ಬೆಳ್ತಂಗಡಿಯ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ – ಕರಾವಳಿಯಲ್ಲಿ ಮಳೆ ಸಾಧ್ಯತೆ

ಬೆಳ್ತಂಗಡಿ/ಮಂಗಳೂರು : ಮನೆಯ ಮೇಲೆ ತೆಂಗಿನಮರ ಬಿದ್ದು ಸಂಪೂರ್ಣ ಹಾನಿಗೀಡಾಗಿರುವ ಘಟನೆ ಪಡಂಗಡಿ ಗ್ರಾಮದ ಬದ್ಯಾರು ಸಮೀಪದ ಕಳೆಂಜಿರೋಡಿ ಎಂಬಲ್ಲಿ ಎ.8 ರಂದು ಸಂಭವಿಸಿದೆ. ಪಡಂಗಡಿಯ ಜೊಬೆಲ್ಲಾ ಫೆಲಿಕ್ಸ್‌ ಅವರ ಮನೆಗೆ ಶುಕ್ರವಾರ ರಾತ್ರಿ ತೆಂಗಿನ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಆ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದ ಕಾರಣ ಜೀವಹಾನಿ ತಪ್ಪಿದೆ.ಫೆಲಿಕ್ಸ್‌ ಅವರ ಪುತ್ರ ನವೀನ ಹಾಗೂ ಆತನ ಪತ್ನಿ, ಇಬ್ಬರು ಮಕ್ಕಳು ಮನೆಯಲ್ಲಿ ವಾಸವಾಗಿದ್ದರು. ಆದರೆ ಪೂಜೆ ನಿಮಿತ್ತ ಅವರೆಲ್ಲರೂ ಚರ್ಚ್‌ಗೆ […]

ಬೆಳ್ತಂಗಡಿಯ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ – ಕರಾವಳಿಯಲ್ಲಿ ಮಳೆ ಸಾಧ್ಯತೆ Read More »

ಪುತ್ತೂರು ಮಾಯಿದೇ ದೆವುಸ್ ಚರ್ಚ್ ನಲ್ಲಿ ಈಸ್ಟರ್ ಹಬ್ಬ ಆಚರಣೆ.

ಪುತ್ತೂರು: ಪುತ್ತೂರಿನ ಮಾಯಿದೆ ದೇವುಸ್ ಚರ್ಚಿನಲ್ಲಿ ಯೇಸಕ್ರಿಸ್ತನ ಪುನರ್ಜನ್ಮವನ್ನು ಸಾರುವ ಈಸ್ಟರ್ ಹಬ್ಬವನ್ನು ಶನಿವಾರ ರಾತ್ರಿ ಆಚರಿಸಲಾಯಿತು. ಚರ್ಚ್ ವಠಾರದ ಎಲ್ಲಾ ವಿದ್ಯುತ್ ಬೆಳಕನ್ನು ನಂದಿಸಿ ನಂತರ ಒಂದು ದೊಡ್ಡ ಮೇಣದ ಬತ್ತಿಗೆ ಯೇಸುವನ್ನು ಶಿಲುಬೆಗೆ ಏರಿಸಿದಾಗ ಹೊಡೆದಿರುವoತಹ ಮೊಳೆಗಳನ್ನು ಚುಚ್ಚಲಾಗುತ್ತದೆ. ತದನಂತರ ಆಶೀರ್ವದಿಸಿದ ಹೊಸ ಬೆಂಕಿಯಿಂದ ಮೇಣದ ಬತ್ತಿಯನ್ನು ಹೊತ್ತಿಸಲಾಗುತ್ತದೆ. ಈ ಮೇಣದ ಬತ್ತಿಯನ್ನು ಹಿಡಿದ ಯಾಜಕರು ಜನರ ನಡುವಿನಿಂದ ಹೋಗುವಾಗ ಇದು ಯೇಸಕ್ರಿಸ್ತರ ಜ್ಯೋತಿಯು ಎಂದು ಉದ್ಗರಿಸಿದಾಗ ಎಲ್ಲಾ ಭಕ್ತಾದಿಗಳು ದೇವರಿಗೆ ಮಹಿಮೆ ಸಲ್ಲಲ್ಲಿ

