ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಗೂ ನ್ಯಾಯಕೊಡಿಸುತ್ತೇನೆ : ಅಶೋಕ್ ಕುಮಾರ್ ರೈ| ಈಶ್ವರಮಂಗಲದಲ್ಲಿ ರೋಡ್ ಶೋ

ಪುತ್ತೂರು: ಬಡವರ ಸೇವೆ ಮಾಡಬೇಕು, ಅನ್ಯಾಯಕ್ಕೊಳಗಾದವರಿಗೆ ನ್ಯಾಯಕೊಡಿಸಬೇಕು, ನೊಂದವರಿಗೆ ಸಾಂತ್ವನ ಹೇಳಬೇಕು, ಕಷ್ಟದಲ್ಲಿರುವವರಿಗೆ ನೆರವಾಗಬೇಕು ಮತ್ತು ಪುತ್ತೂರು ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಗೂ ನ್ಯಾಯ ಕೊಡಿಸುವೆ ನನ್ನನ್ನು ಗೆಲ್ಲಿಸಿಕೊಡಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಮನವಿ ಮಾಡಿದರು. ಈಶ್ವರಮಂಗಲದಿಂದ ಗಾಳಿಮುಖ ತನಕ ನಡೆದ ಬೃಹತ್ ರೋಡ್‌ಶೋ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಅಶೋಕ್ ರೈಗೆ ಹಣ ಮಾಡಬೇಕೆಂಬ ಆಸೆಯೇ ಇಲ್ಲ, ನನಗೆ ದೇವರು ಕೊಟ್ಟಿದ್ದಾನೆ, […]

ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಗೂ ನ್ಯಾಯಕೊಡಿಸುತ್ತೇನೆ : ಅಶೋಕ್ ಕುಮಾರ್ ರೈ| ಈಶ್ವರಮಂಗಲದಲ್ಲಿ ರೋಡ್ ಶೋ Read More »

ಆಮ್ ಆದ್ಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಉಪೇಂದ್ರ ಗಾಂವ್ಕರ್ ಪುತ್ತೂರಿಗೆ ಭೇಟಿ

ಪುತ್ತೂರು: ಗೋವಾ ಆಮ್ ಆದ್ಮಿ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಕರ್ನಾಟಕದ ವಿಧಾನ ಸಭಾ ಚುನಾವಣಾ ಆಮ್ ಆದ್ಮಿ ಪಕ್ಷದ ವೀಕ್ಷಕ ಉಪೇಂದ್ರ ಗಾಂವ್ಕರ್ ಪುತ್ತೂರಿಗೆ ಭೇಟಿ ನೀಡಿದರು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ  ಡಾ. ಬಿ.ಕೆ. ವಿಷುಕುಮಾರ್ ಗೌಡ ಮತ್ತು ಪಕ್ಷದ ಮುಖಂಡರ ಜೊತೆ ಚುನಾವಣಾ ಪ್ರಚಾರ ಮತ್ತು ಮತಗಳಿಸುವ ಕಾರ್ಯ ತಂತ್ರಗಳ  ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.. ಈ  ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಪುರುಶೋತ್ತಮ ಗೌಡ ಕೋಲ್ಪೆ, ಜನಾರ್ದನ ಬಂಗೇರ, ಮಹಮ್ಮದ್ ಆಲಿ ಉಪಸ್ಥಿತರಿದ್ದರು.

ಆಮ್ ಆದ್ಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಉಪೇಂದ್ರ ಗಾಂವ್ಕರ್ ಪುತ್ತೂರಿಗೆ ಭೇಟಿ Read More »

