ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ

ಉದ್ಯೋಗ ಮಾಹಿತಿಅಗ್ನಿಪಥ್ 2023 : ಭಾರತೀಯ ವಾಯುಪಡೆ ಸೇನೆಯ ಅಗ್ನಿವೀರ ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ / ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಕೊನೆಯ ದಿನಾಂಕ: 31-03-2023. ಸಿಬ್ಬಂದಿ ನೇಮಕಾತಿ ಆಯೋಗ (SSC): ಫೇಸ್ XI ಹುದ್ದೆಗಳು. ವಿದ್ಯಾರ್ಹತೆ: ಪಿಯುಸಿ + ಪದವಿ + ಸ್ನಾತ್ತಕೋತ್ತರ ಪದವಿ. ಕೊನೆಯ ದಿನಾಂಕ: 27-03-2023. KMF: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ವಿವಿಧ ಹುದ್ದೆಗಳು. ವಿದ್ಯಾರ್ಹತೆ: ಪದವಿ/ಸ್ನಾತಕೋತ್ತರ ಪದವಿ/ಬಿ.ಇ/ಐಟಿಐ/ಡಿಪ್ಲೋಮಾ. ಕೊನೆಯ ದಿನಾಂಕ: 17-04-2023. ಕರ್ನಾಟಕ ಹೈಕೋರ್ಟ್‌ನಲ್ಲಿ 37 ಡ್ರೈವರ್ ಹುದ್ದೆಗಳು, ವಿದ್ಯಾರ್ಹತೆ: […]

ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ Read More »

ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಬಂಧಪಟ್ಟ ಬೊಳುವಾರಿನ ಜಾಗದಲ್ಲಿ ಮಾರ್ಚ್ 24ರಂದು ಆಶ್ಲೇಷ ಬಲಿ, ಧಾರ್ಮಿಕ ಸಭೆ | ಲ್ಯಾಂಡ್ ಜಿಹಾದ್, ಮತಾಂತರ, ಗೋಹತ್ಯೆ ವಿರುದ್ದ ಜನಜಾಗೃತಿ ಸಭೆ

ಪುತ್ತೂರು: ಬೊಳುವಾರು ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿಯಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಸ್ಥಳದಲ್ಲಿ ಮಾರ್ಚ್ 24ರಂದು ಜನಜಾಗೃತಿ ಸಭೆ, ಆಶ್ಲೇಷ ಬಲಿ, ಧಾರ್ಮಿಕ ಸಭೆ, ಅರ್ಧ ಏಕಾಹ ಭಜನೆ ನಡೆಯಲಿದೆ ಎಂದು ಹಿಂಜಾವೇ ಮಂಗಳೂರು ವಿಭಾಗ ಸಹಸಂಚಾಲಕ ಅಜಿತ್ ರೈ ಹೊಸಮನೆ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 6ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಂಜೆ 7ಕ್ಕೆ ಜನಜಾಗೃತಿ ಸಭೆ ಆಯೋಜಿಸಲಾಗಿದೆ. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಕರಾನಂದ ಸ್ವಾಮೀಜಿ ಆಶೀರ್ವಚನ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಬಂಧಪಟ್ಟ ಬೊಳುವಾರಿನ ಜಾಗದಲ್ಲಿ ಮಾರ್ಚ್ 24ರಂದು ಆಶ್ಲೇಷ ಬಲಿ, ಧಾರ್ಮಿಕ ಸಭೆ | ಲ್ಯಾಂಡ್ ಜಿಹಾದ್, ಮತಾಂತರ, ಗೋಹತ್ಯೆ ವಿರುದ್ದ ಜನಜಾಗೃತಿ ಸಭೆ Read More »

