ಪುಲ್ವಾಮ ದಾಳಿಯ ಬಗ್ಗೆ ಸತ್ಯಪಾಲ್ ಮಲಿಕ್ ಹೇಳಿಕೆಯಿಂದ ದೇಶವೇ ಬೆಚ್ಚಿಬಿದ್ದಿದೆ ಎಂದ ಕಾಂಗ್ರೆಸ್

ಮೋದಿ ಸರ್ಕಾರದ ಅಸಮರ್ಥತೆಯಿಂದ ಪುಲ್ವಾಮ ದಾಳಿ ನಡೆದು 40 ಭಾರತೀಯ ಸೈನಿಕರು ಹುತಾತ್ಮರಾಗಬೇಕಾಯಿತು ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ನಮ್ಮ ಯೋಧರಿಗೆ ವಿಮಾನ ಸಿಕ್ಕಿದ್ದರೆ ಈ ದಾಳಿಯನ್ನು ತಪ್ಪಿಸಬಹುದಿತ್ತು. ಈ ಬಹುದೊಡ್ಡ ತಪ್ಪಿಗೆ ಕ್ರಮ ತೆಗೆದುಕೊಳ್ಳುವ ಬದಲು ನೀವು ವಿಷಯವನ್ನು ನಿಗ್ರಹಿಸಿ ನಿಮ್ಮ ಇಮೇಜ್‌ಗೆ ಧಕ್ಕೆ ಆಗದಂತೆ ನೋಡಿಕೊಂಡಿರಿ. ಪುಲ್ವಾಮದ ಕುರಿತು ಸತ್ಯಪಾಲ್ ಮಲಿಕ್‌ರವರ ಹೇಳಿಕೆಯಿಂದ ದೇಶವೇ ಬೆಚ್ಚಿಬಿದ್ದಿದೆ ಎಂದು ಕಾಂಗ್ರೆಸ್ ಹೇಳಿದೆ.ಮೋದಿ ಸರ್ಕಾರದ ಅಸಮರ್ಥತೆಯಿಂದ 2019ರ ಫೆಬ್ರವರಿಯಲ್ಲಿ ಪುಲ್ವಾಮ ದಾಳಿ […]

ಪುಲ್ವಾಮ ದಾಳಿಯ ಬಗ್ಗೆ ಸತ್ಯಪಾಲ್ ಮಲಿಕ್ ಹೇಳಿಕೆಯಿಂದ ದೇಶವೇ ಬೆಚ್ಚಿಬಿದ್ದಿದೆ ಎಂದ ಕಾಂಗ್ರೆಸ್ Read More »

ಪ್ರಜಾಪ್ರಭುತ್ವದ ಹಬ್ಬ ಒಗ್ಗಟ್ಟಾಗಿ ಆಚರಣೆ | ಅಭಿವೃದ್ಧಿ ಕೆಲಸ, ಕಾರ್ಯಕರ್ತರ ಶ್ರಮ, ಮುಖಂಡರ ಬೆಂಬಲ ಮತವಾಗಿ ಪರಿವರ್ತನೆ |ಆಶಾ ತಿಮ್ಮಪ್ಪ ಜೊತೆ ಮಠಂದೂರು ಪತ್ರಿಕಾಗೋಷ್ಠಿ

ಪುತ್ತೂರು: ಪ್ರಜಾಪ್ರಭುತ್ವದ ಹಬ್ಬವನ್ನು ಒಗ್ಗಟ್ಟಾಗಿ ಆಚರಿಸಲು ನಾವು ಸಿದ್ಧರಾಗಿದ್ದೇವೆ. ಅಭಿವೃದ್ಧಿ ಕೆಲಸ, ಕಾರ್ಯಕರ್ತರ ಶ್ರಮ, ನಾಯಕರ ಪ್ರೋತ್ಸಾಹ ಮತವಾಗಿ ಪರಿವರ್ತನೆ ಆಗಲಿದೆ ಎಂದು ಆಶಾ ತಿಮ್ಮಪ್ಪ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು ಹೇಳಿದರು. ಜನರ‌ಧ್ವನಿಯಾಗಿ, ಮಹಿಳಾ ಮತದಾರರ ಪ್ರಾತಿನಿಧ್ಯವೆಂಬಂತೆ, ಪುತ್ತೂರು ತಾಲೂಕಿನ ಸೊಸೆ ಆಶಾ ತಿಮ್ಮಪ್ಪ ಅವರನ್ನು ಪಕ್ಷ ಆರಿಸಿದೆ. ಅವರನ್ನು 20000 ಮತಗಳ ಅಂತರದಿಂದ ಗೆಲುವು ಪಡೆದುಕೊಳ್ಳಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಠಂದೂರು, ಆಶಾ ತಿಮ್ಮಪ್ಪ ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದರು. ಬಿಜೆಪಿ

