ಮೆರವಣಿಗೆಯಲ್ಲಿ ಸಾಗಿ ಬಂದ ಕಾಂಗ್ರೆಸ್‍ ಅಭ್ಯರ್ಥಿ ಅಶೋಕ್ ಕುಮಾರ್ ರೈ | ಇಂದು ನಾಮಪತ್ರ ಸಲ್ಲಿಕೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ಸಾಗಿ ಬಂದರು. ದರ್ಬೆ ವೃತ್ತದಿಂದ ಹೊರ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಅಭ್ಯರ್ಥಿ ಅಶೋಕ್ ಕುಮಾರ್ ದರ್ಬೆ‍ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಗೆ ಹಾರಾರ್ಪಣೆ ಮಾಡಿ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕೊಂಬು, ಕಹಳ, ಕಲ್ಲಡ್ಕ ಬೊಂಬೆ, ನಾಸಿಕ್ ಬ್ಯಾಂಡ್, ಹುಲಿವೇಷ ಮೆರವಣಿಗೆಗೆ ಮೆರುಗು ನೀಡಿತು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬ್ಲಾಕ್ […]

ಮೆರವಣಿಗೆಯಲ್ಲಿ ಸಾಗಿ ಬಂದ ಕಾಂಗ್ರೆಸ್‍ ಅಭ್ಯರ್ಥಿ ಅಶೋಕ್ ಕುಮಾರ್ ರೈ | ಇಂದು ನಾಮಪತ್ರ ಸಲ್ಲಿಕೆ Read More »

ಗೋಪಾಲಕೃಷ್ಣ ಭಟ್ ಕಾನಾವು ನಿಧನ

ಪುತ್ತೂರು: ಮುಕ್ಕೂರು ಹಾಲುತ್ಪಾದಕರ ಸಹಕಾರ ಸಂಘದ ಮಾಜಿ ನಿರ್ದೇಶಕ ಗೋಪಾಲಕೃಷ್ಣ ಭಟ್ ಕಾನಾವು (79) ಮಂಗಳವಾರ ರಾತ್ರಿ ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಅವರು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾಗಿ, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಗೋಪಾಲಕೃಷ್ಣ ಭಟ್ ಕಾನಾವು ನಿಧನ Read More »

ವೀರಮಂಗಲದ ಕುಮಾರಧಾರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ |  ಸಾವಿರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆ

ಪುತ್ತೂರು:  ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ  ದೂರದ ವೀರಮಂಗಲದಲ್ಲಿ ಶ್ರೀ ದೇವರ ಅವಭೃತ ಸ್ನಾನ ಬುಧವಾರ ಬೆಳಿಗ್ಗೆ 6.45 ಸುಮಾರಿಗೆ ನಡೆಯಿತು. ಮಂಗಳವಾರ ಸಂಜೆ ಶ್ರೀ ದೇವಸ್ಥಾನದಲ್ಲಿ ಬಲಿ ಉತ್ಸವ ನಡೆದು ಬಳಿಕ ಹೊರಟ ಶ್ರೀ ದೇವರು ವೀರಮಂಗಲದ ತೆರಳುವ ದಾರಿಯುದ್ದಕ್ಕೂ ಕಟ್ಟೆಪೂಜೆ ಗೊಂಡು ಬುಧವಾರ ಮುಂಜಾನೆ ಹೊತ್ತಿಗೆ ತಲುಪಿದರು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಭಕ್ತಾದಿಗಳು ತಳಿರು ತೋರಣಗಳಿಂದ ಸಿಂಗರಿಸಿ ಶ್ರೀ ದೇವರಿಗೆ ಹಣ್ಣುಕಾಯಿ, ಕಾಣಿಕೆ ಅರ್ಪಿಸಿದರು. ಶ್ರೀ ದೇವರ ಜತೆ

ವೀರಮಂಗಲದ ಕುಮಾರಧಾರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ |  ಸಾವಿರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆ Read More »

ನ್ಯಾಯವಾದಿ ಕೃಷ್ಣಮೂರ್ತಿ ಮೇಲೆ ಗುಂಡಿನ ದಾಳಿ : ಪತ್ತೆಹಚ್ಚಲು ಕ್ರಮಕ್ಕಾಗಿ ಒತ್ತಾಯ | ಹಿಂದೂ ಜನಜಾಗೃತಿ ಮನವಿ

