ಇದು ಪ್ರಚಾರದ ವಿಷಯವಾಗಿದೆ. ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರದ ಸೋಲಿಗೆ ಕೊಡುಗೆ ನೀಡುತ್ತದೆ : ಮೊಯ್ಲಿ

ಬೆಂಗಳೂರು : ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ರಾಹುಲ್ ಗಾಂಧಿಯವರ ಅನರ್ಹತೆಯು ಕಾಂಗ್ರೆಸ್‌ನ ರಾಜಕೀಯ ಲಾಭಕ್ಕೆ ಸಹಾಯ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೊಯ್ಲಿ, ಖಂಡಿತವಾಗಿ, ಇದು ಪ್ರಚಾರದ ವಿಷಯವಾಗಿದೆ. ಮತ್ತು ಇದು ರಾಜ್ಯದಲ್ಲಿ ಬಿಜೆಪಿ ಸರಕಾರದ ಸೋಲಿಗೆ ಕೊಡುಗೆ ನೀಡುತ್ತದೆ ಹಾಗೂ ಸೇಡಿನ ರಾಜಕೀಯದ ಉತ್ತುಂಗವನ್ನು ತೋರಿಸುತ್ತದೆ ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಸೋಮವಾರ ಹೇಳಿದರು. ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಇದೆ ಮತ್ತು ಭ್ರಷ್ಟಾಚಾರ ವಿಷಯಗಳ ಬಗ್ಗೆ […]

ಇದು ಪ್ರಚಾರದ ವಿಷಯವಾಗಿದೆ. ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರದ ಸೋಲಿಗೆ ಕೊಡುಗೆ ನೀಡುತ್ತದೆ : ಮೊಯ್ಲಿ Read More »

ದ್ವಿಚಕ್ರ ವಾಹನದ ಟೈರ್ ಸ್ಫೋಟ : ಟೆಕ್ಕಿ ಸಾವು

ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ವೇಳೆ ಟೈರ್ ಸ್ಫೋಟಗೊಂಡ ಪರಿಣಾಮ ಟೆಕ್ಕಿಯೋರ್ವರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊಸಕೆರೆಹಳ್ಳಿ ಬಳಿಯ ನೈಸ್ ರಸ್ತೆಯಲ್ಲಿ ಸ್ಕೂಟರ್ ಟೈರ್ ಸ್ಫೋಟಗೊಂಡು, ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಾಪ್ಟ್‌ವೇರ್ ಇಂಜಿನಿಯರ್ ಸುಲೋಚನಾ(24) ಏ. 3 ರ ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ಸುಮನ್ ಪನ್ನೇಕರ್ ತಿಳಿಸಿದ್ದಾರೆ. ಕೋರಮಂಗಲದಿಂದ ಹೊಸಕೆರೆಹಳ್ಳಿ ಕಡೆಗೆ ಸುಲೋಚನಾ ಮತ್ತು ಆಕೆಯ ಸ್ನೇಹಿತ ಆನಂದ್ ಹೋಗುತ್ತಿದ್ದ ವೇಳೆ ಆನಂದ್ ಪೂರ್ಣ ಹೆಲ್ಮೇಟ್ ಧರಿಸಿದ್ದು,

ದ್ವಿಚಕ್ರ ವಾಹನದ ಟೈರ್ ಸ್ಫೋಟ : ಟೆಕ್ಕಿ ಸಾವು Read More »

ನಿವೃತ್ತ ಶಿಕ್ಷಕ ದಿ.ಮದನ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಸಭೆ

ಪುತ್ತೂರು: ಇತ್ತೀಚೆಗೆ ನಿಧನರಾದ ಕುದ್ಮಾರು ಶಾಲಾ ನಿವೃತ್ತ ಮುಖ್ಯ ಶಿಕ್ಷಕ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮದನ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಸಭೆ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಶಾಂತಿಮೊಗರು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಸವಣೂರು ಮಾತನಾಡಿ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅಭಿವೃದ್ಧಿಯಲ್ಲಿ ಮದನ ಪೂಜಾರಿಯವರ ಪಾತ್ರ ಮಹತ್ತರ. ಜತೆಗೆ ತನ್ನ ಶಿಷ್ಯರನ್ನು ದೇವಸ್ಥಾನದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕೆಂದು ಪಣತೊಟ್ಟ ಅವರು ಆ ಸಂದರ್ಭದಲ್ಲಿ