ಪ್ರಜಾಪ್ರಭುತ್ವದ ಹಬ್ಬ ಒಗ್ಗಟ್ಟಾಗಿ ಆಚರಣೆ | ಅಭಿವೃದ್ಧಿ ಕೆಲಸ, ಕಾರ್ಯಕರ್ತರ ಶ್ರಮ, ಮುಖಂಡರ ಬೆಂಬಲ ಮತವಾಗಿ ಪರಿವರ್ತನೆ |ಆಶಾ ತಿಮ್ಮಪ್ಪ ಜೊತೆ ಮಠಂದೂರು ಪತ್ರಿಕಾಗೋಷ್ಠಿ Read More »

ಕುಂದಾಪುರ ಶಾಸಕ ಹಾಲಾಡಿಯವರಿಂದ ಆಶೀರ್ವಾದ ಪಡೆದ ಬೈಂದೂರು ಶಾಸಕ ಗಂಟಿಹೊಳೆ

ಉಡುಪಿ : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸುತ್ತಿವೆ. ಸಭೆ-ಸಮಾರಂಭಗಳನ್ನು ಏರ್ಪಡಿಸುವುದು, ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಸಹಕಾರ ಕೋರುತ್ತಿದ್ದಾರೆ. ಈಗ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದ ಕೋರಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸುಕಮಾರ ಶೆಟ್ಟಿ ಬದಲಾಗಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಗುರುರಾಜ್ ಗಂಟಿಹೊಳೆ ಅವರು ಈಗ ಹಿರಿಯ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ

ಕುಂದಾಪುರ ಶಾಸಕ ಹಾಲಾಡಿಯವರಿಂದ ಆಶೀರ್ವಾದ ಪಡೆದ ಬೈಂದೂರು ಶಾಸಕ ಗಂಟಿಹೊಳೆ Read More »

ಹಿಂದೂ ಫೈರ್ ಬ್ರಾಂಡ್ ಪುತ್ತಿಲ ಪಕ್ಷೇತರ ಅಭ್ಯರ್ಥಿ | ಏ. 17ರಂದು ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಕೆ

ಪುತ್ತೂರು: ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಏ. 17ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು, ಕಾರ್ಯಕರ್ತರ ಆಕಾಂಕ್ಷೆಯಂತೆ ಹಿಂದುತ್ವದ ಧ್ವನಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ ಎಂದು ಘೋಷಿಸಿದರು. ಏ. 17ರಂದು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬೆಳಿಗ್ಗೆ 10 ಗಂಟೆಯಿಂದ ದರ್ಬೆ ವೃತ್ತದಿಂದ ಪುತ್ತೂರು ತಾಲೂಕು ಆಡಳಿತ ಸೌಧದವರೆಗೆ ಮೆರವಣಿಗೆಯಲ್ಲಿ ತೆರಳಲಿದ್ದಾರೆ. ಬಳಿಕ ನಾಮಪತ್ರ ಸಲ್ಲಿಸಲಿದ್ದಾರೆ ಎಂದು

ಹಿಂದೂ ಫೈರ್ ಬ್ರಾಂಡ್ ಪುತ್ತಿಲ ಪಕ್ಷೇತರ ಅಭ್ಯರ್ಥಿ | ಏ. 17ರಂದು ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಕೆ Read More »

ಏ. 16 ರಂದು ರಾಹುಲ್ ಗಾಂಧಿ ಕರ್ನಾಟಕಕ್ಕೆ ಭೇಟಿ

ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕಕ್ಕೆ ಭಾನುವಾರ (ನಾಳೆ) ಆಗಮಿಸಲಿದ್ದು, ಮೊದಲ ದಿನ ಕೋಲಾರದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ ನೇಮ್ ಕುರಿತಾಗಿ ಮಾಡಿದ್ದ ಭಾಷಣ ಅವರ ಸಂಸತ್ ಸದಸ್ಯತ್ವ ಅನರ್ಹಕ್ಕೆ ಕಾರಣವಾಗಿತ್ತು. ಇದೀಗ ಕೋಲಾರದಲ್ಲೇ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ರಾಹುಲ್ ಭಾಗಿಯಾಗಲಿದ್ದು, ಈ ಮೂಲಕ ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಭಾನುವಾರ ಮಧ್ಯಾಹ್ಮ 12.