ಪುತ್ತೂರು: ಗೌರಿ ಲಂಕೇಶ್ ಪ್ರಕರಣವನ್ನು ಕೈಗೆತ್ತಿಕೊಂಡಿರುವ ನ್ಯಾಯವಾದಿ ಕೃಷ್ಣಮೂರ್ತಿ ಅವರ ಮೇಲೆ ಗುಂಡಿನ ದಾಳಿ ನಡೆಸಿದವರನ್ನು ತಕ್ಷಣ ಪತ್ತೆಹಚ್ಚಲು ಸರಕಾರ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಪು್ತ್ತೂರು ತಹಶೀಲ್ದಾರ್  ಶಿವಶಂಕರ್ ಗೆ ಮನವಿ ಸಲ್ಲಿಸಿದರು. ಗೌರಿ ಲಂಕೇಶ್ ಪ್ರಕರಣ ನಡೆಸುತ್ತಿರುವ ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲೆ ಗುಂಡಿನ ದಾಳಿಯ ಹಿಂದೆ ಪಿ.ಎಫ್.ಐ ಅಥವಾ ನಕ್ಸಲ್‌ವಾದಿಗಳಿದ್ದಾರೆಯೇ ಎಂದು ಪತ್ತೆ ಹಚ್ಚಬೇಕು ಎಂದು ಮನವಿಯಲ್ಲಿ ಸಮಿತಿ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಸಮಿತಿಯ ಧರ್ಮಪ್ರೇಮಿಗಳಾದ ದಿವಾಕರ್ ರೈ,, ಸುಧಾಕರ್ ನಾಯಕ್,  ಧರ್ಮಶಿಕ್ಷಣದ

ನ್ಯಾಯವಾದಿ ಕೃಷ್ಣಮೂರ್ತಿ ಮೇಲೆ ಗುಂಡಿನ ದಾಳಿ : ಪತ್ತೆಹಚ್ಚಲು ಕ್ರಮಕ್ಕಾಗಿ ಒತ್ತಾಯ | ಹಿಂದೂ ಜನಜಾಗೃತಿ ಮನವಿ Read More »

ಮತದಾರ ಜಾಗೃತಿಗಾಗಿ ಬೀದಿ ನಾಟಕ | ಪುತ್ತೂರು ಆಡಳಿತ ಕಚೇರಿ ಎದುರು ಚಾಲನೆ

ಪುತ್ತೂರು: ಇನ್ನೇನು ಚುನಾವಣೆಗೆ ನಾಲ್ಕು ವಾರಗಳು ಇರುವಂತೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಆಡಳಿತ ಕಚೇರಿ ಎದುರು ಬೀದಿ ನಾಟಕಕ್ಕೆ ಚಾಲನೆ ನೀಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು. ದ.ಕ.ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಸ್ವೀಪ್ ಸಮಿತಿ ಸಹಕಾರದೊಂದಿಗೆ ರೋಟರಿ ಕ್ಲಬ್ ಎಲೈಟ್, ಬೆಟ್ಟಂಪಾಡಿ ಪ್ರಥಮದರ್ಜೆ ಕಾಲೇಜಿನ ರೋಟರ್ಯಾಕ್ಟ್ ಕ್ಲಬ್ ಸಹಯೋಗದೊಂದಿಗೆ ಸಂಸಾರ ಜೋಡುಮಾರ್ಗ ತಂಡದ ಸಂಚಾಲಕ ಮೌನೇಶ್ ವಿಶ್ವಕರ್ಮ ಬೀದಿನಾಟಕದ ನೇತೃತ್ವ ಮತದಾನ ಜಾಗೃತಿ ಬೀದಿ ನಾಟಕ ನಡೆಯಿತು. ಸಹಾಯಕ ಚುನಾವಣಾಧಿಕಾರಿ,

ಮತದಾರ ಜಾಗೃತಿಗಾಗಿ ಬೀದಿ ನಾಟಕ | ಪುತ್ತೂರು ಆಡಳಿತ ಕಚೇರಿ ಎದುರು ಚಾಲನೆ Read More »

