ಪರಿವರ್ತಕ ಬದಲು : ಸಚಿವ ಅಂಗಾರ, ಮೆಸ್ಕಾಂ ನಿರ್ದೇಶಕ ಕಿಶೋರ್ ಬೊಟ್ಯಾಡಿಗೆ ಪ್ರಶಂಸೆ

ಸವಣೂರು: ಕೆಟ್ಟು ನಿಂತಿದ್ದ ಸವಣೂರು ವಿದ್ಯುತ್ ಸಬ್ ಸ್ಟೇಷನಿನ 33/11 ಕೆವಿ ಪರಿವರ್ತಕವನ್ನು ಬದಲಿಸಿ, ಹೊಸ ಟ್ರಾನ್ಸ್‍ಫಾರ್ಮರ್ ಅಳವಡಿಸುವ ಕಾರ್ಯದ ನಂತರ ವಿದ್ಯುತ್ ಸರಬರಾಜು ಸರಾಗವಾಗಿ ನಡೆಯುತ್ತಿದೆ. ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಶಾಸಕ, ಸಚಿವ ಎಸ್. ಅಂಗಾರ, ಮೆಸ್ಕಾಂ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿ, ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಾತುಗಳು ವ್ಯಕ್ತವಾಗಿದೆ. ಕಳೆದ ಕೆಲ ದಿನಗಳಿಂದ ಟ್ರಾನ್ಸ್‍ಫಾರ್ಮರ್ ಕೆಟ್ಟು ಹೋಗಿತ್ತು. ಇದನ್ನು ಶಾಸಕ, ಮೆಸ್ಕಾಂ ನಿರ್ದೇಶಕರ ಗಮನಕ್ಕೆ ತಂದಾಗ, ತಕ್ಷಣವೇ ಸ್ಪಂದನೆ ನೀಡಿದ್ದಾರೆ. […]

ಪರಿವರ್ತಕ ಬದಲು : ಸಚಿವ ಅಂಗಾರ, ಮೆಸ್ಕಾಂ ನಿರ್ದೇಶಕ ಕಿಶೋರ್ ಬೊಟ್ಯಾಡಿಗೆ ಪ್ರಶಂಸೆ Read More »

ಮಾ.16 ರಿಂದ 20 : ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಪುತ್ತೂರು : ಬಡಗನ್ನೂರು ಗ್ರಾಮದ ದೇಯಿಬೈದೈತಿ – ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮಾ.16 ರಿಂದ 20 ರ ತನಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಹೋತ್ಸವದ ಅಂಗವಾಗಿ ಮಾ.16 ಗುರುವಾರ ಸಂಜೆ 5.30 ರಿಂದ ಸ್ವಸ್ತಿ ಪುಣ್ಯಾಹ ಸ್ಥಳ ಶುದ್ಧಿ, ಸಾಮೂಹಿಕ ಪ್ರಾರ್ಥನೆ, ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ, ರಾತ್ರಿ 7 ರಿಂದ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ನಾಳ

ಮಾ.16 ರಿಂದ 20 : ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ Read More »

ಪ್ರಧಾನಿ ಮೋದಿಗೆ ನೋಬೆಲ್‌ ಶಾಂತಿ ಪ್ರಶಸ್ತಿ…?

ಚರ್ಚೆಗೆ ಗ್ರಾಸವಾದ ನೋಬೆಲ್‌ ಕಮಿಟಿಯ ವೈಸ್‌ ಚೇರ್‌ ಆಗಿರುವ ಅಸ್ಲೆ ಟೋಜೆ ಹೇಳಿಕೆ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪ್ರತಿಷ್ಠಿತ ನೋಬೆಲ್‌ ಪ್ರಶಸ್ತಿ ಸಿಗಲಿದೆಯೇ? ಹೀಗೊಂದು ಪ್ರಶ್ನೆ ಈಗ ತೀವ್ರ ಚರ್ಚೆಗೆ ಒಳಪಟ್ಟಿದೆ. ಈ ಚರ್ಚೆ ಹುಟ್ಟು ಹಾಕಿದ್ದು ನೋಬೆಲ್‌ ಕಮಿಟಿಯ ವೈಸ್‌ ಚೇರ್‌ ಆಗಿರುವ ಅಸ್ಲೆ ಟೋಜೆ ಮಾಡಿರುವ ಒಂದು ಟ್ವೀಟ್‌. ಜಾಗತಿಕವಾಗಿ ಮೋದಿಯವರ ಜನಪ್ರಿಯತೆ ಹೆಚ್ಚಾಗುತ್ತಿದೆ. ರಷ್ಯಾ-ಯುಕ್ರೇನ್‌ ಸಮರ, ಜಾಗತಿಕ ಬಿಕ್ಕಟ್ಟುಗಳ ವಿಚಾರದಲ್ಲಿ ಪ್ರಧಾನಿ ಮೋದಿಯವರ ನಿಲುವು ಮತ್ತು ಮಾತುಗಳು ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲಿ

