ಜಮಿನು ಖಾತೆ ಬದಲಾವಣೆ ಪಿಡಿಒರಿಂದ 20 ಸಾವಿರ ಲಂಚ ಬೇಡಿಕೆ | ಲೋಕಾಯುಕ್ತ ಅಧಿಕಾರಿಗಳ ಬಲೆಗೆ

ಕೌಕ್ರಾಡಿ: ಜಮೀನು ಖಾತೆ ಬದಲಾವಣೆಗೆ ಲಂಚದ ಬೇಡಿಕೆಯಿಟ್ಟ ಕೌಕ್ರಾಡಿ ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕೊಕ್ಕಡ ನಿವಾಸಿಯೊಬ್ಬರು ಕೌಕ್ರಾಡಿ ಗ್ರಾಮದಲ್ಲಿ ಜಾಗದ 9/11 ಖಾತೆ  ಬದಲಾವಣೆಗೆ 2017 ರಲ್ಲಿ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆ ಆಗದ ಹಿನ್ನಲೆಯಲ್ಲಿ 2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಿದ್ದರು. ಆದರೂ ಬದಲಾವಣೆ ಆಗಿರಲಿಲ್ಲ. ಗ್ರಾಪಂ ಪಿಡಿಒ ಖಾತೆ ಬದಲಾವಣೆಗೆ 20 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. […]

ಜಮಿನು ಖಾತೆ ಬದಲಾವಣೆ ಪಿಡಿಒರಿಂದ 20 ಸಾವಿರ ಲಂಚ ಬೇಡಿಕೆ | ಲೋಕಾಯುಕ್ತ ಅಧಿಕಾರಿಗಳ ಬಲೆಗೆ Read More »

ಅಕ್ಷಯ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಹೇಮ ಚಂದ್ರಹಾಸ್ ಅಗಳಿ ಮಾತನಾಡಿ, ಯೋಗಾಸಾನವನ್ನು ನಿಯಮಿತವಾಗಿ ಅಭ್ಯಾಸ ಮಾಡಿದಾಗ ಮನಸ್ಸು ಮತ್ತು ದೇಹದಿಂದ ಬರುವ ರೋಗಗಳನ್ನು ದೂರವಿರಿಸುತ್ತದೆ. ನಮ್ಮ ಆರೋಗ್ಯವನ್ನು ನಾವು ಯೋಗದಿಂದ ಸ್ಥಿರವಾಗಿಡಬಹುದು. ಅಲ್ಲದೇ, ಸ್ವೀಕರಿಸಿದ ವಿಷಗಾಳಿಯನ್ನು ಕಪಾಲಭಾತಿ ಕ್ರಿಯೆಯ ಮೂಲಕ ಹೊರಹಾಕಬಹುದು ಎಂದು ಹೇ:ಳಿದರು. ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಮಾತನಾಡಿ, ಯೋಗ ಸಾಧನೆಯಿಂದ

ಅಕ್ಷಯ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ “ಆರೋಗ್ಯ ಯೋಗ” ಕಾರ್ಯಕ್ರಮ | ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ

ಮಾಣಿಲ : ದೈಹಿಕ ಮಾನಸಿಕ ಸಮತೋಲನ ಕಾಪಾಡಲು ಯೋಗ ಅಗತ್ಯ. ಯೋಗ ವಿಶ್ವವ್ಯಾಪಿಯಾಗಿರುವುದು ನಮ್ಮ ಸುಯೋಗ – ಎಂದು ಪ್ರತಿಷ್ಠಿತ ಸಂಸ್ಥೆ ವಿಟ್ಲ ಜೆಸಿಐ ನ ಅಧ್ಯಕ್ಷರಾದ ಪರಮೇಶ್ವರ ಹೆಗಡೆ ಹೇಳಿದರು. ಅವರು ‘ವಿಶ್ವ ಯೋಗ ದಿನ ‘ ಪ್ರಯುಕ್ತ ಸರ್ಕಾರಿ ಪ್ರೌಢ ಶಾಲೆ ಮಾಣಿಲ ದಲ್ಲಿ ಜೆಸಿಐ ವಿಟ್ಲ ಸಹಯೋಗದಲ್ಲಿ ಏರ್ಪಡಿಸಲಾದ ‘ಆರೋಗ್ಯ ಯೋಗ ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಎಸ್ ಡಿ ಎಂಸಿ ಅಧ್ಯಕ್ಷರಾದ ಶಿವಪ್ರಸಾದ್ ಸೊರಂಪಳ್ಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಭುವನೇಶ್ವರ್

ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ “ಆರೋಗ್ಯ ಯೋಗ” ಕಾರ್ಯಕ್ರಮ | ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ Read More »

ಕೌಕ್ರಾಡಿ ಗ್ರಾಪಂ ಪಿಡಿಒ ವಿರುದ್ಧ ದೂರು ಹಿನ್ನಲೆ | ಲೋಕಾಯುಕ್ತ ಪೊಲೀಸರಿಂದ ದಾಳಿ

ಪುತ್ತೂರು: ಗ್ರಾಪಂ ಒಂದರ ಪಿಡಿಒ ವಿರುದ್ಧ ದೂರು ಬಂದ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಿಚಾರಣೆ ನಡೆಸಿದ ಘಟನೆ ಗುರುವಾರ ನಡೆದಿದೆ. ಕೌಕ್ರಾಡಿ ಗ್ರಾಪಂಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು,ಗ್ರಾಪಂ ಕಚೇರಿಯಲ್ಲೇ ಪಿಡಿಒ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ

ಕೌಕ್ರಾಡಿ ಗ್ರಾಪಂ ಪಿಡಿಒ ವಿರುದ್ಧ ದೂರು ಹಿನ್ನಲೆ | ಲೋಕಾಯುಕ್ತ ಪೊಲೀಸರಿಂದ ದಾಳಿ Read More »

ಜೂ.24 : ಪುತ್ತೂರು ಮುಸ್ಲಿಂ ಸಮುದಾಯ ಒಕ್ಕೂಟದಿಂದ ಸ್ಪೀಕರ್ ಯು.ಟಿ.ಖಾದರ್ ಹಾಗೂ ಶಾಸಕ ಅಶೋಕ್ ಕುಮಾರ್ ರೈಗೆ ಸನ್ಮಾನ

ಪುತ್ತೂರು: ಪುತ್ತೂರು ಮುಸ್ಲಿಂ ಸಮುದಾಯ ಒಕ್ಕೂಟದ ವತಿಯಿಂದ ಸ್ಪೀಕರ್  ಯು.ಟಿ.ಖಾದರ್ ಹಾಗೂ ಪುತ್ತೂರು ಶಾಸಕ  ಆಶೋಕ್ ಕುಮಾರ್ ರೈ ಅವರಿಗೆ ಸನ್ಮಾನ ಕಾರ್ಯಕ್ರಮ ಜೂ.24 ಶನಿವಾರ ಸಂಜೆ 4.30 ಕ್ಕೆ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ನಿರ್ದೇಶಕ ಸಿನಾನ್ ಪರ್ಲಡ್ಕ ತಿಳಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯ ಒಕ್ಕೂ  ಟದ ಪದಾಧಿಕಾರಿಗಳು ಸನ್ಮಾನ ನಡೆಸಲಿದ್ದು, ಈ ಸಂದರ್ಭದಲ್ಲಿ ಯಾವುದೇ ಮುಸ್ಲಿಂ ಸಂಘಟನೆಗಳಿಗೆ ಸನ್ಮಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು

ಜೂ.24 : ಪುತ್ತೂರು ಮುಸ್ಲಿಂ ಸಮುದಾಯ ಒಕ್ಕೂಟದಿಂದ ಸ್ಪೀಕರ್ ಯು.ಟಿ.ಖಾದರ್ ಹಾಗೂ ಶಾಸಕ ಅಶೋಕ್ ಕುಮಾರ್ ರೈಗೆ ಸನ್ಮಾನ Read More »