ಆಶಾ ತಿಮ್ಮಪ್ಪಗೆ ಸ್ಮೃತಿ ಇರಾನಿ ಬಲ | ನಾಮಪತ್ರ ಸಲ್ಲಿಕೆಯಂದು ರಾಜ್ಯಸಭಾ ಸದಸ್ಯೆ ಆಗಮನ ಸಾಧ್ಯತೆ

ಪುತ್ತೂರು: ಪುತ್ತೂರು ಚುನಾವಣಾ ಕಣ ರಂಗೇರಿದೆ. ರಾಜ್ಯ ಮಾತ್ರವಲ್ಲ ಕೇಂದ್ರದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ರಾಜ್ಯಸಭಾ ಸದಸ್ಯೆ ಸ್ಮೃತಿ ಇರಾನಿ ಅವರನ್ನು ಪುತ್ತೂರಿಗೆ ಕರೆ ತರಲು ಪ್ರಯತ್ನ ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏ. ೨೦ರಂದು ಅಂದರೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ನಾಮಪತ್ರ ಸಲ್ಲಿಸುವ ದಿನದಂದು ಸ್ಮೃತಿ ಇರಾನಿ ಪುತ್ತೂರಿಗೆ ಬಂದಿಳಿಯಲಿದ್ದಾರೆ. ಬಿಜೆಪಿಗೆ ಇನ್ನಷ್ಟು ಬಲ ತುಂಬಲು, ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚಿಸುವ ದೃಷ್ಟಿಯಿಂದ ಸ್ಟಾರ್ ಪ್ರಚಾರಕರನ್ನು‌ ಪುತ್ತೂರಿಗೆ ಕರೆಸುವ ಪ್ರಯತ್ನ ನಡೆಯುತ್ತಿವೆ.

ಆಶಾ ತಿಮ್ಮಪ್ಪಗೆ ಸ್ಮೃತಿ ಇರಾನಿ ಬಲ | ನಾಮಪತ್ರ ಸಲ್ಲಿಕೆಯಂದು ರಾಜ್ಯಸಭಾ ಸದಸ್ಯೆ ಆಗಮನ ಸಾಧ್ಯತೆ Read More »

ಆಖಾಡದಲ್ಲಿ ಅರುಣ್ ಕುಮಾರ್ ಪುತ್ತಿಲ v/s ಅಶೋಕ್ ಕುಮಾರ್ ರೈ | ಹೇಗಿರಬಹುದು ಗೆಳೆಯರಿಬ್ಬರ ಚುನಾವಣಾ ಪೂರ್ವ ಜುಗಲ್ಬಂದಿ!?

ಪುತ್ತೂರು: ಖಾಸಾ ದೋಸ್ತುಗಳಾದ ಅಶೋಕ್ ಕುಮಾರ್ ರೈ ಹಾಗೂ ಅರುಣ್ ಕುಮಾರ್ ಪುತ್ತಿಲ ಆಖಾಡದಲ್ಲಿ ಎದುರು ಬದುರಾಗುತ್ತಾರೆಯೇ? ಅಥವಾ ಅರುಣ್ ಕುಮಾರ್ ಪುತ್ತಿಲ ಹೋರಾಟ, ದೋಸ್ತ್ ಅಶೋಕ್ ಕುಮಾರ್ ರೈ ಅವರಿಗೆ ಜೀವ ತುಂಬಲಿದೆಯೇ? ಹೌದು! ಇದು ಮತದಾರರ ತಲೆಯಲ್ಲಿ ಸುಳಿಯುತ್ತಿರುವ ಯಕ್ಷಪ್ರಶ್ನೆ. ಉತ್ತರ ಸಿಗಬೇಕೆಂದರೆ ಫಲಿತಾಂಶದವರೆಗೂ ಕಾಯಬೇಕಷ್ಟೇ. ಆದರೆ, ಅಲ್ಲಿವರೆಗೂ ಸಾಕಷ್ಟು ಲೆಕ್ಕಾಚಾರಗಳು ಓಡಾಡುತ್ತಿರುತ್ತವೆ. ಸದ್ಯ ಓಡಾಡುತ್ತಿರುವ ಕೆಲ ಲೆಕ್ಕಾಚಾರಗಳ ವರದಿ ಇಲ್ಲಿವೆ ನೋಡಿ. ಅರುಣ್ ಕುಮಾರ್ ಹಾಗೂ ಅಶೋಕ್ ಕುಮಾರ್ ಕಾಲೇಜು ದಿನಗಳಿಂದಲೇ ಗೆಳೆಯರು.

