ವಿಧಾನಸಭೆ ಸ್ಪೀಕರ್‌ ಆಗಿ ಯು.ಟಿ ಖಾದರ್ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆ ಸಭಾಪತಿ ಸ್ಥಾನಕ್ಕೆ ಮಾಜಿ ಸಚಿವ, ಮಂಗಳೂರಿನ ಶಾಸಕ ಯು.ಟಿ ಖಾದರ್ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ಯು.ಟಿ ಖಾದರ್ ಅವರು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿಗೆ ಅವರಿಗೆ ನಾಮಪತ್ರ ಸಲ್ಲಿಸಿದ್ದರು. ಖಾದರ್ ಅವರನ್ನು ಹೊರತುಪಡಿಸಿ ಮತ್ತ್ಯಾರೂ ಸ್ಪೀಕರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೊದಲಿಗೆ ಯು.ಟಿ ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು. ಅದನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅನುಮೋದಿಸಿದರು. ಬಳಿಕ ಖಾದರ್ […]

ವಿಧಾನಸಭೆ ಸ್ಪೀಕರ್‌ ಆಗಿ ಯು.ಟಿ ಖಾದರ್ ಅವಿರೋಧ ಆಯ್ಕೆ Read More »

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಕಾರಲ್ಲಿದ್ದವರು ಪಾರು

ಪುತ್ತೂರು: ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕೌಡಿಚ್ಚಾರು ಮಡ್ಯಂಗಳ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು, ನಜ್ಜುಗುಜ್ಜಾಗಿದೆ. ಕಾರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕ ನಿದ್ದೆಯ ಮಂಪರಿನಲ್ಲಿದುದೇ, ಘಟನೆಗೆ ಕಾರಣ ಎನ್ನಲಾಗಿದೆ.

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಕಾರಲ್ಲಿದ್ದವರು ಪಾರು Read More »

ಸಿ.ಆರ್.ಝಡ್. ಮರಳುಗಾರಿಕೆ ಇನ್ನೇನಿದ್ದರೂ ಮಳೆಗಾಲದ ನಂತರ!

ಮಂಗಳೂರು : ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆ ಮಳೆಗಾಲ ಆರಂಭವಾಗುವ ಎರಡು ತಿಂಗಳ ಮೊದಲೇ ಪೂರ್ಣಗೊಂಡಿದೆ. ಚುನಾವಣೆ ಕಾರಣದಿಂದಾಗಿ ಮತ್ತೆ ಪರಿಸರ ಇಲಾಖೆಯ ಕ್ಲಿಯರೆನ್ಸ್‌ ಪಡೆಯುವ ಪ್ರಕ್ರಿಯೆಗಳು ತಡವಾಗಿರುವ ಕಾರಣ ಈ ಬಾರಿ ಸಿಆರ್‌ಝಡ್‌ ಮರಳುಗಾರಿಕೆ ಇನ್ನೇನಿದ್ದರೂ ಮಳೆಗಾಲದ ಬಳಿಕವೇ ನಡೆಯಬೇಕಷ್ಟೆ. ಪರವಾನಿಗೆಯ ಅವಧಿ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಮಾ. 4ಕ್ಕೇ ಸಿಆರ್‌ಝಡ್‌ ವ್ಯಾಪ್ತಿಯ ಮರಳು ದಿಣ್ಣೆಗಳಲ್ಲಿ ಮರಳುಗಾರಿಕೆ ನಿಂತಿದೆ. ಆ ಬಳಿಕ ಇಸಿ ಮತ್ತೆ ಪಡೆಯುವುದಕ್ಕೆ ಬೇಕಾದ ಬೆಥಮೆಟ್ರಿ ಸರ್ವೇ ಪೂರ್ಣಗೊಂಡಿದೆ. ಆದರೆ ವರದಿ ಬರಲು ಬಾಕಿ

ಸಿ.ಆರ್.ಝಡ್. ಮರಳುಗಾರಿಕೆ ಇನ್ನೇನಿದ್ದರೂ ಮಳೆಗಾಲದ ನಂತರ! Read More »

