ಪರಿಶಿಷ್ಟರೆ ರಾಜ್ಯದಲ್ಲಿ ನಂಬರ್‌ ಒನ್‌ : ಜಾತಿ ಗಣತಿ ವರದಿಯಲ್ಲಿ ಬಹಿರಂಗ

ಹಲವು ಜಾತಿಗಳ ಮೀಸಲಾತಿ ಪ್ರಮಾಣ ಹೆಚ್ಚಿಸಲು ಶಿಫಾರಸ್ಸು ಬೆಂಗಳೂರು: ತೀವ್ರ ಚರ್ಚೆಗೆ ಕಾರಣವಾಗಿರುವ ಸಿದ್ದರಾಮಯ್ಯ ಸರಕಾರದ ಜಾತಿ ಗಣತಿ ವರದಿ ಅಧಿಕೃತವಾಗಿ ಇನ್ನೂ ಬಹಿರಂಗವಾದಿದ್ದರೂ ಅದರಲ್ಲಿರುವ ಕೆಲವು ಮಾಹಿತಿಗಳು ಸೋರಿಕೆಯಾಗಿವೆ. ವರದಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು ಅತಿಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಹಲವು ಚರ್ಚೆ, ವಿರೋಧದ ನಡುವೆ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2015 ಮಂಡನೆ ಆಗಿದೆ. ಸಮಗ್ರ ಚರ್ಚೆಗೆ ಮುಂದಿನ ಗುರುವಾರದ ಸಚಿವ ಸಂಪುಟ ಸಭೆಯ ಮುಹೂರ್ತ […]

ಪರಿಶಿಷ್ಟರೆ ರಾಜ್ಯದಲ್ಲಿ ನಂಬರ್‌ ಒನ್‌ : ಜಾತಿ ಗಣತಿ ವರದಿಯಲ್ಲಿ ಬಹಿರಂಗ Read More »

ತುಳುನಾಡಿನಲ್ಲಿ “ಬಿಸು ಪರ್ಬ” | ತುಳುನಾಡಿನ ಹಬ್ಬಗಳಲ್ಲಿ ಬಿಸು ಹಬ್ಬದ ಸಡಗರವೇ ವಿಶೇಷ

ಪರಶುರಾಮನಿಂದ ಸೃಷ್ಟಿಸಲ್ಪಟ್ಟ ತುಳುನಾಡಿನ ಹಬ್ಬಗಳಲ್ಲಿ ಬಿಸು ಹಬ್ಬದ ಸಡಗರವೇ ವಿಶೇಷ . ತುಳುವರ ವರುಷದ ಆದಿಮಾಸ “ಪಗ್ಗು” ತಿಂಗಳ ಮೊದಲ ದಿನವೇ ಬಿಸು. ಈ ದಿನವು ಶುಭಕರವಾದುದರಿಂದ ಜನರು ಹೊಸ ಹೊಸ ಯೋಜನೆಗಳಿಗೆ ಹೆಜ್ಜೆಇಡುತ್ತಾರೆ. ಮಾತ್ರವಲ್ಲ ಭೂಮಿ, ವಾಹನ, ಹೊಸ ವಸ್ತುಗಳ ಖರೀದಿ, ಮಕ್ಕಳಿಗೆ ಕಿವಿ ಚುಚ್ಚುವ ಶಾಸ್ತ್ರಗಳನ್ನು ಮಾಡುತ್ತಾರೆ. ಹಿಂದೆ ನಮ್ಮ ಹಿರಿಯರು, ತಂದೆ ತಾಯಂದಿರು ಮನೆ ಅಥವಾ ಮರಗಳ ನೆರಳು ಹಾಗೂ ಆಕಾಶ ನೋಡಿ ಸಮಯವನ್ನು ನಿರ್ಧರಿಸುತ್ತಿದ್ದರು. ಅದೇ ರೀತಿ ಸೂರ್ಯನು ಮೇಷ ರಾಶಿಗೆ

ತುಳುನಾಡಿನಲ್ಲಿ “ಬಿಸು ಪರ್ಬ” | ತುಳುನಾಡಿನ ಹಬ್ಬಗಳಲ್ಲಿ ಬಿಸು ಹಬ್ಬದ ಸಡಗರವೇ ವಿಶೇಷ Read More »