ಧಾರ್ಮಿಕ ಸಂಕೇತವಾದ ಕಮಲದ ಚಿಹ್ನೆಯನ್ನು ಬ್ಯಾನ್‌ ಮಾಡಬೇಕು: ಮುಸ್ಲಿಂ ಲೀಗ್‌

ದೆಹಲಿ: ಧಾರ್ಮಿಕ ಹೆಸರು ಮತ್ತು ಧಾರ್ಮಿಕ ಸಂಕೇತಗಳನ್ನು ಚುನಾವಣಾ ಚಿಹ್ನೆಯಾಗಿ ಬಳಸಬಾರದು ಎಂಬ ನಿಯಮದಡಿ ಬಿಜೆಪಿಯ ತಾವರೆ ಚಿಹ್ನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮುಸ್ಲಿಂ ಲೀಗ್‌ ಕೋರ್ಟಿನ ಮೆಟ್ಟಿಲೇರಿದೆ.ʻಕಮಲʼ ಧಾರ್ಮಿಕ ಪಾವಿತ್ರ್ಯ ಹೊಂದಿರುವ ಚಿಹ್ನೆ. ಬಿಜೆಪಿಯ ಚುನಾವಣಾ ಚಿಹ್ನೆ ಕೂಡ ʻಕಮಲʼ. ಆದ್ದರಿಂದ ಬಿಜೆಪಿಯ ಚುನಾವಣಾ ಚಿಹ್ನೆ ಬ್ಯಾನ್‌ ಮಾಡಬೇಕು. ಈ ಪ್ರಕರಣದಲ್ಲಿ ಬಿಜೆಪಿಯನ್ನು ಪ್ರತಿವಾದಿಯನ್ನಾಗಿಸಬೇಕು ಎಂದು ಆಗ್ರಹಿಸಿ ಐಯುಎಂಎಲ್‌ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.ಮುಸ್ಲಿಂ ಲೀಗ್ ಪರವಾಗಿ ಹಿರಿಯ ವಕೀಲ ದುಷ್ಯಂತ್ ದವೆ ವಾದಿಸುತ್ತಿದ್ದಾರೆ. ಈ ವಿಷಯದಲ್ಲಿ

ಧಾರ್ಮಿಕ ಸಂಕೇತವಾದ ಕಮಲದ ಚಿಹ್ನೆಯನ್ನು ಬ್ಯಾನ್‌ ಮಾಡಬೇಕು: ಮುಸ್ಲಿಂ ಲೀಗ್‌ Read More »

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 2,500 ಕೋ. ರೂ. ಟಿಡಿಆರ್‌ ಹಗರಣ ಎಂದು ಬಿಜೆಪಿ ಆರೋಪ

ಬೆಂಗಳೂರು : ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಟಿಡಿಆರ್‌ಗೆ ಸಂಬಂಧಿಸಿದಂತೆ ನಡೆದಿರುವ ಬೃಹತ್‌ ಹಗರಣವನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಬಯಲಿಗೆಳೆದಿದ್ದು, ದಾಖಲೆ ಬಿಡುಗಡೆ ಮಾಡಿದ್ದಾರೆ.ಈ ಸಂಬಂಧ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಬಿಬಿಎಂಪಿ ಇತಿಹಾಸದಲ್ಲಿಯೇ 2,500 ಕೋಟಿ ರೂ. ಮೊತ್ತದ ಅತಿ ದೊಡ್ಡ ಹಗರಣವಾಗಿದ್ದು, ಬಿಬಿಎಂಪಿ ಎಂದು ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್‌ ಪ್ರದೇಶ ಯೋಜನಾ ಪ್ರಾಧಿಕಾರ (ಬಿಎಂಐಸಿಎಪಿಎ) ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 2,500 ಕೋ. ರೂ. ಟಿಡಿಆರ್‌ ಹಗರಣ ಎಂದು ಬಿಜೆಪಿ ಆರೋಪ Read More »

ಅಯೋಧ್ಯೆಗೆ ತಲುಪಿದ ಕೃಷ್ಣಶಿಲೆ

ಉಚಿತವಾಗಿ ಟ್ರಕ್‌ ಮತ್ತು ಚಾಲಕರನ್ನು ಒದಗಿಸಿದ ಬಿಜೆಪಿಯ ಹಿರಿಯ ನಾಯಕ ನಾಗರಾಜ ಶೆಟ್ಟಿ ಕಾರ್ಕಳ : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಪ್ರತಿಷ್ಥಾಪನೆಯಾಗಲಿರುವ ಭವ್ಯ ಶ್ರೀರಾಮನ ಮೂರ್ತಿಯನ್ನು ಕೆತ್ತಲು ಕಾರ್ಕಳದಿಂದ ಕೃಷ್ಣ ಶಿಲೆಯನ್ನು ಸಾಗಿಸಿದ್ದು ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ನಾಗರಾಜ ಶೆಟ್ಟಿಯವರ ಟ್ರಾನ್ಸ್‌ಪೋರ್ಟ್‌ ಕಂಪನಿ. ಮೂರು ದಿನಗಳಲ್ಲಿ ಬೃಹತ್‌ ಶಿಲೆ ಅಯೋಧ್ಯೆ ತಲುಪಿದೆ. ಒಂಭತ್ತು ಟನ್ ತೂಕದ ಶಿಲೆಯನ್ನು ಅಯೋಧ್ಯೆಯಲ್ಲಿ ನಾಗರಾಜ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ಸ್ವಾಗತಿಸಲಾಯಿತು. ಉದ್ಯಮಿ ನಾಗರಾಜ ಶೆಟ್ಟಿ ಮಾಲಕತ್ವದ