ವಿದ್ಯಾನಗರ ಶ್ರೀ ಕೊರತ್ತಿ ಪರಿವಾರ ದೈವಗಳಿಗೆ ತಂಬಿಲ ಅಗೇಲು ಸೇವೆ

ಕಡಬ: ಕಡಬ ವಿದ್ಯಾನಗರದ ಕೋಟೆಂಬರ ಕೊಚ್ಚಿಯಲ್ಲಿನ ಶ್ರೀ ಕೊರತ್ತಿ, ಪಂಜುರ್ಲಿ, ಗುಳಿಗ ದೈವಗಳಿಗೆ ತಂಬಿಲ ಹಾಗೂ ಅಗೇಲು ಸೇವೆ ಮಂಗಳವಾರ ನಡೆಯಿತು. ಬೆಳಿಗ್ಗೆ ದೈವಜ್ಞ ಪ್ರಸಾದ್ ಕೆದಿಲಾಯ ಅವರ ನೇತೃತ್ವದಲ್ಲಿ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಪ್ರಧಾನ ಪರಿಚಾರಕ ಶ್ರೀಧರ ನಾಯ್ಕ್ ಕುಂಡಿಲು ಅವರ ನೇತೃತ್ವದಲ್ಲಿ ದೈವಗಳಿಗೆ ಅಗೇಲು ಹಾಕಿ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೈವಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಗೌರವಾಧ್ಯಕ್ಷ ವೆಂಕಟ್ರಮಣ ರಾವ್ ಮಂಕುಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ,

ವಿದ್ಯಾನಗರ ಶ್ರೀ ಕೊರತ್ತಿ ಪರಿವಾರ ದೈವಗಳಿಗೆ ತಂಬಿಲ ಅಗೇಲು ಸೇವೆ Read More »

ನೂಜಿಬಾಳ್ತಿಲ: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

ಕಡಬ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿಯ ಗ್ರಂಥಾಲಯ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಶಿಬಿರ ಉದ್ಘಾಟಿಸಿ ಮಾತನಾಡಿ, ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಶೈಕ್ಷಣಿಕ ವರ್ಷದ ಶಾಲಾರಂಭ ಆಗಲಿದೆ. ಇದಕ್ಕೂ ಮೊದಲು ಬೇಸಿಗೆ ಶಿಬಿರಗಳನ್ನು ನಡೆಸಲಾಗುತ್ತಿರುವುದು ಮಕ್ಕಳಿಗೆ ಶಾಲಾರಂಭಕ್ಕೆ ಹೊಂದಿಕೊಳ್ಳಲು ಪೂರಕವಾಗಲಿದೆ. ಅಲ್ಲದೆ ಶಿಬಿರಗಳು ಮಕ್ಕಳಿಗೆ ವಿವಿಧ ರೀತಿಯಲ್ಲಿ ತೊಡಗಿಕೊಳ್ಳಲು ಹಾಗೂ ತಮ್ಮ ವ್ಯಕ್ತಿತ್ವ

ನೂಜಿಬಾಳ್ತಿಲ: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ Read More »

ವರ್ಗಾವಣೆಗೊಂಡಿರುವ ಸಿಬ್ಬಂದಿಗಳಿಗೆ ಬೀಳ್ಕೊಡುಗೆ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ಯೋಜನಾ ಕಚೇರಿಯಿಂದ ಬಡ್ತಿಗೊಂಡು ವರ್ಗಾವಣೆಯಾಗಿರುವ ಸಿಬ್ಬಂದಿಗಳಿಗೆ ತಾಲೂಕು ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಡಬ ಯೋಜನಾ ಕಛೇರಿಯಲ್ಲಿ ಸಹಾಯಕ ಪ್ರಭಂದಕರಾಗಿ ಕೆಲಸನಿರ್ವಹಿಸುತ್ತಿದ್ದ ರೂಪಾರವರು ಕೇಂದ್ರ ಕಚೇರಿಯ ಡಾಟಾ ಸೆಂಟರ್ ವಿಭಾಗಕ್ಕೆ ಮ್ಶಾನೇಜರ್ ಆಗಿ ವರ್ಗಾವಣೆಯಾಗಿದ್ದಾರೆ.  ತಾಲೂಕಿನಲ್ಲಿ ನಗದು ಸಹಾಯಕರಾಗಿ ಹಾಗೂ ಪ್ರಭಾರ ಕೃಷಿ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸಿರುವ ರಮ್ಶಾ ಅವರು  ತೀರ್ಥಹಳ್ಳಿ ಯೋಜನಾ ಕಚೇರಿಯ ನಗದು ಸಹಾಯಕಿ ಮೇಲ್ವಿಚಾರಕಿಯಾಗಿ ಬಡ್ತಿಗೊಂಡು ವರ್ಗಾವಣೆಗೊಂಡಿದ್ದಾರೆ. ತಾಲೂಕಿನ ನಗದು ಸಹಾಯಕಿಯಾಗಿ ಕೆಲಸ

