ಕೂಲಿ ಕಾರ್ಮಿಕರಿಗೆ ಶ್ರಮಿಕ ನಿವಾಸ ನಿರ್ಮಿಸಲು ಮುಂದಾದ ರಾಜ್ಯ ಸರಕಾರ

ಬೆಂಗಳೂರು: ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಿ, ನೆರವಿಗೆ ಮುಂದಾಗಿದೆ.ಈ ವಸತಿ ಸಮುಚ್ಚಯವು ರಸ್ತೆ ಬದಿಗಳಲ್ಲಿ ಟೆಂಟ್ ಗಳನ್ನು ಹಾಕಿಕೊಂಡು ಜೀವನ ನಡೆಸುವ ಕೂಲಿ ಕಾರ್ಮಿಕರಿಗೆ ಗೌರವಯುತವಾಗಿ ಜೀವನ ನಡೆಸಲು ಸಹಾಯ ಮಾಡುತ್ತದೆ. ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಕಾರ್ಮಿಕರು ಅಲ್ಲಿ ಜೀವನ ನಡೆಸಬಹುದು ಎಂದು ಕಾರ್ಮಿಕ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಕಾರ್ಮಿಕ ಇಲಾಖೆಯು ಈಗಾಗಲೇ […]

ಕೂಲಿ ಕಾರ್ಮಿಕರಿಗೆ ಶ್ರಮಿಕ ನಿವಾಸ ನಿರ್ಮಿಸಲು ಮುಂದಾದ ರಾಜ್ಯ ಸರಕಾರ Read More »

ನಂದಾವರ, ಬೆಟ್ಟಂಪಾಡಿಯಲ್ಲಿ ಎನ್‌ಐಎ ಶೋಧ

ಹಲವು ಮನೆಗಳಲ್ಲಿ ಶೋಧ ಕಾರ್ಯಾಚರಣೆ ಮಂಗಳೂರು : ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕಾರ್ಯಾಚರಣೆ ನಡೆಸಿ ಕೆಲವರನ್ನು ವಿಚಾರಣೆಗೊಳಪಡಿಸಿದೆ ಎಂದು ತಿಳಿದು ಬಂದಿದೆ. ಬಿಹಾರದ ಪಟ್ನಾದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಮೋದಿಯವರ ಚುನಾವಣಾ ರ್ಯಾಲಿಯಲ್ಲಿ ಬಾಂಬ್‌ ಸ್ಫೋಟಿಸಿ ವಿಧ್ವಂಸಕ ಕೃತ್ಯ ಎಸಗಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಈ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಎನ್‌ಐಎ

ನಂದಾವರ, ಬೆಟ್ಟಂಪಾಡಿಯಲ್ಲಿ ಎನ್‌ಐಎ ಶೋಧ Read More »

ಕಗ್ಗದ ಸಂದೇಶ -ನಮ್ಮ ಪ್ರಯತ್ನವಿದ್ದರೆ ಮಾತ್ರ ದೇವರೊಲುಮೆ ಸಿಗುವುದು…

ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ|ಸನ್ನಾಹ ಸಾಗೀತೆ? ದೈವ ಒಪ್ಪಿತೆ?||ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ, ಭಿನ್ನಿಸಲಿ|ನಿನ್ನ ಬಲವನು ಮೆರೆಸೊ-ಮಂಕುತಿಮ್ಮ||ನಾವು ಹೊತ್ತು ತಂದ ವಿಧಿಯ ಭಾರವನು ದೈವದ ಭುಜಕ್ಕೆ ಏರಿಸುವ ಪ್ರಯತ್ನ ಮಾಡಬಾರದು. ನಮ್ಮ ಈ ಬೇಡಿಕೆಯನ್ನು ದೈವ ಒಪ್ಪಲಿ ಅಥವಾ ತಿರಸ್ಕರಿಸಲಿ ಈ ಬಗ್ಗೆ ಯೋಚಿಸದೆ ದೇವರು ನಮಗೆ ಕೊಟ್ಟ ಬಲವನ್ನು ಬಳಸಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಮಾನ್ಯ ಡಿವಿಜಿಯವರು ಈ ಕಗ್ಗದಲ್ಲಿ ಹೇಳಿದ್ದಾರೆ.ಜೀವನದಲ್ಲಿ ಎಲ್ಲವೂ ವಿಧಿ ಲಿಖಿತದಂತೆ ನಡೆಯುವುದು ಎಂದು ಭಾವಿಸಿಕೊಂಡು ಕೈಕಟ್ಟಿಕೊಂಡು ಕುಳಿತುಕೊಳ್ಳಬಾರದು. ದೇವರು