ಪ್ರಧಾನಿ ಮೋದಿಗೆ ನೋಬೆಲ್‌ ಶಾಂತಿ ಪ್ರಶಸ್ತಿ…? Read More »

ತಾಯಿಯನ್ನು ಕೊಂದು ಹೆಣವನ್ನು 3 ತಿಂಗಳು ಮನೆಯಲ್ಲಿಟ್ಟುಕೊಂಡ ಮಗಳು

ವಾಸನೆ ತಡೆಯಲು 500 ಬಾಟಲಿ ಸೆಂಟ್‌ ಚಿಮುಕಿಸಿದ್ದಳು ಮುಂಬಯಿ : ಮಗಳೇ ತಾಯಿಯನ್ನು ಕೊಂದು ಹೆಣವನ್ನು ಮೂರು ತಿಂಗಳು ಮನೆಯಲ್ಲಿಟ್ಟುಕೊಂಡ ಅಮಾನವೀಯ ಘಟನೆಯೊಂದು ಮುಂಬಯಿಯಲ್ಲಿ ಸಂಭವಿಸಿದೆ. ಮುಂಬಯಿಯ ಲಾಲ್‌ಬಾಗ್‌ನ ರಿಂಪಲ್‌ ಜೈನ್‌ (24) ಈ ಪಾಪಿ ಮಗಳು. ಕಳೆದ ಡಿಸೆಂಬರ್‌ನಲ್ಲಿ ಆಕೆ ತಾಯಿ ಬೀನಾ ಜೈನ್‌ರನ್ನು (55) ಕೊಲೆ ಮಾಡಿದ್ದಳು. ಬಳಿಕ ಶವವನ್ನು ಹಲವಾರು ತುಂಡು ಮಾಡಿ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿ ಮನೆಯೊಳಗಿಟ್ಟಿದ್ದಳು. ಬುಧವಾರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿಟ್ಟಿದ್ದ ಹೆಣ ಪೊಲೀಸರು ತಪಾಸಣೆ

ತಾಯಿಯನ್ನು ಕೊಂದು ಹೆಣವನ್ನು 3 ತಿಂಗಳು ಮನೆಯಲ್ಲಿಟ್ಟುಕೊಂಡ ಮಗಳು Read More »

ತಲೆಮರೆಸಿಕೊಂಡಿದ್ದ 8 ಕುಖ್ಯಾತ ಆರೋಪಿಗಳ ಬಂಧನ: ಸಿಸಿಬಿ ಪೊಲೀಸರ ಕಾರ್ಯಾಚರಣೆ

ಮಂಗಳೂರು : ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಎಂಟು ಆರೋಪಿಗಳನ್ನು ಮಂಗಳೂರು ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕಾವೂರಿನ ರಾಜಾ ಅಲಿಯಾಸ್ ರೋಹನ್ ರೆಡ್ಡಿ , ಪಡೀಲ್-ಕಣ್ಣೂರಿನ ಪ್ರಕಾಶ್ ಶೆಟ್ಟಿ, ಕೃಷ್ಣಾಪುರದ ನಿಸ್ಸಾರ್ ಹುಸೇನ್, ಕಸಬಾ ಬೆಂಗ್ರೆಯ ಕಬೀರ್, ಅಚ್ಯುತ್ ಮತ್ತು ಕಾವೂರಿನ ರಿಜ್ವಾನ್ ಬಂಧಿತರಲ್ಲಿ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಂಟು ಆರೋಪಿಗಳ ಪೈಕಿ ರೆಡ್ಡಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಅಲ್ಲಿ ನಕಲಿ ಗುರುತಿನಡಿಯಲ್ಲಿ ವಾಸಿಸುತ್ತಿದ್ದನು.ಈತ 2013ರಲ್ಲಿ ಬಸ್ ಚಾಲಕನ ಕೊಲೆ ಪ್ರಕರಣದ