ನಾಳೆ (ಮೇ 6) : ಯೋಗಿ ಆದಿತ್ಯನಾಥ್ ಪುತ್ತೂರಿಗೆ ಭೇಟಿ | ವಾಹನ ಸಂಚಾರದಲ್ಲಿ ಬದಲಾವಣೆ

ಪುತ್ತೂರು: ಮೇ 6 ರಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಭೇಟಿ ನೀಡಿ ರೋಡ್ ಶೋ ನಡೆಸುವ ಹಿನ್ನಲೆಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ವಾಹನಗಳ ಸುಗಮ ಸಂಚಾರ ಮಾಡಿಕೊಡುವ ಹಿನ್ನಲೆಯಲ್ಲಿ ದ.ಕ.ಜಿಲ್ಲಾಧಿಕಾರಿಗಳು ಈ ಆದೇಶ ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಅಂಚೆ ಕಚೇರಿ ಬಳಿಯಿಂದ ಬಸ್ ನಿಲ್ದಾಣಕ್ಕೆ ಬಳಿ ತೆರಳಿ ಅಲ್ಲಿಂದ ಕೋರ್ಟ್ ರಸ್ತೆಯಾಗಿ ರೋಡ್ ಶೋ ಮಾಡಲಿದ್ದು, ಕಿಲ್ಲೆ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವರು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ನಾಳೆ (ಮೇ 6) : ಯೋಗಿ ಆದಿತ್ಯನಾಥ್ ಪುತ್ತೂರಿಗೆ ಭೇಟಿ | ವಾಹನ ಸಂಚಾರದಲ್ಲಿ ಬದಲಾವಣೆ Read More »

ರಾಷ್ಟ್ರ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ “ಜ್ಞಾನ ಸಂಗಮ-2023”ಕ್ಕೆ ಚಾಲನೆ

ಪುತ್ತೂರು: ಪಠ್ಯದ ಜತೆಗೆ ಪ್ರಾಯೋಗಿಕ ವಿಚಾರಗಳಿಗೆ ಸಮಾನ ಅವಕಾಶವನ್ನು ನೀಡಿದಾಗ ಮಾತ್ರ ಕಲಿಕೆ ಪೂರ್ಣವಾಗುತ್ತದೆ, ಸವಾಲನ್ನು ಸಮರ್ಥವಾಗಿ ಎದುರಿಸುವುದಕ್ಕೆ ಸಹಕಾರಿಯಾಗುತ್ತದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ರವೀಶ್.ಪಿ ಹೇಳಿದರು. ಅವರು ಶುಕ್ರವಾರ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ಭಾರತೀಯ ತಾಂತ್ರಿಕ ಶಿಕ್ಷಣ ಸಂಘ ನವದೆಹಲಿ, ವಿವೇಕಾನಂದ ಸಂಶೋಧನಾ ಕೇಂದ್ರ ಪುತ್ತೂರು ಮತ್ತು ಐಇಇಇ ವಿಸಿಇಟಿ ವಿದ್ಯಾರ್ಥಿ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ

ರಾಷ್ಟ್ರ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ “ಜ್ಞಾನ ಸಂಗಮ-2023”ಕ್ಕೆ ಚಾಲನೆ Read More »

ಕೇವಲ  40% ಕಮಿಷನ್ ಗಾಗಿ ರಸ್ತೆಗಳನ್ನು ಮಾಡಿ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ | ದಿವ್ಯಪ್ರಭಾ ಗೌಡ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ ಬನ್ನೂರು, ಕೇಪುಲು, ತಾರಿ ಗುಡ್ಡೆ ಹಾಗೂ ಕೃಷ್ಣಾನಗರ ವಾರ್ಡ್ ಗಳಲ್ಲಿ ಇಂದು ಸಾರ್ವಜನಿಕ ಭಾಷಣ ನಡೆಸಿ ಮತ ಯಾಚಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ದಿವ್ಯ ಪ್ರಭಾ, ಪುತ್ತೂರು ಕ್ಷೇತ್ರದಲ್ಲಿ ಈಗ ಬಿಜೆಪಿ vs ಜೆಡಿಎಸ್ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಯಾಕೆಂದರೆ ಕಾಂಗ್ರೆಸ್ನಲ್ಲಿ ಇರುವ ಅಭ್ಯರ್ಥಿ ಬಿಜೆಪಿಯಿಂದ ಬಂದವರು ಹಾಗೇಯೇ ಪಕ್ಷೇತರ ಅಭ್ಯರ್ಥಿ ಕೂಡ ಬಿಜೆಪಿಯವರು ಎಂದು ಲೇವಡಿ ಮಾಡಿದರು. ನಗರದ ವಾರ್ಡ್ ಗಳಿಗೆ ಶಾಸಕರು ಕೋಟಿ ಕೋಟಿ