ಪುತ್ತೂರು ಮಾಯಿದೇ ದೆವುಸ್ ಚರ್ಚ್ ನಲ್ಲಿ ಈಸ್ಟರ್ ಹಬ್ಬ ಆಚರಣೆ. Read More »

ಡಾ.ನಝೀರ್‍ಸ್ ಡಯಾಬೆಟ್ಸ್ ಸೆಂಟರ್ 10ನೇ ವರ್ಷಕ್ಕೆ ಪಾದಾರ್ಪಣೆ | ಉಚಿತ ಆರೋಗ್ಯ ತಪಾಸಣೆ

ಪುತ್ತೂರು: ಕಲ್ಲಾರೆ ಕೃಷ್ಣಾ ಆರ್ಕೆಡ್‌ನಲ್ಲಿ ಕಾರ್ಯಾಚರಿಸುತ್ತಿರುವ ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ.ನಝೀರ್ ಅಹಮದ್ ಕೆ.ರವರ ಡಾ.ನಝೀರ್‍ಸ್ ಡಯಾಬೆಟ್ಸ್ ಸೆಂಟರ್ ನ ದಶಮಾನೋತ್ಸವಕ್ಕೆ ಕಾಲಿಟ್ಟ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಪುತ್ತೂರು ರೋಟರಿ ಕ್ಲಬ್, ಮತ್ತು ರೋಟರ್‍ಯಾಕ್ಟ್ ಕ್ಲಬ್ ಜಂಟಿ ಆಶ್ರಯದಲ್ಲಿ ಫಲಾನುಭವಿಗಳಿಗೆ ವಿವಿಧ ಉಚಿತ ಆರೋಗ್ಯ ತಪಾಸಣೆಯ ನಡೆಸಲಾಯಿತು. ಆರೋಗ್ಯ ತಪಾಸಣೆಯಲ್ಲಿ ಥೈರಾಯ್ಡ್ ಗ್ರಂಥಿ, ಮಧುಮೇಹ, ಪಾದ ರೋಗ ತಪಾಸಣೆ, ಮಾಹಿತಿ, ನ್ಯೂರೋಟಚ್ ಮತ್ತು ಬಯೋಥೀಸಿಯೋಮೆಟ್ರಿ ಪರೀಕ್ಷೆ ನಡೆಸಲಾಯಿತು. ಅಲ್ಲದೆ ಮಧುಮೇಹಿಗಳಿಗೆ ಉಪಯೋಗವಾಗುವ ವಿಶೇಷ

ಡಾ.ನಝೀರ್‍ಸ್ ಡಯಾಬೆಟ್ಸ್ ಸೆಂಟರ್ 10ನೇ ವರ್ಷಕ್ಕೆ ಪಾದಾರ್ಪಣೆ | ಉಚಿತ ಆರೋಗ್ಯ ತಪಾಸಣೆ Read More »

ಪುತ್ತೂರು ಆಪ್ ಪಕ್ಷದ ಅಭ್ಯರ್ಥಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠಕ್ಕೆ ಭೇಟಿ

ಪುತ್ತೂರು: ಆಮ್ ಆದ್ಮಿ ಪಾರ್ಟಿಯ ಪುತ್ತೂರು ವಿದಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ವಿಷು ಕುಮಾರ್ ಗೌಡ ಅವರು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಭೇಟಿ ಮಾಡಿದ ಆಪ್ ಅಭ್ಯರ್ಥಿಯನ್ನು ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನ ಕಾರ್ಯದರ್ಶಿ ಪುರುಷೋತ್ತಮ್ ಗೌಡ ಕೋಲ್ಪೆ, ಪುತ್ತೂರು ಪ್ರಚಾರ ಸಮಿತಿ ಅಧ್ಯಕ್ಷ ಜನಾರ್ಧನ ಬಂಗೇರ, ಮಂಗಳೂರು ದಕ್ಷಿಣ ಮುಖಂಡ ನವೀನ್ ಚಂದ್ರ ಪೂಜಾರಿ, ಕಾನೂನು ಸಲಹೆಗಾರ ಉದಯಶಂಕರ್, ಮುಖಂಡರಾದ