ತಲೆಮರೆಸಿಕೊಂಡಿದ್ದ 8 ಕುಖ್ಯಾತ ಆರೋಪಿಗಳ ಬಂಧನ: ಸಿಸಿಬಿ ಪೊಲೀಸರ ಕಾರ್ಯಾಚರಣೆ Read More »

5 ಮತ್ತು 8ನೇ ತರಗತಿಗೆ ಬೋರ್ಡ್‌ ಪರೀಕ್ಷೆ ನಡೆಸಲು ಹೈಕೋರ್ಟ್‌ ಅನುಮತಿ

ಮಾ.27 ರಿಂದ ಪರೀಕ್ಷೆ- ಫಲಿತಾಂಶ ಬಹಿರಂಗಪಡಿಸುವಂತಿಲ್ಲ ಬೆಂಗಳೂರು : 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್‌ ವಿಭಾಗೀಯ ಪೀಠ ಅನುಮತಿ ನೀಡಿದೆ. 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ರದ್ದುಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. 10 ದಿನಗಳ ಬಳಿಕ ಮಾ.27 ರಿಂದ ಪರೀಕ್ಷೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದ್ದು, ಪಠ್ಯಕ್ರಮ ಬಿಟ್ಟು ಬೇರೆ ಪ್ರಶ್ನೆ ಕೇಳವಂತಿಲ್ಲ ಫಲಿತಾಂಶವನ್ನು ಸಾರ್ವಜನಿಕವಾಗಿ

5 ಮತ್ತು 8ನೇ ತರಗತಿಗೆ ಬೋರ್ಡ್‌ ಪರೀಕ್ಷೆ ನಡೆಸಲು ಹೈಕೋರ್ಟ್‌ ಅನುಮತಿ Read More »

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗೆ ಬೆಸ್ಟ್ ಬ್ಯಾಂಕ್ ಬ್ಯುಸಿನೆಸ್ ಅವಾರ್ಡ್-2023

ಪುತ್ತೂರು: ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯವರು ನಡೆಸಿದ ಟೈಮ್ಸ್ ಬ್ಯುಸಿನೆಸ್ ಆವಾರ್ಡ್ಸ್ ಮೈಸೂರು 2023 ಇದರಲ್ಲಿ ಬೆಸ್ಟ್ ಬ್ಯಾಂಕರ್ ಇನ್ ರೂರಲ್ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ಟೈಮ್ಸ್ ಬೆಸ್ಟ್ ಬ್ಯಾಂಕ್ ಬ್ಯುಸಿನೆಸ್ ಆವಾರ್ಡ್ ಲಭಿಸಿದೆ. ಮೈಸೂರು ಸೈಲೆಂಟ್ ಸ್ಪಾದಲ್ಲಿ ಮಾ.14 ರಂದು ನಡೆದ ಟೈಮ್ಸ್ ಬ್ಯುಸಿನೆಸ್ ಆವಾರ್ಡ್ 2023 ಸಮಾರಂಭದಲ್ಲಿ ಖ್ಯಾತ ತೆಲುಗು ಚಿತ್ರನಟಿ ರಾಶಿ ಸಿನ್ಹಾರವರು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟುರವರಿಗೆ ಬೆಸ್ಟ್ ಬ್ಯಾಂಕ್ ಆವಾರ್ಡ್ ವಿತರಿಸಿದರು. ಸಮೀಕ್ಷೆಯಲ್ಲಿ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗೆ ಬೆಸ್ಟ್ ಬ್ಯಾಂಕ್ ಬ್ಯುಸಿನೆಸ್ ಅವಾರ್ಡ್-2023 Read More »

ವಿಶ್ವಸಂಸ್ಥೆಯಲ್ಲಿ ವಿಶೇಷ ಭಾಷಣ ಮಾಡಲು ಕಾಂತಾರದ ರಿಷಬ್‌ಗೆ ಆಹ್ವಾನ

ಕನ್ನಡದಲ್ಲೇ ಮಾತನಾಡಿ ಕಾಡಂಚಿನ ಜನರ ಸಮಸ್ಯೆಗಳ ಬಗ್ಗೆ ವಿಶ್ವದ ಗಮನ ಸೆಳೆಯಲಿರುವ ರಿಷಬ್‌ ಬೆಂಗಳೂರು : ಕಾಂತಾರದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಕನ್ನಡದಲ್ಲಿ ಭಾಷಣ ಮಾಡಲಿದ್ದಾರೆ. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷಣ ಮಾಡಲಿರುವ ಮೊದಲ ಕನ್ನಡಿಗ ಎನ್ನಿಸಿಕೊಳ್ಳಲಿದ್ದಾರೆ. ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದು, ವಿಶ್ವದ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ಪ್ರಚಲಿತ ಸಾಮಾನ್ಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಇದರಲ್ಲಿ ಮಾತನಾಡಲು ರಿಷಬ್‌ ಶೆಟ್ಟಿ ಆಯ್ಕೆಯಾಗಿದ್ದು,

