ಮಾ. 30: ಚಾರ್ವಾಕ ಕೆಳಗಿನಕೇರಿ ಕೊಪ್ಪದಲ್ಲಿ ನೇಮೋತ್ಸವ

ಪುತ್ತೂರು: ಚಾರ್ವಾಕ ಗ್ರಾಮದ ಶ್ರೀ ಕ್ಷೇತ್ರ ಕೆಳಗಿನಕೇರಿ ಕೊಪ್ಪದಲ್ಲಿ ಮಾ. 30ರಂದು ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ ನಡೆಯಲಿದೆ. ಮಾ. 29ರಂದು ರಾತ್ರಿ 8ಕ್ಕೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಮಾ. 30ರಂದು ಶ್ರೀ ಕ್ಷೇತ್ರ ಕೊಪ್ಪದಲ್ಲಿ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾ. 30: ಚಾರ್ವಾಕ ಕೆಳಗಿನಕೇರಿ ಕೊಪ್ಪದಲ್ಲಿ ನೇಮೋತ್ಸವ Read More »

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪೂಜನ ಜೆ ಎಸ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ.

ಪುತ್ತೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2022-23ನೇ ಸಾಲಿನ  ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಪೂಜನ ಜೆ. ಎಸ್  ರವರು ಶೇ 90% ಅಂಕ ಪಡೆದು ಡಿಸ್ಟ್ರಿಕ್ಸಣ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. .ಪುತ್ತೂರಿನ ಭಾರತೀಯ ನೃತ್ಯ ಶಾಲೆಯಲ್ಲಿ ಶ್ರುತಿರೋಶನ್ ಬೆಳ್ಳೂರು ಶಿಷ್ಯೆಯಾಗಿರುವ ಅವರು ಪ್ರಸ್ತುತ ನರಿಮೊಗರು ಪುರುಷರಕಟ್ಟೆಯ ಸರಸ್ವತಿ ವಿದ್ಯಾಮಂದಿರದ 6 ನೇ ತರಗತಿಯ ವಿದ್ಯಾರ್ಥಿನಿ. ಒತ್ತೆಮುಂಡೂರು ಜಯರಾಮ ಪೂಜಾರಿ ಮತ್ತು ಶಾಲಿನಿ ದಂಪತಿ ಪುತ್ರಿ.

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪೂಜನ ಜೆ ಎಸ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ. Read More »

ನಗರಸಭೆ ವ್ಯಾಪ್ತಿಯಲ್ಲಿ 42 ಟ್ವಿನ್ – ಬಿನ್ ಅಳವಡಿಕೆಗೆ ಚಾಲನೆ

ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರಸಭೆ ಇದೀಗ ಹೊಸದೊಂದು ಯೋಜನೆಯನ್ನು ಹಾಕಿಕೊಂಡಿದೆ. ನಗರಸಭಾ ವ್ಯಾಪ್ತಿಯ ಆಯಕಟ್ಟಿನ ಸುಮಾರು 42 ಪ್ರದೇಶಗಳಲ್ಲಿ ಟ್ವಿನ್‌ – ಬಿನ್ ಕಸದ ತೊಟ್ಟಿಗಳನ್ನು ಇರಿಸುವ ಮೂಲಕ ಹೊಸ ಯೋಜನೆಯನ್ನು ಸಾಕಾರಗೊಳಿಸಿದೆ. ಇದರ ಉದ್ಘಾಟನೆ ಬುಧವಾರ ನಗರಸಭೆಯಲ್ಲಿ ನಡೆಯಿತು. ಈಗಾಗಲೇ ಮನೆ – ಅಂಗಡಿಗಳಿಂದ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಅದೂ ಹಸಿ ಹಾಗೂ ಒಣ ಕಸ ಪ್ರತ್ಯೇಕವಾಗಿ ಮಾಡಲಾಗುತ್ತಿದೆ. ಆದರೆ ಪೇಟೆಗೆ ಆಗಮಿಸುವ ಸಾರ್ವಜನಿಕರು ತ್ಯಾಜ್ಯ ಎಸೆಯಲು ಸೂಕ್ತ ಸ್ಥಳವೇ

ನಗರಸಭೆ ವ್ಯಾಪ್ತಿಯಲ್ಲಿ 42 ಟ್ವಿನ್ – ಬಿನ್ ಅಳವಡಿಕೆಗೆ ಚಾಲನೆ Read More »

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಚಿಂತನೆಯನ್ನು ಹುಟ್ಟು ಹಾಕಿದ್ದೇ ಭಾರತೀಯ ಜನತಾ ಪಾರ್ಟಿ | ಕಾಲೇಜು ನಿರ್ಮಾಣ ಚಿಂತನೆಯ ಹಿಂದೆ ಶಾಸಕರ ಪಾತ್ರ ಮಹತ್ವದ್ದು