ಕಗ್ಗದ ಸಂದೇಶ -ನಮ್ಮ ಪ್ರಯತ್ನವಿದ್ದರೆ ಮಾತ್ರ ದೇವರೊಲುಮೆ ಸಿಗುವುದು… Read More »

ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವ ಸಂಪನ್ನ

ಪಡುಮಲೆ : ಪಡುಮಲೆ ಶ್ರೀ ಕೂವೆ ಶಾಸ್ತರ ವಿಷ್ಣುಮೂರ್ತಿ ದೇವಾಲಯದಲ್ಲಿ  1008 ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಮಾ.5 ರಂದು ನಡೆಯಿತು. ಪೂರ್ವಾಹ್ನ ಗಂ 5 ರಿಂದ   ಬ್ರಹ್ಮಶ್ರೀ ವೇಧ ಮೂರ್ತಿ ಕುಂಟಾರು ವಾಸುದೇವ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇಧ ಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ   ಗಣಪತಿ ಹೋಮ,ಕವಟೋದ್ಘಾಟನೆ,ಶಾಂತಿ, ಪ್ರಾಯಶ್ಚಿತ್ತ ಮತ್ತು ಶಾಂತಿ ಹೋಮ ನಡೆದು ಬಳಿಕ ಪಡುಮಲೆ ಒಡೆಯ ಶ್ರೀ ಶಾಸ್ತಾರ ವಿಷ್ಣುಮೂರ್ತಿ  ದೇವರಗೆ  ಕಲಶಾಭಿಷೇಕ  ಅವಭೃತ ಪ್ರೋಕ್ಸಣೆ ಮಹಾಪೂಜೆ ,ಮಂತ್ರಾಕ್ಷತೆ ಕಾರ್ಯಕ್ರಮ ನೆಡೆಯಿತು. .ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು. 

ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವ ಸಂಪನ್ನ Read More »

ಮುಕ್ಕೂರು ಅಂಚೆ ಕಚೇರಿ ಉಳಿಸಿಕೊಳ್ಳಲು ಪೂರ್ವಭಾವಿ ಸಭೆ

ಮುಕ್ಕೂರು: ಊರಿನ ಅಂಚೆ ಕಚೇರಿಯು ವ್ಯವಹಾರ ಕುಸಿತದಿಂದ ಬೇರೆಡೆಗೆ ಸ್ಥಳಾಂತರ ಅಥವಾ ಮುಚ್ಚುವುದನ್ನು ಯಾರಿಂದಲೂ ಒತ್ತಡ ಹೇರಿ ತಡೆಯುವುದು ಸಾಧನೆ ಅಲ್ಲ. ಅದರ ಬದಲಾಗಿ ಅಂಚೆ ಕಚೇರಿಯಲ್ಲಿ ಪ್ರತಿಯೊಬ್ಬರು ಖಾತೆ ತೆರೆದು ವ್ಯವಹಾರ ಹೆಚ್ಚಳಗೊಳಿಸಿ ಸ್ವಂತ ಶಕ್ತಿಯಿಂದ ಅಂಚೆ ಕಚೇರಿ ಶಾಶ್ವತವಾಗಿ ಉಳಿಯುವಂತೆ ಮಾಡುವುದೇ ಸಾಧನೆ ಎಂದು ಪೆರುವಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹೇಳಿದರು. ಬೆಳ್ಳಾರೆ ವ್ಯಾಪ್ತಿಯ ಪೆರುವಾಜೆ ಗ್ರಾಮದ ಮುಕ್ಕೂರು ಶಾಖಾ ಅಂಚೆ ಕಚೇರಿ ವ್ಯವಹಾರ ಕುಸಿದಿದ್ದು ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ

ಮುಕ್ಕೂರು ಅಂಚೆ ಕಚೇರಿ ಉಳಿಸಿಕೊಳ್ಳಲು ಪೂರ್ವಭಾವಿ ಸಭೆ Read More »

