ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೆ ಬಸವ ಸಮರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೆ ಬಸವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ದೈವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋ ಶಾಲೆಯಿಂದ ಬಸವ ನೀಡುವ ನಿರ್ಣಯ ಕೈಗೊಳ್ಳಲಾಯಿತು. ಅದರಂತೆ ದೇವಸ್ಥಾನದ ಗರ್ಭಗುಡಿ ಎದುರಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವಿ.ಎಸ್.ಭಟ್ ನೇತೃತ್ವದಲ್ಲಿ ನಡೆಯಿತು.  ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಬಸವನನ್ನು ಬಲ್ನಾಡು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ […]

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೆ ಬಸವ ಸಮರ್ಪಣೆ Read More »

ಮೇ1 : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳಾಭಿಷೇಕ

ಪುತ್ತೂರು; ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ1 ಸೋಮವಾರ ಸೀಯಾಳಾಭಿಷೇಕ ನಡೆಯಲಿದೆ. ಲೋಕಕಲ್ಯಾಣಾರ್ಥ ಹಾಗೂ ಮಳೆಗಾಗಿ ಸೀಯಾಳಾಭಿಷೇಕ ಬೆಳಿಗ್ಗೆ 9.30 ರಿಂದ 11 ರ ತನಕ ನಡೆಯಲಿದೆ. ಸೇವಾ ರೂಪದಲ್ಲಿ ಸೀಯಾಳ ತರುವವರು ಅದೇ ದಿನ ಬೆಳಿಗ್ಗೆ 9.30 ರೊಳಗೆ ತಂದೊಪ್ಪಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ವಿನಂತಿಸಿದ್ದಾರೆ.

ಮೇ1 : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳಾಭಿಷೇಕ Read More »

ಚೆಕ್ ಅಮಾನ್ಯ ಆರೋಪಿ ತೀರ್ಥರಾಮ ಬಂಧನ

ಪುತ್ತೂರು: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಆರೋಪಿಯೊಬ್ಬರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ದರ್ಬೆ ಕಾವೇರಿಕಟ್ಟೆ ನಿವಾಸಿ ಸದಾಶಿವ ಆಚಾರ್ಯ ಎಂಬವರ ಪುತ್ರ ತೀರ್ಥರಾಮ ಹೆಚ್.ಎಸ್. ಬಂಧಿತ ಆರೋಪಿ. ಕುಂದಾಪುರದಲ್ಲಿ ತಂಪು ಪಾನೀಯ ವ್ಯವಹಾರ ನಡೆಸುತ್ತಿದ್ದು ತೀರ್ಥರಾಮ ಅವರು ಏಳು ವರ್ಷಗಳ ಹಿಂದೆ ಪುತ್ತೂರಿನ ಕೆಲವು ಸಂಸ್ಥೆಗಳಿಂದ ಸಾಲ ಪಡೆದುಕೊಂಡು ಚೆಕ್ ನೀಡಿದ್ದರು. ಅದು ಅಮಾನ್ಯಗೊಂಡ ಪರಿಣಾಮ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ತನಿಖೆ ಕೈಗೆತ್ತಿಕೊಂಡ

ಚೆಕ್ ಅಮಾನ್ಯ ಆರೋಪಿ ತೀರ್ಥರಾಮ ಬಂಧನ Read More »

ಏ. 30ರಂದು ಪುತ್ತೂರಿಗರೊಂದಿಗೆ ತೇಜಸ್ವಿ ಸೂರ್ಯ ಸಂವಾದ | ಬೆಂಗಳೂರಿನ ವಿವೇಕ ಸಭಾಂಗಣದಲ್ಲಿ ಕಾರ್ಯಕ್ರಮ