ಏ. 16 ರಂದು ರಾಹುಲ್ ಗಾಂಧಿ ಕರ್ನಾಟಕಕ್ಕೆ ಭೇಟಿ Read More »

ಕಂದಕಕ್ಕೆ ಉರುಳಿ ಬಿದ್ದ ಬಸ್‌ : 12 ಮಂದಿ ಸಾವು, 25 ಮಂದಿ ಗಾಯ

ಮಹಾರಾಷ್ಟ್ರ : ಮಹಾರಾಷ್ಟ್ರ ರಾಜ್ಯದಲ್ಲಿ ಜವರಾಯ ಅಟ್ಟಹಾಸ ಮೆರದಿದ್ದು, ಖಾಸಗಿ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡು, 12 ಮಂದಿ ದುರ್ಮರಣವನ್ನಪ್ಪಿರುವ ಘಟನೆ ರಾಯಗಢದ ಪುಣೆ- ಮುಂಬೈ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ 4 ಗಂಟೆಗೆ ಸಂಭವಿಸಿದೆ.ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. 40 ಜನರಿದ್ದ ಖಾಸಗಿ ಬಸ್​ ಪುಣೆಯಿಂದ ಮುಂಬೈ ಕಡೆಗೆ ಹೋಗುತ್ತಿದ್ದು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪ್ರಯಾಣಿಕರು ನಿದ್ರೆಯಲ್ಲಿದ್ದಾಗ

ಕಂದಕಕ್ಕೆ ಉರುಳಿ ಬಿದ್ದ ಬಸ್‌ : 12 ಮಂದಿ ಸಾವು, 25 ಮಂದಿ ಗಾಯ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ : ಏ.16, 17 ರಂದು ವಾಹನ ಸಂಚಾರದಲ್ಲಿ ಬದಲಾವಣೆ | ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಏ.16 ಹಾಗೂ 17 ರಂದು ವಾಹನದಟ್ಟಣಿ ಜಾಸ್ತಿಯಾಗುವ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಹಾಗೂ ವಾಹನ ಪಾರ್ಕಿಂಗ್‍ ಗೆ ಸ್ಥಳ ಗುರುತಿಸಲಾಗಿದೆ ಎಂದು ಪುತ್ತೂರು ಸಂಚಾರ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ. ಏ.16 ಭಾನುವಾರ ಬಲ್ನಾಡಿನಿಂಡ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ಕಿರುವಾಳು ಆಗಮನ ಹಾಗೂ ಏ.17 ರ ಬ್ರಹ್ಮರಥೋತ್ಸವ ಇರುವುದರಿಂದ ಜನದಟ್ಟಣಿ ಜತೆಗೆ ವಾಹನದಟ್ಟಣಿ ಜಾಸ್ತಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಸಂಚಾರದಲ್ಲಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ : ಏ.16, 17 ರಂದು ವಾಹನ ಸಂಚಾರದಲ್ಲಿ ಬದಲಾವಣೆ | ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ Read More »

ಸರ್ಕಾರಿ ನಿವಾಸ ಖಾಲಿ ಮಾಡಿದ ರಾಹುಲ್ ಗಾಂಧಿ

ದೆಹಲಿ : ಮೋದಿ ಉಪನಾಮವನ್ನು ಲೇವಡಿ ಮಾಡಿ 2 ವರ್ಷಗಳ ಕಾಲ ಜೈಲು ಶಿಕ್ಷೆಗೊಳಗಾಗಿ, ಸಂಸತ್‌ ಸದಸ್ಯತ್ವದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿ ಇದೀಗ ತನ್ನ ಸರಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ದಿಲ್ಲಿಯ ಲುಟೆನ್ಸ್‌ ನಲ್ಲಿರುವ ಸರಕಾರಿ ಬಂಗಲೆಯಿಂದ ನಿನ್ನೆ ಲಾರಿಗಳಲ್ಲಿ ಸಾಮಾನು ಸರಂಜಾಮು ಸಾಗಿಸುವ ಪ್ರಕ್ರಿಯೆ ಶುರುವಾಗಿದೆ. ಅಪರಾಧ ಸಾಬೀತಾದ ಕಾರಣ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಂಡ ಒಂದು ತಿಂಗಳಲ್ಲಿ ಸರಕಾರಿ ಬಂಗಲೆಯನ್ನು ಖಾಲಿ ಮಾಡಬೇಕು. ಅದಕ್ಕಾಗಿ ಅವರಿಗೆ ನೋಟೀಸ್‌ ಜಾರಿಗೊಳಿಸಲಾಗಿತ್ತು. ಏ. 22 ರೊಳಗೆ ಅಧಿಕೃತ ನಿವಾಸವನ್ನು