ನಿವೃತ್ತ ಶಿಕ್ಷಕ ದಿ.ಮದನ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಸಭೆ Read More »

ಅಂಚೆ ಕಚೇರಿಯಲ್ಲಿ Ramp, ಪ್ರತ್ಯೇಕ ಕೌಂಟರ್ ಅಗತ್ಯ | ಪುತ್ತೂರು ಅಂಚೆ ಕಚೇರಿಗೆ ಅಸಹಾಯಕರ ಸೇವಾ ಟ್ರಸ್ಟ್ ನಿಂದ ಮನವಿ

ಪುತ್ತೂರು: ಸರಕಾರದ ನಿಯಮದಂತೆ ಪಾನ್ ಕಾರ್ಡ್, ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಜೋಡಿಸಬೇಕಾದ ಅನಿವಾರ್ಯತೆ ಇದ್ದು, ಈ ಎಲ್ಲಾ ಕೆಲಸ ಕಾರ್ಯಗಳಿಗೆ ಅಂಚೆ ಕಚೇರಿಗೆ ಬರುವ ವಿಕಲಚೇತನ, ವಿಶೇಷ ಚೇತನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತು ಕಡ್ಡಾಯವಾಗಿ ಇರಲೇಬೇಕಾದ Ramp ವ್ಯವಸ್ಥೆ ಪುತ್ತೂರು ಅಂಚೆ ಕಚೇರಿಗೆ ಇರುವುದಿಲ್ಲ ಇದರಿಂದ ಅನನುಕೂಲವಾಗುತ್ತಿದ್ದು, ತಕ್ಷಣ Ramp ವ್ಯವಸ್ಥೆಯನ್ನು ಮಾಡುವಂತೆ ಅಸಹಾಯಕರ ಸೇವಾ ಟ್ರಸ್ಟ್ ಅಂಚೆ ಕಚೇರಿಗೆ ಮನವಿ ಮಾಡಿದೆ. ಕಳೆದ 15 ವರ್ಷಗಳಿಂದ ಅಸಹಾಯಕರ ಸೇವಾ ಟ್ರಸ್ಟ್ ನಿರಂತರವಾಗಿ ಸಮಾಜದಲ್ಲಿ

ಅಂಚೆ ಕಚೇರಿಯಲ್ಲಿ Ramp, ಪ್ರತ್ಯೇಕ ಕೌಂಟರ್ ಅಗತ್ಯ | ಪುತ್ತೂರು ಅಂಚೆ ಕಚೇರಿಗೆ ಅಸಹಾಯಕರ ಸೇವಾ ಟ್ರಸ್ಟ್ ನಿಂದ ಮನವಿ Read More »

ಅಬಕಾರಿ ನೀತಿ ಪ್ರಕರಣ : ಸಿಸೋಡಿಯಾ ನ್ಯಾಯಾಂಗ ಬಂಧನ ಏ. 17 ರವರೆಗೆ ವಿಸ್ತರಣೆ

ದೆಹಲಿ : ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೊಳಗಾಗಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ರೋಸ್ ಅವೆನ್ಯೂ ಕೋರ್ಟ್ ಏ. 17 ರವರೆಗೆ ವಿಸ್ತರಿಸಿದೆ. ಸಿಸೋಡಿಯಾ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ ಎಎಪಿ ನಾಯಕನ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತನಿಖೆಯು “ನಿರ್ಣಾಯಕ ಹಂತದಲ್ಲಿದೆ” ಎಂದು ಹೇಳಿದೆ. ಕೋರ್ಟ್ ಸಿಬಿಐ ಮನವಿಯನ್ನು ಪುರಸ್ಕರಿಸಿ ಏ. 7ರ ವರೆಗೆ ನ್ಯಾಯಾಂಗ

ಅಬಕಾರಿ ನೀತಿ ಪ್ರಕರಣ : ಸಿಸೋಡಿಯಾ ನ್ಯಾಯಾಂಗ ಬಂಧನ ಏ. 17 ರವರೆಗೆ ವಿಸ್ತರಣೆ Read More »