ಪುತ್ತೂರು: ಬೆಂಗಳೂರಿನಲ್ಲಿ ನೆಲೆಸಿರುವ ಪುತ್ತೂರಿಗರೊಂದಿಗೆ ಸಂಸದ ತೇಜಸ್ವಿ ಸೂರ್ಯ ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಸದ, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರೊಂದಿಗೆ ಏ. 30ರಂದು ಸಂಜೆ 4.30ಕ್ಕೆ ಬೆಂಗಳೂರು ಜಯನಗರದ ವಿವೇಕ ಸಭಾಂಗಣದಲ್ಲಿ ಸಂವಾದ ಏರ್ಪಡಿಸಲಾಗಿದೆ. ಬಿಜೆಪಿಯ ಯೂತ್ ಐಕಾನ್ ತೇಜಸ್ವಿ ಸೂರ್ಯ ಇತ್ತೀಚೆಗೆ ಪುತ್ತೂರಿನ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ನಾಮಪತ್ರ ಸಲ್ಲಿಕೆ ಸಂದರ್ಭ ನಡೆದ ಸಮಾವೇಶದಲ್ಲಿ ಪುತ್ತೂರಿಗರ ಗಮನ ಸೆಳೆದಿದ್ದರು. ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಪುತ್ತೂರಿಗರೊಂದಿಗೆ ಸಂವಾದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ

ಏ. 30ರಂದು ಪುತ್ತೂರಿಗರೊಂದಿಗೆ ತೇಜಸ್ವಿ ಸೂರ್ಯ ಸಂವಾದ | ಬೆಂಗಳೂರಿನ ವಿವೇಕ ಸಭಾಂಗಣದಲ್ಲಿ ಕಾರ್ಯಕ್ರಮ Read More »

ಕಾಂಗ್ರೆಸ್ಸಿನ ಒಗ್ಗಟ್ಟಿನಿಂದ ಬಿಜೆಪಿ ಕೊತಕೊತ ಕುದಿಯುತ್ತಿದೆ

ಪುತ್ತೂರು: ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕರು ತೊಡಗಿಸಿಕೊಂಡಿದ್ದು ಕಾಂಗ್ರೆಸ್ ನಾಯಕರ ಒಗ್ಗಟ್ಟು ಕಂಡು ಬಿಜೆಪಿ ಕೊತಕೊತ ಕುದಿಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಂ ಎಸ್ ಮಹಮ್ಮದ್ ಹೇಳಿದರು. ಅವರು ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್‌ನಲ್ಲಿ 14 ಮಂದಿ ಟಕೆಟ್ ಆಕಾಂಕ್ಷಿಗಳ ಪೈಕಿ ಹೈಕಮಾಂಡ್ ಆಯ್ಕೆ ಮಾಡಿರುವ ಅಶೋಕ್ ರೈಯವ ರನ್ನು ಕಾಂಗ್ರೆಸ್ಸಿಗರು ಎಲ್ಲರೂ ಬೆಂಬಲಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು

ಕಾಂಗ್ರೆಸ್ಸಿನ ಒಗ್ಗಟ್ಟಿನಿಂದ ಬಿಜೆಪಿ ಕೊತಕೊತ ಕುದಿಯುತ್ತಿದೆ Read More »

ಪುರುಷರಕಟ್ಟೆ ಮೂಲದ ವಸಂತ್ ಮೃತದೇಹ ಪತ್ತೆ | ಮುಂದಿನ ತಿಂಗಳು 20ನೇ ವಿವಾಹ ವಾರ್ಷಿಕೋತ್ಸವ ಆಚರಿಸಲು ಸಿದ್ಧವಾಗಿದ್ದ ದಂಪತಿ