ಆಖಾಡದಲ್ಲಿ ಅರುಣ್ ಕುಮಾರ್ ಪುತ್ತಿಲ v/s ಅಶೋಕ್ ಕುಮಾರ್ ರೈ | ಹೇಗಿರಬಹುದು ಗೆಳೆಯರಿಬ್ಬರ ಚುನಾವಣಾ ಪೂರ್ವ ಜುಗಲ್ಬಂದಿ!? Read More »

ಬಿಜೆಪಿಯಲ್ಲಿ ಟಿಕೆಟ್ ತಪ್ಪಲು ಬಿ. ಎಲ್. ಸಂತೋಷ್ ಕಾರಣ ಎಂದು ಆರೋಪಿಸಿದ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಬಿಜೆಪಿಯಲ್ಲಿ ಈ ಬಾರಿ ನನಗೆ ಟಿಕೆಟ್ ಕೈತಪ್ಪಲು ಬಿ. ಎಲ್. ಸಂತೋಷ್ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ . ಹಲವಾರು ದಿನಗಳಿಂದ ನಾನು ವೇದನೆ ಅನುಭವಿಸಿದ್ದೇನೆ. ಇದಕ್ಕೆ ಕೇವಲ ಟಿಕೆಟ್ ಕಾರಣ ಅಲ್ಲ. ಟಿಕೆಟ್ ತಪ್ಪೋಕೆ ಕಾರಣ ಆದವರ ಹೆಸರು ಹೇಳೋ ಸಮಯ ಇವತ್ತು ಬಂದಿದೆ. ನಾನು ಈ ಹಿಂದೆ ಸಮಯ ಬಂದಾಗ ಹೇಳುತ್ತೇನೆ ಅಂದಿದ್ದೆ‌, ಇಂದು ಅವರ ಹೆಸರನ್ನು ಬಹಿರಂಗಪಡಿಸುತ್ತಿದ್ದೇನೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್

ಬಿಜೆಪಿಯಲ್ಲಿ ಟಿಕೆಟ್ ತಪ್ಪಲು ಬಿ. ಎಲ್. ಸಂತೋಷ್ ಕಾರಣ ಎಂದು ಆರೋಪಿಸಿದ ಜಗದೀಶ್ ಶೆಟ್ಟರ್ Read More »

ಆಲ್ಟೋ ಕಾರು-ತೂಫಾನ್ ನಡುವೆ ಭೀಕರ ಅಪಘಾತ | ನಾಲ್ವರು ಮೃತ್ಯು

ಸುಬ್ರಹ್ಮಣ್ಯ : ಆಲ್ಟೋ ಕಾರು ಹಾಗೂ ತೂಫಾನ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಅಪಘಾತದಲ್ಲಿಗಾಯಗೊಂಡವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರ ಪರಿಚಯ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಆಲ್ಟೋ ಕಾರು-ತೂಫಾನ್ ನಡುವೆ ಭೀಕರ ಅಪಘಾತ | ನಾಲ್ವರು ಮೃತ್ಯು Read More »

ಪಕ್ಷೇತರ ಅಭ್ಯರ್ಥಿಯಾಗಿ ಜೆಡಿಎಸ್ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ನಾಮಪತ್ರ ಸಲ್ಲಿಕೆ

ಪುತ್ತೂರು: ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಟಿಕೇಟ್ ನೀಡದ ಹಿನ್ನಲೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಹಿನ್ನಲೆಯಲ್ಲಿ ಮಂಗಳವಾರ ತನ್ನ ಬೆಂಬಲಿಗರೊಂದಿಗೆ ತೆರಳಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪಕ್ಷೇತರ ಅಭ್ಯರ್ಥಿಯಾಗಿ ಜೆಡಿಎಸ್ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ನಾಮಪತ್ರ ಸಲ್ಲಿಕೆ Read More »

error: Content is protected !!
Scroll to Top