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ನಿಂದ ನಿಧಿ ಸಂಗ್ರಹ ಅಭಿಯಾನ

ಪುತ್ತೂರು: ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಕಡಬ ಯುವವಾಹಿನಿ ಘಟಕದ ಸಹಕಾರದಲ್ಲಿ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಏಕಹಾ ಭಜನೆ ಸಂಭ್ರಮದಲ್ಲಿ ಉದನೆ ಬನಾರಿ ನಿವಾಸಿ ಚಂದ್ರಶೇಖರ್ ಅವರ ಚಿಕಿತ್ಸೆಯ ನೆರವಾಗಿ ನಿಧಿ ಸಂಗ್ರಹ ಅಭಿಯಾನ ನಡೆಯಿತು. ಅಭಿಯಾನದಲ್ಲಿ ಸಂಗ್ರಹವಾದ ಹಣ 29,910 ರೂ.ವನ್ನು ಚೆಕ್‍ ಮೂಲಕ ಸೋಮವಾರ ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಕಡಬ ಆರಕ್ಷಕ ಠಾಣಾ ಉಪನಿರೀಕ್ಷ ಹರೀಶ್ ಅವರು ಚಂದ್ರಶೇಖರ್ ಅವರ ಮನೆಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ನಿಂದ ನಿಧಿ ಸಂಗ್ರಹ ಅಭಿಯಾನ Read More »

ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆಯವರೊಂದಿಗೆ ಶಿಷ್ಯಮಿಲನ

ಪುತ್ತೂರು: ಪುತ್ತೂರಿಗೆ ಆಗಮಿಸಿದ ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆಯವರೊಂದಿಗೆ ಪುತ್ತೂರಿನ ಭಾಗದ ಅವರ ಶಿಷ್ಯಂದಿರ ಸುಮಧುರ ನೆನಪುಗಳ ಶಿಷ್ಯ ಮಿಲನ ಕಾರ್ಯಕ್ರಮ ಅನುರಾಗ ವಠಾರದಲ್ಲಿ ನಡೆಯಿತು. ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಎನ್ನುವಾಗ ಕನ್ನಡಿಗರಿಗೆ ಪ್ರೊ. ಮರಿಯಪ್ಪ ಭಟ್ಟ, ಪ್ರೊ. ಕುಶಾಲಪ್ಪ ಗೌಡ, ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆ ಈ ಹೆಸರುಗಳು ಸ್ಮರಣೆಗೆ ಬಂದು ಹೋಗುತ್ತವೆ. ಯಾಕೆಂದರೆ ಅವರುಗಳು ಬರೀ ಪಾಠ ಮಾಡಿದವರಲ್ಲ. ಆದರಾಚೆಗೆ ನಿಂತು ವಿದ್ಯಾರ್ಥಿಗಳನ್ನು ಮದರಾಸಿನಲ್ಲಿ ನೋಡಿ ಕೊಂಡವರು, ಸಾಕಿದವರು, ಬೆಳೆಸಿದವರು. ವಿದ್ಯಾರ್ಥಿಗಳ ಜೊತೆಗೆ

ಪ್ರೊ. ಶ್ರೀಕೃಷ್ಣ ಭಟ್ ಅರ್ತಿಕಜೆಯವರೊಂದಿಗೆ ಶಿಷ್ಯಮಿಲನ Read More »

ಜಿಲ್ಲಾಧಿಕಾರಿಯಿಂದ ರೈತರಿಗೆ ಸಿಹಿಸುದ್ದಿ : ಕೋವಿ ಠೇವಣಿಯಿಂದ ವಿನಾಯಿತಿ

ಮಂಗಳೂರು : ಚುನಾವಣೆ ಸಮಯದಲ್ಲಿ ರೈತರು ಸೇರಿದಂತೆ ಎಲ್ಲರೂ ತಮ್ಮ ಪರವಾನಗಿಯುಳ್ಳ ಕೋವಿ/ಆಯುಧಗಳನ್ನು ಸಮೀಪದ ಠಾಣೆಯಲ್ಲಿ ಠೇವಣಿ ಇಡಬೇಕಾಗುತ್ತದೆ. ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದೆಲ್ಲೆಡೆ ಈ ಆದೇಶ ಜಾರಿಯಲ್ಲಿದೆ. ಆದರೆ, ದಕ್ಷಿಣಕನ್ನಡ ಜಿಲ್ಲೆಯ ರೈತರಿಗೆ ಮಾತ್ರ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಏ.3 ರಂದು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ರೈತರು ಠೇವಣಿ ಇಡುವ ವಿಚಾರದಲ್ಲಿ ಕೆಲ ಸಡಿಲಿಕೆಗಳನ್ನು ಮಾಡಿದ್ದಾರೆ. ಚುನಾವಣೆ ಬಂದಾಗ ಸಾರ್ವಜನಿಕ ಶಾಂತಿ ಮತ್ತು ಶಿಸ್ತುಪಾಲಾನ ಮುಂಜಾಗ್ರತ ಕ್ರಮವಾಗಿ ಶಸ್ತ್ರಾಸ್ತ್ರ ಠೇವಣಿಗೆ ಆದೇಶಿಸಲಾಗುತ್ತದೆ. ರಾಜ್ಯದಲ್ಲಿ

