ಬೀಗ ಮುರಿದು ಒಳಪ್ರವೇಶಿಸಿದ ಅಧಿಕಾರಿಗಳು?! ಮತ ಎಣಿಕೆ ಆರಂಭ | ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ

ಪುತ್ತೂರು: ಮತಗಟ್ಟೆ ಕೊಠಡಿಯ ಬೀಗ ಮರೆತು ಬಂದದ್ದರಿಂದ ಮತಗಟ್ಟೆ ಕೊಠಡಿಯ ಬೀಗವನ್ನು ಒಡೆದು ಒಳಪ್ರವೇಶಿಸಿದ ವಿಲಕ್ಷಣ ಘಟನೆಗೆ ಮಂಗಳೂರು ಸಾಕ್ಷಿಯಾಯಿತು ಎಂದು ತಿಳಿದುಬಂದಿದೆ. ಬಳಿಕ ನಡೆದ ಅಂಚೆ ಮತ ಎಣಿಕೆಯಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುರತ್ಕಲ್ ಎನ್.ಐ.ಟಿ.ಕೆ. ಆವರಣದಲ್ಲಿ ನಡೆಯುತ್ತಿರುವ ಮತ ಎಣಿಕೆಗಾಗಿ ಎಲ್ಲರೂ ಬಂದು ಸೇರಿದ್ದರು. ಅಷ್ಟರಲ್ಲಿ ಅಧಿಕಾರಿಯೋರ್ವರು ಕೀ ಮರೆತು ಬಂದಿರುವುದು ಬೆಳಕಿಗೆ ಬಂದಿತು. ಪುನಃ ಹಿಂದಿರುಗಿ ಕೀ ತರುವಷ್ಟು ಸಮಯ ಇಲ್ಲದೇ ಇರುವುದರಿಂದ ಬಾಗಿಲಿನ […]

ಬೀಗ ಮುರಿದು ಒಳಪ್ರವೇಶಿಸಿದ ಅಧಿಕಾರಿಗಳು?! ಮತ ಎಣಿಕೆ ಆರಂಭ | ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ Read More »

ಕೆಲ ನಿಮಿಷಗಳಲ್ಲೇ ಮತ ಎಣಿಕೆ | ಎನ್.ಐ.ಟಿ.ಕೆ. ಆವರಣ ಹೀಗಿದೆ

ಪುತ್ತೂರು: ರಾಜ್ಯದ 36 ಮತ ಎಣಿಕೆ ಕೇಂದ್ರಗಳಲ್ಲಿ ಒಂದಾದ ಮಂಗಳೂರಿನ ಸುರತ್ಕಲ್ ಎನ್.ಐ.ಟಿ.ಕೆ. ಆವರಣ ಮತ ಎಣಿಕೆಗೆ ತಯಾರಾಗುತ್ತಿದೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಮತ ಎಣಿಕೆ ಆರಂಭವಾಗಲಿದ್ದು, ಎನ್.ಐ.ಟಿ.ಕೆ. ಆವರಣದಲ್ಲಿ ಪಕ್ಷದ ಪ್ರಮುಖರು ಜಮಾಯಿಸುತ್ತಿದ್ದಾರೆ. ಎನ್.ಐ.ಟಿ.ಕೆ.ಯ ಮತ ಎಣಿಕೆ ನಡೆಯುವ ಕೇಂದ್ರದ ಒಳಗಡೆ ಯಾರಿಗೂ ಪ್ರವೇಶವಿಲ್ಲ, ಅಭ್ಯರ್ಥಿಗಳು ಅಥವಾ ಅವರ ಏಜೆಂಟರು ರಿಟರ್ನಿಂಗ್ ಅಧಿಕಾರಿಗಳ ಪಕ್ಕದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಮತ ಎಣಿಕೆ ಕೇಂದ್ರದ ಅಧಿಕಾರಿಗಳು ಫಲಿತಾಂಶ ಹೊರಬಿಡದೇ, ಯಾರಿಗೂ ಮಾಹಿತಿ ತಿಳಿಯುವಂತಿಲ್ಲ. ಆದ್ದರಿಂದ ಫಲಿತಾಂಶ

ಕೆಲ ನಿಮಿಷಗಳಲ್ಲೇ ಮತ ಎಣಿಕೆ | ಎನ್.ಐ.ಟಿ.ಕೆ. ಆವರಣ ಹೀಗಿದೆ Read More »

ಯಾರಂತೆ ಪುತ್ತೂರ ಶಾಸಕ?!