ಪುತ್ತೂರು: ಪುರುಷರಕಟ್ಟೆಯ ಕುರೆಮಜಲು ಮೂಲದ ವಸಂತ ಅವರ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಗುರುವಾರ ಸಂಜೆ ವೇಳೆ ಪತ್ತೆಯಾಗಿದೆ. ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ಬುಧವಾರ ರಾತ್ರಿ ವಸಂತ ಅವರ ಚಪ್ಪಲಿ ಹಾಗೂ ಸಮುದ್ರ ತೀರದಲ್ಲಿ ಕಾರು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದ್ದು, ಗುರುವಾರ ಸಂಜೆ ವೇಳೆ ಮೃತದೇಹ ಪತ್ತೆಯಾಗಿದೆ. ವಸಂತ ಅವರು ಉಳ್ಳಾಲದಲ್ಲಿ ವಾಸ್ತವ್ಯ ಹೊಂದಿದ್ದು, ವಿ ಕಾರ್ ಮ್ಯಾಕ್ಸ್ ಹೆಸರಿನ ಸಂಸ್ಥೆಯನ್ನು ನಡೆಸುತ್ತಿದ್ದರು. ಇತ್ತೀಚೆಗಷ್ಟೇ ಐಶಾರಾಮಿ ಮನೆಯೊಂದನ್ನು ನಿರ್ಮಿಸಿದ್ದರು. ಮುಂದಿನ ತಿಂಗಳು 20ನೇ

ಪುರುಷರಕಟ್ಟೆ ಮೂಲದ ವಸಂತ್ ಮೃತದೇಹ ಪತ್ತೆ | ಮುಂದಿನ ತಿಂಗಳು 20ನೇ ವಿವಾಹ ವಾರ್ಷಿಕೋತ್ಸವ ಆಚರಿಸಲು ಸಿದ್ಧವಾಗಿದ್ದ ದಂಪತಿ Read More »

ಪುರುಷರಕಟ್ಟೆ ವ್ಯಕ್ತಿಯ ಕಾರು ಸೋಮೇಶ್ವರ ಸಮುದ್ರದ ರುದ್ರಪಾದೆಯಲ್ಲಿ ಪತ್ತೆ | ವ್ಯಕ್ತಿಗಾಗಿ ಪೊಲೀಸರಿಂದ ಶೋಧ ಕಾರ್ಯ

ಉಳ್ಳಾಲ: ನಾಪತ್ತೆಯಾದ ವ್ಯಕ್ತಿಯೊಬ್ಬರ ಕಾರು ಹಾಗೂ ಚಪ್ಪಲಿ ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ಪತ್ತೆಯಾಗಿದ್ದು, ಸಂಶಯಕ್ಕೆ ಎಡೆಮಾಡಿದೆ. ಪುರುಷರಕಟ್ಟೆ ನಿವಾಸಿ ವಸಂತ ಎಂಬವರೇ ನಾಪತ್ತೆಯಾಗಿದ್ದ ವ್ಯಕಿಯಾಗಿದ್ದು, ಬುಧವಾರ ಮುಂಜಾನೆ ಮನೆಯಿಂದ ಕಾರಿನಲ್ಲಿ ಸೋಮೇಶ್ವರ ಕಡೆ ತೆರಳಿದ್ದರು. ಬೆಳಿಗ್ಗೆಯಿಂದ ಅವರ ಕಾರು ಸೋಮೇಶ್ವರದ ಸಮುದ್ರದ ಬಳಿ  ಕಂಡು ಬಂದಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಕಾರನ್ನು ಪರಿಶೀಲನೆ ನಡೆಸಿದ್ದು, ಕಾರಿನಲ್ಲಿ ಮೊಬೈಲ್, ಶೂ, ಆಧಾರ್ ಕಾಡ ಪತ್ತೆಯಾಗಿದೆ. ವಸಂತರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು

ಪುರುಷರಕಟ್ಟೆ ವ್ಯಕ್ತಿಯ ಕಾರು ಸೋಮೇಶ್ವರ ಸಮುದ್ರದ ರುದ್ರಪಾದೆಯಲ್ಲಿ ಪತ್ತೆ | ವ್ಯಕ್ತಿಗಾಗಿ ಪೊಲೀಸರಿಂದ ಶೋಧ ಕಾರ್ಯ Read More »

ದೇವಸ್ಥಾನದ ದುಡ್ಡು ಹೊಡೆದ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ | ದಿ. ಪ್ರವೀಣ್ ನೆಟ್ಟಾರು ಮನೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್

