ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದಲ್ಲಿ ರಾಮನವಮಿ ಆಚರಣೆ

ಪುತ್ತೂರು: ಭಾರತ ಸಂಸ್ಕೃತಿಯಲ್ಲಿ ನಮ್ಮದೇ ಆದ ವೇಳಾಪಟ್ಟಿ ಇದೆ, ಅದುವೇ ಪಂಚಾಂಗ. ಚೈತ್ರ ಮಾಸದ ನವಮಿಯಂದು ರಾಮ ಹುಟ್ಟಿದ್ದರಿಂದ ಆ ದಿನ ರಾಮನವಮಿಯನ್ನು ಆಚರಣೆ ಮಾಡುತ್ತೇವೆ ಎಂದು ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜ ಶಂಕರ ಸೋಮಯಾಜಿ ಹೇಳಿದರು. ಅವರು ನಗರದ ಬಪ್ಪಳಿಗೆಯ ಅಂಬಿಕಾ ಸಿಬಿಎಸ್ ಇ ವಿದ್ಯಾಲಯದಲ್ಲಿ ರಾಮನವಮಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾವು ಯೋಚಿಸುವಾಗ ಕೆಟ್ಟದರಲ್ಲೂ  ಏನು ಒಳ್ಳೆಯದಿದೆ ಎಂಬುವುದನ್ನು ಯೋಚಿಸಬೇಕು. ಅಂತೆಯೇ ಜೀವನದಲ್ಲಿ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು […]

ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದಲ್ಲಿ ರಾಮನವಮಿ ಆಚರಣೆ Read More »

ಆಮ್ ಆದ್ಮಿ ಪುತ್ತೂರು ಅಭ್ಯರ್ಥಿಯಾಗಿ ಡಾ. ಬಿ.ಕೆ. ವಿಷು ಕುಮಾರ್

ಪುತ್ತೂರು: ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಆಮ್ ಆದ್ಮಿ ಪಕ್ಷ, ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಬಿ.ಕೆ. ವಿಷು ಕುಮಾರ್ ಅವರನ್ನು ಆಯ್ಕೆ ಮಾಡಿದೆ. ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿತ್ತು. ಇದೀಗ ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪುತ್ತೂರು ಬಿಟ್ಟರೆ ಜಿಲ್ಲೆಯ ಮಂಗಳೂರು ನಗರ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಸಂದೀಪ್ ಶೆಟ್ಟಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕಳೆದೊಂದು ವರ್ಷದಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ

ಆಮ್ ಆದ್ಮಿ ಪುತ್ತೂರು ಅಭ್ಯರ್ಥಿಯಾಗಿ ಡಾ. ಬಿ.ಕೆ. ವಿಷು ಕುಮಾರ್ Read More »

ಮೋದಿಯವರ ಪದವಿ ಮತ್ತು ಸ್ನಾತಕೋತ್ತರ ಪ್ರಮಾಣಪತ್ರ ಕೇಳಿದ್ದ ದೆಹಲಿ ಸಿಎಂಗೆ 25 ಸಾವಿರ ರೂ. ದಂಡ

ದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣಪತ್ರ ಕೇಳಿದ್ದ ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ಅವರಿಗೆ ಗುಜರಾತ್ ಹೈಕೋರ್ಟ್ ಮಾ. 31 ರಂದು 25 ಸಾವಿರ ರೂ. ದಂಡ ವಿಧಿಸಿದೆ. ಪ್ರಧಾನಿ ಕಾರ್ಯಾಲಯವು ಪ್ರಧಾನಿ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪ್ರಮಾಣಪತ್ರಗಳನ್ನು ನೀಡಬೇಕಾದ ಅಗತ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಆರ್‌ಟಿಐನಡಿ ಈ ಮಾಹಿತಿಯನ್ನು ಸಿಎಂ ಕೇಜ್ರೀವಾಲ್ ಕೇಳಿದ್ದಕ್ಕೆ ದಂಡ ವಿಧಿಸಲಾಗಿದೆ. ಆರ್‌ಟಿಐನಡಿ ಸಿಎಂ ಅರವಿಂದ ಕೇಜ್ರೀವಾಲ್ ಅರ್ಜಿ ಸಲ್ಲಿಸಿದ್ದ ಮೇರೆಗೆ