ಬಂಟ್ವಾಳ ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ಜಿಲ್ಲಾ ಸಮಿತಿ ಸಭೆ | ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ : ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ಜಿಲ್ಲಾ ಸಮಿತಿಯ ಸಭೆ ಹಾಗೂ ಬಂಟ್ವಾಳ ತಾಲೂಕು ಸಮಿತಿಯ ರಚನೆ ಪಾಣೆಮಂಗಳೂರು ಸಭಾಂಗಣದ ಸಜೀಪ ವೆಂಕಪ್ಪ ಆಚಾರ್ಯ ವೇದಿಕೆಯಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಬಂಟ್ವಾಳ ತಾಲೂಕು  ಅಧ್ಯಕ್ಷರಾಗಿ  ರವೀಂದ್ರ ಆಚಾರ್ಯ ಕಾವಲುಕಟ್ಟೆ, ಉಪಾಧ್ಯಕ್ಷರಾಗಿ ಯಶೋಧರ ಆಚಾರ್ಯ ಮಾಣಿ , ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಿತ್ ಆಚಾರ್ಯ ಬಂಟ್ವಾಳ, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಆಚಾರ್ಯ ಕಲ್ಲಡ್ಕ , ಕೋಶಾಧಿಕಾರಿಯಾಗಿ ಜಯಕರ ಆಚಾರ್ಯ ಮಾಣಿ,

ಬಂಟ್ವಾಳ ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ಜಿಲ್ಲಾ ಸಮಿತಿ ಸಭೆ | ಪದಾಧಿಕಾರಿಗಳ ಆಯ್ಕೆ Read More »

ನೆಹರುನಗರ ನಿವಾಸಿ ವಸಂತ ಪ್ರಭು ಆತ್ಮಹತ್ಯೆ

ಪುತ್ತೂರು: ನೆಹರೂನಗರ ನಿವಾಸಿ ವಸಂತ ಪ್ರಭು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಮೃತರಿಗೆ ಪತ್ನಿ ಇದ್ದಾರೆ.

ನೆಹರುನಗರ ನಿವಾಸಿ ವಸಂತ ಪ್ರಭು ಆತ್ಮಹತ್ಯೆ Read More »

ಉಪ್ಪಿನಂಗಡಿ ವಲಯ ಶೌರ್ಯ ವಿಪತ್ತು ತಂಡದಿಂದ ವಾರ್ಷಿಕೋತ್ಸವ | ಔಷಧೀಯ ಗಿಡಗಳ ನಾಟಿ ಮೂಲಕ ಆಚರಣೆ

ಉಪ್ಪಿನಂಗಡಿ : ಉಪ್ಪಿನಂಗಡಿ ವಲಯ ಶೌರ್ಯ ವಿಪತ್ತು ತಂಡದಿಂದ ವಾರ್ಷಿಕೋತ್ಸವದ ಸವಿನೆನಪಿಗಾಗಿ ಮುದ್ಯ ದೇವಸ್ಥಾನ ವಠಾರದಲ್ಲಿ ಔಷಧಿ ಗಿಡಗಳ ನಾಟಿ ಮಾಡುವುದರ ಮೂಲಕ ವಾರ್ಷಿಕ ದಿನಾಚರಣೆ ಆಚರಿಸಲಾಯಿತು. ವಲಯ ಮೇಲ್ವಿಚಾರಕ ಶಿವಪ್ಪ.ಎಂ. ಕೆ ಮಾಹಿತಿ,  ಮಾರ್ಗದರ್ಶನ ನೀಡಿದರು. ಔಷಧಿ ಗಿಡಗಳನ್ನು ಗ್ರಾಮ ವಿಕಾಸ ಯೋಜನೆ ಶ್ರೀರಾಮ ಶಾಲೆ ಉಪ್ಪಿನಂಗಡಿ ನೀಡಿ ಸಹಕರಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಸೋಮಸುಂದರ ಕೊಡಿಪಾನ, ವಲಯ ಅಧ್ಯಕ್ಷ ನಾರಾಯಣ ಕೆಳಗಿನಮನೆ, ಶ್ರೀರಾಮ ಶಾಲೆ ಆಡಳಿತ ಮಂಡಳಿ ಸದಸ್ಯ ಗಣೇಶ್ ಕುಲಾಲ್, ಒಕ್ಕೂಟದ ಮಾಜಿ

