ಕಂಬಳ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ದೆಹಲಿ: ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಈ ಮೂಲಕ ಕಂಬಳಕ್ಕಿದ್ದ ದೊಡ್ಡ ತೊಡಕೊಂದು ನಿವಾರಣೆಯಾದಂತಾಗಿದೆ. ಕರ್ನಾಟಕದ ಕಂಬಳ, ತಮಿಳುನಾಡಿನ ಜಲ್ಲಿಕಟ್ಟು ಹಾಗೂ ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಪ್ರಾಣಿಗಳನ್ನು ಹಿಂಸಿಸಲಾಗುತ್ತಿದೆ ಎನ್ನುವ ವಿಚಾರದಲ್ಲಿ ಪ್ರಕರಣ ಸುಪ್ರೀಂ ಮೆಟ್ಟಿಲೇರಿತ್ತು. ಸಲ್ಲಿಕೆ ಆಗಿರುವ ಅರ್ಜಿಗಳಿಗೆ ಸಂಬಂಧಿಸಿ ಸುಪ್ರಿಂ ಕೋರ್ಟ್‌ನ ಸಾಂವಿಧಾನಿಕ ಪೀಠ ಮೇ 18ರಂದು ತನ್ನ ತೀರ್ಪು ನೀಡಿದ್ದು, ಜಲ್ಲಿಕಟ್ಟು ಸ್ಪರ್ಧೆಗೆ ಅನುಮತಿ ನೀಡಿ ಎಂದು […]

ಕಂಬಳ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ Read More »

ಪೊಲೀಸರ ಕೃತ್ಯ ಅಮಾನುಷ : ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರನ್ನು ಭೇಟಿಯಾದ ಚಕ್ರವರ್ತಿ ಸೂಲಿಬೆಲೆ

ಪುತ್ತೂರು: ದೌರ್ಜನ್ಯಕ್ಕೆ ಒಳಗಾದ ಯುವಕರ ಫೊಟೋ ನೋಡಿ ಎದೆ ಝಲ್ಲೆನಿಸಿತು. ಪೊಲೀಸರ ಕೃತ್ಯ ಅಮಾನುಷ. ಇಂತಹ ಪರಿಸ್ಥಿತಿ ಬೇರಾರಿಗೂ ಬರಬಾರದು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಪೊಲೀಸ್ ರಿಂದ ದೌರ್ಜನ್ಯಕ್ಕೊಳಗಾದ ಬಿಜೆಪಿ ಕಾರ್ಯಕರ್ತರನ್ನು ಚಕ್ರವರ್ತಿ ಸೂಲಿಬೆಲೆಯವರು ಪುತ್ತೂರು ಆಸ್ಪತ್ರೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿ, ಮಾತನಾಡಿದರು. ತೇಜೋವಧೆ, ಅವಮಾನ ಮಾಡುವುದನ್ನು ನಾವು ಸಹಿಸಿಕೊಳ್ಳಬೇಕಾದ ಸಂದರ್ಭಗಳು ಜೀವನದಲ್ಲಿ ಬರುತ್ತವೆ. ಅದರಲ್ಲೂ ಪಕ್ಷಕ್ಕೆ ಸೋಲಾದಾಗ ಇಂತಹ ಘಟನೆಗಳು ಸಹಜ. ಹಾಗೆಂದು ನೋವುಂಟಾದವರು ಎಲ್ಲರೂ ನರೇಂದ್ರ ಮೋದಿಯನ್ನು ನೋಡಬೇಕು. ಅವರಷ್ಟು

ಪೊಲೀಸರ ಕೃತ್ಯ ಅಮಾನುಷ : ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರನ್ನು ಭೇಟಿಯಾದ ಚಕ್ರವರ್ತಿ ಸೂಲಿಬೆಲೆ Read More »

ಪೊಲೀಸರಿಂದ ಹಲ್ಲೆ: ಇಬ್ಬರು ಪೊಲೀಸರು ಅಮಾನತು

ಪುತ್ತೂರು: ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಪುತ್ತೂರು ನಗರ ಠಾಣೆ ಯಲ್ಲಿ ವಿಚಾರಣೆಗೆ ಒಳಪಡಿಸಿದ ಆರೋಪಿತರಿಗೆ ಪೊಲೀಸ್ ರು ಹಲ್ಲೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ PSI ಪುತ್ತೂರು ಗ್ರಾಮಾಂತರ ಠಾಣೆ ಹಾಗೂ ಹರ್ಷಿತ್ PC ರವರುಗಳನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. DSP ಪುತ್ತೂರು ರವರ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಎಸ್ಪಿ ಅವರ ಪ್ರಕಟಣೆ ತಿಳಿಸಿದೆ. ಹಲ್ಲೆಗೊಳಗಾದ ಅವಿನಾಶ್ ನೀಡಿದ ದೂರಿನ ಮೇರೆಗೆ Dysp ಪುತ್ತೂರು, PSI ಪುತ್ತೂರು