ವರ್ಗಾವಣೆಗೊಂಡಿರುವ ಸಿಬ್ಬಂದಿಗಳಿಗೆ ಬೀಳ್ಕೊಡುಗೆ Read More »

ಮೇ 25, 26, 27 : ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ, ವಾರ್ಷಿಕೋತ್ಸವ, ಹಿರಿಯ ವಿದ್ಯಾರ್ಥಿಗಳ ಸಹಮಿಲನ ಕಾರ್ಯಕ್ರಮ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಕಾರ್ಯಕ್ರಮ, ವಿದ್ಯಾರ್ಥಿಗಳ ಪ್ರತಿಭಾ ದಿನ,  ಕಾಲೇಜು ವಾರ್ಷಿಕೋತ್ಸವ ವಿಬ್‌ಜಯಾರ್-2023, ಹಿರಿಯ ವಿದ್ಯಾರ್ಥಿಗಳ ಸಹಮಿಲನ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಸಂಜೆ ರಿದಂ ಕಾರ್ಯಕ್ರಮಗಳು ಮೇ 25, 26 ಹಾಗೂ 27ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಮೇ 25 ಗುರುವಾರ ಬೆಳಗ್ಗಿನಿಂದ ವಿದ್ಯಾರ್ಥಿಗಳ ವರ್ಷವಾರು ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ನಡೆಯಲಿದೆ. ಸಂಜೆ 3ಗಂಟೆಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದ್ದು, ತೆಂಕಿಲ ನರೇಂದ್ರ ಪದವಿಪೂರ್ವ

ಮೇ 25, 26, 27 : ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ, ವಾರ್ಷಿಕೋತ್ಸವ, ಹಿರಿಯ ವಿದ್ಯಾರ್ಥಿಗಳ ಸಹಮಿಲನ ಕಾರ್ಯಕ್ರಮ Read More »

ಬೆಳ್ಳಿಪ್ಪಾಡಿ ಕೂಟೇಲು ನಿವಾಸಿ ಶೀನಪ್ಪ ಗೌಡ ನಿಧನ

ಪುತ್ತೂರು: ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೂಟೇಲು ನಿವಾಸಿ ಶೀನಪ್ಪ ಗೌಡ ಕೂಟೇಲು (60) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಕೃಷಿಕರಾಗಿದ್ದ ಅವರು ಪತ್ನಿ ಹಾಗೂ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ನಿಧನದ 5ನೇ ದಿನದ ಕಾರ್ಯ ನಾಳೆ (ಬುಧವಾರ) ಕೂಟೇಲು ಮನೆಯಲ್ಲಿ ನಡೆಯಲಿದೆ.