ಮೋದಿಯವರ ಪದವಿ ಮತ್ತು ಸ್ನಾತಕೋತ್ತರ ಪ್ರಮಾಣಪತ್ರ ಕೇಳಿದ್ದ ದೆಹಲಿ ಸಿಎಂಗೆ 25 ಸಾವಿರ ರೂ. ದಂಡ Read More »

ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ  : ದರ್ಶನ ಬಲಿ

ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 8 ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ಪಲ್ಲಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆದು ಬಳಿಕ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ,

ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ  : ದರ್ಶನ ಬಲಿ Read More »

ಹೊಸ ವಿದೇಶಿ ವ್ಯಾಪಾರ ನೀತಿ- 2023 ಬಿಡುಗಡೆ

ದೆಹಲಿ : ಹೊಸ ವಿದೇಶಿ ವ್ಯಾಪಾರ ನೀತಿ-2023ನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ್ದು, ಹೊಸ ನೀತಿಯಲ್ಲಿ 2030ರ ವೇಳೆಗೆ ಭಾರತದ ಸರಕು ರಫ್ತು ಪ್ರಮಾಣವನ್ನು 2 ಟ್ರಿಲಿಯನ್ ಡಾಲರ್​ಗೆ ಹೆಚ್ಚಿಸುವ​ ಗುರಿಯನ್ನು ಹೊಂದಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರು ಇಂದು ದೆಹಲಿಯಲ್ಲಿ ವಿದೇಶಿ ವ್ಯಾಪಾರ ನೀತಿ 2023 ಅನ್ನು ಬಿಡುಗಡೆ ಮಾಡಿದರು.ಬಳಿಕ ಮಾತನಾಡಿದ ಗೋಯಲ್ ಅವರು 2030 ರ ವೇಳೆಗೆ ಭಾರತದ ರಫ್ತು ವ್ಯಾಪಾರವು 2 ಟ್ರಿಲಿಯನ್ ಡಾಲರ್ ತಲುಪಲಿದೆ

ಹೊಸ ವಿದೇಶಿ ವ್ಯಾಪಾರ ನೀತಿ- 2023 ಬಿಡುಗಡೆ Read More »

ದೇವಾಲಯದ ಮೆಟ್ಟಿಲು ಬಾವಿ ಕುಸಿತ ಪ್ರಕರಣ : ಸ್ಥಳಕ್ಕೆ ಸಿಎಂ ಚೌಹಾಣ್ ಭೇಟಿ

ಇಂದೋರ್ : ರಾಮನವಮಿ ನಿಮಿತ್ತ ಇಂದೋರ್’ನ ಬೇಲೇಶ್ವರ ದೇವಸ್ಥಾನದಲ್ಲಿ ಹೋಮ ಹವನ ಏರ್ಪಡಿಸಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಬಂದು ನೂಕು ನುಗ್ಗಲು ಏರ್ಪಟ್ಟಿತ್ತು. ಈ ವೇಳೆ ದೇಗುಲದ ಬಾವಿ ಬಳಿಯ ಭೂಮಿ ಕುಸಿದಿದ್ದು, ಇದರ ಪರಿಣಾಮ ಅಲ್ಲೇ ಇದ್ದ ಬಾವಿಯ ಕಬ್ಬಿಣದ ಸರಳಿನ ಮೇಲ್ಛಾವಣಿಯೂ ಕುಸಿದು ಬಿದ್ದಿತ್ತು. ಈ ವೇಳೆ ಸ್ಥಳದಲ್ಲಿದ್ದ ಹಲವು ಮಂದಿ ಭಕ್ತರು ಬಾವಿಗೆ ಬಿದ್ದಿದ್ದರು. ದುರ್ಘಟನೆಯಲ್ಲಿ ಈ ವರೆಗೂ 35 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ

ದೇವಾಲಯದ ಮೆಟ್ಟಿಲು ಬಾವಿ ಕುಸಿತ ಪ್ರಕರಣ : ಸ್ಥಳಕ್ಕೆ ಸಿಎಂ ಚೌಹಾಣ್ ಭೇಟಿ Read More »

ಶ್ರೀ ಮಹಾಲಿಂಗೇಶ್ವರನ ಜಾತ್ರೆಗೆ ಸುಣ್ಣ-ಬಣ್ಣ ಶೃಂಗಾರ

ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವೇ ಹೀಗೆ. ಸಡಗರ, ಸಂಭ್ರಮದೊಂದಿಗೆ ಸ್ವಚ್ಛತೆ, ಶೃಂಗಾರಕ್ಕೂ ಇಲ್ಲಿದೆ ಆದ್ಯತೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ವರ್ಷಾವಧಿ ಜಾತ್ರೆಗೆ ಅಣಿಯಾಗುತ್ತಿದ್ದಂತೆ ಇಡೀ ಆಲಯ ಶೃಂಗಾರ ವರ್ಣ ಬಣ್ಣಗಳಿಂದ ಭಕ್ತರ ಕಣ್ಮನ ಸೆಳೆಯುತ್ತಿರುವುದು ನಿಜ. ಪ್ರತೀ ವರ್ಷ ಜಾತ್ರೆ ಸಂದರ್ಭದಲ್ಲಿ ದೇವಸ್ಥಾನದ ವಠಾರ ಸಹಿತ ಒಳಾಂಗಣ, ಹೊರಾಂಗಣ, ರಥಬೀದಿ ಹೀಗೆ ಇಂಚಿಂಚು ಬಿಡದೆ ಸ್ವಚ್ಛಗೊಳಿಸುವುದರ ಜತೆಗೆ ಸುತ್ತುಪೌಳಿಯ ಒಳಾಂಗಣ, ಹೊರಾಂಗಣದ ಗೋಡೆ, ಉಪ ದೇವರ ಗುಡಿಗಳು ಸಹಿತ ದೇವಸ್ಥಾನದ ಎದುರಗಡೆ

ಶ್ರೀ ಮಹಾಲಿಂಗೇಶ್ವರನ ಜಾತ್ರೆಗೆ ಸುಣ್ಣ-ಬಣ್ಣ ಶೃಂಗಾರ Read More »

ಬಲವಂತದ ಮತಾಂತರ ಮತ್ತು ವಿವಾಹಗಳ ಬೆದರಿಕೆಯ ವಿರುದ್ಧ ಪಾಕಿಸ್ತಾನದ ಹಿಂದೂ ಸಮುದಾಯ ಸದಸ್ಯರ ಪ್ರತಿಭಟನೆ

ಕರಾಚಿ : ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಹಲವರು ದೇಶದಲ್ಲಿ ಹಿಂದೂ ಹುಡುಗಿಯರು ಮತ್ತು ಮಹಿಳೆಯರ ಬಲವಂತದ ಮತಾಂತರ ಮತ್ತು ವಿವಾಹಗಳ ಬೆದರಿಕೆಯ ಬಗ್ಗೆ ಗಮನ ಸೆಳೆಯಲು ಪ್ರತಿಭಟನಾ ಮೆರವಣಿಗೆ ನಡೆಸಿದರು. ಕರಾಚಿ ಪ್ರೆಸ್ ಕ್ಲಬ್‌ನ ಹೊರಗೆ ಮತ್ತು ಸಿಂಧ್ ಅಸೆಂಬ್ಲಿ ಕಟ್ಟಡದ ಪ್ರವೇಶದ್ವಾರದಲ್ಲಿ ಗುರುವಾರ ನಡೆದ ಪ್ರತಿಭಟನೆಯನ್ನು ಹಿಂದೂ ಸಂಘಟನೆಯಾದ ಪಾಕಿಸ್ತಾನ್ ದಾರಾವರ್ ಇತ್ತೆಹಾದ್ (ಪಿಡಿಐ) ಆಯೋಜಿಸಿತ್ತು.ಸಿಂಧಿ ಹಿಂದೂಗಳು ಎದುರಿಸುತ್ತಿರುವ ಈ ದೊಡ್ಡ ಸಮಸ್ಯೆಯನ್ನು ನಾವು ಹೈಲೈಟ್ ಮಾಡಲು ಬಯಸಿದ್ದೇವೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ

ಬಲವಂತದ ಮತಾಂತರ ಮತ್ತು ವಿವಾಹಗಳ ಬೆದರಿಕೆಯ ವಿರುದ್ಧ ಪಾಕಿಸ್ತಾನದ ಹಿಂದೂ ಸಮುದಾಯ ಸದಸ್ಯರ ಪ್ರತಿಭಟನೆ Read More »

ನಾಳೆಯಿಂದ (ಏ.1)  ಸಂತಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಉಚಿತವೈಟ್‌ ಲಿಪ್ಟಿಂಗ್‌, ಅಥ್ಲೆಟಿಕ್ಸ್‌ ಹಾಗೂ ಕ್ರಿಕೆಟ್‌ ತರಬೇತಿ ಶಿಬಿರ

ಪುತ್ತೂರು:  ಮಂಗಳೂರು ವಿಶ್ವವಿದ್ಯಾನಿ ಲಯ ಹಾಗೂ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ವೈಟ್ ಲಿಫ್ಟಿಂಗ್, ಅಥ್ಲೆಟಿಕ್ಸ್ ಹಾಗೂ ಕ್ರಿಕೆಟ್ ತರಬೇತಿ ಶಿಬಿರ ಏ.1 ರಿಂದ ಕಾಲೇಜಿನ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. 18 ವರ್ಷದ ಒಳಗಿನ ಹುಡುಗ-ಹುಡುಗಿಯರಿಗೆ ತರಬೇತಿ ನಡೆಯಲಿದ್ದು, ಒಂದು ತಿಂಗಳ ಕಾಲ ಶಿಬಿರ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್‌ ಪಿಂಟೋ (9448549616) ಹಾಗೂ ರಾಜೇಶ್‌ ಮೂಲ್ಯ (9964084411) ರವರನ್ನು ಸಂಪರ್ಕಿಸಬಹುದು ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆಯಿಂದ (ಏ.1)  ಸಂತಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಉಚಿತವೈಟ್‌ ಲಿಪ್ಟಿಂಗ್‌, ಅಥ್ಲೆಟಿಕ್ಸ್‌ ಹಾಗೂ ಕ್ರಿಕೆಟ್‌ ತರಬೇತಿ ಶಿಬಿರ Read More »

ವಾಟ್ಸಪ್ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದಲ್ಲಿ ಸಾಯುವ ಕುರಿತಾಗಿ ವಾಟ್ಸ್ಯಾಪ್ ಸ್ಟೇಟಸ್ ಹಾಕಿ ಬಳಿಕ ಮರವೊಂದಕ್ಕೆ ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ‌ಮಾಡಿಕೊಂಡ ಘಟನೆ ಮಾ. 31 ರಂದು ಸಂಭವಿಸಿದೆ. ರೆನೀಶ್ (27) ಎಂಬಾತನೇ ಮೃತ ಯುವಕ. ಮೃತ ರೆನೀಶ್ ತಂದೆ ತಾಯಿ ಮರಣ ಹೊಂದಿದ್ದು, ಇವನ ತಮ್ಮ ಕಳೆದ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ರೆನೀಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿದ್ಯುತ್ ಲೈನ್ ನ ಕೆಲಸಕ್ಕೆ ಹೋಗುತ್ತಿದ್ದ.

ವಾಟ್ಸಪ್ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ Read More »

error: Content is protected !!
Scroll to Top