ಕೇವಲ  40% ಕಮಿಷನ್ ಗಾಗಿ ರಸ್ತೆಗಳನ್ನು ಮಾಡಿ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ | ದಿವ್ಯಪ್ರಭಾ ಗೌಡ Read More »

ಬಿಜೆಪಿ ಅಭ್ಯರ್ಥಿ ಪರ ಎರಡನೇ ಸುತ್ತಿನ  ಮತ ಯಾಚನೆ | ಮನೆ ಮನೆ ಭೇಟಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಎರಡನೇ  ಸುತ್ತಿನ ಮತಪ್ರಚಾರ ಕಾರ್ಯ ಶುಕ್ರವಾರ ಬಿರುಸಿನಿಂದ ಆರಂಭಗೊಂಡಿದೆ. ಶುಕ್ರವಾರ ಏಕಕಾಲದಲ್ಲಿ 220 ಬೂತ್‍ಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಯಾಚನೆ ಕಾರ್ಯ ನಡೆಸಲಾಯಿತು. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಇರ್ದೆ ಗ್ರಾಮದ ಗೋಳಿ ಪದವಿನಲ್ಲಿ ಮನೆ ಮನೆ ಭೇಟಿ ನೀಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಅಭ್ಯರ್ಥಿ ಪರ ಎರಡನೇ ಸುತ್ತಿನ  ಮತ ಯಾಚನೆ | ಮನೆ ಮನೆ ಭೇಟಿ Read More »

ಬಿಸಿಲಿನ ಧಗೆಯಿಂದ  ಧಗಿಸುತ್ತಿದ್ದ ಭೂಮಿಗೆ ತಂಪೆರೆದ ಮಳೆ

ಪುತ್ತೂರು: ಹಲವಾರು ಸಮಯದ ನಿರೀಕ್ಷೆಯಲ್ಲಿದ್ದ ಪುತ್ತೂರಿನ ಜನತೆಗೆ ಇದೀಗ ವರುಣ ರಾಯ ಮಳೆಯ ಕೃಪೆ ತೋರಿದ್ದಾನೆ. ಕಳೆದ ಸೋಮವಾರ ಪುತ್ತೂರಿನ ಒಡೆಯ ಮಹಾಲಿಂಗೇಶ್ವರ ದೇವರಿಗೆ ಮಳೆಗಾಗಿ ಸೀಯಾಳಭಿಷೇಕ ಮಾಡಲಾಗಿತ್ತು ಅದರ ಫಲವೆಂಬತೆ ಇಂದು ಈಗ ಮಳೆಯಾಗುತ್ತಿದೆ. ಶುಕ್ರವಾರ ಮಧ್ಯಾಹ್ನ ಮಳೆಯಾಗುವ ಮೂಲಕ ಬಿಸಿಲಿನ ಬೆಗೆಯಿಂದ ಧಗಿಸುತ್ತಿದ್ದ ಭೂಮಿಗೆ ತಂಪಿನ ಸಿಂಚನ ಉಂಟಾಯಿತು.

ಬಿಸಿಲಿನ ಧಗೆಯಿಂದ  ಧಗಿಸುತ್ತಿದ್ದ ಭೂಮಿಗೆ ತಂಪೆರೆದ ಮಳೆ Read More »

ಪಕ್ಷೇತರ ಅಭ್ಯರ್ಥಿ ತಾರಾ ಪ್ರಚಾರಕರನ್ನು ಬಳಸಿ ಜಾಹೀರಾತು ನೀಡಿಕೆ : ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗೆ ದೂರು