ಬೆಳ್ಳಿಪ್ಪಾಡಿ ಕೂಟೇಲು ನಿವಾಸಿ ಶೀನಪ್ಪ ಗೌಡ ನಿಧನ Read More »

ರಾಷ್ಟ್ರ ಮಟ್ಟದ ಸ್ಪರ್ಧೆ‍ಯಲ್ಲಿ ಅಕ್ಷಯ ಕಾಲೇಜಿಗೆ ಹಲವು ಬಹುಮಾನ

ಪುತ್ತೂರು: ಮಂಗಳೂರಿನ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಅಂತರ್ ಸ್ಪರ್ಧೆಯಲ್ಲಿ ಅಕ್ಷಯ ಎಜ್ಯುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ನಡಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ವಿವಿಧ ಬಹುಮಾನಗಳನ್ನು ಪಡೆದಿದೆ. ಎಕೆಲಾನ್ 23 ರಾಷ್ಟ್ರಮಟ್ಟದ ಸ್ಪರ್ಧೆ ಮೆಹಂದಿಯಲ್ಲಿ ಪ್ರಥಮ, ದೇಹದಾರ್ಢ್ಯ ಪ್ರಥಮ, ಮೈಮ್ ಶೋ ಪ್ರಥಮ ಹಾಗೂ ಫ್ಯಾಶನ್ ಶೋದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದ ಎಕ್ಸೆಲೋ 2ಕೆ23 ರಾಷ್ಟ್ರಮಟ್ಟದ ಸ್ಪರ್ಧೆ‍ಯಲ್ಲಿ ಸ್ಟ್ಯಾಂಡ್ ಆಪ್ ಕಾಮಿಡಿಯಲ್ಲಿ ಪ್ರಥಮ, ಆರ್ಟ್‍‍ ಔಟ್ ಆಫ್ ಪೇಸ್ಟ್

ರಾಷ್ಟ್ರ ಮಟ್ಟದ ಸ್ಪರ್ಧೆ‍ಯಲ್ಲಿ ಅಕ್ಷಯ ಕಾಲೇಜಿಗೆ ಹಲವು ಬಹುಮಾನ Read More »

ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ ಡಿವೈಎಸ್ ಪಿ ಅವರನ್ನು ಸಸ್ಪೆಂಡ್ ಮಾಡಲಿ : ಅಖಿಲ ಭಾರತ ಹಿಂದೂ ಮಹಾಸಭಾ ಆಗ್ರಹ

ಪುತ್ತೂರು: ಇತ್ತೀಚೆಗೆ ಹಿಂದೂ  ಕಾರ್ಯಕರ್ತರ ಮೇಲೆ ಡಿವೈಎಸ್ ಪಿ ಸಹಿತ ಪೊಲೀಸರು ನಡೆಸಿದ ದೌರ್ಜನ್ಯದಲ್ಲಿ ಕೇವಲ ಪೊಲೀಸರನ್ನು ಮಾತ್ರ ಸಸ್ಪೆಂಡ್ ಮಾಡಲಾಗಿದ್ದು, ಡಿವೈಎಸ್ ಪಿಯವರನ್ನೂ ಯಾಕೆ ಸಸ್ಪೆಂಡ್ ಮಾಡಿಲ್ಲ. ಇದನ್ನು ನ್ಯಾಯಾಲಯದ ಮೂಲಕ ಪ್ರಶ್ನಿಸಲಾಗುವುದು ಎಂದು ಅಭಿನವ ಭಾರತ ಹಾಗೂ ಅಖಿಲ ಭಾರತ ಹಿಂದು ಮಹಾಸಭಾ ತಿಳಿಸಿದೆ. ಮಂಗಳವಾರ ಹಿಂದೂ ಮಹಾಸಭಾದ ಸಭಾಚಾಲಕ್ ಧರ್ಮೇಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರಿನಲ್ಲಿ ನಡೆದ ಘಟನೆ ತಲೆತಗ್ಗಿಸುವಂತದ್ದು. ಪೊಲೀಸ್ ಇಲಾಖೆ ಕಾನೂನಿನ ದುರ್ಬಳಕೆ ಮಾಡುವುದನ್ನು ಹಿಂದು ಮಹಾಸಭಾ  ಸಹಿಸುವುದಿಲ್ಲ. ದೌರ್ಜನ್ಯ ಎಸಗಿದ

ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ ಡಿವೈಎಸ್ ಪಿ ಅವರನ್ನು ಸಸ್ಪೆಂಡ್ ಮಾಡಲಿ : ಅಖಿಲ ಭಾರತ ಹಿಂದೂ ಮಹಾಸಭಾ ಆಗ್ರಹ Read More »

error: Content is protected !!
Scroll to Top