ಚಿಂತೆಯ  ಬದಲು ಧನಾತ್ಮಕ ಚಿಂತನೆ ಅಗತ್ಯ: ಕೆಯ್ಯೂರು ನಾರಾಯಣ ಭಟ್  | ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರು ಬಂಟ್ವಾಳ ಕೇಂದ್ರ ಸಮಿತಿ ಸಭೆ

ಪುತ್ತೂರು: ಹಿರಿಯರ ಸೇವಾ ಪ್ರತಿಷ್ಠಾನವು ಸೇವಾ ಚಟುವಟಿಕೆಗಳೊಂದಿಗೆ ಹಿರಿಯರ ಸಮಸ್ಯೆಗಳಿಗೆ  ಸ್ಪಂದಿಸಿ  ಪರಿಹರಿಸಲು  ಸದಾ ಸಿದ್ದವಿದೆ.   ಪ್ರತಿಷ್ಠಾನದ ಸ್ಥಳೀಯ ಸಭೆಗಳಲ್ಲಿ ಭಾಗವಹಿಸುವ ಮೂಲಕ ಹಿರಿಯರು ಧನಾತ್ಮಕ ಚಿಂತನೆಯನ್ನು ಮೈ ಗೂಡಿಸಿಕೊಳ್ಳಬೇಕೆಂದು  ಹಿರಿಯರ ಸೇವಾ  ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ತಿಳಿಸಿದರು. ಪುತ್ತೂರು ಪರ್ಲಡ್ಕ ಅಗಸ್ತ್ಯ ನಿವಾಸದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರು ಬಂಟ್ವಾಳ ಕೇಂದ್ರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಪ್ರೊ ವಿ. ಬಿ ಆರ್ತಿಕಜೆ ದೀಪ ಬೆಳಗಿಸಿ

ಚಿಂತೆಯ  ಬದಲು ಧನಾತ್ಮಕ ಚಿಂತನೆ ಅಗತ್ಯ: ಕೆಯ್ಯೂರು ನಾರಾಯಣ ಭಟ್  | ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರು ಬಂಟ್ವಾಳ ಕೇಂದ್ರ ಸಮಿತಿ ಸಭೆ Read More »

ನ್ಯಾಶನಲ್‌ ಹೆರಾಲ್ಡ್‌ ಹಗರಣ : ಕಾಂಗ್ರೆಸ್‌ನ 661 ಕೋ. ರೂ. ಆಸ್ತಿ ಜಪ್ತಿ ಪ್ರಕ್ರಿಯೆ ಶುರು

ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಆರೋಪಿಗಳಾಗಿರುವ ಪ್ರಕರಣ ನವದೆಹಲಿ : ನ್ಯಾಶನಲ್‌ ಹೆರಾಲ್ಡ್‌ ಭ್ರಷ್ಟಾಚಾರ ಕೇಸಿಗೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನ 600 ಕೋಟಿ ರೂ.ಗೂ ಮಿಕ್ಕಿದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಪ್ರಾರಂಭಿಸಿದೆ.ಕಾಂಗ್ರೆಸ್ ನಿಯಂತ್ರಿತ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ವಿರುದ್ಧದ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಜಪ್ತಿ ಮಾಡಲಾಗಿರುವ 661 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ ಶನಿವಾರ ನೋಟಿಸ್ ಜಾರಿ ಮಾಡಿದೆ. ದೆಹಲಿಯ ಐಟಿಒದಲ್ಲಿರುವ ಹೆರಾಲ್ಡ್ ಹೌಸ್, ಮುಂಬಯಿಯ

ನ್ಯಾಶನಲ್‌ ಹೆರಾಲ್ಡ್‌ ಹಗರಣ : ಕಾಂಗ್ರೆಸ್‌ನ 661 ಕೋ. ರೂ. ಆಸ್ತಿ ಜಪ್ತಿ ಪ್ರಕ್ರಿಯೆ ಶುರು Read More »

