ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಜಯರಾಮ ಕೆ.ನಿಧನ

ಪುತ್ತೂರು : ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಜಯರಾಮ ಕೆ.ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಪೆರ್ಲಂಪಾಡಿ ನಿವಾಸಿಯಾಗಿರುವ ಜಯರಾಮ ಕೆ.ಅವರು ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪಾಲ್ತಾಡಿ ಶಾಖಾವ್ಯವಸ್ಥಾಪಕರಾಗಿದ್ದು, ಬಳಿಕ ಪೆರ್ಲಂಪಾಡಿಯಲ್ಲಿರುವ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಅಸೌಖ್ಯದಿಂದಿದ್ದ ಜಯರಾಮ ಅವರು ಆರೋಗ್ಯದಲ್ಲಿ ಚೇತರಿಕೆಗೊಂಡು ಕರ್ತವ್ಯದಲ್ಲಿದ್ದರು.ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೌಮ್ಯಸ್ವಭಾವದ ವ್ಯಕ್ತಿತ್ವದ ಜಯರಾಮ ಕೆ.ಅವರು ಬ್ಯಾಂಕಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದರು.

ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಜಯರಾಮ ಕೆ.ನಿಧನ Read More »

ಜೂ.24 : ಕೊಳ್ತಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗ್ರಾಮ ಸಾಹಿತ್ಯ ಸಂಭ್ರಮ 6ನೇ ಸರಣಿ ಕಾರ್ಯಕ್ರಮ

ಪುತ್ತೂರು: ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ  ಘೋಷ ವಾಕ್ಯದಲ್ಲಿ ಪುತ್ತೂರು ತಾಲೂಕು  ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಹಾಗೂ  ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ, ಕೊಳ್ತಿಗೆ ಗ್ರಾಮ ಪಂಚಾಯತ್ ಸಹಕಾರದಲ್ಲಿ ಚಿಗುರೆಲೆ ಸಾಹಿತ್ಯ ಬಳಗದ ಸಂಚಾಲಕತ್ವದಲ್ಲಿ, ಗ್ರಾಮ ಸಾಹಿತ್ಯ ಸಂಭ್ರಮದ  ಆರನೇ ಸರಣಿ ಕಾರ್ಯಕ್ರಮವು  ಕೊಳ್ತಿಗೆ  ಗ್ರಾಮದ ಷಣ್ಮುಖ ದೇವ ಪ್ರೌಢಶಾಲೆಯಲ್ಲಿ ಜೂ. 24 ಶನಿವಾರ ನಡೆಯಲಿದೆ. ಮಿತ್ರಂಪಾಡಿ  ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ  ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಷಣ್ಮುಖ ದೇವ ಪ್ರೌಢಶಾಲೆಯ ಅಧ್ಯಕ್ಷರಾದ  ಶ್ರೀ

ಜೂ.24 : ಕೊಳ್ತಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗ್ರಾಮ ಸಾಹಿತ್ಯ ಸಂಭ್ರಮ 6ನೇ ಸರಣಿ ಕಾರ್ಯಕ್ರಮ Read More »

ಶ್ರೀ ಆದಿ ಚುಂಚನಗಿರಿ ಕಾವೂರು ಮಂಗಳೂರು ಶಾಖಾ ಮಠದ ಬಿಜಿಎಸ್ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಮಂಗಳೂರು : ಶ್ರೀ ಆದಿ ಚುಂಚನಗಿರಿ ಕಾವೂರು ಮಂಗಳೂರು ಶಾಖಾ ಮಠದ ನೇತೃತ್ವದಲ್ಲಿ ನಡೆಯುವ ಬಿಜಿಎಸ್ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಬುಧವಾರ ಆಚರಿಸಲಾಯಿತು. ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಶ್ರೀಗಳು ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿ, ಸ್ವತಃ ಯೋಗ ಪ್ರಾತ್ಯಕ್ಷಿಕೆ ನಡೆಸಿದರು. ಈ ಸಂದರ್ಭದಲ್ಲಿ ಬಿಜಿಎಸ್‍ ಸ್ಕೂಲ್ ನ ಮುಖ್ಯ ಶಿಕ್ಷಕರು, ಶಿಕ್ಷಕಿಯರು ಪಾಲ್ಗೊಂಡಿದ್ದರು.

