ಅಜೀಮ್‌ ಪ್ರೇಮ್‌ಜಿ ವಿವಿ ವಿರುದ್ಧ ದೇಶ ವಿರೋಧಿ ಚಟುವಟಿಕೆ ಆರೋಪ

ಮಾನ್ಯತೆ ರದ್ದುಪಡಿಸಲು ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ ಬೆಂಗಳೂರು: ಸರ್ಜಾಪುರದಲ್ಲಿರುವ ಪ್ರತಿಷ್ಠಿತ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಮಂಗಳವಾರ ವಿವಿಯೊಳಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಸಂಜೆ ವಿವಿ ಆವರಣಕ್ಕೆ ನುಗ್ಗಿದ ಎಬಿವಿಪಿ ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆ ನಡೆಸಿದರು. ವಿವಿಯ ನಾಮಫಲಕಕ್ಕೆ ಕಪ್ಪುಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಸರ್ಜಾಪುರ ಪೊಲೀಸರು ತೆರಳಿ ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಕೇಂದ್ರ ಗೃಹ […]

ಅಜೀಮ್‌ ಪ್ರೇಮ್‌ಜಿ ವಿವಿ ವಿರುದ್ಧ ದೇಶ ವಿರೋಧಿ ಚಟುವಟಿಕೆ ಆರೋಪ Read More »

ವಿದ್ಯಾರತ್ನ ‌ಪ್ರಶಸ್ತಿಗೆ ದಯಾಮಣಿ ಕೆ. ಭಾಜನ : ಮಾರ್ಚ್ 1 ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು, ಇವರು ಶಿಕ್ಷಣ ಕ್ಷೇತ್ರದಲ್ಲಿ ಆತ್ಯುತ್ತಮ ಸೇವೆಗೈದಿರುವವರಿಗೆ ನೀಡುವ ವಿದ್ಯಾರತ್ನ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ಪ್ರಾಂಶುಪಾಲೆ ದಯಾಮಣಿ ಕೆ. ಇವರು ಭಾಜನರಾಗಿದ್ದಾರೆ. ಇವರಿಗೆ ದಿನಾಂಕ ಮಾರ್ಚ್ 1 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ.) ಬೆಂಗಳೂರು ಇದರ ರಾಜ್ಯ ಮಟ್ಟದ ಸಮಾವೇಶ ಮತ್ತು

ವಿದ್ಯಾರತ್ನ ‌ಪ್ರಶಸ್ತಿಗೆ ದಯಾಮಣಿ ಕೆ. ಭಾಜನ : ಮಾರ್ಚ್ 1 ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ Read More »

ವಿದ್ಯಾರಶ್ಮಿಯಲ್ಲಿ ಯುಕೆಜಿಯ ಘಟಿಕೋತ್ಸವ

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಯು.ಕೆ.ಜಿ. ತರಗತಿಯ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ದಿನ (ಗ್ರಾಜ್ಯುಯೇಷನ್ ಡೇ) ಏರ್ಪಡಿಸಲಾಯಿತು. ಸಮಾರಂಭವನ್ನು ಎಸ್. ಎನ್. ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ಸದಸ್ಯೆ ರಶ್ಮಿ ಅಶ್ವಿನ್ ಎಲ್. ಶೆಟ್ಟಿ ಅವರು ಉದ್ಘಾಟಿಸಿದರು. ಅತಿಥಿಯಾಗಿ ಸವಣೂರು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜಯಂತ್ ವೈ. ಅವರು ಮಕ್ಕಳೇ ನಮ್ಮ ಆಸ್ತಿ, ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ, ಸರಿಯಾದ ಗುರಿ, ಗುರುಗಳ ಮೇಲೆ ಗೌರವ ಇರಬೇಕು ಎಂಬ ಹಿತನುಡಿಯೊಂದಿಗೆ ಶುಭ ಹಾರೈಸಿದರು. ಶಾಲಾ ಆಡಳಿತಾಧಿಕಾರಿ ಅಢ್ವಕೇಟ್ ಅಶ್ವಿನ್ ಎಲ್. ಶೆಟ್ಟಿ

ವಿದ್ಯಾರಶ್ಮಿಯಲ್ಲಿ ಯುಕೆಜಿಯ ಘಟಿಕೋತ್ಸವ Read More »