ಭಾಗ್ಯಜ್ಯೋತಿ ಜ್ಞಾನವಿಕಾಸ ಕೇಂದ್ರದ ಮಾಸಿಕ ಸಭೆ

ಪುತ್ತೂರು : ಭಾಗ್ಯಜ್ಯೋತಿ ಜ್ಞಾನವಿಕಾಸ  ಕೇಂದ್ರದ ಮಾಸಿಕ  ಸಭೆ  ಕೀರ್ತಿ ಸಂಘದ  ಸದಸ್ಯೆ ಜ್ಯೋತಿ ಅವರ  ಅಧ್ಯಕ್ಷತೆಯಲ್ಲಿ  ಕುಂಜೂರುಪಂಜ ಶ್ರೀ ಮಂಜುನಾಥ  ಸಭಾಭವನದಲ್ಲಿ ನಡೆಯಿತು,  ಸಭೆಯಲ್ಲಿ  ಮಹಿಳಾ   ಸಾಂತ್ವನ  ಕೇಂದ್ರದ  ಸಾಮಾಜಿಕ  ಕಾರ್ಯಕರ್ತೆ  ಅಶ್ವಿನಿ  ಮಹಿಳಾ  ದೌರ್ಜನ್ಯ ಮತ್ತು ಅದಕ್ಕೆ ಪರಿಹಾರ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಸೇವಾಪ್ರತಿನಿಧಿ ಆಶಾಲತಾ, ವರಮಹಾಲಕ್ಷ್ಮಿ ಪೂಜಾ  ಸಮಿತಿ  ಅಧ್ಯಕ್ಷೆ ವಸಂತಿ, ಸಂಯೋಜಕಿ  ವಿದ್ಯಾಲಕ್ಷ್ಮಿ ಉಪಸ್ಥಿತರಿದ್ದರು.

ಭಾಗ್ಯಜ್ಯೋತಿ ಜ್ಞಾನವಿಕಾಸ ಕೇಂದ್ರದ ಮಾಸಿಕ ಸಭೆ Read More »

ಪೊಲೀಸ್ ಜೀಪ್ – ಬೈಕ್ ಡಿಕ್ಕಿ: ಆರ್ಲಪದವು ಸಿಎ ಬ್ಯಾಂಕ್ ಮ್ಯಾನೇಜರ್ ಮೃತ್ಯು

ಪುತ್ತೂರು: ಸಂಪ್ಯ ಮಸೀದಿ ಮುಂಭಾಗದಲ್ಲಿ ಪೊಲೀಸ್ ಜೀಪ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. ಮೃತಪಟ್ಟವರನ್ನು ಆರ್ಲಪದವು ಸಿಎ ಬ್ಯಾಂಕ್ ಮ್ಯಾನೇಜರ್ ಲಕ್ಷ್ಮಣ್ ನಾಯ್ಕ್ ಎಂದು ಗುರುತಿಸಲಾಗಿದೆ. ಪುತ್ತೂರಿಗೆ ಆಗಮಿಸುತ್ತಿದ್ದ ಪೊಲೀಸ್ ಜೀಪ್ ಹಾಗೂ ಆರ್ಲಪದವು ಕಡೆ ಸಾಗುತ್ತಿದ್ದ ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಬೈಕ್ ಸವಾರ ಲಕ್ಷ್ಮಣ್ ನಾಯ್ಕ್ ಅವರು ಗಂಭೀರ ಗಾಯಗೊಂಡು, ಕೊನೆಯುಸಿರೆಳೆದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸ್ ಜೀಪ್ – ಬೈಕ್ ಡಿಕ್ಕಿ: ಆರ್ಲಪದವು ಸಿಎ ಬ್ಯಾಂಕ್ ಮ್ಯಾನೇಜರ್ ಮೃತ್ಯು Read More »