ಪುತ್ತೂರು ಆಪ್ ಪಕ್ಷದ ಅಭ್ಯರ್ಥಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠಕ್ಕೆ ಭೇಟಿ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೆಗೆ ಸ್ವಚ್ಛತಾ ಕಾರ್ಯ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೋತ್ಸವಕ್ಕೆ “ಸ್ವಚ್ಛ ಜಾತ್ರೆ ಸ್ವಚ್ಛ ಪುತ್ತೂರು” ಎಂಬ ಕಲ್ಪನೆಯೊಂದಿಗೆ ಸ್ವಚ್ಛತಾ ಕಾರ್ಯ ಭಾನುವಾರ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಭಕ್ತಾದಿಗಳೊಂದಿಗೆ ಮೂರು ಬಾರಿ ಓಂಕಾರ ಹೇಳಿ ತೆಂಗಿನಕಾಯಿ ಒಡೆಯುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ವಚ್ಛತೆ ಎಲ್ಲಿ ಇರುತ್ತದೋ ಅಲ್ಲಿ ದೇವರು ಇರುತ್ತಾರೆ. ಸ್ವಚ್ಛತಾ ಮನೋಭಾವದಿಂದ ದೇವಸ್ಥಾನದ ವಠಾರವನ್ನು ನಾವೆಲ್ಲರೂ ಸೇರಿಕೊಂಡು ಮುತುವರ್ಜಿ ವಹಿಸಿ ಕೆಲಸ ಮಾಡಿದರೆ

ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೆಗೆ ಸ್ವಚ್ಛತಾ ಕಾರ್ಯ Read More »

ಎ. 9 ರಂದು ರಾತ್ರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್‌

ದಿಲ್ಲಿಯಲ್ಲಿ ನಡೆಯಲಿದೆ ಮಹತ್ವದ ಸಂಸದೀಯ ಮಂಡಳಿ ಸಭೆ ಬೆಂಗಳೂರು : ದಿಲ್ಲಿಯಲ್ಲಿಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ, ಇಂದು ರಾತ್ರಿ ಅಥವಾ ನಾಳೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ಪ್ರಧಾನಿ ನೇತೃತ್ವದ ಈ ಸಭೆಯಲ್ಲಿ 140ಕ್ಕೂ ಹೆಚ್ಚು ಹೆಸರುಗಳನ್ನು ಒಳಗೊಂಡಿರುವ ಮೊದಲ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಗಳಿದ್ದು, ಪಟ್ಟಿ ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು

ಎ. 9 ರಂದು ರಾತ್ರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್‌ Read More »

ಬಿ.ಎನ್. ಚಂದ್ರಪ್ಪ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕ

ಬೆಂಗಳೂರು : ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ), ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಕಾರ್ಯಾಧ್ಯಕ್ಷರನ್ನಾಗಿ ಬಿ.ಎನ್. ಚಂದ್ರಪ್ಪ ಅವರನ್ನು ನೇಮಕ ಮಾಡಿದೆ. ಈ ಸ್ಥಾನದಲ್ಲಿದ್ದ ಮಾಜಿ ಸಂಸದ ಆರ್. ಧ್ರುವನಾರಾಯಣ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು. ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಚಂದ್ರಪ್ಪ ಅವರನ್ನು ನೇಮಕ ಮಾಡಿದ್ದು, ಈ ಆದೇಶವು ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ಎಐಸಿಸಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಿ.ಎನ್. ಚಂದ್ರಪ್ಪ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕ Read More »

ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ಮಾಡಿದ ಪ್ರಧಾನಿ ಮೋದಿ

ಬಂಡೀಪುರ : ಚುನಾವಣೆ ಹೊತ್ತಿನಲ್ಲಿ ಕರ್ನಾಟಕಕ್ಕೆ ನಿನ್ನೆ ಶನಿವಾರ ರಾತ್ರಿ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಇಂದು ಭಾನುವಾರ ಬೆಳ್ಳಂಬೆಳಗ್ಗೆ ಸಫಾರಿ ನಡೆಸಿದ ಪ್ರಧಾನಿ ಮೋದಿಯವರು ಬಂಡೀಪುರ ಕ್ಯಾಂಪ್ ನ, ವನ್ಯಜೀವಿ, ಅರಣ್ಯ ಸಂಪತ್ತಿನ ಸೌಂದರ್ಯ ಸವಿದರು. ಇದೀಗ ಪ್ರಧಾನಿ ಮೋದಿಯವರು ಬಂಡೀಪುರ ಕ್ಯಾಂಪ್ ನಿಂದ ಬೋಳಗುಡ್ಡ ಆ್ಯಂಟಿ ಪೋಚಿಂಗ್ ಕ್ಯಾಂಪ್ ನತ್ತ ತೆರಳಿದ್ದು, ಬೋಳಗುಡ್ಡದಿಂದ ಅರಣ್ಯ ವೀಕ್ಷಿಸಿದ್ದಾರೆ. ನಂತರ ಮಧುಮಲೈ ಆನೆ

ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ಮಾಡಿದ ಪ್ರಧಾನಿ ಮೋದಿ Read More »

ಖರ್ಗೆಯನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವ ತಂತ್ರ : ಡಿಕೆಶಿ

ಕಾಂಗ್ರೆಸ್‌ ಮುಖ್ಯಮಂತ್ರಿ ರೇಸ್‌ ಇನ್ನಷ್ಟು ರಣರೋಚಕ ಬೆಂಗಳೂರು : ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗಲು ಬಯಸಿದರೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾಂಗ್ರೆಸಿನೊಳಗಿನ ಮುಖ್ಯಮಂತ್ರಿ ರೇಸ್‌ಗೆ ಹೊಸ ತಿರುವು ನೀಡಿದ್ದಾರೆ. ಅವರು ಉರುಳಿಸಿದ ಖರ್ಗೆ ದಾಳ ಖಂಡಿತ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವ ತಂತ್ರ ಎಂದು ಹೇಳಲು ವಿಶೇಷ ರಾಜಕೀಯ ಪಾಂಡಿತ್ಯದ ಅಗತ್ಯವಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿದ್ದರಾಮಯ್ಯ ಹೈಕಮಾಂಡ್‌

ಖರ್ಗೆಯನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವ ತಂತ್ರ : ಡಿಕೆಶಿ Read More »

5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ವಿಷ ಪ್ರಾಷನ

ಇರಾನ್‌ನಲ್ಲಿ ಶಾಲಾ ಬಾಲಕಿಯರಿಗೆ ವಿಷವುಣ್ಣಿಸುತ್ತಿರುವ ಪ್ರಕರಣ ಹೆಚ್ಚಳ ಟೆಹ್ರಾನ್: ಹಿಜಾಬ್‌ ವಿರೋಧಿ ಪ್ರತಿಭಟನೆಯಿಂದ ಕುಲುಮೆಯಂತಾಗಿರುವ ಇರಾನ್‌ನಲ್ಲಿ ಈಗ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಮಕ್ಕಳಿಗೆ ವಿಷವಿಕ್ಕುವ ಬರ್ಬರ ಕೃತ್ಯ ನಡೆಯುತ್ತಿದೆ. ಕೆಲವು ತಿಂಗಳುಗಳಿಂದ ಇರಾನ್‌ನಲ್ಲಿ ಬೆಚ್ಚಿ ಬೀಳಿಸಿರುವ ನಿಗೂಢ ವಿದ್ಯಮಾನಗಳು ನಡೆಯುತ್ತಿವೆ. ಶನಿವಾರ ಹಲವಾರು ಶಾಲೆಗಳಲ್ಲಿ ಬಾಲಕಿಯರಿಗೆ ನಿಧಾನ ವಿಷ ಪ್ರಾಷನ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನವೆಂಬರ್ ಅಂತ್ಯದಿಂದ ಅನೇಕ ಶಾಲೆಗಳಲ್ಲಿ ಬಾಲಕಿಯರು ದಿಢೀರನೇ ವಿಷ ಪ್ರಾಷನ ಪ್ರಕರಣಕ್ಕೆ ಒಳಗಾಗುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ವಿದ್ಯಾರ್ಥಿಗಳು

5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ವಿಷ ಪ್ರಾಷನ Read More »

error: Content is protected !!
Scroll to Top