ಹಿಂದೂ ಧರ್ಮೀಯರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಅಶಾಂತಿಧೂತರ ಅಟ್ಟಹಾಸ

ಮುರುಡೇಶ್ವರ: ಅಶಾಂತಿದೂತ ಯುವಕರು ಹಿಂದೂ ಧರ್ಮೀಯರ ಮನೆಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿರುವ ಘಟನೆ ಬೈಲೂರಿನ ತೆಂಗಾರಿನಲ್ಲಿ ‌ನಡೆದಿದೆ. ರಾತ್ರಿ ವೇಳೆ ಮೂರು ಬೈಕ್‌ಗಳ ಮೂಲಕ ಬಂದ ದುಷ್ಕರ್ಮಿಗಳು ಹಿಂದೂ ಧರ್ಮೀಯರ ಮನೆಗಳ ಮೇಲೆ ಕಲ್ಲೆಸೆದಿದ್ದಾರೆ. ಅಪ್ರಾಪ್ತ ವಯಸ್ಸಿನ ಅಶಾಂತಿದೂತರು ಗುಂಪಾಗಿ ಬಂದು ನಡೆಸಿದ ಕೃತ್ಯ ಇದೆಂದು ತಿಳಿದು ಬಂದಿದೆ. ಮೂವರು ಆರೋಪಿಗಳನ್ನು ಸ್ಥಳೀಯ ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯ ಬಳಿಕ ಹಿಂದೂಗಳು ಮುರ್ಡೇಶ್ವರ ಠಾಣೆಯ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ಆ ಬಳಿಕ

ಹಿಂದೂ ಧರ್ಮೀಯರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಅಶಾಂತಿಧೂತರ ಅಟ್ಟಹಾಸ Read More »

ಬಸ್ಸಿನಲ್ಲಿ ಅಸ್ವಸ್ಥರಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಚಾಲಕ

ಪುತ್ತೂರು:‌ ಪುತ್ತೂರಿನಿಂದ ‌ವಿಟ್ಲಕ್ಕೆ ಸಂಚರಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಅಸ್ವಸ್ಥರಾಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತಿದೆ. ಅನಾರೋಗ್ಯಕ್ಕೆ ತುತ್ತಾದ ಪ್ರಯಾಣಿಕ ಬಸ್ಸಿನಲ್ಲೇ ಕೆಳಕ್ಕೆ ಬಿದ್ದು, ಗಾಯಗಳಾಗಿವೆ. ಈ ಘಟನೆ ನಡೆದಾಕ್ಷಣದಲ್ಲೇ ಎಚ್ಚೆತ್ತ ಚಾಲಕ ಬಸ್ಸನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಸ್ವಸ್ಥ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಬಸ್ ಚಾಲಕನ ಸಮಯಪ್ರಜ್ಞೆ ಮತ್ತು ಮಾನವೀಯತೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬಸ್ಸಿನಲ್ಲಿ ಅಸ್ವಸ್ಥರಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಚಾಲಕ Read More »

ಹೃದಯಾಘಾತಕ್ಕೆ ಯುವಕ ಬಲಿ

ಬಂಟ್ವಾಳ: ಕೃಷಿ ಸಂಬಂಧಿ ಕೆಲಸದಲ್ಲಿ ತೊಡಗಿಕೊಂಡಿದ್ದ ಯುವಕನೊಬ್ಬ ಎದೆನೋವಿನ ಕಾರಣಕ್ಕೆ ಹೃದಯಾಘಾತದಿಂದ ಮೃತಪಟ್ಚ ಘಟನೆ ಕುಕ್ಕಿಪಾಡಿ ಎಂಬಲ್ಲಿ ನಡೆದಿದೆ. ಮೃತನನ್ನು ‌ಪ್ರಶಾಂತ್ ಆಚಾರ್ಯ (24) ಎಂದು ಗುರುತಿಸಲಾಗಿದೆ. ಇವರು ಕುಕ್ಕಿಪಾಡಿ ಗ್ರಾಮದ ಮಾಡಮೆ ‌ಎಂಬಲ್ಲಿನ ಶ್ರೀರಾಮ ಆಚಾರ್ಯ ಅವರ ಎರಡನೇ ಪುತ್ರ. ಸಿದ್ಧಕಟ್ಟೆಯ ಯಂತ್ರೋಪಕರಣದ ಅಂಗಡಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಭಾನುವಾರ ಅರಂತಾಡಿಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಸಿದ್ಧಕಟ್ಟೆಯ ‌ಆಸ್ಪತ್ರೆಯ ವೈದ್ಯರ ನಿರ್ದೇಶನದಂತೆ ಮೂಡುಬಿದಿರೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ,