ಅಯೋಧ್ಯೆಗೆ ತಲುಪಿದ ಕೃಷ್ಣಶಿಲೆ Read More »

ರಾಜಕೀಯದಲ್ಲಿ ನಿವೃತ್ತಿಯ ಅಂಚಿಗೆ ಬಂದವರಿಂದ ಯುವಕ್ರಾಂತಿ ಸಮಾವೇಶ: ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯ

ಮಂಗಳೂರು : ರಾಜಕಾರಣದಲ್ಲಿ ನಿವೃತ್ತಿ ಅಂಚಿಗೆ ಬಂದು ನಿಂತಿರುವ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಂಥ ನಾಯಕರು ಯುವಕ್ರಾಂತಿ ಸಮಾವೇಶ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದ್ದಾರೆ.ರಾಹುಲ್‌ ಹೋದಲೆಲ್ಲ ಕಾಂಗ್ರೆಸ್‌ ನೆಲಕಚ್ಚಿದೆ. ಹೀಗಾಗಿ ಅವರು ಕರ್ನಾಟಕಕ್ಕೆ ಬಂದಿರುವುದನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ರಾಜ್ಯದಿಂದ ಕಾಂಗ್ರೆಸ್‌ನ್ನು ಕಿತ್ತೆಸೆಯುವ ಬಿಜೆಪಿಯ ವಾಗ್ದಾನವನ್ನು ನನಸು ಮಾಡುವಲ್ಲಿ ರಾಹುಲ್‌ ಗಾಂಧಿ ಸಾಥ್‌ ನೀಡಲಿದ್ದಾರೆ ಎಂದು ಕಟೀಲ್‌ ಕಾಲೆಳೆದಿದ್ದಾರೆ.ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ರಾಜ್ಯಕ್ಕೆ ಭೇಟಿ

ರಾಜಕೀಯದಲ್ಲಿ ನಿವೃತ್ತಿಯ ಅಂಚಿಗೆ ಬಂದವರಿಂದ ಯುವಕ್ರಾಂತಿ ಸಮಾವೇಶ: ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯ Read More »

ಶಕುಂತಳಾ ಶೆಟ್ಟಿಯನ್ನು ಅಭ್ಯರ್ಥಿಯೆಂದು ಘೋಷಿಸಲು ಮಹಿಳಾ ಕಾಂಗ್ರೆಸ್ ಆಗ್ರಹ

ಪುತ್ತೂರು: ದಣಿವರಿಯದ ನಾಯಕಿ ಶಕುಂತಳಾ ಶೆಟ್ಟಿ ಅವರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಿಸುವಂತೆ ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್ ಮಾತನಾಡಿ, ಎರಡು ಬಾರಿ ಶಾಸಕರಾಗಿದ್ದ ಶಕುಂತಳಾ ಶೆಟ್ಟಿ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿಯೂ ಗುರುತಿಸಿಕೊಂಡವರು. ಜನರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಕಂಡು, ಅದನ್ನು ಬಗೆಹರಿಸಿದವರು. ಆದ್ದರಿಂದ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಆಗಬೇಕು ಎಂದು ಮನವಿ ಮಾಡಿಕೊಂಡರು.

ಶಕುಂತಳಾ ಶೆಟ್ಟಿಯನ್ನು ಅಭ್ಯರ್ಥಿಯೆಂದು ಘೋಷಿಸಲು ಮಹಿಳಾ ಕಾಂಗ್ರೆಸ್ ಆಗ್ರಹ Read More »