ಭಾರತೀಯ ಔಷಧ ಕಂಪನಿ ಗೋದಾಮಿನ ಮೇಲೆ ರಷ್ಯಾ ದಾಳಿ

ಉದ್ದೇಶಪೂರ್ವಕವಾಗಿ ದಾಳಿ ಮಾಡಿ ಔಷಧಗಳ ನಾಶ ಎಂದು ಆರೋಪಿಸಿದ ಉಕ್ರೇನ್‌ ನವದೆಹಲಿ: ಉಕ್ರೇನ್‌ನ ಕೀವ್‌ನಲ್ಲಿರುವ ಭಾರತೀಯ ಮೂಲದ ಔಷಧ ಕಂಪನಿಯ ಗೋದಾಮನ್ನು ರಷ್ಯಾ ಕ್ಷಿಪಣಿ ದಾಳಿ ನಡೆಸಿ ನಾಶ ಮಾಡಿದೆ ಎಂದು ಉಕ್ರೇನ್‌ ಹೇಳಿಕೊಂಡಿದೆ. ಉಕ್ರೇನ್‌ನಲ್ಲಿರುವ ಭಾರತೀಯ ವ್ಯವಹಾರಗಳನ್ನು ಭಾರತದ ಪರಮಾಪ್ತ ಮಿತ್ರ ಎಂದು ಹೇಳಿಕೊಳ್ಳುವ ರಷ್ಯಾ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಭಾರತದಲ್ಲಿನ ಉಕ್ರೇನ್‌ನ ರಾಯಭಾರ ಕಚೇರಿ ಆರೋಪಿಸಿದೆ.ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್‌ನ ಗೋದಾಮಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಭಾರತದೊಂದಿಗೆ ವಿಶೇಷ ಸ್ನೇಹವಿದೆ

ಭಾರತೀಯ ಔಷಧ ಕಂಪನಿ ಗೋದಾಮಿನ ಮೇಲೆ ರಷ್ಯಾ ದಾಳಿ Read More »

ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ನಡೆಸಲಾಗಿದೆ : ಸಿದ್ದರಾಮಯ್ಯ ಸಮರ್ಥನೆ

1,01,60,000 ಜನರು ಭಾಗಿ ; ಶೇ.95 ರಷ್ಟು ನಿಖರ ವರದಿ ಎಂದ ಸಿಎಂ ಬೆಂಗಳೂರು: ಜಾತಿ ಗಣತಿ ವರದಿ ಪರ ಮತ್ತು ವಿರೋಧವಾಗಿ ರಾಜ್ಯದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ಸಂಪೂರ್ಣವಾಗಿ ವೈಜ್ಞಾನಿಕವಾಗಿ ನಡೆಸಿದ ವರದಿ. ಯಾರು ಯಾವ ಜಾತಿಗೆ ಸೇರಿದ್ದಾರೆ ಎಂದು ತಿಳಿದುಕೊಳ್ಳಲು ಸಮೀಕ್ಷೆ ನಡೆಸಿ ವರದಿ ತಯಾರಿಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಫೋಸ್ಟ್ ಮಾಡಿರುವ ಸಿದ್ದರಾಮಯ್ಯ, ವೈಜ್ಞಾನಿಕ ಹಾಗೂ ಸಮರ್ಪಕವಾಗಿ ಜಾತಿಗಣತಿ ನಡೆಸಲಾಗಿದ್ದು, ಇದರಲ್ಲಿ 1,01,60,000 ಜನರು

ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ನಡೆಸಲಾಗಿದೆ : ಸಿದ್ದರಾಮಯ್ಯ ಸಮರ್ಥನೆ Read More »

ಕಾಯರ್ತೋಡಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 21ನೇ ಪ್ರತಿಷ್ಠಾ ವಾರ್ಷಿಕೋತ್ಸವ

ಕಾಯರ್ತೋಡಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 21ನೇ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಿತು. ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ದೀಪಾರಾಧನೆ, ರಾತ್ರಿ ದುರ್ಗಾನಮಸ್ಕಾರ ಪೂಜೆ, ಮಹಾಮಂಗಳಾರತಿ ನಡೆದು ಬಳಿಕ ಅನ್ನಪ್ರಸಾದ ಜರಗಿತು. ಈ ಸಂದರ್ಭ ನೂರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಕಾಯರ್ತೋಡಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 21ನೇ ಪ್ರತಿಷ್ಠಾ ವಾರ್ಷಿಕೋತ್ಸವ Read More »

ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಮಣ್ಣು ಪರೀಕ್ಷಾ ಘಟಕ ಯಂತ್ರ ಉದ್ಘಾಟನೆ

ಪುತ್ತೂರು: ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಮಣ್ಣು ಪರೀಕ್ಷಾ ಘಟಕದ ಯಂತ್ರವನ್ನು ಉದ್ಘಾಟಿಸಲಾಯಿತು. ಉದ್ಘಾಟನೆಯನ್ನು ಸುರೇಶ್ ಬಲ್ನಾಡ್ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಅಧಕ್ಷ ಕಿಶೋರ್ ಕುಮಾರ್ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಬಿ. ವಿ. , ನಿರ್ದೇಶಕ ರಾಘವೇಂದ್ರ ಕೆದಿಲ, ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ಕುಮಾರ ಶೆಟ್ಟಿ, ಕ್ಯಾಂಪ್ಕೋ ಕೃಷಿ ಅಧಿಕಾರಿ ಕೃಷ್ಣ, ಪುತ್ತೂರು, ಶಾಖಾ ವ್ಯವಸ್ತಾಪಕ ಅಮರೇಶ ಭಟ್ ಹಾಗೂ ARDF ಮುಖ್ಯ ಅಧಿಕಾರಿ ಕೇಶವ ಭಟ್‍ ಉಪಸ್ಥಿತರಿದ್ದರು

ಕ್ಯಾಂಪ್ಕೋ ಪುತ್ತೂರು ಶಾಖೆಯಲ್ಲಿ ಮಣ್ಣು ಪರೀಕ್ಷಾ ಘಟಕ ಯಂತ್ರ ಉದ್ಘಾಟನೆ Read More »

ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ” ಯೋಜನೆಯಡಿ ಧನ ಸಹಾಯ ಹಸ್ತಾಂತರ

ಪುತ್ತೂರು: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ” ಯೋಜನೆಯಡಿ  ಕ್ಯಾಂಪ್ಕೋ ಪುತ್ತೂರು ಶಾಖೆಯ  ಸಕ್ರೀಯ ಸದಸ್ಯ ಕೆ.ಗೋಪಾಲಕೃಷ್ಣ ಜೋಯ್ಸಾ ಅವರ ತೆರೆದ ಹೃದಯ ಶಸ್ತ್ರಚಿಕಿತ್ಸೆ ಗೆ  ಧನಸಹಾಯ 1,54,870/- ರೂ. ವನ್ನು ಹಸ್ತಾಂತರಿಸಲಾಯಿತು. ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೋಡ್ಗಿ, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ ಸತ್ಯನಾರಾಯಣ ಹಾಗೂ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಅವರು ಗೋಪಾಲಕೃಷ್ಣ ಜೋಯ್ಸಾರವರ ಮಗ ಗಣೇಶ ಜೋಯ್ಸಾ ಅವರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಕ್ಯಾಂಪ್ಕೋ ಪುತ್ತೂರು ಪ್ರಾಂತೀಯ ವ್ಯವಸ್ಥಾಪಕ ಪ್ರಕಾಶ್ ಕುಮಾರ್ ಶೆಟ್ಟಿ.ಎ., ಶಾಖಾ

ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ” ಯೋಜನೆಯಡಿ ಧನ ಸಹಾಯ ಹಸ್ತಾಂತರ Read More »

ವೃದ್ಧೆ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ವೃದ್ಧೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಕೆರೆಮೂಲೆ ಎಂಬಲ್ಲಿ ನಡೆದಿದೆ. ಜಯಂತಿ (70) ಆತ್ಮಹತ್ಯೆ ಮಾಡಿಕೊಂಡ ವೃದ್ಯೆ. ವಿಪರೀತ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೃದ್ಧೆ ನೇಣು ಬಿಗಿದು ಆತ್ಮಹತ್ಯೆ Read More »

error: Content is protected !!
Scroll to Top