ಪೊಲೀಸರಿಂದ ಹಲ್ಲೆ: ಇಬ್ಬರು ಪೊಲೀಸರು ಅಮಾನತು Read More »

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್|ಎಐಸಿಸಿ ಪ್ರ. ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ಪುತ್ತೂರು: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ನೇಮಕವಾಗಿದ್ದು, ಮೇ 20ರಂದು ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ನಡೆಯಲಿದೆ ಎಂದು ಎಐಸಿಸಿ ಪ್ರ. ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭ ಕೆಲ ಸಚಿವರ ಪ್ರಮಾಣವಚನವೂ ನಡೆಯಲಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್|ಎಐಸಿಸಿ ಪ್ರ. ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ Read More »

ಬಸನಗೌಡ ಪಾಟೀಲ್ ಯತ್ನಾಳ್ ನಾಳೆ ಪುತ್ತೂರಿಗೆ

ಪುತ್ತೂರು: ಫೈರ್ ಬ್ರಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶುಕ್ರವಾರ ಪುತ್ತೂರಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಯತ್ನಾಳ್ ಭೇಟಿ ಮಹತ್ವ ಪಡೆದುಕೊಂಡಿದೆ. ಬಿಜೆಪಿ ನಾಯಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂಭತ್ತು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಅವರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದ್ದು, ರಾಜ್ಯದಲ್ಲಿ ಭಾರೀ ಸುದ್ದಿಯಾಗುತ್ತಿದೆ.

ಬಸನಗೌಡ ಪಾಟೀಲ್ ಯತ್ನಾಳ್ ನಾಳೆ ಪುತ್ತೂರಿಗೆ Read More »

ಪೊಲೀಸ್ ಹಲ್ಲೆ ಪ್ರಕರಣ: ತನಿಖೆಯ ಹೊಣೆ DYSPಗೆ | ಎಸ್ಪಿ ಡಾ. ವಿಕ್ರಂ ಅಮಟೆ 

ಪುತ್ತೂರು: ಅವಹೇಳನ ಮಾಡಿ ಬ್ಯಾನರ್ ಹಾಕಿದ ಪ್ರಕರಣದ ಆರೋಪಿಗಳಿಗೆ ಪೊಲೀಸರಿಂದ ಹಲ್ಲೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ASP ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ಮುಂದಿನ ತನಿಖೆಗೆ DYSP ಅವರಿಗೆ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ‌ ವಿಕ್ರಂ ಅಮಟೆ ಹೇಳಿದರು. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದು ಅಭಿ / ಅವಿನಾಶ್ ದೂರು ನೀಡಿದ್ದು, ಎಫ್.ಐ.ಆರ್. ದಾಖಲಾಗುತ್ತಿದೆ. ಮುಂದಿನ ತನಿಖೆಗೆ ಡಿ.ವೈ.ಎಸ್.ಪಿ.ಗೆ ನೀಡಲಾಗುವುದು. ಹಲ್ಲೆ ನಡೆಸಿದ ಬಗ್ಗೆ 3 ಪೊಲೀಸರ

ಪೊಲೀಸ್ ಹಲ್ಲೆ ಪ್ರಕರಣ: ತನಿಖೆಯ ಹೊಣೆ DYSPಗೆ | ಎಸ್ಪಿ ಡಾ. ವಿಕ್ರಂ ಅಮಟೆ  Read More »

ಇಂದಿನಿಂದ ನೆಹರುನಗರ ವಿವೇಕಾನಂದ ಕಾಲೇಜು ರಸ್ತೆ ಮೇಲ್ಸೇತುವೆ ಕಾಮಗಾರಿ ಹಿನ್ನಲೆ : ಬದಲಿ ರಸ್ತೆಯಲ್ಲಿ ಸಂಚಾರ

ಪುತ್ತೂರು: ನೆಹರೂನಗರದ ವಿವೇಕಾನಂದ ಕಾಲೇಜು ರಸ್ತೆಯಲ್ಲಿರುವ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ರೈಲ್ವೇ ಇಲಾಖೆಯಿಂದ ನಡೆಸುವ ಹಿನ್ನಲೆಯಲ್ಲಿ ಮೇ 18 ರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈಗಾಗಲೇ ಬದಲಿ ರಸ್ತೆಯಲ್ಲಿ ವಾಹನ ಸಂಚಾರ ನಡೆಸಬೇಕಾಗಿದ್ದು, ಬದಲಿ ರಸ್ತೆಯ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು-ಮಂಗಳೂರು ಹೆದ್ದಾರಿಯಿಂದ ವಿವೇಕಾನಂದ ಕಾಲೇಜು ಸಂಪರ್ಕಿಸಲು ಬದಲಿ ರಸ್ತೆಯಾಗಿ ಮುರದಿಂದ ಕೆದಿಲಕ್ಕೆ ಹೋಗುವ ರಸ್ತೆಯಲ್ಲಿ ಸಂಚರಿಸಿ ಶಾಂತಿನಗರ, ಅಜೇಯನಗರ ಮೂಲಕ ಕಾಲೇಜು ಕಡೆಗೆ ಹೋಗುವ ರಸ್ತೆಯನ್ನು ಹಾಗೂ ಬನ್ನೂರು ಮಾರ್ಗವಾಗಿ ಪಡೀಲ್ ಕಡೆಗೆ ಸಂಪರ್ಕಿಸಬೇಕಾಗುವುದು

