದರು.

ಕೆವಿಜಿ ಮೆಡಿಕಲ್ ಕಾಲೇಜು-ಆಸ್ಪತ್ರೆಗೆ ಜಿಲ್ಲೆಯ ನಂ.1 ಸೇವಾ ಪುರಸ್ಕಾರ Read More »

error: Content is protected !!
Scroll to Top