ಶ್ರೀ ಆದಿ ಚುಂಚನಗಿರಿ ಕಾವೂರು ಮಂಗಳೂರು ಶಾಖಾ ಮಠದ ಬಿಜಿಎಸ್ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ಕೆಎಂಎಫ್ ಮಿನಿ ಡೈರಿ ನಿರ್ಮಾಣ ಯೋಜನೆ | ಶಾಸಕರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ

ಪುತ್ತೂರು: ಪುತ್ತೂರಿನಲ್ಲಿ ನಿರ್ಮಾಣವಾಗುತ್ತಿರುವ ಕೆಎಂಎಫ್ ಮಿನಿ ಡೈರಿ ಯೋಜನೆಗಾಗಿ ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಸ್ಥಳ ಪರಿಶೀಲನಾ ಕಾರ್ಯ ನಡೆಯಿತು. ಸುಮಾರು 15 ಎಕ್ರೆ ವಿಸ್ತೀರ್ಣದಲ್ಲಿ ನೆಲೆನಿಲ್ಲಿರುವ ಕೆಎಂಎಫ್ ಮಿನಿ ಡೈರಿ ನಿರ್ಮಾಣಕ್ಕಾಗಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಬೇಕಿದೆ. ಆರ್ಯಾಪು ಗ್ರಾಮ ವ್ಯಾಪ್ತಿಯ ಕುರಿಯ, ದಾರಂದಕುಕ್ಕು, ಬನ್ನೂರು ಸೇರಿದಂತೆ ಕೆಲವು ಕಡೆಗಳಲ್ಲಿ ಸ್ಥಳಗಳ ಪರಿಶೀಲನೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್, ತಹಶಿಲ್ದಾರ್ ಶಿವಶಂಕರ್, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ

ಕೆಎಂಎಫ್ ಮಿನಿ ಡೈರಿ ನಿರ್ಮಾಣ ಯೋಜನೆ | ಶಾಸಕರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ Read More »

ವಾಟ್ಸ್ ಪ್ ಮೂಲಕ ವಿದ್ಯಾರ್ಥಿನಿಗೆ ಪ್ರೀತಿಯ ಸಂದೇಶ | ಇಬ್ಬರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದ ಪೊಲೀಸರು

ಪುತ್ತೂರು: ವಿದ್ಯಾರ್ಥಿಗಳಿಬ್ಬರು ವಾಟ್ಸ್ ಪ್ ಮೂಲಕ ಕಾಲೇಜೊಂದರ ವಿದ್ಯಾರ್ಥಿನಿಗೆ ಪ್ರೀತಿಯ ಸಂದೇಶ ಕಳುಹಿಸಿದ ವಿಷಯಕ್ಕೆ ಸಂಬಂಧಿಸಿ ಪುತ್ತೂರು ಪೊಲೀಸರು ವಿದ್ಯಾರ್ಥಿಗಳಿಬ್ಬರನ್ನು ಬಂಧಿಸಿದ್ದಾರೆ. ಪಡ್ನೂರು ಮೂಲಕ ವಿದ್ಯಾರ್ಥಿಗಳಿಬ್ಬರು ಈ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಇಬ್ಬರನ್ನು ಠಾಣೆಗೆ ಕರೊದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ವಾಟ್ಸ್ ಪ್ ಮೂಲಕ ವಿದ್ಯಾರ್ಥಿನಿಗೆ ಪ್ರೀತಿಯ ಸಂದೇಶ | ಇಬ್ಬರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದ ಪೊಲೀಸರು Read More »

“ಪ್ರೇರಣಾ” ದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ‍ಕ್ಲಾಸ್ ಶೀಘ್ರದಲ್ಲಿ ಆರಂಭ | ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರಜ್ವಲವಾಗುವ ಪ್ರೇರಣಾ