ಪುತ್ತೂರು: ಪುತ್ತೂರಿನ ಜನತೆಯ ಮುಖ್ಯ ಬೇಡಿಕೆಯಾದ ಮೆಡಿಕಲ್ ಕಾಲೇಜಿಗೆ ಪೂರಕವಾದ ವ್ಯವಸ್ಥೆಯನ್ನು ಜೋಡಿಸಿರುವುದು ಭಾರತೀಯ ಜನತಾ ಪಾರ್ಟಿ. ಕಾಲೇಜು ನಿರ್ಮಾಣದ ಚಿಂತನೆಯ ಹಿಂದೆ ಪುತ್ತೂರು ಶಾಸಕರ ಪಾತ್ರ ಮಹತ್ತರವಾಗಿದೆ ಎಂದು ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾದ ಆರ್.ಸಿ. ನಾರಾಯಣ ಹೇಳಿದರು. ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜು ನಿರ್ಮಾಣಕ್ಕೆ ಏನೆಲ್ಲಾ ಪೂರ್ವ ತಯಾರಿ ಬೇಕಾಗಿದೆ ಅದನ್ನು ಈಗಾಗಲೇ ಶಾಸಕರ ನೇತೃತ್ವದಲ್ಲಿ ಮಾಡಲಾಗಿದೆ. ಈಗಾಗಲೇ ಪುತ್ತೂರು ಸರಕಾರಿ ಆಸ್ಪತ್ರೆಗೆ 5.1 ಎಕ್ರೆ ವಿಸ್ತೀರ್ಣ ಹೊಂದಿದ್ದು, ಪಕ್ಕದ ಸಬ್ ರಿಜಿಸ್ಟ್ರಾರ್

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಚಿಂತನೆಯನ್ನು ಹುಟ್ಟು ಹಾಕಿದ್ದೇ ಭಾರತೀಯ ಜನತಾ ಪಾರ್ಟಿ | ಕಾಲೇಜು ನಿರ್ಮಾಣ ಚಿಂತನೆಯ ಹಿಂದೆ ಶಾಸಕರ ಪಾತ್ರ ಮಹತ್ವದ್ದು Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. 16ರಂದು ತೆಪ್ಪೋತ್ಸವ | ಏ. 8ರೊಳಗೆ ಪುಷ್ಕರಣಿಯ ಶಿಲಾಮಯ ಕಟ್ಟೆ ಅರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಏಪ್ರಿಲ್ 16ರಂದು ಶ್ರೀ ಉಳ್ಳಾಲ್ತಿ ಅಮ್ಮನವರ ಭಂಡಾರ ಆಗಮನವಾಗಿ, ಶ್ರೀ ಮಹಾಲಿಂಗೇಶ್ವರ ದೇವರ ತೆಪ್ಪೋತ್ಸವ ನಡೆಯಲಿದೆ. ಆದ್ದರಿಂದ ಈಗಾಗಲೇ ಕಾಮಗಾರಿ ಆರಂಭವಾಗಿರುವ ಪುಷ್ಕರಣಿಯ ನಡುವಿರುವ ಕಟ್ಟೆ ಸಮರ್ಪಣೆಗೊಳ್ಳಲೇಕು. ಹೌದು! ಏಪ್ರಿಲ್ 8ರೊಳಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪುಷ್ಕರಣಿಯ ಕಟ್ಟೆ ಅರ್ಪಣೆ ಆಗಲೇಬೇಕು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಪುಷ್ಕರಣಿಯ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ. ಇದಕ್ಕಾಗಿ ದೇವಸ್ಥಾನದ ಮಧ್ಯಭಾಗದಲ್ಲಿದ್ದ ಹಳೆ ದೇವರ ಕಟ್ಟೆಯನ್ನು ಈಗಾಗಲೇ ಸಂಪೂರ್ಣ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. 16ರಂದು ತೆಪ್ಪೋತ್ಸವ | ಏ. 8ರೊಳಗೆ ಪುಷ್ಕರಣಿಯ ಶಿಲಾಮಯ ಕಟ್ಟೆ ಅರ್ಪಣೆ Read More »