ಹೃದಯಾಘಾತಕ್ಕೆ ಯುವಕ ಬಲಿ Read More »

ಬೃಹತ್ ಮರ ಮುರಿದು ಬಿದ್ದು ಕಾರು ಜಖಂ

ಸುಳ್ಯ: ಚಲಿಸುತ್ತಿದ್ದ ಕಾರೊಂದರ ಮೇಲೆ ಮರ ಮುರಿದು ಬಿದ್ದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಪವಾಡ ಸದೃಶ ಎಂಬಂತೆ ಪಾರಾದ ಘಟನೆ ಬೇಂಗಮಲೆ ಎಂಬಲ್ಲಿ ನಡೆದಿದೆ. ಬೆಳ್ಳಾರೆಯ ಪಂಜದ ಕಡೆಗೆ ಉಮ್ಮರ್ ಎಂಬವರ ಬಾಡಿಗೆ ಕಾರಿನಲ್ಲಿ ಸಾಲ ವಸೂಲಾತಿ ಕೆಲಸಕ್ಕೆ ಬ್ಯಾಂಕ್ ಮೆನೇಜರ್ ಉತ್ಸವ್ ಚಕ್ರವರ್ತಿ ಅವರು ಪ್ರಯಾಣಿಸುತ್ತಿದ್ದರು. ಕೆಲಸ ಮುಗಿಸಿ ಮರಳುವ ವೇಳೆ ಬೃಹತ್ ಮರ ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ದೊಡ್ಡ ಮಟ್ಟದ

ಬೃಹತ್ ಮರ ಮುರಿದು ಬಿದ್ದು ಕಾರು ಜಖಂ Read More »

ಭೋಜ್‌ಶಾಲಾ ಸಂಕೀರ್ಣದ ಮಸೀದಿಯೊಳಗೆ ಹಿಂದೂ ದೇಗುಲದ ಅವಶೇಷಗಳು: ಎಎಸ್ಐ

ಧಾರ್: ಮಧ್ಯಪ್ರದೇಶದ ಭೋಜ್‌ಶಾಲಾ ಸಂಕೀರ್ಣದ ಒಳಗಿರುವ ಕಮಲ್ ಮೌಲಾ ‌ಮಸೀದಿಯನ್ನು ಪ್ರಾಚೀನ ದೇವಾಲಯದ ಅವಶೇಷಗಳಿಂದ ನಿರ್ಮಾಣ ಮಾಡಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷಾ ‌ವರದಿ ತಿಳಿಸಿದೆ. ಈ ವರದಿಯನ್ನು ರಾಜ್ಯ ಹೈಕೋರ್ಟ್‌ನ ಇಂದೋರ್ ಪೀಠಕ್ಕೂ ‌ಸಲ್ಲಿಕೆ ಮಾಡಲಾಗಿದ್ದು, ಅದರಲ್ಲಿ ಈ ಕಮಾಲ್ ಮೌಲಾ ಮಸೀದಿಯನ್ನು ಹಿಂದು ಸಮುದಾಯದ ವಾಗ್ದೇವಿ (ದೇವಿ ಸರಸ್ವತಿ) ದೇವಾಲಯವೆಂದು ಪರಿಗಣಿಸುತ್ತದೆ. ಆದರೆ ಮುಸ್ಲಿಂ ಪಕ್ಷದವರು ಇದನ್ನು 11ನೇ ಶತಮಾನದ ಕಮಾಲ್ ಮೌಲಾ ಮಸೀದಿಯೆಂದು ಹೇಳಿಕೊಳ್ಳುತ್ತಾರೆ. ವೈಜ್ಞಾನಿಕ ತನಿಖೆಗಳು, ಸಮೀಕ್ಷೆಗಳು ಮತ್ತು ಉತ್ಪನನಗಳು,