ಪುತ್ತೂರು: ದೇವಸ್ಥಾನದ ದುಡ್ಡು ಹೊಡೆದ, ಹಿಂದೂಗಳ ಮೇಲೆಯೇ ದೌರ್ಜನ್ಯ ನಡೆಸಿದ ಅರುಣ್ ಕುಮಾರ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ ಎಂದು ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರಶ್ನಿಸಿದ್ದಾರೆ. ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ನೂತನ ಮನೆಯ ಗೃಹಪ್ರವೇಶಕ್ಕೆ ಆಗಮಿಸಿ, ಮಾಧ್ಯಮದೊಂದಿಗೆ ಮಾತನಾಡಿದ ಅವರು ಅರುಣ್ ಕುಮಾರ್ ಪುತ್ತಿಲ ವಿರುದ್ಧ ಹರಿಹಾಯ್ದರು. ಹೆಣ್ಣು ಮಗಳೊಬ್ಬಳು ತನ್ನ ಕಾರಿನಡಿಗೆ ಬಿದ್ದು ಮೃತಪಟ್ಟಾಗ, ತಿರುಗಿ ನೋಡದೇ ಹೋದ ಅರುಣ್ ಪುತ್ತಿಲ ಯಾವ ಹಿಂದುತ್ವವಾದಿ. ಗೋ ಸಾಗಾಟವನ್ನು ಹಿಂದೂ

ದೇವಸ್ಥಾನದ ದುಡ್ಡು ಹೊಡೆದ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ | ದಿ. ಪ್ರವೀಣ್ ನೆಟ್ಟಾರು ಮನೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ Read More »

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಭೇಟಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಗುರುವಾರ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ದೇವಸ್ಥಾನದ ಅರ್ಚಕರು ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಭೇಟಿ Read More »

ಧರ್ಮಕ್ಕೆ ಅವಿನಾಶಿ ಗುಣವಿದೆ : ಯಶಸ್ವಿ

ಪುತ್ತೂರು: ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನುರಕ್ಷಿಸುತ್ತದೆ. ಧರ್ಮವೆನ್ನುವುದು ಸತ್ಯ, ಸತ್ಯಕ್ಕೆ ಹೇಗೆ ಸಾವಿಲ್ಲವೋ ಹಾಗೆಯೇ ಧರ್ಮಕ್ಕೆ ಸಾವಿಲ್ಲ. ಧರ್ಮಕ್ಕೆ ಅವಿನಾಶಿ ಗುಣವಿದೆ. ಪೂರ್ವಜರಿಂದ ಬಂದಂತಹ ಆಚಾರ ವಿಚಾರಗಳನ್ನು ಒಪ್ಪಿಕೊಳ್ಳಬೇಕಾದರೆ ನಮ್ಮ ಧರ್ಮದ ಶ್ರೇಷ್ಠತೆಯನ್ನು ಅರಿತುಕೊಳ್ಳಬೇಕು. ಹಿಂದೂ ಧರ್ಮವು  ಸಮರವನ್ನು ಸಾರುವ ಧರ್ಮವಲ್ಲಅದು ಶಾಂತಿಯನ್ನು ಸಾರುವ ಧರ್ಮ. ಹಿಂದೂ ಧರ್ಮ. ಶಾಂತಿ, ಸಹನೆ, ತ್ಯಾಗ ಇರುವುದೇ ಹಿಂದೂ ಧರ್ಮದಲ್ಲಿ. ಸಂಸ್ಕೃತಿಯ ನಿಟ್ಟಿನಲ್ಲಿ ನಮ್ಮ ಹಿಂದೂ ಧರ್ಮ ಸೃಷಿಗೊಂಡಿದೆ ಎಂದು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿ ಹೇಳಿದರು. ವಿವೇಕಾನಂದ ಕಲಾ,

ಧರ್ಮಕ್ಕೆ ಅವಿನಾಶಿ ಗುಣವಿದೆ : ಯಶಸ್ವಿ Read More »

error: Content is protected !!
Scroll to Top