ಧರ್ಮಸ್ಥಳ : ನೇತ್ರಾವತಿ ನದಿಯಲ್ಲಿ ಸ್ನಾನದ ವೇಳೆ ಶ್ಯಾಂಪು, ಸೋಪು ಬಳಕೆ ನಿಷೇಧ

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವ ಸಂದರ್ಭ ಶ್ಯಾಂಪು, ಸೋಪು ಬಳಕೆ ಮಾಡದಂತೆ ಧರ್ಮಸ್ಥಳ ಗ್ರಾ. ಪಂ. ಆದೇಶ ಹೊರಡಿಸಿದೆ.ಪ್ರಸಿದ್ಧ ದೇವಸ್ಥಾನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಲ್ಲಿನ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿದರೆ ಪಾಪ ಕಳೆಯುತ್ತದೆ ಎಂಬ ನಂಬಿಕೆಯಿದೆ. ಆದರೆ ಸ್ನಾನದ ಸಂದರ್ಭ ಶ್ಯಾಂಪು ಸೋಪು ಬಳಕೆ ಮಾಡುವುದರಿಂದ ನದಿಯಲ್ಲಿರುವ ಜಲಚರಗಳ ಮೇಲೆ ದುಷ್ಪಾರಿಣಾಮ ಬೀರುತ್ತದೆ ಮತ್ತು ಸ್ನಾನಕ್ಕೆ ಯೋಗ್ಯವಾಗದ ನೀರಾಗಿ ಪರಿವರ್ತನೆಯಾಗುತ್ತದೆ.

ಧರ್ಮಸ್ಥಳ : ನೇತ್ರಾವತಿ ನದಿಯಲ್ಲಿ ಸ್ನಾನದ ವೇಳೆ ಶ್ಯಾಂಪು, ಸೋಪು ಬಳಕೆ ನಿಷೇಧ Read More »

ಅನಧಿಕೃತ ಮರಳು ದಂಧೆ ಮಟ್ಟ ಹಾಕಲು ಬಲಿಷ್ಠ ಅಧಿಕಾರಿಗಳ ತಂಡದ ಅಗತ್ಯವಿದೆ : ಕಿಶೋರ್ ಶಿರಾಡಿ

ಪುತ್ತೂರು : ಅನಧಿಕೃತ ಮರಳು ದಂಧೆಯನ್ನು ಮಟ್ಟ ಹಾಕುವಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಅಧಿಕಾರಿಗಳ ತಂಡವನ್ನು ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದು ಮಲೆನಾಡು ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಸರಕಾರವನ್ನು ಒತ್ತಾಯಿಸಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನಧಿಕೃತವಾಗಿ ಮರಳುಗಳನ್ನು ಸಾಗಿಸಿ ಅಧಿಕೃತ ಬ್ಲಾಕ್ ಗಳಲ್ಲಿ ಸಂಗ್ರಹಿಸಿ ಬೇರೆ ಜಿಲ್ಲೆಗಳಿಗೆ ಸಪ್ಲೈ ಮಾಡಲಾಗುತ್ತಿದೆ. ಇದಕ್ಕೆ ದಾಖಲೆಗಳು ನಮ್ಮ ಬಳಿ ಇದೆ ಎಂದು ಹೇಳಿದರು. ಮಾಹಿತಿ ಹಕ್ಕಿನ ಪ್ರಕಾರ ದ.ಕ. ಜಿಲ್ಲೆಯಲ್ಲಿ ನೂರರ ಸಮೀಪದಲ್ಲಿ ಅಧಿಕೃತ

ಅನಧಿಕೃತ ಮರಳು ದಂಧೆ ಮಟ್ಟ ಹಾಕಲು ಬಲಿಷ್ಠ ಅಧಿಕಾರಿಗಳ ತಂಡದ ಅಗತ್ಯವಿದೆ : ಕಿಶೋರ್ ಶಿರಾಡಿ Read More »

ಪಜಿರೋಡಿ ಮೊಗೇರ್ಕಳ ದೇವಸ್ಥಾನ, ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವ, ನೇಮೋತ್ಸವದ ಆಮಂತ್ರಣ ಬಿಡುಗಡೆ

ಪುತ್ತೂರು: ಶಾಂತಿಗೋಡು ಗ್ರಾಮದ ಪಜಿರೋಡಿ ಅದಿನಾಗಬ್ರಹ್ಮ ಮೊಗೇರ್ಕಳ ದೇವಸ್ಥಾನ ಮತ್ತು ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಏ. 29ರಿಂದ ಮೇ 1ರವರೆಗೆ ನಡೆಯಲಿದ್ದು, ಮಾ. 29ರಂದು ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಲಾಯಿತು. ಏ. 29ರಿಂದ ಮೇ 1ರವರೆಗೆ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಏ. 29ರಂದು ಬೆಳಿಗ್ಗೆ 9.30ಕ್ಕೆ ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಬಳಿಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಪ್ರಮುಖರಾದ ಹೊನ್ನಪ್ಪ ಪೂಜಾರಿ ಕೈಂದಾಡಿ,

ಪಜಿರೋಡಿ ಮೊಗೇರ್ಕಳ ದೇವಸ್ಥಾನ, ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವ, ನೇಮೋತ್ಸವದ ಆಮಂತ್ರಣ ಬಿಡುಗಡೆ Read More »

ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ | ಕೇಂದ್ರ ಚುನಾವಣಾ ಆಯುಕ್ತ ಘೋಷಣೆ

ಪುತ್ತೂರು: ರಾಜ್ಯ ಚುನಾವಣೆಗೆ ಮುಹೂರ್ತ ದಿನ ನಿಗದಿಯಾಗಿದ್ದು, ಮೇ 10ರಂದು ರಾಜ್ಯಾದ್ಯಂತ ಚುನಾವಣೆ ನಡೆಯಲಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಪೂರ್ವಾಂಚಲದ 3 ರಾಜ್ಯಗಳ ಚುನಾವಣೆ ಬಳಿಕ ಇದೀಗ ದಕ್ಷಿಣ ಭಾರತದ ಚುನಾವಣೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿರುವ ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಕರ್ನಾಟಕದಲ್ಲಿ ಒಂದು ಹಂತದಲ್ಲಿ ಚುನಾವಣೆಯನ್ನು ನಡೆಸುವ ಬಗ್ಗೆ ಘೋಷಣೆ ಹೊರಡಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಏಪ್ರಿಲ್ 13ರಂದು ಗೆಜೆಟ್ ನೋಟಿಫಿಕೇಷನ್

ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ | ಕೇಂದ್ರ ಚುನಾವಣಾ ಆಯುಕ್ತ ಘೋಷಣೆ Read More »

110 ಕೆ.ವಿ. ಸಬ್ ಸ್ಟೇಷನಿಗಾಗಿ ಕರ್ವೇಲಿನಲ್ಲಿ 3.26 ಎಕ್ರೆ ಜಮೀನು ಮಂಜೂರು | ಪ್ರಸ್ತಾವನೆ ಸಲ್ಲಿಸಿದ್ದ ಶಾಸಕ ಸಂಜೀವ ಮಠಂದೂರು | 1.04 ಕೋಟಿ ರೂ. ಪಾವತಿಸಿದ ಕೆ.ಪಿ.ಟಿ.ಸಿ.ಎಲ್

ಪುತ್ತೂರು: ಮೆಸ್ಕಾಂ ಸಬ್ ಸ್ಟೇಷನ್ ಗೆ ಕರ್ವೇಲಿನಲ್ಲಿ 3.26 ಎಕರೆ ಜಾಗ ಮಂಜೂರಾಗಿದ್ದು, ಸರಾಗ ವಿದ್ಯುತ್ ಪೂರೈಕೆಗೆ ಇದು ಪೂರಕವಾಗಲಿದೆ. ಉಪ್ಪಿನಂಗಡಿ ಭಾಗದ ಜನರ ಬಹುಕಾಲದ ಬೇಡಿಕೆ 110/11 ಕೆ.ವಿ. ಸಬ್ ಸ್ಟೇಷನ್ ನೆಕ್ಕಿಲಾಡಿ ಭಾಗದಲ್ಲಿ ಆಗಬೇಕು. ಪುತ್ತೂರಿನ ಬನ್ನೂರಿನಲ್ಲಿ 110 ಕೆ.ವಿ. ಸಬ್ ಸ್ಟೇಷನ್ ಹಾಗೂ 33 ಕೆ.ವಿ. ಸಬ್ ಸ್ಟೇಷನ್ ಕಾರ್ಯಚರಿಸುತ್ತಿದೆ. ಆದರೂ ವಿದ್ಯುತ್ ಸಮಸ್ಯೆ ದೂರವಾಗಿಲ್ಲ. ಆದ್ದರಿಂದ ಉಪ್ಪಿನಂಗಡಿಯಲ್ಲಿ 110 ಕೆ.ವಿ. ಸಬ್ ಸ್ಟೇಷನಿಗೆ ಶಾಸಕ ಸಂಜೀವ ಮಠಂದೂರು ಅವರು ಪ್ರಸ್ತಾವನೆ ಸಲ್ಲಿಸಿದ್ದರು.

110 ಕೆ.ವಿ. ಸಬ್ ಸ್ಟೇಷನಿಗಾಗಿ ಕರ್ವೇಲಿನಲ್ಲಿ 3.26 ಎಕ್ರೆ ಜಮೀನು ಮಂಜೂರು | ಪ್ರಸ್ತಾವನೆ ಸಲ್ಲಿಸಿದ್ದ ಶಾಸಕ ಸಂಜೀವ ಮಠಂದೂರು | 1.04 ಕೋಟಿ ರೂ. ಪಾವತಿಸಿದ ಕೆ.ಪಿ.ಟಿ.ಸಿ.ಎಲ್ Read More »

error: Content is protected !!
Scroll to Top