ಭೋಜ್‌ಶಾಲಾ ಸಂಕೀರ್ಣದ ಮಸೀದಿಯೊಳಗೆ ಹಿಂದೂ ದೇಗುಲದ ಅವಶೇಷಗಳು: ಎಎಸ್ಐ Read More »

ಡಾಕ್ಟರ್ ಆಗು ಎಂದಿದ್ದಕ್ಕೆ ತಂದೆಯನ್ನೇ ಭೀಕರವಾಗಿ ಹತ್ಯೆಗೈದ ಪುತ್ರ

ಲಕ್ನೋ: ಉತ್ತರ ಪ್ರದೇಶದಲ್ಲಿ ಮಗನೇ ತಂದೆಯನ್ನು ಗುಂಡಿಕ್ಕಿ ಕೊಂದು, ದೇಹವನ್ನು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮನ್ವೇಂದ್ರ ‌ಸಿಂಗ್ ಎಂದು ಗುರುತಿಸಲಾಗಿದೆ. ಆತನ ಪುತ್ರ ಅಕ್ಷತ್ ಪ್ರತಾಪ್ ಸಿಂಗ್ ಎಂಬಾತನೇ‌ ಆರೋಪಿ.‌ ಮನ್ವೇಂದ್ರ ಅವರು ಔಷಧ ಮತ್ತು ಮದ್ಯದ ಉದ್ಯಮ ನಡೆಸುತ್ತಿದ್ದರು. ಅವರು ತಮ್ಮ ಮಗನನ್ನು ಡಾಕ್ಟರ್ ಆಗುವಂತೆ ಒತ್ತಾಯಿಸುತ್ತಿದ್ದರು. ಈ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಈ ವಿಷಯದಲ್ಲೇ ಮಗ

ಡಾಕ್ಟರ್ ಆಗು ಎಂದಿದ್ದಕ್ಕೆ ತಂದೆಯನ್ನೇ ಭೀಕರವಾಗಿ ಹತ್ಯೆಗೈದ ಪುತ್ರ Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪೊಲೀಸರ ಮೇಲೆಯೇ ಆರೋಪಿಗಳ ವಕೀಲರಿಂದ ಆರೋಪ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಕ್ರಾಸ್ ಎಕ್ಸಾಮಿನ್ ವೇಳೆ ಪೊಲೀಸರೇ ಎಡವಟ್ಟು ಮಾಡಿದ್ದಾರೆ ಎಂದು ಆರೋಪಿಗಳ‌ ಪರ ವಕೀಲರು ಆರೋಪಿಸಿದ್ದಾರೆ. ಸದ್ಯ ಆರೋಪಿಗಳು ದಿನಕ್ಕೊಂದು ಎಂಬಂತೆ ಹೊಸ ಹೊಸ ಆರೋಪಗಳನ್ನು ಮಾಡುತ್ತಿದ್ದಾರೆ. ನ್ಯಾಯಾಲಯಕ್ಕೆ ನಿನ್ನೆಯೂ ‌ಮೂವರು ಆರೋಪಿಗಳು ಅರ್ಜಿ ಸಲ್ಲಿಕೆ ಮಾಡಿದ್ದು, ಪೊಲೀಸರು ನಮ್ಮ ಮೊಬೈಲ್ ಗಳನ್ನು ಯಾವುದೋ ಸ್ಥಳದಲ್ಲಿ ವಶಕ್ಕೆ ಪಡೆದು ಬಳಿಕ ಕಾಮಾಕ್ಷಿಪಾಳ್ಯದ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆದಿದ್ದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ದೋಷಾರೋಪ ಪಟ್ಟಿ ಸಲ್ಲಿಕೆಯಾದಾಗ ಆರೋಪಿಗಳನ್ನು ಟೈಲ್ಸ್ ಇರುವಂತಹ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪೊಲೀಸರ ಮೇಲೆಯೇ ಆರೋಪಿಗಳ ವಕೀಲರಿಂದ ಆರೋಪ Read More »

error: Content is protected !!
Scroll to Top