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರು ಬಿಜೆಪಿ ತಾರಾ ಪ್ರಚಾರಕರನ್ನು  ಬಳಸಿಕೊಂಡು ಕಾನೂನು ಬಾಹಿರ ಪ್ರಚಾರ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದು, ಈ ಕುರಿತು ಬಿಜೆಪಿ ಅಭ್ಯರ್ಥಿ ಏಜೆಂಟ್ ರಾಜೇಶ್ ಬನ್ನೂರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಈಗಾಗಲೇ ತಾರಾ ಪ್ರಚಾರಕರನ್ನು ಬಳಸಿಕೊಳ್ಳುತ್ತಿರುವ ಕುರಿತು  ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದು, ಮೇ.6 ರಂದು ಯೋಗಿ ಆದಿತ್ಯನಾಥ ಪುತ್ತೂರಿಗೆ ಆಗಮಿಸಲಿದ್ದು, ಅವರಿಗೆ ಸ್ವಾಗತಿಸುವ ಜಾಹೀರಾತು ನೀಡಿರುವುದು ನಮ್ಮ ಗಮನಕ್ಕೆ ಬಂದಿದ್ದು ಚುನಾವಣಾ

ಪಕ್ಷೇತರ ಅಭ್ಯರ್ಥಿ ತಾರಾ ಪ್ರಚಾರಕರನ್ನು ಬಳಸಿ ಜಾಹೀರಾತು ನೀಡಿಕೆ : ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗೆ ದೂರು Read More »

ಗೂಂಡಾಗಳು ಜನಪ್ರತಿನಿಧಿಯಾಗಿ ಆಯ್ಕೆಯಾಗದಂತೆ ಪ್ರಜ್ಞಾವಂತ ಮತದಾರರು ಚಿಂತಿಸಬೇಕಾಗಿದೆ : ರವೀಂದ್ರ

ಪುತ್ತೂರು: ದೈವಸ್ಥಾನದ ಹೆಸರು ಹೇಳಿ ಅಮಾಯಕರ ಮೇಲೆ ಹಲ್ಲೆ ಹಿಂದುತ್ವವೇ ? ಹೆಣ್ಣು ಮಕ್ಕಳ ಮೇಲ ಕೊಲೆ ಯತ್ನ ನಡೆಸಿರುವುದು ಹಿಂದುತ್ವ ಆಧಾರದ ಮಹಿಳೆಯರ ರಕ್ಷಣೆಯೇ ? ಇಂತಹಾ ಗೂಂಡಾ ವ್ಯಕ್ತಿಗಳು ಜನಪ್ರತಿನಿಧಿಯಾಗಿ ಆಯ್ಕೆಯಾಗದಂತೆ ಪ್ರಜ್ಞಾವಂತ ಮತದಾರರು ಚಿಂತಿಸಬೇಕಾಗಿದೆ ಎಂದು ಮುಂಡೂರು ಗ್ರಾಮದ ಮುಳಾರು ನಿವಾಸಿ ರವೀಂದ್ರ ಅವರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಅವರ ಮೇಲೆ ಕಿಡಿ ಕಾರಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಕೃಷಿಕನಾಗಿದ್ದು, ಮುಂಡೂರು ಉದಯಗಿರಿ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯುವ

ಗೂಂಡಾಗಳು ಜನಪ್ರತಿನಿಧಿಯಾಗಿ ಆಯ್ಕೆಯಾಗದಂತೆ ಪ್ರಜ್ಞಾವಂತ ಮತದಾರರು ಚಿಂತಿಸಬೇಕಾಗಿದೆ : ರವೀಂದ್ರ Read More »

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕುಂಬ್ರ ದಲಿತ ಕಾಲನಿಗೆ ಭೇಟಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಒಳಮೊಗ್ರು ಗ್ರಾಮದ ಕುಂಬ್ರ ಶಾಲಾ ಬಳಿಯ ದಲಿತ ಕಾಲನಿಗೆ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕಾಲನಿ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಕ್ತಾರ ಅಮಲ ರಾಮಚಂದ್ರ, ಮುಖಂಡರು, ಕಾರ್ಯಕರ್ತರು, ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕುಂಬ್ರ ದಲಿತ ಕಾಲನಿಗೆ ಭೇಟಿ Read More »

error: Content is protected !!
Scroll to Top