ಜಿಲ್ಲಾಧಿಕಾರಿಯಿಂದ ರೈತರಿಗೆ ಸಿಹಿಸುದ್ದಿ : ಕೋವಿ ಠೇವಣಿಯಿಂದ ವಿನಾಯಿತಿ Read More »

ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಬೀರಮಲೆ ಮಾನಸಿಕ ವಿಕಲಚೇತನರ ಪುನರ್ ವಸತಿ ಕೇಂದ್ರದಲ್ಲಿ ಸೇವೆ

ಪುತ್ತೂರು: ಬಲ್ನಾಡು ಶೌರ್ಯ  ವಿಪತ್ತು ನಿರ್ವಹಣಾ  ಘಟಕ  ಈ ತಿಂಗಳ  ಸೇವೆ ಭಾನುವಾರ ” ಪ್ರಜ್ಞಾ ” ಬೀರಮಲೆ ಮಾನಸಿಕ  ವಿಕಲಚೇತನರ  ಪುನರ್ವಸತಿ  ಕೇಂದ್ರದಲ್ಲಿ ನಡೆಯಿತು. ಸಂಸ್ಥೆಯು ದಾನಿಗಳು, ಸಂಘ  ಸಂಸ್ಥೆಗಳ  ಸಹಕಾರದಿಂದ  ನಡೆಯುತ್ತಿದ್ದು ಆಶ್ರಮಕ್ಕೆ ಒಂದು ಎಕ್ರೆ ಜಾಗ  ಇದ್ದು ಆಶ್ರಮ ಬಿಟ್ಟು ಉಳಿದ  ಜಾಗದಲ್ಲಿ  ಮರ ಬಳ್ಳಿ  ಗಿಡಗಳು ತುಂಬಿ ದಟ್ಟವಾದ  ಕಾಡಿನಂತೆ ಇದೆ, ನಮ್ಮ  ಘಟಕದ  ಸದಸ್ಯರು ಅವರ  ಮನವಿಯಂತೆ  ಸೇವೆ ಮಾಡುವುದು ಎಂದು  ನಿರ್ಣಯ  ಮಾಡಿ ಭಾನುವಾರ ಆ ಕಾರ್ಯವನ್ನು ಮಾಡಿದೆ.

ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಬೀರಮಲೆ ಮಾನಸಿಕ ವಿಕಲಚೇತನರ ಪುನರ್ ವಸತಿ ಕೇಂದ್ರದಲ್ಲಿ ಸೇವೆ Read More »

ಎಮ್‌ಎಲ್‌ಸಿ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ ಆಯನೂರು ಮಂಜುನಾಥ್

ಶಿವಮೊಗ್ಗ : ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ವಿಧಾನಸಭೆಗೆ ಕಣಕ್ಕಿಳಿಯಲೇಬೇಕು ಎಂಬ ಇಚ್ಚೆಯಿಂದ ಸಾರ್ವತ್ರಿಕವಾಗಿ ಹೇಳಿದ್ದೇನೆ. ಪಕ್ಷದ ವೇದಿಕೆಯಲ್ಲೂ ನನ್ನ ವಿನಂತಿ ಮಾಡಿಕೊಂಡಿದ್ದೇನೆ. ಆದರೆ, ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದೇನೆಂದು ಹೇಳಿದ್ದಾರೆ.ಮೊನ್ನೆ ಈಶ್ವರಪ್ಪ‌ ಹೇಳಿದ ಮಾತನ್ನು

ಎಮ್‌ಎಲ್‌ಸಿ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ ಆಯನೂರು ಮಂಜುನಾಥ್ Read More »

error: Content is protected !!
Scroll to Top