ಪುತ್ತೂರು: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳೇ ಗಮನಿಸಿ. ನಿಮಗೆ ಕಲಿಕೆ ಕಷ್ಟವಾಗುತ್ತಿದೆಯೇ ? ಹಾಗಾದರೆ ತಡಮಾಡಬೇಡಿ. ಪ್ರತಿಷ್ಠಿತ ಪ್ರೇರಣಾ ಸಂಸ್ಥೆಗೆ ಭೇಟಿ ನೀಡಿ. ಇಲ್ಲಿ ನುರಿತ ಬೋಧಕರಿಂದ ನೀಡುವ ಟ್ಯೂಷನ್ ತರಗತಿಯಲ್ಲಿ ಪಾಲ್ಗೊಳ್ಳಿ. ನಗರದ ಅರುಣಾ ಥಿಯೇಟರ್ ಎದುರುಗಡೆ ಇರುವ ಪ್ರಭು ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರೇರಣಾ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ನುರಿತ ಶಿಕ್ಷಕರುಗಳಿಂದ ಗಣಿತ, ವಿಜ್ಞಾನ ಹಾಗೂ ಇಂಗ್ಲೀಷ್ ವಿಷಯದಲ್ಲಿ ಟ್ಯೂಷನ್ ನೀಡಲಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಟ್ಯೂಷನ್ ಜತೆಗೆ ಉಚಿತವಾಗಿ ಮೆಡಿಟೇಷನ್ ತರಗತಿಗಳನ್ನು ನೀಡಲಾಗುವುದು.

“ಪ್ರೇರಣಾ” ದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ‍ಕ್ಲಾಸ್ ಶೀಘ್ರದಲ್ಲಿ ಆರಂಭ | ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರಜ್ವಲವಾಗುವ ಪ್ರೇರಣಾ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಸಂತ ಫಿಲೋಮಿನಾ ಕಾಲೇಜಿನ ಎನ್‌ ಸಿ ಸಿ ಮತ್ತು ಎನ್‌ ಎಸ್‌ ಎಸ್‌ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲವಂ| ಡಾ| ಆಂಟೊನಿ ಪ್ರಕಾಶ್‌ ಮೊಂತೆರೊ ಮಾತನಾಡಿ, “ಯೋಗವು ಪ್ರಪಂಚಕ್ಕೆ ಭಾರತದ ಕೊಡುಗೆಯಾಗಿದೆ. ಇಂದು ಗಡಿ, ಸಂಸ್ಕೃತಿಯನ್ನು ಮೀರಿ ವಿಶ್ವದಾದ್ಯಂತ ಕೋಟ್ಯಂತರ ಜನರು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ Read More »

ಪುತ್ತೂರು ರೋಟರಿ ಕ್ಲಬ್ ನ ಸೂಪರ್ ಸ್ಪೆಷಾಲಿಟಿ ರೋಟರಿ ಕಣ್ಣಿನ ಆಸ್ಪತ್ರೆ ಉದ್ಘಾಟನೆ

ಪುತ್ತೂರು: ರೋಟರಿ ಸಂಸ್ಥೆಗಳ ಆಶ್ರಯದಲ್ಲಿ ಸೂಪರ್ ಸ್ಪೆಷಾಲಿಟಿ ರೋಟರಿ ಕಣ್ಣಿನ ಆಸ್ಪತ್ರೆ ರೋಟರಿ ಬ್ಲಡ್ ಬ್ಯಾಂಕ್ ಕಟ್ಟಡದ ತಳ ಅಂತಸ್ತಿನಲ್ಲಿ ಬುಧವಾರ ಉದ್ಘಾಟನೆಗೊಂಡಿತು. ರೋಟರಿ ಅಂತರಾಷ್ಟ್ರೀಯ ನಿರ್ದೇಶಕ ಮಹೇಶ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿದರು. ಶಾಸಕ ಅಶೋಕ್ ಕುಮಾರ್ ರೈ ದೀಪ ಬೆಳಗಿಸಿದರು. ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮೋಡ್ಯುಲರ್ ಒಟಿಯನ್ನು ಉದ್ಘಾಟಿಸಿದರು. ಅಂತರಾಷ್ಟ್ರೀಯ ರೋಟರಿ ಚೆಯರ್ ಮ್ಯಾನ್ ರವಿ ನಡ್ಲಮನಿ ಡೆ ಕೇರ್ ಸೆಂಟರನ್ನು ಉದ್ಘಾಟಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು,  ರೋಟರಿ ಫೌಂಡೇಶನ್ ಚೆಯರ್

