ಆಶಾ ತಿಮ್ಮಪ್ಪ ಪರ ಅಣ್ಣಾಮಲೈ ಮತಯಾಚನೆ | ಅರಿಯಡ್ಕ, ಕೊಳ್ತಿಗೆ, ಮಾಡ್ನೂರು, ನೆಟ್ಟಣಿಗೆ ಮುಡ್ನೂರು ಪ್ರದೇಶದಲ್ಲಿ ಮತಯಾಚನೆ | ಜನಮಂಗಲ ಸಭಾಂಗಣದಲ್ಲಿ ಮತದಾರರ ಸಭೆ
ಪುತ್ತೂರು: ಕರ್ನಾಟಕ ರಾಜ್ಯ ಚುನಾವಣಾ ಸಹಪ್ರಭಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಶನಿವಾರ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರವಾಗಿ ಅರಿಯಡ್ಕ, ಕೊಳ್ತಿಗೆ, ಮಾಡ್ನೂರು, ನೆಟ್ಟಣಿಗೆ ಮುಡ್ನೂರು ಪ್ರದೇಶದಲ್ಲಿ ಮತಯಾಚನೆ ನಡೆಸಿದರು. ಬಳಿಕ ಜನಮಂಗಲ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಪರ ಕಾರ್ಯಕ್ರಮಗಳು ನಡೆದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಿಯೂ ಭಾರತದ ಹೆಮ್ಮೆಯನ್ನು ಅಲ್ಲೂ ಪಸರಿಸುವಲ್ಲಿ ಯಶಸ್ವಿಯಾಗಿದ್ದೇವೆ. […]