ಸರ್ಕಾರಿ ನಿವಾಸ ಖಾಲಿ ಮಾಡಿದ ರಾಹುಲ್ ಗಾಂಧಿ Read More »

ಜನರೇಶನ್ ಗ್ಯಾಪ್ ಗೆಲ್ಲೋದು ಹೇಗೆ?

ನಮ್ಮ ಕಾಲದಲ್ಲಿ ಹಾಗಿರಲಿಲ್ಲ ಸರ್ ಎನ್ನುವ ಅಮ್ಮ-ನನಗೆ ವೈಚಾರಿಕ ಸ್ವಾತಂತ್ರ್ಯ ಬೇಕು ಎನ್ನುವ ಮಗಳು ಓರ್ವ ತಾಯಿ ಮತ್ತು ಹದಿಹರೆಯದ ಮಗಳು ನನ್ನ ಮುಂದೆ ಸಲಹೆ ಪಡೆಯಲು ಎಂದು ಬಂದಿದ್ದರು. ತಾಯಿ ಮತ್ತು ಮಗಳ ನಡುವೆ ಬಹಳ ದೊಡ್ಡ ಜನರೇಶನ್ ಗ್ಯಾಪ್ ಇದ್ದ ಹಾಗೆ ನನಗೆ ಮೇಲ್ನೋಟಕ್ಕೆ ಅನ್ನಿಸಿತ್ತು.ಮಗಳು ತಲೆ ಎತ್ತದೆ ಮೊಬೈಲ್ ಮೇಲೆ ಕುಟ್ಟುತ್ತಾ ನನ್ನ ಮುಂದೆ ಕೂತಿದ್ದಳು. ತಾಯಿ ಒಮ್ಮೆ ಮಗಳ ಕಡೆಗೆ, ಮತ್ತೊಮ್ಮೆ ನನ್ನ ಕಡೆಗೆ ದೃಷ್ಟಿಯನ್ನು ಬದಲಾಯಿಸುತ್ತಾ ಸಂದಿಗ್ಧದಲ್ಲಿ ಇದ್ದ ಹಾಗೆ

ಜನರೇಶನ್ ಗ್ಯಾಪ್ ಗೆಲ್ಲೋದು ಹೇಗೆ? Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ

ಪುತ್ತೂರು:  ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಹಿರಿಯ ಶಿಕ್ಷಕ  ರಾಧಾಕೃಷ್ಣ ರೈ ಅಂಬೇಡ್ಕರ್ ಕುರಿತು ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರನ್ನು ನಾವು ದೇವತಾ  ಮನುಷ್ಯರಂತೆ ಕಾಣಬೇಕು. ಅವರು ಸಂವಿಧಾನದ ರಚನೆಯ ಮೂಲಕ ದೇಶದ ಸಮಸ್ತ ಪ್ರಜೆಗಳ ಏಳಿಗೆಗಾಗಿ ಶ್ರಮಿಸಿದ ಭಾರತ ಕಂಡ  ಮಹಾನ್ ಚೇತನ” ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ ಅಂಬೇಡ್ಕರ್  ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.  ಹಿರಿಯ  ದೈಹಿಕ  ಶಿಕ್ಷಣ  ಶಿಕ್ಷಕ  ಭಾಸ್ಕರ್  ಗೌಡ  ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಲಾ ಎಸ್ಟೇಟ್ ಮ್ಯಾನೇಜರ್ ಚರಣರಾಜ್,  ಶಿಕ್ಷಕ- ಕ್ಷಕೇತರ  ಸ್ಕೌಟ್ಸ್ ಮತ್ತು ನಿವೇದಿತಾ ಗೈಡ್ಸ್  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ Read More »

error: Content is protected !!
Scroll to Top