ಉಪ್ಪಿನಂಗಡಿ ವಲಯ ಶೌರ್ಯ ವಿಪತ್ತು ತಂಡದಿಂದ ವಾರ್ಷಿಕೋತ್ಸವ | ಔಷಧೀಯ ಗಿಡಗಳ ನಾಟಿ ಮೂಲಕ ಆಚರಣೆ Read More »

ಎಡನೀರು ಶ್ರೀಗಳ ತೃತೀಯ ಚಾತುರ್ಮಾಸ್ಯ ವೃತಾಚರಣೆ | ಜೂ.25 ರಂದು ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ಪೂರ್ವಭಾವಿ ಸಭೆ

ಪುತ್ತೂರು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವೃತಾಚರಣೆ ಜು.3 ರಿಂದ 29 ರ ತನಕ ಶ್ರೀ ಎಡನೀರು ಮಠದಲ್ಲಿ ನಡೆಯಲಿದ್ದು, ಈ ಕುರಿತು ಪೂರ್ವಭಾವಿ ಸಭೆ ಕಲ್ಲಾರೆ ಶ್ರೀ ರಾಘವೇಂದ್ರ ಮಠದಲ್ಲಿ ಜೂ.25 ರಂದು ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಎಡನೀರು ಮಠದ ಅಭಿಮಾನಿಗಳಿಂದ ಸಭೆ ನಡೆಯಲಿದೆ. ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಿಗ್ಗೆ ಸಭೆ ನಡೆದ ಬಳಿಕ ಮಧ್ಯಾಹ್ನ ಶ್ರೀಗಳ ಪಟ್ಟದ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆಯಾಗಿ, ಭಿಕ್ಷಾವಂದನೆ

ಎಡನೀರು ಶ್ರೀಗಳ ತೃತೀಯ ಚಾತುರ್ಮಾಸ್ಯ ವೃತಾಚರಣೆ | ಜೂ.25 ರಂದು ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ಪೂರ್ವಭಾವಿ ಸಭೆ Read More »

ಪರಿಸರ ಮಾಹಿತಿ, ಸಸಿ ವಿತರಣಾ ಕಾರ್ಯಕ್ರಮ

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಬೆಟ್ಟಂಪಾಡಿ ವಲಯದ ಪರಿಸರ ಮಾಹಿತಿ ಮತ್ತು ಸಸಿ ವಿತರಣಾ ಕಾರ್ಯಕ್ರಮ ಉಪ್ಪಳಿಗೆ ಸರಕಾರಿ ಪ್ರೌಢಶಾಲೆ ಯಲ್ಲಿ ನಡೆಯಿತು. ವೇದಿಕೆಯಲ್ಲಿ ನಿಕಟಪೂರ್ವ ಡಿಎಂಸಿ ಅಧ್ಯಕ್ಷ ಕೃಷ್ಣಪ್ರಸಾದ ಆಳ್ವ, ಯೋಜನಾಧಿಕಾರಿ ಶಶಿಧರ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯೆ ಮೀನಾಕ್ಷಿ, ವಲಯ ಅಧ್ಯಕ್ಷ ಬಾಲಕೃಷ್ಣ, ಶಿಕ್ಷಕ ರಾಮಚಂದ್ರ, ಒಕ್ಕೂಟದ ಅಧ್ಯಕ್ಷ ಹರೀಶ್ ಗೌಡ ಉಪಸ್ಥಿತರಿದ್ದರು. ಕೃಷಿ ಮೇಲ್ವಿಚಾರಕ ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶ್ಯಾಮಲ ಸ್ವಾಗತಿಸಿದರು. ವಲಯದ

ಪರಿಸರ ಮಾಹಿತಿ, ಸಸಿ ವಿತರಣಾ ಕಾರ್ಯಕ್ರಮ Read More »

error: Content is protected !!
Scroll to Top