ಪುತ್ತೂರು ರೋಟರಿ ಕ್ಲಬ್ ನ ಸೂಪರ್ ಸ್ಪೆಷಾಲಿಟಿ ರೋಟರಿ ಕಣ್ಣಿನ ಆಸ್ಪತ್ರೆ ಉದ್ಘಾಟನೆ Read More »

ಒಂದರಿಂದ ಎಂಟನೇ ತರಗವತಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣು ವಿತರಿಸುವಂತೆ ಸರಕಾರದ ಸುತ್ತೋಲೆ

ಬೆಂಗಳೂರು: ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಈ ಸಾಲಿನ ಶೈಕ್ಷಣಿಕ ವರ್ಷದಿಂದ ವಾರಕ್ಕೊಮ್ಮೆ ಮೊಟ್ಟೆ, ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಿತರಿಸುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ. ಜೂ.20 ರಿಂದ ಜು.15 ರ ತನಿ ಅಥವಾ ಮುಂದಿನ ಆದೇಶದ ವರೆಗೆ ನೀಡುವಂತೆ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಸರಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಪೌಷ್ಠಿಯ ಆಹಾರವಾಗಿ ಬೇಸಿಯಿದ ಮೊಟ್ಟೆ, ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ

ಒಂದರಿಂದ ಎಂಟನೇ ತರಗವತಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣು ವಿತರಿಸುವಂತೆ ಸರಕಾರದ ಸುತ್ತೋಲೆ Read More »

ಸರಸ್ವತಿ ವಿದ್ಯಾ ಮಂದಿರದಲ್ಲಿ ವಿಶ್ವ ಯೋಗ ದಿನಾಚರಣೆ

ಪುತ್ತೂರು: ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ನರಿಮೊಗರು ಸರಸ್ವತಿ ವಿದ್ಯಾಮಂದಿರದ ಅವಿನಾಶ್ ಕೊಡೆಂಕಿರಿ ಮಾತನಾಡಿ, ಯೋಗವು ಜೀವನ ಶೈಲಿಯನ್ನು ರೂಪಿಸುವ ಪರಿಪೂರ್ಣ ವಿಧಾನ. ಅಷ್ಟಾಂಗ ಯೋಗವು ದೇಹ, ಮನಸು ಮತ್ತು ಬುದ್ಧಿ ಸಂಸ್ಕಾರದ ಜೊತೆಗೆ ಆಧ್ಯಾತ್ಮಿಕ ಉನ್ನತಿ ತಂದುಕೊಡುತ್ತದೆ ಎಂದು ಹೇಳಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಮಾತನಾಡಿ, ಜೀವನ ಶಿಸ್ತು ಅವಶ್ಯ. ಯೋಗ ಅದನ್ನು ನೀಡುತ್ತದೆ. ನಿತ್ಯ ಯೋಗಾಸನ ಮಾಡುವಂತೆ ತಿಳಿಸಿದರು. ಶಾಲಾ ಆಡಳಿತ ಅಧಿಕಾರಿ ಶುಭಾ ಅವಿನಾಶ್ ಉಪಸ್ಥಿತರಿದ್ದರು.

ಸರಸ್ವತಿ ವಿದ್ಯಾ ಮಂದಿರದಲ್ಲಿ ವಿಶ್ವ ಯೋಗ ದಿನಾಚರಣೆ Read More »

error: Content is protected !!
Scroll to Top