ಪುತ್ತೂರು: ಪ್ರಚಾರ ಎಷ್ಟೇ ನಡೆದಿರಲಿ, ಅಬ್ಬರ ಎಷ್ಟೇ ಜೋರಾಗಿರಲಿ ಒಂದಂತೂ ಸತ್ಯ. ಚುನಾವಣೆ ಘೋಷಣೆಯಾದ ದಿನದಿಂದ ಇಂದಿನವರೆಗೆ ಆಖಾಡದಲ್ಲಿ ಒಂದೇ ತೆರನಾದ ಟ್ರೆಂಡ್ ಚಾಲ್ತಿಯಲ್ಲಿತ್ತು. ಗೆಲುವು ಮೊದಲೇ ನಿರ್ಧರಿತವಾದಂತೆ. ಸಣ್ಣಪುಟ್ಟ ಏರುಪೇರುಗಳು ಇನ್ನೊಬ್ಬರಿಗೆ ಲಾಭವಾದೀತೇ ಹೊರತು, ಟ್ರೆಂಡ್ ಮಾತ್ರ ಇಂದಿನವರೆಗೆ ಯಥಾಸ್ಥಿತಿಯಲ್ಲಿತ್ತು. ಹಾಗಾಗಿ ಪುತ್ತೂರಿನ ಮುತ್ತು ಯಾರಾಗಲಿದ್ದಾರೆ ಎನ್ನುವುದು ಮುಗಿಯದ ಚರ್ಚೆಯಾಗಿದೆ. ಈ ಎಲ್ಲಾ ಚರ್ಚೆಗಳಿಗೆ, ಗೊಂದಲಗಳಿಗೆ ಮೇ 13 ಅಂದರೆ ನಾಳೆ ಮಧ್ಯಾಹ್ನದೊಳಗೆ ಉತ್ತರ ಸಿಗಲಿದೆ. ಸುರತ್ಕಲ್ ಎನ್.ಐ.ಟಿ.ಕೆ. ಆವರಣದೊಳಗೆ ನಡೆಯುವ ಮತ ಎಣಿಕೆ ಕಾರ್ಯಕ್ಕೆ

ಯಾರಂತೆ ಪುತ್ತೂರ ಶಾಸಕ?! Read More »

ವಿವೇಕಾನಂದ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಪುತ್ತೂರು: ವಿದ್ಯಾರ್ಥಿಗಳು ಶೈಕ್ಷಣಿಕ ಕಲಿಕೆಯ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಬಹುಮುಖ್ಯ. ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಲು ಕ್ರೀಡಾ ಚಟುವಟಿಕೆ ಉತ್ತಮ. ಕ್ರೀಡೆಯಲ್ಲಿ ಸೋಲು- ಗೆಲುವು ಎನ್ನುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಗೆಲುವನ್ನು ನಿರೀಕ್ಷಿಸದೆ ತಮ್ಮ ದೈಹಿಕ ಆರೋಗ್ಯದ ದೃಷ್ಟಿಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಮಾತನಾಡಿದರು. ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ

ವಿವೇಕಾನಂದ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ Read More »

ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠೆ

ಪುತ್ತೂರು: ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠಾಪನೆ ಶುಕ್ರವಾರ ಬೆಳಗ್ಗೆ ಗಂಟೆ 8.22ಕ್ಕೆ ವೇದಮೂರ್ತಿ ಜಗದೀಶ ಭಟ್ ಭಟಪಾಡಿ ಇವರ ನೇತೃತ್ವದಲ್ಲಿ ನೆರವೇರಿತು. ಶ್ರೀ ಉಳ್ಳಾಲ್ತಿಯ ಈ ಮೂಲಸ್ಥಾನವನ್ನು ಸಂಪೂರ್ಣ ಶಿಲಾಮಯವನ್ನಾಗಿ ರೂಪಿಸಲಾಗಿದ್ದು, ಸುಮಾರು ರೂ. 30 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ನಡೆದಿದೆ. ವೈದಿಕ ಪಾರಂಪರಿಕವಾಗಿ ಆರಾಧನೆ ನಡೆಯುತ್ತಿದ್ದು, ಮಾರ್ಚ್ ಹುಣ್ಣಿಮಯ ದಿನದ ಹೂವಿನ ಪೂಜೆ, ಚಂಡಿಕಾ ಹೋಮ, ಗಣಹೋಮ ನಡೆಯುವುದು ಇಲ್ಲಿನ ವಿಶೇಷ. ಬಪ್ಪಳಿಗೆಯ ನಟ್ಟೋಜ ವಂಶಸ್ಥರ ಜಾಗದಲ್ಲಿರುವ ಈ

ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠೆ Read More »

ಸಿಬಿಎಸ್‌ಸಿ 10ನೇ ತರಗತಿಯ ಫಲಿತಾಂಶ ಪ್ರಕಟ: ತಿರುವನಂತಪುರಂ ಪ್ರಥಮ, ಬೆಂಗಳೂರು ದ್ವಿತೀಯ

ಬೆಂಗಳೂರು: ಸಿಬಿಎಸ್‌ಇ‌ 10ನೇ ತರಗತಿಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಶೇಕಡಾ 87.33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೇರಳದ ತಿರುವನಂತಪುರದ ಶೇಕಡ 99.91ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅತ್ಯುತ್ತಮ ಉತ್ತೀರ್ಣ ದಾಖಲಿಸಿದೆ. ಶೇ. 98.64 ಅಂಕಗಳನ್ನು ಪಡೆದಿರುವ ಬೆಂಗಳೂರು 2ನೇ ಸ್ಥಾನದಲ್ಲಿದೆ. ಅಧಿಕೃತ ವೆಬ್‌ ಸೈಟ್‌ ಗಳಾದ http://cbse.nic.in  ಮತ್ತು http://cbse.gov.in ನಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡಬಹುದು. ಸಿಬಿಎಸ್‌ಇ 10ನೇ ತರಗತಿ ಬೋರ್ಡ್ ಪರೀಕ್ಷೆಯು ಫೆಬ್ರವರಿ 15ರಿಂದ ಮಾರ್ಚ್ 21ರವರೆಗೆ ನಡೆದಿತ್ತು. 12ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15ರಿಂದ

ಸಿಬಿಎಸ್‌ಸಿ 10ನೇ ತರಗತಿಯ ಫಲಿತಾಂಶ ಪ್ರಕಟ: ತಿರುವನಂತಪುರಂ ಪ್ರಥಮ, ಬೆಂಗಳೂರು ದ್ವಿತೀಯ Read More »

ಮೇ 12 ರಿಂದ 25 : ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ :ಮೇ 14 ರಂದು ಪುತ್ತೂರಿನಿಂದ ಹೊರೆಕಾಣಿಕೆ ಮೆರವಣಿಗೆ

ಪುತ್ತೂರು: ಮಂಗಳೂರಿನ ಕುಲಶೇಖರಲ್ಲಿರುವ ಶ್ರೀ ವೀರನಾರಾಯಣ ದೇವಸ್ಥಾನದ  ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮೇ 14 ರಿಂದ 25 ರ ತನಕ ನಡೆಯಲಿದ್ದು, ಮೇ.14 ರಂದು ಪುತ್ತೂರು ಕುಲಾಲರ ಯಾನೆ ಮೂಲ್ಯರ ಸಂಘದ ವತಿಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಪುತ್ತೂರು ತಾಲೂಕು ಕುಲಾಲ ಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್ ತಿಳಿಸಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಸುಮಾರು 1200 ವರ್ಷಗಳ ಇತಿಹಾಸ ಇರುವ ದೇವಸ್ಥಾನ ಸುಮಾರು 10 ಕೋಟಿ ರೂ. ವಚ್ಚದಲ್ಲಿ ಪುನರ್ ನಿರ್ಮಾಣಗೊಂಡಿದ್ದು, ಈ ಭಾಗದ

ಮೇ 12 ರಿಂದ 25 : ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ :ಮೇ 14 ರಂದು ಪುತ್ತೂರಿನಿಂದ ಹೊರೆಕಾಣಿಕೆ ಮೆರವಣಿಗೆ Read More »

ದ್ವಿತೀಯ ಪಿಯುಸಿ : ಕುಂಬ್ರ ಸ.ಪ.ಪೂ. ಕಾಲೇಜಿಗೆ ಶೇ. 80 ಫಲಿತಾಂಶ

ಪುತ್ತೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜು ಶೇ. 80 ಫಲಿತಾಂಶ ದಾಖಲಿಸಿದೆ. ಕಾಲೇಜಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ 105 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 84 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 44 ವಿದ್ಯಾರ್ಥಿಗಳಲ್ಲಿ 36 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ. 81.8 ಫಲಿತಾಂಶ ಬಂದಿರುತ್ತದೆ. ಸ್ವಾತಿ ಪಿ. 530 ಮತ್ತು ಅಕ್ಷಿತಾ 529 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 43