ಇಂದಿನಿಂದ ನೆಹರುನಗರ ವಿವೇಕಾನಂದ ಕಾಲೇಜು ರಸ್ತೆ ಮೇಲ್ಸೇತುವೆ ಕಾಮಗಾರಿ ಹಿನ್ನಲೆ : ಬದಲಿ ರಸ್ತೆಯಲ್ಲಿ ಸಂಚಾರ Read More »

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಆರೋಪ | ಪ್ರತಿಭಟನೆಯ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಬೊಟ್ಯಾಡಿ

ಪುತ್ತೂರು: ಯಾರು ನಮ್ಮ ಕಾರ್ಯಕರ್ತರ ಮೇಲೆ ಅಮಾನುಷವಾಗಿ ದೌರ್ಜನ್ಯವೆಸಗಿದ್ದಾರೋ ಅವರನ್ನ ಸಸ್ಪೆಂಡ್ ಮಾಡಿ. ಇದರಲ್ಲಿ ರಾಜಕೀಯ ಬೇಡ. ಯಾರು ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯವಾಗಿದ್ಯೋ ಅವೆರೆಲ್ಲ ನಮ್ಮವರು. ತಕ್ಷಣ ಅಮಾನಯಷವಾಗಿ ವರ್ತಿಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಬೊಟ್ಯಾಡಿ ಆಗ್ರಹಿಸಿದ್ದಾರೆ. ಪ್ರಕಟಣೆ ನೀಡಿದ ಅವರು, ಕ್ರಮ ಕೈಗೊಳ್ಳದೇ ಹೋದಲ್ಲಿ ಹಿಂದೂ ಸಮಾಜದಿಂದ ಹೋರಾಟ, ಅಗತ್ಯ ಬಿದ್ದಲ್ಲಿ ಪೊಲೀಸ್ ಸ್ಟೇಷನ್ ಬಳಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಇಂದು ಸಂಜೆ ವೇಳೆಗೆ

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ದೌರ್ಜನ್ಯ ಆರೋಪ | ಪ್ರತಿಭಟನೆಯ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಬೊಟ್ಯಾಡಿ Read More »

ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಇಲಾಖೆಗೇ ಕಪ್ಪುಚುಕ್ಕಿ: ಸಂಸದ ನಳಿನ್ ಕುಮಾರ್ ಕಟೀಲ್

ಪುತ್ತೂರು: ಹಿಂದೂ ಯುವಕರ ಮೇಲೆ ಪುತ್ತೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಪೊಲೀಸರ ವರ್ತನೆ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕಿ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ನಾಯಕರ ಫೋಟೋವಿದ್ದ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಒಂಭತ್ತು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ಅವರಿಗೆ ಥಳಿಸಿ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಕೇಳಿ ಬರುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಪ್ರತಿಕ್ರಿಯಿಸಿದ್ದಾರೆ.

ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಇಲಾಖೆಗೇ ಕಪ್ಪುಚುಕ್ಕಿ: ಸಂಸದ ನಳಿನ್ ಕುಮಾರ್ ಕಟೀಲ್ Read More »

ಪ್ರಚೋದನಾತ್ಮಕ ಪೋಸ್ಟ್‌: ಪೊಲೀಸ್‌ ಕಮೀಷನರ್ ಎಚ್ಚರಿಕೆ

ಮಂಗಳೂರು: ವಿಧಾನಸಭಾ ಚುನಾವಣೆ ಫ‌ಲಿತಾಂಶ ಪ್ರಕಟವಾದ ಬಳಿಕ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಪ್ರಚೋದನಾತ್ಮಕ ಸಂದೇಶಗಳನ್ನು ಪೋಸ್ಟ್‌ ಮಾಡುತ್ತಿರುವುದು ಕಂಡು ಬಂದಿದ್ದು ಇಂತಹ ಪೋಸ್ಟ್‌ಗಳನ್ನು ಹಾಕುವ ಅಥವಾ ಫಾರ್ವರ್ಡ್‌ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಎಚ್ಚರಿಕೆ ನೀಡಿದ್ದಾರೆ. ಜಾತಿ, ಧರ್ಮ ಮತ್ತು ಪ್ರದೇಶ ಆಧಾರಿತವಾಗಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವಂತಹ ಮತ್ತು ವೈಯಕ್ತಿಕ ನಿಂದನೆ ಮಾಡುವಂತಹ ದ್ವೇಷಪೂರಿತ ಮತ್ತು

ಪ್ರಚೋದನಾತ್ಮಕ ಪೋಸ್ಟ್‌: ಪೊಲೀಸ್‌ ಕಮೀಷನರ್ ಎಚ್ಚರಿಕೆ Read More »

error: Content is protected !!
Scroll to Top