ವಿಶ್ವಸಂಸ್ಥೆಯಲ್ಲಿ ವಿಶೇಷ ಭಾಷಣ ಮಾಡಲು ಕಾಂತಾರದ ರಿಷಬ್‌ಗೆ ಆಹ್ವಾನ Read More »

ಮಹಾ ವಿಜ್ಞಾನಿಯಾದರೂ ಆತ ಬದುಕಿದ್ದು ಅಲೆಮಾರಿಯ ಹಾಗೆ

ಭಾರತದ ಗೆಳೆಯ ಈ ಮಹಾನ್ ಜ್ಞಾನಿ ಮಹಾ ವಿಜ್ಞಾನಿಯಾದ ಆಲ್ಬರ್ಟ್ ಐನಸ್ಟೀನ್ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ.ಆತನ ಮಹಾನ್ ಸಂಶೋಧನೆಗಳು, ಜೀವನೋತ್ಸಾಹ, ಹಾಸ್ಯ ಪ್ರಜ್ಞೆ, ಜಗತ್ತನ್ನು ಪ್ರೀತಿಸಿದ ರೀತಿ… ಇವುಗಳನ್ನು ಗಮನಿಸುತ್ತ ಹೋದಾಗ ನಮಗೆ ಆತನು ದೊಡ್ಡ ಅಚ್ಚರಿಯ ಮೂಟೆಯಾಗಿ ಗೋಚರಿಸುತ್ತಾರೆ. ಆತನ ಒಂದೊಂದು ಸಂಶೋಧನೆ ಕೂಡ ವಿಶ್ವಮಾನ್ಯತೆಯನ್ನು ಪಡೆದವು. ಒಂದೇ ವರ್ಷದಲ್ಲಿ ನಾಲ್ಕು ಮಹಾ ಸಂಶೋಧನೆಗಳು ಜರ್ಮನ್ ಮೂಲದ ಈ ಯುವ ವಿಜ್ಞಾನಿ ಒಂದೇ ವರ್ಷದಲ್ಲಿ (1905) ವಿಜ್ಞಾನದ ಜಗತ್ತನ್ನು ನಡುಗಿಸುವ ನಾಲ್ಕು ಮಹತ್ವದ

ಮಹಾ ವಿಜ್ಞಾನಿಯಾದರೂ ಆತ ಬದುಕಿದ್ದು ಅಲೆಮಾರಿಯ ಹಾಗೆ Read More »

ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿದಲ್ಲಿ ಜೈಲಿಗೆ ಹಾಕಲಿ : ಬಿ.ಕೆ. ಹರಿಪ್ರಸಾದ್ ಸವಾಲು

ಪುತ್ತೂರು: . ಕಾಂಗ್ರೆಸ್ ಭ್ರಷ್ಠಾಚಾರ ನಡೆಸಿದ್ದೇ ಆದರೆ ಜೈಲಿಗೆ ಹಾಕಲಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ  ಮುರ ಗೌಡ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್‌ನ ಕರಾವಳಿಯ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗವುದು. ಬಿಜೆಪಿ ಜನಸಾಮಾನ್ಯರ ಜೀವನ ಸುಧಾರಣೆ ಮಾಡದೇ ಲೂಟಿ ಮಾಡಿರುವುದು ಮಾತ್ರ ಅವರ ಸಾಧನೆಯಾಗಿದೆ. ಬಿಜೆಪಿಯವರು ಸಮಾಜಕ್ಕೆ, ಕುಟುಂಬಕ್ಕೆ ಪೂರಕವಾದ ಯಾವುದೇ

ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿದಲ್ಲಿ ಜೈಲಿಗೆ ಹಾಕಲಿ : ಬಿ.ಕೆ. ಹರಿಪ್ರಸಾದ್ ಸವಾಲು Read More »

error: Content is protected !!
Scroll to Top