ಗೃಹರಕ್ಷಕರ ಚುನಾವಣಾ ಪೂರ್ವ ಸಿದ್ಧತಾ ಸಭೆ

ಪುತ್ತೂರು : ಮುಂದಿನ ಮೇ ತಿಂಗಳಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕರನ್ನು ನೇಮಿಸಬೇಕಾಗಿರುವುದರಿಂದ ದ.ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ಪಡೆಯ ಮುಖ್ಯಪಾಲಕರಾದ ಡಾ. ಮುರಲೀ ಮೋಹನ್ ಚೂಂತಾರು ಕಡಬ ಗೃಹರಕ್ಷಕ ದಳಕ್ಕೆ ಭಾನುವಾರ ಭೇಟಿ ನೀಡಿದರು. ನಿಷ್ಕ್ರಿಯ ಗೃಹರಕ್ಷಕರನ್ನು ತೆಗೆದುಹಾಕಿ ಹೆಚ್ಚು ಕ್ರಿಯಾಶೀಲ ಗೃಹರಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ  ಘಟಕಾಧಿಕಾರಿ ತೀರ್ಥೇಶ್ ಎ. ಎಸ್.  ಅವರಿಗೆ ಸೂಚನೆ ನೀಡಿದರು. ಎಲ್ಲಾ ಗೃಹರಕ್ಷಕರು ತಮ್ಮ ಸದಸ್ಯತ್ವ ನವೀಕರಣಗೊಳಿಸಿ ಗುರುತಿನ

ಗೃಹರಕ್ಷಕರ ಚುನಾವಣಾ ಪೂರ್ವ ಸಿದ್ಧತಾ ಸಭೆ Read More »

ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಶೌರ್ಯ ಯಾತ್ರೆ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಪನ

ಪುತ್ತೂರು : ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆಯ ವತಿಯಿಂದ ಶೌರ್ಯ ಯಾತ್ರೆ ಭಾನುವಾರ ನಡೆಯಿತು. ನಗರದ ದಬೆ ವೃತ್ತದಿಂದ ಹೊರಟ ಶೌರ್ಯ ಯಾತ್ರೆ ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಸಮಾಪನಗೊಂಡಿತು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|ಕಲ್ಲಡ್ಕ ಪ್ರಭಾಕರ್ ಭಟ್ ದಿಕ್ಸೂಚಿ ಭಾಷಣ ಮಾಡಿ, ಭಾರತದಲ್ಲಿ ವೀರತ್ವ, ಪರಾಕ್ರಮ ಮೆರೆದವರ ಇತಿಹಾಸವನ್ನು ಮಕ್ಕಳಿಗೆ ತಿಳಿಸಲಾಗದ ವಾತಾವರಣವನ್ನು ಮೆಕಾಲೆ ಶಿಕ್ಷಣ ವ್ಯವಸ್ಥೆ ಮಾಡಿತ್ತು.

ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಶೌರ್ಯ ಯಾತ್ರೆ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಪನ Read More »

ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ನೂತನ ರಥ | ಮುಂದಿನ ಜಾತ್ರೆಯೊಳಗೆ 60 ಲಕ್ಷ ವೆಚ್ಚದಲ್ಲಿ ರಥ-ಪಲ್ಲಕ್ಕಿ ನಿರ್ಮಾಣ

ಬೆಳ್ಳಾರೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ 60 ಲಕ್ಷ ರೂ.ವೆಚ್ಚದಲ್ಲಿ ಪಂಚಮಿ ರಥ ನಿರ್ಮಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಭಕ್ತಾಧಿಗಳ ಪೂರ್ವಭಾವಿ ಸಭೆ ಭಾನುವಾರ ದೇವಾಲಯದ ವಠಾರದಲ್ಲಿ ನಡೆಯಿತು. ಶತಮಾನಗಳ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಹಿಂದಿನ ಕಾಲದಲ್ಲಿ ಜಾತ್ರೆಯು ರಥೋತ್ಸವದೊಂದಿಗೆ ವೈಭವಪೂರ್ಣವಾಗಿ ನಡೆಯುತಿತ್ತು. ಕಾಲ ಕ್ರಮೇಣ ಅದು ನಿಂತಿತು. ಅದಕ್ಕೆ ಸಾಕ್ಷಿ ಎಂಬಂತೆ ರಥದ ಪಳೆಯುಳಿಕೆಗಳು ಇತ್ತಿಚ್ಚಿನ ದಿನಗಳ ತನಕವು ದೇವಾಲಯದಲ್ಲಿ ಇತ್ತು. ಕೆಲ ವರ್ಷಗಳ ಹಿಂದೆ ನಡೆದ ಪ್ರಶ್ನಾಚಿಂತನೆಯಲ್ಲಿ

ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ನೂತನ ರಥ | ಮುಂದಿನ ಜಾತ್ರೆಯೊಳಗೆ 60 ಲಕ್ಷ ವೆಚ್ಚದಲ್ಲಿ ರಥ-ಪಲ್ಲಕ್ಕಿ ನಿರ್ಮಾಣ Read More »

error: Content is protected !!
Scroll to Top