ಬಹುಕೋಟಿ ವಂಚಕ ಮೆಹುಲ್‌ ಚೋಕ್ಸಿ ರೆಡ್‌ ಅಲರ್ಟ್‌ ಪಟ್ಟಿಯಿಂದ ಗಡಿಪಾರು

ದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 11,356 ಕೋ.ರೂ. ವಂಚಿಸಿದ ಮೆಹುಲ್ ಚೋಕ್ಸಿಯನ್ನು ಇಂಟರ್‌ಪೋಲ್ ತನ್ನ ರೆಡ್ ಅಲರ್ಟ್‌ ಪಟ್ಟಿಯಿಂದ ತೆಗೆದುಹಾಕಿದೆ.ಡಿಸೆಂಬರ್ 2018ರಲ್ಲಿ ಚೋಕ್ಸಿಯನ್ನು ರೆಡ್ ಅಲರ್ಟ್‌ ಪಟ್ಟಿಗೆ ಸೇರಿಸಲಾಗಿತ್ತು. ಭಾರತದ ಅಧಿಕಾರಿಗಳು ಇಂಟರ್‌ಪೋಲ್‌ ಕ್ರಮವನ್ನು ವಿರೋಧಿಸಿದ್ದಾರೆ. ಆದರೆ ಇಂಟರ್‌ಪೋಲ್‌ ಅಧಿಕಾರಿಗಳು ಅವರ ವಿರೋಧವನ್ನು ಪರಿಗಣಿಸಿಲ್ಲ. ಈ ಮೂಲಕ ಚೋಕ್ಸಿ ಗಡಿಪಾರಿಗೆ ಕಾಯುತ್ತಿದ್ದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಹಿನ್ನಡೆಯಾಗಿದೆ. ಆದರೆ ಆಂಟಿಗುವಾದಿಂದ ಚೋಕ್ಸಿಯ ಹಸ್ತಾಂತರ ಪ್ರಕ್ರಿಯೆಗೆ ಇಂಟರ್‌ಪೋಲ್‌ ಕ್ರಮ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಹುಕೋಟಿ ವಂಚಕ ಮೆಹುಲ್‌ ಚೋಕ್ಸಿ ರೆಡ್‌ ಅಲರ್ಟ್‌ ಪಟ್ಟಿಯಿಂದ ಗಡಿಪಾರು Read More »

ನಿಮ್ಮ ಸಂತಸ ಹೆಚ್ಚಿಸಲು ಕೆಲವು ಟಿಪ್ಸ್‌…

ಇವುಗಳಲ್ಲಿ ಕೆಲವನ್ನಾದರೂ ಮಾಡಿ ನಿಮ್ಮ ಹ್ಯಾಪಿನೆಸ್ ಹೆಚ್ಚು ಮಾಡಿಕೊಳ್ಳಿ 1) ನಾವು ಕಲಿತ ಪ್ರೈಮರಿ ಶಾಲೆಯ ಜಗಲಿಯ ಮೇಲೆ ವಾರಕ್ಕೊಮ್ಮೆ ಹೋಗಿ ಒಂದಷ್ಟು ಹೊತ್ತು ಮೌನವಾಗಿ ಕುಳಿತು ಬರುವುದು. 2) ನಮ್ಮೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಯಾರಾದರೂ ಐದು ಜನರಿಗೆ ವಾರಕ್ಕೊಮ್ಮೆ ಕಾಲ್ ಮಾಡಿ ಕ್ಯಾಶುವಲ್ ಆಗಿ ಸ್ವಲ್ಪ ಹೊತ್ತು ಪ್ರೀತಿಯಿಂದ ಮಾತನಾಡುವುದು. 3) ದಿನಕ್ಕೊಂದು ಹದಿನೈದು ನಿಮಿಷ ಬಿಡುವು ಮಾಡಿಕೊಂಡು ಕಿವಿಗೆ ಇಯರ್ ಫೋನ್ ಚುಚ್ಚಿಕೊಂಡು ಮಾಧುರ್ಯದ ಹಾಡುಗಳನ್ನು ಕೇಳುವುದು. 4) ಹಸಿರು ಪರಿಸರದ ನಡುವೆ

ನಿಮ್ಮ ಸಂತಸ ಹೆಚ್ಚಿಸಲು ಕೆಲವು ಟಿಪ್ಸ್‌… Read More »

ಹಿಂದೀ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್

ಪುತ್ತೂರು: 2022-23ನೇ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ  ಹಿಂದಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪುತ್ತೂರಿನ ಡಿಂಪಲ್ ಮಿಶೆಲ್ ತಾವ್ರೋ 8.45 ಸಿಜಿಪಿಎ ಪಡೆದು ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಅವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ದಿನೇಶ್ ಪಾವ್ಲ್‍ ತಾವ್ರೋ ಹಾಗೂ ಮೋಂತಿಮೇರಿ ಮಸ್ಕರೇನಸ್ ದಂಪತಿ ಪುತ್ರಿ.

ಹಿಂದೀ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ Read More »

error: Content is protected !!
Scroll to Top