ದ್ವಿತೀಯ ಪಿಯುಸಿ : ಕುಂಬ್ರ ಸ.ಪ.ಪೂ. ಕಾಲೇಜಿಗೆ ಶೇ. 80 ಫಲಿತಾಂಶ Read More »

ಅರುಣ್ ಕುಮಾರ್ ಪುತ್ತಿಲ ಅವರಿಂದ ಪ್ರಮುಖರ ಸಭೆ | ಅಪಪ್ರಚಾರ, ಅವಮಾನಗಳಿಗೆ ಮುಂದಿನ ದಿನದಲ್ಲಿ ಉತ್ತರ | 7-8 ಸಾವಿರ ಅಂತರಗಳಿಂದ ಗೆಲುವು ಪಡೆಯಲಿದ್ದೇವೆ

ಪುತ್ತೂರು: ಹಿಂದುತ್ವದ ಪರ ಇದ್ದೇವೆ ಎನ್ನುವ ಒಂದೇ ಯೋಚನೆಯೊಂದಿಗೆ ನನ್ನ ಜೊತೆ ಬಂದು ನಿಂತಿದ್ದಾರೆ. ನನ್ನ ಕೊನೆಯ ಉಸಿರು ಇರುವ ತನಕ ನಿಮ್ಮ ಜೊತೆಗೆ ಇರುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಗುರುವಾರ ಸಂಜೆ ಮುಕ್ರಂಪಾಡಿ ಸುಭದ್ರ ಸಭಾಮಂದಿರದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಮಾತನಾಡಿದರು. ನಿಶ್ಚಿತವಾಗಿಯೂ ಈ ಬಾರಿಯ ಗೆಲುವು ನಮ್ಮದೇ. ಹಿಂದು ರಾಷ್ಟ್ರದ ಕಲ್ಪನೆಯನ್ನು ನಾವೆಲ್ಲ ಸೇರಿ ಸಾಕಾರಗೊಳಿಸೋಣ. ಸಿದ್ಧಾಂತ, ಬದ್ಧತೆಯ ಆಧಾರದಲ್ಲಿ ಹಿಂದು ಸಮಾಜಕ್ಕೆ ಶಕ್ತಿ ಕೊಡುವ ಕೆಲಸವನ್ನು ನಾವೆಲ್ಲ

ಅರುಣ್ ಕುಮಾರ್ ಪುತ್ತಿಲ ಅವರಿಂದ ಪ್ರಮುಖರ ಸಭೆ | ಅಪಪ್ರಚಾರ, ಅವಮಾನಗಳಿಗೆ ಮುಂದಿನ ದಿನದಲ್ಲಿ ಉತ್ತರ | 7-8 ಸಾವಿರ ಅಂತರಗಳಿಂದ ಗೆಲುವು ಪಡೆಯಲಿದ್ದೇವೆ Read More »

ಕೊಂಬೆಟ್ಟು ರಸ್ತೆಯಲ್ಲಿ ಧರೆಗುರುಳಿದ ಮರ: ವಿದ್ಯುತ್ ಸಂಪರ್ಕ ಕಡಿತ

ಪುತ್ತೂರು: ಇಲ್ಲಿನ ಕೊಂಬೆಟ್ಟು ರಸ್ತೆಯಲ್ಲಿ ಮರವೊಂದು ರಸ್ತೆಗಡ್ಡವಾಗಿ ಧರೆಗುರುಳಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮರ ರಸ್ತೆಗಡ್ಡವಾಗಿ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರಮಾದವಶಾತ್, ಯಾವುದೇ ಅಪಾಯ ಸಂಭವಿಸಿಲ್ಲ. ಈ ಭಾಗದ ಅನೇಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ವಿದ್ಯುತ್ ತಂತಿ ಕಡಿದು ಬಿದ್ದಿದೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕೊಂಬೆಟ್ಟು ರಸ್ತೆಯಲ್ಲಿ ಧರೆಗುರುಳಿದ ಮರ: ವಿದ್ಯುತ್ ಸಂಪರ್ಕ ಕಡಿತ Read More »

error: Content is protected !!
Scroll to Top